ಕನ್ನಡ ಪತ್ರಿಕೋದ್ಯಮದ ಗಟ್ಟಿಧ್ವನಿ ಬದ್ರುದ್ದೀನ್-ವೃತ್ತಿಪರತೆಗೆ ದಕ್ಕೆ ಬಂದಾಗ ಸಾತ್ವಿಕ ಆಕ್ರೋಶದಿಂದಲೇ ಗುಡುಗುವ ಧ್ಯೇಯನಿಷ್ಟ ಪತ್ರಕರ್ತ..

0
ಹಿರಿಯ ಪತ್ರಕರ್ತ ಬದ್ರುದ್ದೀನ್
ಹಿರಿಯ ಪತ್ರಕರ್ತ ಬದ್ರುದ್ದೀನ್

ಬೆಂಗಳೂರು: ಬದ್ರುದ್ದೀನ್ ಮಾಣಿ..

ಕನ್ನಡ ಮಾದ್ಯಮ ಲೋಕದಲ್ಲಿ ತುಂಬಾ ಗೌರವಪೂರ್ಣವಾಗಿ ಸಂಬೋಧಿಸಲ್ಪಡುವ ಹೆಸರಿದು.ಸರಿಸುಮಾರು 2 ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಮಾದ್ಯಮ ಲೋಕದಲ್ಲಿದ್ದರೂ ಕಳಂಕ ಮೆತ್ತಿಸಿಕೊಳ್ಳದ,ಕೈ ಕೊಳಕು ಮಾಡಿಕೊಳ್ಳದ ಹಿರಿಯ ಪತ್ರಕರ್ತ.ಕಿರಿಯರನ್ನು ಬೆಳೆಸುವ,ಅವ್ರಿಗೆ ಅಗತ್ಯವಿರುವ ಮಾರ್ಗದರ್ಶನ ಮಾಡುತ್ತಾ ಬಂದಿರುವ ಸಹೃದಯಿ.ನಂಬಿದ ತತ್ವ ಸಿದ್ದಾಂತದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ನಿಷ್ಟೂರ ಮನಸ್ಥಿತಿಯ ಬದ್ರುದ್ದೀನ್ ಅವರಂಥ ಪತ್ರಕರ್ತರು ಇವತ್ತಿಗೆ ಸಿಗೋದು ತೀರಾ ಅಪರೂಪ.

ಬದ್ರುದ್ದೀನ್ ಅವರ ಬಗ್ಗೆ ಬರೆಯೊಕ್ಕೆ ಮುನ್ನ ಇವತ್ತಿನ  ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಮನಸ್ಥಿತಿ  ಬಗ್ಗೆ ಹೇಳೋದು ಸೂಕ್ತ ಎನಿಸ್ತದೆ.ದಶಕಗಳಿಂದಲೂ ಫೀಲ್ಡ್ ನಲ್ಲಿರುವ ಅದೆಷ್ಟೋ ಹಿರಿಯ ಹಾಗು ಅನುಭವಿ ಪತ್ರಕರ್ತರು ಇವತ್ತಿಗೂ ಕಲಿಕೆಯ ವಿದ್ಯಾರ್ಥಿಗಳೆಂಬ ವಿಧೇಯತೆಯನ್ನು ಉಳಿಸಿಕೊಂಡು ಕೆಲಸ ಮಾಡುತ್ತಿದ್ದರೆ,,ಹೀಗಷ್ಟೇ ಫೀಲ್ಡ್ ಗೆ ಬಂದ ಅದೆಷ್ಟೋ ಹೊಸ ತಲೆಮಾರಿನ ಪತ್ರಕರ್ತರು ನಡೆದುಕೊಳ್ಳುವ ರೀತಿ ಗಮನಿಸಿದ್ರೆ ಆಶ್ಚರ್ಯವಾಗುತ್ತದೆ.ಕೈಯಲ್ಲಿ ನಂಬರ್-1,ನಂ-2 …ನಂಥ ಚಾನೆಲ್ ಗಳ ಲೋಗೋ ಸಿಕ್ಕ ಕೆಲವು ರಿಪೋರ್ಟರ್ಸ್ ಗಳಂತೂ  ತಲೆ ನಿಲ್ಲದ ರೀತಿಯಲ್ಲಿ ವರ್ತಿಸಲಾರಂಭಿಸ್ತಾರೆ.ತಲೆಯಲ್ಲಿ  ಬುದ್ದಿ ಇಲ್ಲದಿದ್ದರೂ ಅವರು ಕೊಡೋ ಬಿಲ್ಡಪ್ ಗಳಿಗೇನೊ ಕೊರತೆ ಇರೊಲ್ಲ (ಇದು ಆ ರೀತಿ ನಡೆದುಕೊಳ್ಳುತ್ತಿರುವ ಹೊಸಬರಿಗಷ್ಟೇ ಅನ್ವಯ,ಹೊಸಬರೆಲ್ಲಾ ಈ ಆರೋಪವನ್ನು ಸಾಮಾನ್ಯಿಕರಿಸಿಕೊಳ್ಳಬೇಕಿಲ್ಲ.) ಆದ್ರೆ ವಯಸ್ಸಿನಲ್ಲಿ ಕಿರಿಯರಾಗಿರುವ ವೃತ್ತಿ ಬಾಂಧವರು ಲೋಗೋ ಕೈಯಲ್ಲಿ ಇಲ್ಲದ ಹೊರತಾಗ್ಯೂ ಜನ ಗುರುತಿಸುವಂಥ ಕೆಪಾಸಿಟಿ ಬೆಳೆಸಿಕೊಳ್ಳಬೇಕೆನ್ನುವುದುನಮ್ಮ ಆಶಯ.ಅದೇ ನಿಜವಾದ ವೃತ್ತಿಪರತೆ.

ಹ್ಞಾಂ..ಈಗ ವಿಷಯಕ್ಕೆ ಬರೋಣ,ಬದ್ರುದ್ದೀನ್ ಬಗ್ಗೆ ಹೇಳೊಕ್ಕೆ ಕಾರಣವೂ ಇದೆ.ಅದಕ್ಕೆ ಹಿನ್ನಲೆಯಾಗಿದ್ದು ವಿಧಾನಸೌಧ ಕಾರಿಡಾರ್  ಪ್ರವೇಶಿಸ್ಲಿಕ್ಕೂ ಮಾದ್ಯಮಗಳಿಗೆ ಅವಕಾಶ ಕೊಡದೆ ನಿರ್ಬಂಧ  ಹೇರಿದ ವಿಚಾರದಲ್ಲಿ ಸರ್ಕಾರದ ಆ ಸರ್ವಾಧಿಕಾರಿ ಧೋರಣೆ ವಿರುದ್ಧ ಮಂಚೂಣಿಯಲ್ಲಿ ನಿಂತು ಪ್ರತಿಭಟಿಸಿದ್ದು,ಮುಖ್ಯಮಂತ್ರಿಗಳ ಮುಂದೆಯೇ ಪತ್ರಕರ್ತರ ಸಾತ್ವಿಕ ಆಕ್ರೋಶದ ಧ್ವನಿಯಾಗಿ ಗುಡುಗಿದ್ದು,ಅಷ್ಟೇ ಅಲ್ಲ,ಖುದ್ದು ಮುಖ್ಯಮಂತ್ರಿಗಳೇ ಆದೇಶ ರದ್ದುಪಡಿಸಿ ಪತ್ರಕರ್ತರ  ಪ್ರವೇಶ ಹಾಗೂ ಕಾರ್ಯರ್ಯನಿರ್ವಹಣೆಗೆ ಮುಕ್ತ ಅವಕಾಶ ಕಲ್ಪಿಸುವಂತೆ ಮಾಡಿದ್ದು ಕಡಿಮೆ ಮಾತಾ..?

ಬದ್ರುದ್ದೀನ್ ಮಾಡಿದ್ದು ಭಾರೀ ಉಪಕಾರದ ಕೆಲಸವೇನಲ್ಲ ಬಿಡಿ..ಬಿಡಿ..ಸದಾ ವಿಧಾನಸೌಧದಲ್ಲೇ ದಿನದ ಬಹುತೇಕ ಅವಧಿಯನ್ನು ಕಳೆಯುವ ಪತ್ರಕರ್ತರಲ್ಲಿ ಯಾರ್ ಬೇಕಾದ್ರೂ ಇದನ್ನು ಮಾಡ್ತಿದ್ರು..ಎಂದು ಉಡಾಫೆಯಿಂದ ಮಾತನಾಡಿಕೊಳ್ಳುವ.. ಮಾತನಾಡಿ ಕೊಂಡ ಪತ್ರಕರ್ತರಿಗೇನು ನಮ್ಮಲ್ಲಿ ಕಡ್ಮೆಯಿಲ್ಲ.ಆದ್ರೆ ಇಂತದ್ದೊಂದು ಕೆಲಸ ಮಾಡಲಿಕ್ಕೆ ಧೈರ್ಯ ಮಾಡುವಂಥವ್ರು ಬೇಕಲ್ಲ.. ಅದೆಲ್ಲಕ್ಕಿಂತ ಹೆಚ್ಚಾಗಿ ಅಂತದ್ದೊಂದು ನಿರ್ದಾರ ಮಾಡಿದವ್ರನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮ ಪತ್ರಕರ್ತರಲ್ಲಿ ಇರಬೇಕಲ್ಲ..ಏಕಂದ್ರೆ ಇರುವಂಥ ಪತ್ರಕರ್ತರಲ್ಲೇ ಸಾಕಷ್ಟು ಒಡಕುಗಳಿವೆ..ಅಭಿಪ್ರಾಯಬೇಧಗಳಿವೆ.. ಒಬ್ಬರನ್ನು ಕಂಡ್ರೆ  ಮತ್ತೊಬ್ಬರಿಗಾಗದಂಥ ಸಿಟ್ಟು-ಸೆಡವು-ಮನಸ್ಥಾಪ-ಆಕ್ಷೇಪ-ಅಸಮಾಧಾನಗಳಿವೆ.ಎಲ್ಲಕ್ಕಿಂತ ಹೆಚ್ಚಾಗಿ ಗುಂಪುಗಾರಿಕೆ ಇದೆ..ಪ್ರಾದೇಶಿಕ ಅಸಮತೋಲನಗಳಿವೆ..ಹಾಗಾಗಿ ಮೇಲ್ನೋಟಕ್ಕೆ ಎಲ್ಲರೂ ಒಟ್ಟಿಗಿದ್ದೇವೆಂದು ಎನಿಸಿದ್ರೂ ಸತ್ಯನೇ ಬೇರೆ.. ಇದೆಲ್ಲವನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸಿಕೊಂಡು-ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಒಂದು ಮುಂದಾಳತ್ವ ಬೇಕಲ್ವೇ..ಅದನ್ನು ಪುಲ್ ಫಿಲ್ ಮಾಡಿದವ್ರು ಬದ್ರುದ್ದೀನ್ ಮಾಣಿ.

ಬದ್ರುದ್ದೀನ್ ಅವರಿಗೆ ಇಂತದ್ದೊಂದು ಸಾಧ್ಯವಾಗಿದ್ದಾದ್ರೂ ಹೇಗೆ.? ಉತ್ತರ ಸೋ ಸಿಂಪಲ್..ಬದ್ರುದ್ದೀನ್ ಅವ್ರಿಗೆ ಇರುವ ನಾಯಕತ್ವದ ಗುಣ, ಸಮಯಪ್ರಜ್ಞೆ,ತಾಳ್ಮೆ, ಅಜಾತಶತೃತ್ವ..ಇದೆಲ್ಲವನ್ನು ಮೀರಿ ಅವಗಿರುವ ದಶಕಗಳಷ್ಟು ಧೀರ್ಘಕಾಲದ ಅನುಭವ ಮತ್ತು ರಾಜಕಾರಣಿಗಳೊಂದಿಗಿನ ಆತ್ಮೀಯತೆ ಹಾಗೂ ವೃತ್ತಿಪರತೆಗಷ್ಟೇ ಸೀಮಿತವಾದ ಒಡನಾಟ.

ವಿಧಾನಸೌಧಕ್ಕೆ ಸುದ್ದಿಗೆಂದು  ಹೋಗುವ ಮಾದ್ಯಮಗಳಿಗೆ ಗಡಿ ನಿರ್ಬಂಧ ಹೇರುವಂತದ್ದು ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮಾತ್ರವಲ್ಲ,ಅದು ಪತ್ರಿಕೋದ್ಯಮಕ್ಕಾದ ಭಾರೀ ಅವಮಾನ-ತೇಜೋವಧೆ ಕೂಡ.ಅಂದೇ ಸಾಕಷ್ಟು ಪತ್ರಕರ್ತರು ಸರ್ಕಾರದ ಧೋರಣೆಯನ್ನು ಖಂಡಿಸಿದ್ರು.ಆದ್ರೆ ಅವ್ರ ವಿರೋಧಕ್ಕೆ ಧ್ವನಿ ಇರಲಿಲ್ಲ..ನಾನಾ ಕಾರಣಗಳಿಂದ ಅನೇಕ ಪತ್ರಕರ್ತರೇ ಇದನ್ನು ಬಲವಾಗಿ ವಿರೋಧಿಸುವ ಗೋಜಿಗೆ ಹೋಗಲಿಲ್ಲ..ನಮಗೇಕೆ ಅದರ ಉಸಾಬರಿ ಎಂದು ಸುಮ್ಮನಾದವರೇ ಹೆಚ್ಚು.

ವಿಧಾನಸೌಧಕ್ಕೆ ಮಾದ್ಯಮ ಪ್ರವೇಶಕ್ಕೆ ಸರ್ಕಾರ ಹೇರಿದ ನಿರ್ಬಂಧದ ವಿರುದ್ಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎದುರೇ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಪತ್ರಕರ್ತ ಬದ್ರುದ್ದೀನ್
ವಿಧಾನಸೌಧಕ್ಕೆ ಮಾದ್ಯಮ ಪ್ರವೇಶಕ್ಕೆ ಸರ್ಕಾರ ಹೇರಿದ ನಿರ್ಬಂಧದ ವಿರುದ್ಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎದುರೇ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಪತ್ರಕರ್ತ ಬದ್ರುದ್ದೀನ್
ಬದ್ರುದ್ದೀನ್ ಮುಂದಾಳತ್ವದಲ್ಲಿ ಪತ್ರಕರ್ತರು ವ್ಯಕ್ತಪಡಿಸಿದ ಸಾತ್ವಿಕ ಆಕ್ರೋಶಕ್ಕೆ ಮಣಿದು ನಿರ್ಬಂಧ ತೆರವುಮಾಡುವ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ಬದ್ರುದ್ದೀನ್ ಮುಂದಾಳತ್ವದಲ್ಲಿ ಪತ್ರಕರ್ತರು ವ್ಯಕ್ತಪಡಿಸಿದ ಸಾತ್ವಿಕ ಆಕ್ರೋಶಕ್ಕೆ ಮಣಿದು ನಿರ್ಬಂಧ ತೆರವುಮಾಡುವ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ಆದ್ರೆ ಬದ್ರುದ್ದೀನ್ ಮಾಣಿ ಅವರಂಥ ನಿಷ್ಟೂರ ಮನಸ್ಥಿತಿಯ ಪತ್ರಕರ್ತನಿಗೆ ಇದನ್ನು ಸಹಿಸಿಕೊಳ್ಳುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳೋದೇ  ಸೂಕ್ತ ಎನಿಸಿರಬೇಕು.

ಹಾಗಾಗಿನೇ ನೇರವಾಗಿ ಹಾಗೂ ಬಹಿರಂಗವಾಗೇ ಸರ್ಕಾರದ ಧೋರಣೆ ಖಂಡಿಸುವ, ಅದು ಕೂಡ ಮುಖ್ಯಮಂತ್ರಿಗಳ ಎದುರಲ್ಲೇ ನೇರಾನೇರ ಪ್ರತಿಭಟಿಸುವ  ನಿರ್ದಾರಕ್ಕೆ ಬಂದೇ ಬಿಟ್ರು.ಅದನ್ನು ಅನುಷ್ಠಾನಕ್ಕೂ ತಂದ್ರು ಎನ್ನುವುದು ಮಾದ್ಯಮ ಹಾಗೂ ಪತ್ರಕರ್ತರಿಗೆ ಸಂದ ಅತೀ ದೊಡ್ಡ ಗೆಲುವು  ಎಂದು ವ್ಯಾಖ್ಯಾನಿಸಿದ್ರು ತಪ್ಪಾಗಲಿಕ್ಕಿಲ್ಲ.

ಬದ್ರುದ್ದೀನ್..ತಮ್ಮ ವೃತ್ತಿ ಜೀವನದುದ್ದಕ್ಕೂ ಇಂಥಾ ಸಾಕಷ್ಟು ಕೆಲಸಗಳಲ್ಲಿ ಮಂಚೂಣಿಯಲ್ಲಿ ನಿಂತು ಯಶಸ್ವಿಯಾಗಿದ್ದಾರೆ.ಇದು ಅವ್ರನ್ನು ತೀರಾಹತ್ತಿರದಿಂದ ಬಲ್ಲ ಅದೆಷ್ಟೋ ಹಿರಿ-ಕಿರಿಯ ವೃತ್ತಿ ಬಾಂಧವರಿಗೆ ಗೊತ್ತು.ಪ್ರಸ್ತುತ ಪಬ್ಲಿಕ್ ಟಿವಿಯ  ರಾಜಕೀಯ ವಿಭಾಗದಲ್ಲಿ ಅನೇಕ ವರ್ಷಗಳಿಂದ ಬದ್ರುದ್ದೀನ್ ಕೆಲಸ ಮಾಡುತ್ತಿದ್ದಾರೆ.ರಾಜಕೀಯ ಕ್ಷೇತ್ರದಲ್ಲಿನ ಕ್ಷಿಪ್ರ ಬದಲಾವಣೆ-ಬೆಳವಣಿಗೆ ಗಳು ಬದ್ರುದ್ದೀನ್ ಗೆ ಸಿಗುವಷ್ಟು ಸಲೀಸಾಗಿ ಮಾದ್ಯಮ ಕ್ಷೇತ್ರದಲ್ಲಿ ಇನ್ನೊಬ್ಬರಿಗೆ ಸಿಗೋದಿಲ್ಲ ಎನ್ನುವ ಮಾತಿದೆ.ಇದು ಸುಳ್ಳಾಗ್ಲಿ ಅಥವಾ ಕ್ಲೀಷೆಯ ಮಾತಲ್ಲ, ಸತ್ಯದ ವಿಚಾರ.

ಇಷ್ಟೆಲ್ಲಾ ಇದ್ರೂ ಬದ್ರುದ್ದೀನ್ ಅತ್ಯಂತ ಸ್ಥಿತಪ್ರಜ್ಞ್ರರಾಗೇ ಉಳಿದಿದ್ದಾರೆ.ಹೊಗಳಿದಾಗ ಹಿಗ್ಗದೆ, ತೆಗಳಿದಾಗ ಕುಗ್ಗಿಲ್ಲ.ತಮಗಿರುವ ವ್ಯಾಪಕ ಸಂಪರ್ಕಗಳನ್ನು ಎಲ್ಲಿಯೂ ಮಿಸ್ ಮಾಡಿಕೊಂಡವರಲ್ಲ.ಸಂಬಂಧವೇ ಬೇರೆ ಸಂಪರ್ಕವೇ ಬೇರೆ..ನನಗಿರುವುದು ರಾಜಕಾರಣಿಗಳ ಜತೆ ಕೇವಲ ಸಂಪರ್ಕ ಅಷ್ಟೇ..,ಅವರೊಂದಿಗೆ ಆತ್ಮೀಯವಾದ ಸಂಬಂಧವಲ್ಲ ಎನ್ನುವುದನ್ನು ಪ್ರೂವ್ ಮಾಡಿದವರು.

ಇನ್ನು ಪತ್ರಿಕೋದ್ಯಮದಲ್ಲಿ ಬೆಳೆಯಬೇಕೆನ್ನುವ ಉಮೇದು-ಝೀಲ್ ಇರೋ ಕಿರಿಯರನ್ನು ಯಾವುದೇ ವೃತ್ತಿ ಮಾತ್ಸರ್ಯವಿಲ್ಲದೆ ಬೆಳೆಸುವ ಅವರ ಒಳ್ಳೇತನವೇ ಅಪ್ಯಾಯಮಾನವಾದುದು.ರಾಜಕೀಯ ವರದಿಗಾರಿಕೆಗೆ ಎಂಟ್ರಿ ಕೊಡುವ ಬಹುತೇಕ ಪತ್ರಕರ್ತರಿಗೆ ಬದ್ರುದ್ದೀನ್ ಒಬ್ಬ ಒಳ್ಳೆಯ ಗುರು-ಮಾರ್ಗದರ್ಶಕ.ಸುದ್ದಿ ಮೂಲ.ರಾಜಕೀಯ ವಲಯದಲ್ಲಿ ಕ್ಷಣ ಕ್ಷಣಕ್ಕೂ ಏನಾಗುತ್ತಿದೆ ಎನ್ನುವ ಅಪ್ ಡೇಟ್ಸ್ ಇವರಷ್ಟು ಚೆನ್ನಾಗಿ ಬಲ್ಲವರೇ ಇಲ್ಲ ಎನ್ನುವ ಮಾತುಗಳಿವೆ.

ಇದರ ಬಗ್ಗೆ ಯಾರೇ ಕೇಳಿದ್ರೂ ಬ್ರೇಕಿಂಗ್-ಎಕ್ಸ್ ಕ್ಲ್ಯೂಸಿವ್-ಎಕ್ಸ್ ಪ್ಲೋಸಿವ್ ಗೋಜಿಗೆ ಹೋಗದೆ ಅವರಿಗೆ ಅಪ್ ಡೇಟ್ ಮಾಡುವ ಉತ್ತಮ ಗುಣ ಬದ್ರುದ್ದೀನ್ ಅವರದು.ಹಾಗಾಗಿನೇ ಬದ್ರುದ್ದೀನ್ ಮಾಣಿ ಎಲ್ಲರಿಗೂ ಇಷ್ಟವಾಗುವಂಥ ಅಪರೂಪಾತಿರೂಪ ಪತ್ರಕರ್ತರಲ್ಲಿ ಒಬ್ಬ.ಏಕೆಂದ್ರೆ ಪತ್ರಿಕೋದ್ಯಮದಲ್ಲಿ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳುವುದು ಹೇಗೆ ಕಷ್ಟವೋ..ಎಲ್ಲರಿಗೂ ಇಷ್ಟವಾಗುವಂಥ ಅಜಾತಶತೃ ಎನಿಸಿಕೊಳ್ಳುವುದು ಕೂಡ ಕ್ಲಿಷ್ಟವೇ..ಹಾಗಾಗಿನೇ ಬದ್ರುದ್ದೀನ್ ವಿಶೇಷ,ವೈಶಿಷ್ಟ್ಯ ಹಾಗೂ ಆಕರ್ಷಣೀಯ ವ್ಯಕ್ತಿಯಾಗಿ ಕಾಣಿಸ್ತಾರೆ.. 

Spread the love
Leave A Reply

Your email address will not be published.

Flash News