ಇದು ಫೇಕಾ..ಒರಿಜಿನಲ್ಲಾ..ಅದರಲ್ಲಿರೋದು ನಟ ದರ್ಶನ್ ಅವರದೇನಾ ಧ್ವನಿ..?!ಅಥವಾ ಇದು ದಾಸನ  ತೇಜೋವಧೆಯ ಮತ್ತೊಂದು ಷಡ್ಯಂತ್ರನಾ..?! ತನಿಖೆಯೇ ಸತ್ಯಾಸತ್ಯತೆ ಬಯಲು ಮಾಡಬೇಕು..!

0

ಬೆಂಗಳೂರು: ಇದು ನಿಜವಾ ಅಥವಾ ಫೇಕಾ ಗೊತ್ತಿಲ್ಲ..ಅದು ಖಂಡಿತಾ  ನಿಜವಾಗದಿರಲಿ.. …ನಿಜವಾಗಿರಬಾರದು ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಆಶಿಸುತ್ತದೆ…ಆದ್ರೆ..ಆದ್ರೆ ಒಂದ್ವೇಳೆ ದರ್ಶನ್ ಅವರದೇ ವಾಯ್ಸ್  ಅದಾಗಿದ್ದರೆ ಅದು ನಿಜಕ್ಕೂ ಅಕ್ಷಮ್ಯ ಹಾಗೂ  ಖಂಡನಾರ್ಹ..ಮಾದ್ಯಮಗಳಿಗೆ ನೈತಿಕತೆ ಇದ್ದರೆ ದರ್ಶನ್ ಅವರನ್ನು ಬ್ಯಾನ್ ಮಾಡಬೇಕು..ಆ ಧೈರ್ಯ ಮಾಡಬೇಕೆನ್ನುವ ಮಾತುಗಳು ಸುದ್ದಿ ಮನೆಯಿಂದ ಕೇಳಿಬರಲಾ ರಂಭಿಸಿದೆ..ಇದೆಲ್ಲಾ ಆ ಆಡಿಯೋ ರೆಕಾರ್ಡ್ ನಲ್ಲಿರುವ ವಾಯ್ಸ್ ದರ್ಶನ್ ಅವರದೇ ಆಗಿದ್ದಲ್ಲಿ ಮಾತ್ರ ಎನ್ನುವುದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಮತ್ತೊಮ್ಮೆ ಒತ್ತಿ ಹೇಳುತ್ತೆ..ಇದನ್ನು ದರ್ಶನ್ ಅಭಿಮಾನಿಗಳು ತಪ್ಪಾಗಿ ಅರ್ಥೈಸಲೇಬಾರದು.(ಆ ಆಡಿಯೋ ರೆಕಾರ್ಡಿಂಗ್ ನ್ನು ಕೇಳಿಸೊಕ್ಕೆ ಆಗದಷ್ಟು ಅದರಲ್ಲಿ ಅಸಹ್ಯಕರವಾದ ರೀತಿಯ ಮಾತುಗಳಿವೆ)

25 ಕೋಟಿ ವಿವಾದದಿಂದ ಆರಂಭವಾದ ಇಶ್ಯೂ ಇವತ್ತು ಪಡೆದುಕೊಳ್ಳುತ್ತಿರುವ ತಿರುವು ಗಮನಿಸಿ ದ್ರೆ ಇದು ಎಲ್ಲಿಗೆ ಹೋಗಿ ತಲುಪುತ್ತೋ,.. ಇನ್ನು ಎಷ್ಟೆಲ್ಲಾ.. ಯಾವೆಲ್ಲಾ ಆಯಾಮ ಪಡೆಯುತ್ತೋ.. ಯಾರೆ ಲ್ಲಾ ಇದರಲ್ಲಿ ಬೆತ್ತಲಾಗುತ್ತಾರೋ..ಯಾರದೆಲ್ಲಾ ಮುಖವಾಡಗಳು ಕಳಚಿ ಬೀಳುತ್ವೋ..ಯಾರೆಲ್ಲಾ ಬಲಿಪೀಠದಲ್ಲಿ ನಿಲ್ಲುವಂತಾಗುತ್ತೋ..ವ್ಯಕ್ತಿಗತ ತೇಜೋವಧೆ.. ಕೆಸರೆರಚಾಟ..ವಾಗ್ಯುದ್ಧ..ಸ್ಟಾರ್ ವಾರ್ ಗೆ ಲ್ಲಾ ಕಾರಣವಾಗುತ್ತೋ ಗೊತ್ತಾಗ್ತಿಲ್ಲ.

ಏಕೆಂದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಸ್ಪೋಟಕ ಆಡಿಯೋ ಏನಾದ್ರೂ ಚಾಲೆಂ ಜಿಂಗ್ ಸ್ಟಾರ್ ದರ್ಶನ್ ಅವರಿಗೇನೆ ಸಂಬಂಧಿಸಿದ್ದೆನ್ನುವುದು ಪ್ರೂವ್ ಆದ್ರೆ ಮಾತ್ರ ಚಿತ್ರರಂಗದಲ್ಲಿ ಅಪಾ ರ ಪ್ರಮಾಣದ ಅಭಿಮಾನಿಗಳನ್ನು ಗಳಿಸಿ ರುವ,ಬಹು ಎತ್ತರಕ್ಕೆ ಬೆಳೆಯಬಹುದಾದ  ಎಲ್ಲಾ ಕ್ವಾಲಿಟಿಸ್ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಮುಳುವಾಗೋದಂತೂ ಗ್ಯಾರಂಟಿ.ಅಂಥ ಪ್ರಮಾದ ಕಾರಿ ಎನ್ನುವಂಥ ಆಕ್ಷೇಪಾರ್ಹ ಹಾಗೂ ಅಶ್ಲೀಲ-ಅಸಭ್ಯವಾದಂಥ ಹೇಳಿಕೆಗಳನ್ನು ಒಳಗೊಂಡಿದೆ ಆ ಆಡಿಯೋ.

ದರ್ಶನ್ ಅವರ ಧ್ವನಿ ಹೋಲುವಂಥ ಧ್ವನಿ ಎಂದು ಹೇಳಲಾಗುತ್ತಿರುವ ಆ 2.10 ನಿಮಿಷಗಳ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮಾದ್ಯಮಗಳನ್ನೇ ಟಾರ್ಗೆಟ್ ಮಾಡಿ ತುಂಬಾ ಅಸಭ್ಯ-ಅಶ್ಲೀಲವಾಗಿ ಮಾತನಾಡಿರುವ  ಆಡಿಯೋ ಕೇಳಿದ ಪ್ರತಿಯೊಬ್ಬನಿಗೂ ಮೈ ಉರಿಯೋದು ಸಹಜ. ಮಾದ್ಯಮಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ತಾಳ್ಮೆ ಕೆಣಕು ವಂಥ-ಸಂಯಮ ಕೆರಳಿಸುವಂತ ರೀತಿಯಲ್ಲಿರುವ ಮಾತುಗಳು ಅಸಹ್ಯಕರವಾಗಿಯೂ ಇವೆ.ಅದು ಸ್ಟಾರ್ ಡಮ್ ಹೊಂದಿರುವಂಥ ಒಬ್ಬ ನಟನಾದಂಥವನಿಗೆ  ಶೋಭೆ ತರುವಂಥದ್ದೂ ಅಲ್ಲ.

ಆರಂಭದಿಂದಲೂ ದರ್ಶನ್ ಗೂ ಮಾದ್ಯಮಗಳಿಗೂ ಎಣ್ಣೆ ಸೀಗೆಕಾಯಿ ನಂಟು.( ಅದಕ್ಕೆ ಕಾರಣಗಳೇನೆನ್ನುವುದನ್ನು ತಿಳಿಸಿ ಹೇಳಬೇಕಿಲ್ಲ.).ಬಹುಷಃ ಮಾದ್ಯಮಗಳನ್ನು ದರ್ಶನ್ ಅವರಷ್ಟು  ದೂರ ಇಟ್ಟವರು..ಮಾದ್ಯಮಗಳಿಂದ ಅಂತರ ಕಾಯ್ದುಕೊಂಡ ನಟ ಮತ್ತೊಬ್ಬ ಇರಲಾರರೇನೋ..25 ಕೋಟಿ ಇಶ್ಯೂನಲ್ಲೂ ದರ್ಶನ್ ಇಷ್ಟಪಟ್ಟು ಮಾದ್ಯಮಗಳ ಬಳಿ ವಿಷಯವನ್ನು ಪ್ರಸ್ತಾಪಿಸುತ್ತಿಲ್ಲ ಎನ್ನುವುದು ಕೂಡ  ಸತ್ಯ.ಟಿಆರ್ ಪಿ ಸ್ಟಾರ್ ಆಗಿರುವುದರಿಂದ ಮಾದ್ಯಮಗಳು ದರ್ಶನ್ ಮನೆಯನ್ನು ವಾಚ್ ಮನ್ ಗಳಂತೆ ಕಾದು ಮಾತನಾಡಿಸುತ್ತಿವೆ..ಅದು ದರ್ಶನ್ ಗೆ ಎಷ್ಟರ ಮಟ್ಟಿಗೆ ಅಗತ್ಯವಿದೆಯೋ ಇಲ್ಲವೋ ಗೊತ್ತಿಲ್ಲ,ಆದ್ರೆ ಟಿಆರ್ ಪಿ ಬೆನ್ನತ್ತಿರುವ  ಮಾದ್ಯಮಗಳಿಗೆ ಮಾತ್ರ ಅನಿವಾರ್ಯ.

ದರ್ಶನ್ ಹಾಗೂ ಮಾದ್ಯಮಗಳ ನಡುವೆ ಇರುವಂಥ ಅಷ್ಟಕ್ಕಷ್ಟೇ  ಎನ್ನುವ ಸಂಬಂಧವನ್ನು ಮತ್ತಷ್ಟು ಹದಗೆಡಿಸೊಕ್ಕೆ  ಯಾರೋ ಕಿಡಿಗೇಡಿಗಳು ದರ್ಶನ್ ಅವರ ಧ್ವನಿಯನ್ನೇ ಹೋಲುವ  ರೀತಿಯಲ್ಲಿ ಮಿಮಿ ಕ್ರಿ ಮಾಡಿರಬಹುದೇ..?ಮಾದ್ಯಮಗಳನ್ನು ಕೆಟ್ಟಾಕೊಳಕ ಬೈಯ್ದು ದರ್ಶನ್ ರನ್ನು ಮಾದ್ಯಮಗಳ ದೃಷ್ಟಿ ಯಲ್ಲಿ ವಿಲನ್ ಆಗಿ ಬಿಂಬಿಸುವ ಕುಚೋದ್ಯ ಮಾಡಿರಬಹುದೇ..? ಏನೇನೆಲ್ಲಾ ಮಾಡೊಕ್ಕೆ ಸಾಧ್ಯವಿರುವ ಷ್ಟು ಮಂದುವರೆದಿರುವ ತಂತ್ರಜ್ಞಾನದ ಜಮಾನದಲ್ಲಿ ದರ್ಶನ್ ವಾಯ್ಸ್ ನಂತೆ ಮಿಮಿಕ್ರಿ ಮಾಡಿ,ಅದಕ್ಕೊಂದು ಸೀನ್ ಕ್ರಿಯೇಟ್ ಮಾಡೋದು ಕಷ್ಟವೇನಲ್ಲ ಕೂಡ.ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ದರ್ಶನ್ ತೇಜೋವಧೆ ಭಾಗವಾಗಿ ಇಂತದ್ದೊಂದು ಷಡ್ಯಂತ್ರ ನಡೆದಿದ್ದರೂ ಆಶ್ಚರ್ಯವಿಲ್ಲ.

ಹಾಗಾಗಿದ್ದರೆ ನಿಜಕ್ಕೂ ವೆಲ್ ಅಂಡ್ ಫೈನ್..ಹಾಗೆಯೇ ಆಗಿರಲಿ ಎನ್ನೋದು ಮಾದ್ಯಮಗಳ ಆಶಯ ಕೂಡ.ಏಕೆಂದ್ರೆ ದರ್ಶನ್ ಅವರ ಸಾಕಷ್ಟು ಬೆಳವಣಿಗೆಗಳನ್ನು ಮಾದ್ಯಮಗಳೇ ಹೆಮ್ಮೆಯಿಂದ ನೋಡಿವೆ.ಬಿಂಬಿಸಿವೆ ಕೂಡ. ಸ್ವಂತ ಪರಿಶ್ರಮದಿಂದ ಬೆಳೆದ ದರ್ಶನ್ ಬಗ್ಗೆ ಕೆಲವೊಂದು ಕಾರಣಗಳನ್ನು ಬಿಟ್ಟರೆ ಮಾದ್ಯಮಗಳಿಗೆ ಹೆಮ್ಮೆಯೇ ಇದೆ.ಅಂಥಾ  ದರ್ಶನ್ ಬಾಯಿಂದ ಅಂಥ ಅಶ್ಲೀಲ-ಅವಾಚ್ಯ ಪದಗಳು ಬರಬಾರದು..ಬಾರದಿರಲಿ ಎಂದು ಮಾದ್ಯಮಗಳು ಆಶಿಸುತ್ತವೆ.

ಆದ್ರೆ ಅದನ್ನು ಅರ್ಥೈಸಿಕೊಳ್ಳದೆ ದರ್ಶನ್ ಯಾವುದೋ ವಿಷಮ ಸನ್ನಿವೇಶದಲ್ಲಿ ನಾಲಿಗೆಯನ್ನು ಪ್ರಜ್ಞಾಪೂರ್ವಕವಾಗಿ ಹರಿಬಿಟ್ಟಿರೋದೇ ಸತ್ಯವಾದ್ರೆ ಮಾದ್ಯಮಗಳು ದರ್ಶನ್ ಎನ್ನುವಂಥ ನಟನ ವಿಷಯದಲ್ಲಿ ಮಾದ್ಯಮ ಇತಿಹಾಸದಲ್ಲೇ ತೆಗೆದುಕೊಳ್ಳದ ಕಠಿಣ ನಿರ್ದಾರ ಕೈಗೊಳ್ಳಬೇಕಾಗುತ್ತದೇನೋ ಗೊತ್ತಿಲ್ಲ.ಹಾಗೇನಾದ್ರೂ ಆದಲ್ಲಿ,ಇದು ಬಹುಷಃ  ಚಿತ್ರರಂಗದ ಇತಿಹಾಸದಲ್ಲಿ ಹಿಂದೆಂದೂ ಆಗಿರದ,ಮುಂದೆಯೂ ಆಗಲಿಕ್ಕೆ ಸಾಧ್ಯವಿಲ್ಲದ ಕೆಟ್ಟ ಹಾಗೂ ವಿಷಾದನೀಯ ಸಂದರ್ಭವಾಗಿ ಕರೆಸಿಕೊಳ್ಳಬಹುದೇನೋ..?

ಮಾದ್ಯಮಗಳು ಈಗಾಗ್ಲೇ ಆ ಆಡಿಯೋ ರೆಕಾರ್ಡ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕೆಲಸಕ್ಕೆ ಮುಂ ದಾಗಿವೆ.ಪೊಲೀಸ್ ಹಾಗೂ ಸೈಬರ್ ಕ್ರೈಂ ಇಲಾಖೆ ಮುಖ್ಯಸ್ಥರನ್ನು ಸಂಪರ್ಕಿಸುವ ಕಾರ್ಯ ಪ್ರಗತಿಯಲ್ಲಿ ದೆ ಎನ್ನಲಾಗಿದೆ.ಕುಡಿದ ಮತ್ತಿನಲ್ಲಿ ಬಾಯಿಗೆ ಬಂದಂತೆ ಮಾದ್ಯಮಗಳನ್ನು ನಿಂದಿಸಿರುವ ಆ ಆಡಿಯೋ ದಲ್ಲಿರುವ ವ್ಯಕ್ತಿ ಯಾರೇ ಆದ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕೆನ್ನುವ ಅಭಿಪ್ರಾಯಗಳೂ ಕೂಡ ಕೇಳಿಬರುತ್ತಿವೆ.ಮಾದ್ಯಮಗಳ ಬಗ್ಗೆ ಎಂತದ್ದೇ ಬೇಸರ-ಅಸಹನೆ-ಆಕ್ರೋಶ- ಅಸಮಾಧಾನ ಇದ್ದರೂ ಅದನ್ನು ಖಂಡಿಸುವುದಕ್ಕೂ ಒಂದು ಶಿಷ್ಟಾಚಾರ ಇರುತ್ತೆ.ಚಿತ್ರರಂಗದ ಬಗ್ಗೆ ಮಾದ್ಯಮಗಳಿಗೂ ಸಾಕಷ್ಟು ವಿಚಾರಗಳಲ್ಲಿ ಬೇಸರ-ಭಿನ್ನಾಭಿಪ್ರಾಗಳಿರುತ್ವೆ..ಹಾಗಂತ ಅಶ್ಲೀಲ ಅಸಂಬದ್ಧ ವರದಿಗಳ ಮೂಲಕ ಬಹಿರಂಗಗೊಳಿಸಲಾಗುತ್ತಾ..ಖಂಡಿತಾ ಇಲ್ಲ..ಆ ಆಡಿಯೋ ರೆಕಾರ್ಡಿಂಗ್ ವಿಷಯದಲ್ಲೂ ಇದೇ ನಿಯಮ ಅಪ್ಲೈ ಆಗಬೇಕಾಗುತ್ತದೆ.

ಈ ಆಡಿಯೋ ರೆಕಾರ್ಡಿಂಗ್ ನ್ನು ಮಾದ್ಯಮಗಳು ಖಂಡಿತಾ ಹಗುರವಾಗಿ ಪರಿಗಣಿಸಲೇಬಾರದು.ಏಕೆಂದ್ರೆ ಆ ಆಡಿಯೋದಲ್ಲಿರುವ ಮಾತುಗಳು ಅಷ್ಟು ಕರ್ಣ ಕಠೋರವಾಗಿವೆ.ಅಲ್ಲದೇ ಅದು ಮಾದ್ಯಮಗಳ ನೈತಿಕತೆಯನ್ನು ಪ್ರಶ್ನಿಸುವಂತಿದೆ.ಇಂಥಾ ಸನ್ನಿವೇಶದಲ್ಲಿ ನೈಜತೆ ಪರಿಶೀಲಿಸಿ ಸತ್ಯಾಸತ್ಯತೆ ಕಂಡುಕೊಳ್ಳ ಲೇಬೇಕಿದೆ..ನಿರ್ಲಕ್ಷ್ಯಿಸಿದಲ್ಲಿ ಮಾದ್ಯಮಗಳನ್ನು, ಹಾದಿ ಬೀದಿಯಲ್ಲಿ ಹೋಗೋ ಯಾರ್ ಬೇಕಾದ್ರೂ  ಕೆಟ್ಟಾ ಕೊಳಕ ಬೈಯ್ಯೊಕ್ಕೆ ನಾವೇ ರಾಜಮಾರ್ಗ ಕಲ್ಪಿಸಿಕೊಟ್ಟಂತಾಗುತ್ತದೆ.ಅಷ್ಟೇ ಅಲ್ಲ,ಇವರನ್ನು ಹೇಳೋರು,ಕೇಳೋರು ಯಾರು ಇಲ್ಲ..?ಇವರನ್ನು ಏನ್ ಬೇಕಾದ್ರೂ ಮಾಡಿಕೊಳ್ಳಬಹುದೆನ್ನುವ ಸಲೀಸು ತನದಲ್ಲಿ ಹಾಡಹಗಲೇ ಎಲ್ಲಿ..ಹೇಗೆ ಬೇಕಾದ್ರೂ ಕೊಲೆ ಮಾಡೊಕ್ಕೆ ಹೇಸದ ಸ್ಥಿತಿ ನಿರ್ಮಾಣವಾಗಬಹುದು..ಹಾಗಾಗಿ  ಇದನ್ನು ಮಾದ್ಯಮಗಳನ್ನು ಎಚ್ಚರಿಕೆಯ ಕರೆಗಂಟೆ ಎಂದು ಆಲೋಚಿಸಲೇಬೇಕಾಗುತ್ತದೆ.

Spread the love
Leave A Reply

Your email address will not be published.

Flash News