“ಪ್ರೀತ್ಸು..ಮದ್ವೆಯಾಗು..”ಅಂತೆಲ್ಲಾ ನ್ಯೂಸ್ ಆಂಕರ್ ಪ್ರಾಣ ತಿನ್ತಿದ್ದ “ಪಾಗಲ್ ಪ್ರೇಮಿ” ವಿರುದ್ದ FIR…

0

ಬೆಂಗಳೂರು:ಇದೊಂದು ವಿಚಿತ್ರ ಪ್ರೇಮ ನಿವೇದನೆಯ ಕಥೆ..ತಾನು ಕೆಲಸ ಮಾಡುತ್ತಿರುವ ನ್ಯೂಸ್ ಚಾನೆಲ್ ನ ಪರದೆ ಮೇಲೆ ಸಾಕಷ್ಟು ಚಿತ್ರ ವಿಚಿತ್ರವಾದ ಪ್ರೇಮ್ ಕಹಾನಿಗಳ ಸ್ಟೋರಿಯನ್ನು ಓದಿದ್ದ ಆ ಆಂಕರ್ರೇ ತನ್ನ ಜೀವನದಲ್ಲಿ ಇಂತದ್ದೊಂದು ಘಟನೆ ನಡೆಯಬಹುದು ಎನ್ನುವ ಸಣ್ಣ ಊಹೆಯನ್ನು ಮಾಡಿರಲಿಕ್ಕಿಲ್ಲವೇನೋ..ಆದ್ರೆ ಪರಿಸ್ಥಿತಿಗಳು ಕೆಲವೊಮ್ಮೆ ನಮ್ಮನ್ನೇ ಕಥೆಗಳನ್ನಾಗಿಸಿಬಿಡುತ್ವೆ ಎನ್ನುವುದಕ್ಕೆ ಎಷ್ಟೋ ನಿದರ್ಶನಗಳು ನಮ್ಮ ಕಣ್ ಮುಂದೆನೇ ಘಟಿಸಿ ಹೋಗಿವೆ.

ಆಕೆ,ದೇಶದ ಅತೀ ದೊಡ್ಡ ನೆಟ್ವರ್ಕ್ ಎನಿಸಿಕೊಳ್ಳುವ ನ್ಯೂಸ್ ಚಾನೆಲ್ ನ ನಂ.1 ಹಾಗು ಸೀನಿಯರ್ ಮೋಸ್ಟ್ ಆಂಕರ್… ಆತ ಪ್ರೀತ್ಸೆ ಎಂದು ಆಕೆಯ ಬೆನ್ನು ಬಿದ್ದ ಪಾಗಲ್ ಪ್ರೇಮಿ.ಇವರಿಬ್ಬರ ರಂಪಾಟ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.ಆಂಕರ್ ಬೆನ್ ಬಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫೋಟೋಗಳನ್ನು ಹಾಕ್ಕೊಂಡು ತನ್ನ ಹೆಂಡ್ತಿ ಎಂದೆಲ್ಲಾ ಬಿಂಬಿಸಿ ನೆಮ್ಮದಿ ಹಾಳು ಮಾಡಿದ್ದ ಪಾಗಲ್ ಪ್ರೇಮಿ ವಿರುದ್ಧ ಬೆಂಗಳೂರಿನ ಸಿಲ್ವರ್ ಜ್ಯೂಬಿಲಿ ಪಾರ್ಕ್(ಎಸ್ ಜೆ ಪಾರ್ಕ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಆಂಕರ್ ಕೊಟ್ಟ ದೂರಿನ ಮೇರೆಗೆ ಸಾಕಷ್ಟು ಸೆಕ್ಷನ್ ಗಳನ್ನು ಜಡಿದು ಪೊಲೀಸ್ರು ಪಾಗಲ್ ಪ್ರೇಮಿ ಮೇಲೆ ಎಫ್ ಐಆರ್ ಕೂಡ ಲಾಡ್ಜ್ ಮಾಡಿದ್ದಾರೆ.

ಯಾರೀ ಪಾಗಲ್ ಪ್ರೇಮಿ:ಚಾನೆಲ್ ನ ಪರದೆ ಮೇಲೆ ದಿನಕ್ಕೆ ಸಾಕಷ್ಟು ಬಾರಿ ಕಾಣಿಸಿಕೊಳ್ಳುವ ಆ ಆಂಕರ್ ಮೇಲೆ ಅನುರಕ್ತನಾದ ಹುಚ್ಚುಪ್ರೇಮಿಯೇ ಬೆಳಗಾವಿ ಮೂಲದ ಬಸಪ್ಪ ಮಲ್ಲಾಪುರ ಎನ್ನಲಾಗಿದೆ.ಆತನ ಪೂರ್ವಾಪರ ನಿಖರವಾಗಿ ತಿಳಿದುಬಂದಿಲ್ಲ.ಈ ಹುಚ್ಚು ಪ್ರೇಮಿ ಬಸಪ್ಪ ಆ ಮಹಿಳಾ ಆಂಕರ್ ಗೆ ಯಾವ್ ಮಟ್ಟದಲ್ಲಿ ಫಿದಾ ಆಗಿದ್ದನೆಂದ್ರೆ  ಆಕೆ ಕೆಲಸ ಮಾಡುವ ಸಿಎಸ್ ಐ ಕಾಂಪೌಂಡ್ ನಲ್ಲಿರುವ ಚಾನೆಲ್ ಕಚೇರಿ ಮುಂದೆ ಆಕೆ ಹೋಗಿ ಬರುವ ದಾರಿಯನ್ನೇ ಕಾಯುತ್ತಾ ನಿಂತಿರುತ್ತಿದ್ದನಂತೆ.ಆಕೆ ಬಂದು ಹೋಗುವ ಮಾರ್ಗದಲ್ಲಿಯೂ ಫಾಲೋ ಮಾಡುತ್ತಿದ್ದನಂತೆ.ಮನಸಿನಲ್ಲಿ ಅಂಕುರಿಸಿದ್ದ ಪ್ರೇಮವನ್ನು ಬಚ್ಚಿಟ್ಟುಕೊಳ್ಳಲಾಗದೆ ಧೈರ್ಯ ಮಾಡಿ ಹೇಳಿಯೇ ಬಿಟ್ಟಿದ್ದಾನಂತೆ.ಇದನ್ನು ಕೇಳಿ ಆಕೆ ಶಾಕ್ ಆಗಿರಲೂ ಬಹುದೇನೋ,.. ಆರಂಭದಲ್ಲಿ ನೆಗ್ಲೆಕ್ಟ್ ಮಾಡಿದ್ರೂ,ಅತಿಯಾಗ್ತಿದೆ ಎಂದು  ಗೊತ್ತಾಗುತ್ತಿದ್ದಂತೆ ತನ್ನ ಚಾನೆಲ್ ನ ಕ್ರೈಂ ಬ್ಯೂರೋದಲ್ಲಿ ಕೆಲಸ ಮಾಡುವ ರಿಪೋರ್ಟರ್ ಗಮನಕ್ಕೆ ತಂದಿರಬಹುದೇನೋ.

ಎಸ್ ಜೆ ಪಾರ್ಕ್ ಠಾಣೆ ಪೊಲೀಸರು ದಾಖಲಿಸಿಕೊಂಡಿರುವ ದೂರಿನ ಹಿನ್ನಲೆಯಲ್ಲಿ ದಾಖಲಿಸಿದ ಎಫ್ ಐಆರ್ ಸಾರಾಂಶ
ಎಸ್ ಜೆ ಪಾರ್ಕ್ ಠಾಣೆ ಪೊಲೀಸರು ದಾಖಲಿಸಿಕೊಂಡಿರುವ ದೂರಿನ ಹಿನ್ನಲೆಯಲ್ಲಿ ದಾಖಲಿಸಿದ ಎಫ್ ಐಆರ್ ಸಾರಾಂಶ
ಪಾಗಲ್ ಪ್ರೇಮಿ ಬಸಪ್ಪ ಮಲ್ಲಾಪುರ
ಪಾಗಲ್ ಪ್ರೇಮಿ ಬಸಪ್ಪ ಮಲ್ಲಾಪುರ….       (ಸಾಂದರ್ಭಿಕ ಕಲ್ಪಿತ ಚಿತ್ರ)

ಚಾನೆಲ್ ಬಳಿ ನಿತ್ಯವೂ ಬಂದು ಆಕೆಯನ್ನು ಅಡ್ಡಗಟ್ಟಿ ಪ್ರೀತ್ಸು ಎನ್ನುತ್ತಿದ್ದ ಈ ಪ್ರೇಮಿಯ ಹುಚ್ಚುತನ ಯಾವ್ ಮಟ್ಟಕ್ಕೆ ಹೋಗಿಬಿಡ್ತು ಎಂದ್ರೆ ತನ್ನನ್ನು ಮದುವೆಯಾಗು ಎಂದು ಪೀಡಿಸಲಾರಂಭಿಸಿದ್ದಾನಂತೆ.ಆತನ ಪ್ರೇಮ ನಿವೇದನೆಗೆ ಬೆಚ್ಚಿ ಹೋದ ಆಕೆ ಬೈಯ್ದು ಬುದ್ದಿವಾದ ಹೇಳಿದ್ದಾಳೆ..ಬೆದರಿಸಿದ್ದಾಳೆ..ಆತ ಮಾಡುತ್ತಿರುವ ತಪ್ಪನ್ನು ಮನವರಿಕೆ ಮಾಡಿಕೊಟ್ಟಿದ್ದಾಳೆ.ಒಂದ್ ಹೆಜ್ಜೆ ಮುಂದ್ಹೋಗಿ ತನ್ನ ಚಾನೆಲ್ ನ ಕ್ರೈಮ್ ರಿಪೋರ್ಟರ್ ಮೂಲಕವೂ ಆತನಿಗೆ ವಾರ್ನ್ ಮಾಡಿದ್ದಾಳಂತೆ.

ಆದ್ರೆ ಯಾವುದಕ್ಕೂ ಬಸಪ್ಪ ಜಗ್ಗಿಲ್ಲ..ಬಗ್ಗಿಲ್ಲ.ಯಾವ ಬುದ್ಧಿ ಮಾತಿಗೂ,ವಾರ್ನ್ ಗೂ ಕ್ಯಾರೆ ಎಂದಿಲ್ಲ.ನೀನು ನನ್ನನ್ನು ಪ್ರೀತಿಸ್ಬೇಕು..ಮದುವೆಯಾಗಬೇಕು..ಇಲ್ಲದಿದ್ದರೆ ಕೊಂದ್ ಹಾಕ್ತೇನೆ ಎಂದು ಅವಾಜ್ ಬಿಟ್ಟಿದ್ದಾನಂತೆ. ತಲೆ ಕೆಡಿಸಿಕೊಂಡ ಆಂಕರ್ ಗೆ ಏನ್ ಮಾಡ್ಬೇಕೆನ್ನೋದೆ ಗೊತ್ತಾಗಿಲ್ಲ.ಮದುವೆಯಾಗಬೇಕೆಂಬ ಆತನ ಹುಚ್ಚಾಟ ಅಷ್ಟಕ್ಕೆ ಸೀಮಿತವಾಗಿಲ್ಲ.ತನ್ನ ಫೇಸ್ ಬುಕ್ ನಲ್ಲಿ ಆಕೆಯ ಫೋಟೋಗಳನ್ನು ಹಾಕ್ಕೊಂಡು ನನ್ನ ಹೆಂಡ್ತಿ ಎಂದು ಬಿಂಬಿಸಿಕೊಂಡಿದ್ದಾನಂತೆ.ಇದು ಸಹಜವಾಗೇ ಎಂಥಾ ಹೆಣ್ಣಿಗು ಸಹಿಸಿಕೊಳ್ಳಲಾಗದಂಥ ಹಿಂಸೆಯೇ ಸರಿ..ಆಗಲೂ ಆಕೆ ತನ್ನದೆ ಸರ್ಕಲ್ ನಲ್ಲಿ ಆತನ ರಂಪಾಟಕ್ಕೆ ಫುಲ್ ಸ್ಟಾಪ್ ಹಾಕೊಕ್ಕೆ ಯತ್ನಿಸಿದ್ದಾಳೆ.

ತರೆವಾರಿ ರೀತಿಯಲ್ಲಿ ಬಸಪ್ಪನಿಗೆ ಆತನ  ಹುಚ್ಚುತನ ಬಿಡುವಂತೆ ಬುದ್ಧಿ ಹೇಳಲಾಗಿದೆ.ಆದ್ರೆ ಆತ ಮಾತ್ರ ಆ ಆಂಕರ್  ಕುರಿತಾಗಿ ತಲೆ-ಮೈಗೆ ಮೆತ್ತಿಕೊಂಡಿದ್ದ ಹುಚ್ಚನ್ನು ಬಿಡುವಂತೆ ಕಂಡಿಲ್ಲ.ಮನೆಯಿಂದ ಹೊರ ಬರೋದು..ಸ್ವಾತಂತ್ರ್ಯವಾಗಿ ಅಡ್ಡಾಡೋದೇ ಕಷ್ಟವೆನಿಸತೊಡಗಿದ ಆ ಆಂಕರ್ ಗೆ ಕೆಲಸದಲ್ಲಿಯೂ ಸಂಪೂರ್ಣವಾಗಿ ತೊಡಗಿಸಿಕೊಳ್ಳೊಕ್ಕೆ ಸಾಧ್ಯವಾಗಿಲ್ಲ.ಮಾನಸಿಕ ಹಿಂಸೆಯಿಂದ ಬಳಲುತ್ತಿದ್ದಾಗ್ಲೇ, ಆ ಒಂದು ಘಟನೆ ಅನಿವಾರ್ಯವಾಗಿ ಆಕೆಯನ್ನು ಪೊಲೀಸ್ ಠಾಣೆ ಮೆಟ್ಟಿಲನ್ನು ಏರುವಂತೆ ಮಾಡಿತೆನ್ನಲಾಗ್ತಿದೆ.

ಕಚೇರಿ,ಮನೆ ಬಳಿ ಅಡ್ಡಗಟ್ಟಿ ಕ್ವಾಟ್ಲೆ ಕೊಡ್ತಿದ್ದ ಪಾಗಲ್ ಬಸಪ್ಪ,ತನ್ನ ಮನೆಗೆ ಹೋಗಿ ತನ್ನ ಅಮ್ಮನ ಮುಂದೆಯೇ ನಿನ್ನ ಮಗಳನ್ನು ಪ್ರೀತಿಸುತ್ತಿದ್ದೇನೆ.ಅವಳನ್ನೇ ಮದುವೆ ಆಗುತ್ತೇನೆ..ಹೆಲ್ಪ್ ಮಾಡು,ಮದುವೆ ಮಾಡಿಸು ಎಂದು ಕೇಳಿದ್ದಾನಂತೆ.ಅಲ್ಲಿವರೆಗೆ ಆತನ ಕಾಟ ಹಾಗೂ ಹಿಂಸೆಯನ್ನು ಹೇಗೋ ಸಹಿಸಿಕೊಂಡಿದ್ದ ಆ ಆಂಕರ್ ಮೌನ ಮುರಿದಿದ್ದಾಳೆ.ಕ್ರೈಮ್ ರಿಪೋರ್ಟರ್ ಜತೆ ತನ್ನ ಮನೆಯ ವ್ಯಾಪ್ತಿಯಲ್ಲಿರುವ ಬನಶಂಕರಿ ಪೊಲೀಸ್ ಠಾಣೆಗೆ ಕಂಪ್ಲೆಂಟ್ ಕೊಡ್ಲಿಕ್ಕೆ ಹೋಗಿದ್ದಾಳೆ.

ಪಾಗಲ್ ಪ್ರೇಮಿ ವಿರುದ್ದ ದಾಖಲಿಸಿರುವ ಸೆಕ್ಷನ್ ಗಳು
ಪಾಗಲ್ ಪ್ರೇಮಿ ವಿರುದ್ದ ದಾಖಲಿಸಿರುವ ಸೆಕ್ಷನ್ ಗಳು

ಘಟನೆ ನಡೆದಿರುವುದು ಕಚೇರಿ ಬಳಿಯಾಗಿ ರೋದ್ರಿಂದ ಬೆಂಗಳೂರಿನ ಸಿಲ್ವರ್ ಜ್ಯೂಬಿಲಿ ಪಾರ್ಕ್(ಎಸ್ ಜೆ ಪಾರ್ಕ್) ಠಾಣೆಗೆ ಕಂಪ್ಲೆಂಟ್ ಕೊಡುವಂತೆ ಸಲಹೆ ಕೊಟ್ಟಿದ್ದಾರೆ.ಅವರ ಸಲಹೆ ಮೇರೆಗೆ ಎಸ್ ಜೆ ಪಾರ್ಕ್ ಠಾಣೆಗೆ ಬಂದು ಜೂನ್ 26 ರಂದು  ದೂರು ಕೊಟ್ಟಿದ್ದಾಳೆ.ದೂರನ್ನು ಆಧರಿಸಿ ಇನ್ವಿಸ್ಟೇಗಷನ್ ಮಾಡಿ ಬಸಪ್ಪನನ್ನು ಟಿವಿ ಚಾನೆಲ್ ಕಚೇರಿ ಬಳಿಯೇ ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ.ನಂತರ ಪೊಲೀಸ್ ಟ್ರೀಟ್ಮೆಂಟ್ ಕೊಡ್ತಿದ್ದಂಗೆ ಬಿಟ್ಟುಬಿಡಿ ಸರ್..ಇನ್ಮುಂದೆ ಆಕೆ ಸಹವಾಸಕ್ಕೆ ಹೋಗೊಲ್ಲ ಎಂದು ರಿಕ್ವೆಸ್ಟ್ ಮಾಡ್ಕೊಂಡಿದ್ದಾನೆ.

ಖಡಕ್ಕಾಗಿ ವಾರ್ನ್ ಮಾಡಿ ಆತನ ವಿರುದ್ಧ 354 ಲೈಂಗಿಕ ಕಿರುಕುಳ,506-ಕೊಲೆ ಬೆದರಿಕೆ,507-ಅನಾಮಧೇಯ ವ್ಯಕ್ತಿಯ ಬೆದರಿಕೆ ,509-ಮಹಿಳೆಯ ಗೌರವಕ್ಕೆ ಧಕ್ಕೆ ,504: ಅವಾಚ್ಯ ಶಬ್ದಗಳಿಂದ ನಿಂದನೆ,66(ಡಿ)-ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಹಾಗೂ ಅವಮಾನ ಉಂಟುಮಾಡಿದ ಅಪರಾಧಗಳ ಮೇಲಿನ ಸೆಕ್ಷನ್ ಗಳನ್ನು ಜಡಿದಿದ್ದಾರೆ.ಬೇಲ್ ಪಡೆದು ಸಧ್ಯಕ್ಕೆ ರಿಲೀಸ್ ಆಗಿರುವ ಬಸಪ್ಪ ತಪ್ಪನ್ನು ತಿದ್ದುಕೊಳ್ತಾನೋ ಅಥವಾ ತನಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳೊಕ್ಕೆ ಹೆಡೆಮುದುರಿಕೊಂಡು ಸಮಯಕ್ಕಾಗಿ ಕಾಯುತ್ತಿರುತ್ತಾನೋ ಗೊತ್ತಿಲ್ಲ.

ಪಾಗಲ್ ಪ್ರೇಮಿ ಬಸಪ್ಪನ ಕಾಟದಿಂದ ನೆಮ್ಮದಿಯನ್ನೇ ಕಳಕೊಂಡಿದ್ದ ಆ ಆಂಕರ್ ಇದೀಗ ನಿಟ್ಟುಸಿರುಬಿಟ್ಟಿದ್ದಾಳೆ.ಆದರೂ ಮನಸಿನ ಮೂಲೆಯಲ್ಲಿ ಅವ್ಯಕ್ತವಾದ ಭಯವೊಂದನ್ನು ಆ “ಹುಚ್ಚು ಪ್ರೇಮಿ” ಉಳಿಸಿ ಹೋಗಿದ್ದಾನೆ.ಈ ಘಟನೆಯಿಂದ ಚಾನೆಲ್ ನ ಆಡಳಿತ ಮಂಡಳಿ ತೀವ್ರ ಮುಜುಗರಕ್ಕೆ ಈಡಾಗಿದೆಯಂತೆ.ಆಂಕರ್ ವೊಬ್ಬಳ ಕಥೆ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದ್ದು ದುರಾದೃಷ್ಟಕರ ಎಂದು ವಿಶ್ಲೇಷಿಸುತ್ತಿದೆಯಂತೆ.ಆ ಹಿನ್ನಲೆಯಲ್ಲಿ ಆಕೆಯಿಂದ ಸ್ಪಷ್ಟನೆ ಕೇಳಿದೆ ಎಂದು ಕೂಡ ಹೇಳಲಾಗ್ತಿದೆಯಂತೆ. ಅದೆಲ್ಲಾ ನಂತರದ ಮಾತು, ಅದೇನೇ ಆಗಿರಬಹುದು, ಚಾನೆಲ್ ನ ಆಡಳಿತ ವ್ಯವಸ್ಥೆ, ಆ ಮಹಿಳಾ ಆಂಕರ್ ರಕ್ಷಣೆಗೆ  ಬರಬೇಕಿರೋದು ಅದರ ನೈತಿಕ ಹೊಣೆಗಾರಿಕೆ ಕೂಡ.

Spread the love
Leave A Reply

Your email address will not be published.

Flash News