ಬೊಮ್ಮಾಯಿನೋ… ಸಂತೋಷ್ ಜೀ ನೋ.. ಪ್ರಹ್ಲಾದ್ ಜೋಷಿನೋ.. ಬೆಲ್ಲದ್ದೋ…   ಯತ್ನಾಳೋ.. ನಿರಾಣಿನೋ.. ಇವರೆಲ್ಲರನ್ನು ಬಿಟ್ಟು ಇನ್ನ್ಯಾರನ್ನೋ…

0
ಪದತ್ಯಾಗಕ್ಕೆ ಸಿದ್ಧವಾದ ಬಿಎಸ್ ಯಡಿಯೂರಪ್ಪಾ..?
ಪದತ್ಯಾಗಕ್ಕೆ ಸಿದ್ಧವಾದ ಬಿಎಸ್ ಯಡಿಯೂರಪ್ಪಾ..?

ಬೆಂಗಳೂರು: ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಾಧಿಯಿಂದ ಇಳಿಯೋದು ಬಹುತೇಕ ನಿಕ್ಕಿಯಾಗು ತ್ತಿದ್ದಂತೆ ಇಡೀ ರಾಜ್ಯವನ್ನು  ಕಾಡುತ್ತಿರುವ ಪ್ರಶ್ನೆಯಿದು.ಸರ್ವೇ ಸಾಮಾನ್ಯನಲ್ಲೂ ಚರ್ಚೆಹುಟ್ಟು ಹಾಕಿರುವ ಪ್ರಶ್ನೆ ಕೂಡ.ಅಷ್ಟೇ ಅಲ್ಲ ಬಿಜೆಪಿ ಹೈಕಮಾಂಡ್ ನ್ನೂ ಪೇಚಿಗೆ-ಗೊಂದಲಕ್ಕೆ ದೂಡಿರುವ ಪ್ರಶ್ಜೆ ಆಗಿದ್ದರೂ ಆಶ್ಚರ್ಯವಿಲ್ಲ

.ಏಕೆಂದ್ರೆ ಯಡಿಯೂರಪ್ಪ ಬಿಟ್ಟರೆ  ಮುಖ್ಯಮಂತ್ರಿಗೆ ಮತ್ತೊಬ್ಬ ಅವರಷ್ಟೇ ಅರ್ಹ-ಸಮರ್ಥ ಯಾರು..?ಎನ್ನುವಂಥ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಬಳಿಯೇ ಉತ್ತರ  ಇರಲಿಕ್ಕಿಲ್ಲವೇನೋ..ಆ ಮಟ್ಟಿಗೆ ಬಿಜೆಪಿಯನ್ನು ಆವರಿಸಿಕೊಂಡ,ಬಿಜೆಪಿಗೆ ಅನಿವಾರ್ಯವಾಗಿದ್ದ, ನಾಯಕತ್ವ ಕೊರತೆ ಎನ್ನೋ ನಿರ್ವಾತ ತುಂಬಿದ್ದ ಮುಖಂಡ ಯಡಿಯೂರಪ್ಪ ಆಗಿದ್ದರೇನೋ..

ಏಕಂದ್ರೆ ನೀವೇ ಗಮನಿಸಿ,ಬಿಜೆಪಿ ಅಧಿಕಾರ ಹಿಡಿಯುವ ಸನ್ನಿವೇಶ ಎದುರಾಗಿದ್ದಾಗಲೆಲ್ಲಾ  ಮುಖ್ಯ ಮಂತ್ರಿಗಾಧಿಗೆ ಥಟ್ಟನೇ ನೆನಪಾಗುತ್ತಿದ್ದ,ನಾಲಿಗೆ ತುದಿಯಲ್ಲೇ ನಲಿದಾಡುತ್ತಿದ್ದ ಒಂದೇ ಹೆಸರು ಬಿ.ಎಸ್. ಯಡಿಯೂರಪ್ಪ.ಬಿಎಸ್ ವೈ ಬಿಟ್ಟರೆ ಹೈಕಮಾಂಡ್ ಗೆ ಎರಡನೇ ಆಲೋಚನೆಯೇ ಬರುತ್ತಿರಲಿಲ್ಲ, ಅದಷ್ಟೇ ಅಲ್ಲ, ಸಣ್ಣಪುಟ್ಟ ಚಿಂತೆಗಳನ್ನು ಬಿಟ್ಟರೆ ಹೈಕಮಾಂಡ್ ಎರಡನೇ ಹೆಸರನ್ನು ಮುನ್ನಲೆಗೆ ತಂದಿದ್ದೂ ಕಡ್ಮೆನೇ ಬಿಡಿ..ಹಾಗಾಗಿನೇ ಮುಖ್ಯಮಂತ್ರಿಗಾಧಿಗೂ  ಅಷ್ಟೇನೂ ಪೈಪೋಟಿ-ಸ್ಪರ್ಧೆ ಕಂಡುಬಂದಿರಲೂ ಇಲ್ಲ ಬಿಡಿ.

ಆದರೆ ಈ ಬಾರಿ ಪರಿಸ್ಥಿತಿ  ಖಂಡಿತಾ ಆಗಿಲ್ವೇ..ಜಾತಿಗೆ ಸೀಮಿತವಾದ ನಾಯಕನಾಗಿ ಅಷ್ಟೇ ಅಲ್ಲ, ಎಲ್ಲಾ ಸಮುದಾಯಕ್ಕೂ ಸಲ್ಲತಕ್ಕ  ಮಾಸ್ ಲೀಡರ್ ಆಗಿಯೂ ಗುರುತಿಸಿಕೊಂಡಿದ್ದ ಬಿಎಸ್ ವೈ ಅವರಷ್ಟೇ ಕೆಪಾಸಿಟಿ ಇರುವ,ಎಲ್ಲರನ್ನು ಸರಿದೂಗಿಸಿ ಕೊಂಡು ಹೋಗತಕ್ಕಂಥ  ಮತ್ತೊಬ್ಬ ಸಮರ್ಥನ ಆಯ್ಕೆ ಮಾಡುವುದು ಹೈಕಮಾಂಡ್ ಗೆ ಕಷ್ಟಕರವಾಗುತ್ತಿದೆ.ಒಂದಷ್ಟು ಹೆಸರುಗಳು ಲೀಸ್ಟ್ ನಲ್ಲಿದ್ದರೂ ಅದನ್ನು ಫೈನಲ್ ಗೊಳಿಸೊಕ್ಕೆ ವರಿಷ್ಠರೇಕೋ ಹಿಂದೆ ಮುಂದೆ ನೋಡುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಜತೆಗೆ ಇದೇ ಭೇಟಿ ಕೊನೆಯಾಯ್ತಾ..
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಜತೆಗೆ ಇದೇ ಭೇಟಿ ಕೊನೆಯಾಯ್ತಾ..?!

ಏಕೆಂದ್ರೆ ಆ ಹೆಸರುಗಳು ರಾಜ್ಯದ ಜನತೆಗೆ ಅಪಥ್ಯವಾಗಲೂ ಬಹುದು. ಪಕ್ಷದೊಳಗೂ  ಆಯ್ಕೆಗೆ ಸಹಮತ-ಬಹುಮತ ವ್ಯಕ್ತವಾಗದೆನೂ ಇರಬಹುದೆನ್ನುವ  ಅಳುಕು ಹೈಕಮಾಂಡ್ ಗಿರಬಹುದೇನೋ.. ಹಾಗಾಗಿನೇ ಯಡಿಯೂರಪ್ಪ ಅವರ ಉತ್ತರಾಧಿಕಾರಿಯ ಹೆಸರನ್ನು ಲಕೋಟೆಯೊಳಗಿರಿಸಿಕೊಂಡಿಯೇ ಮುಖ್ಯಮಂತ್ರಿಗಾಧಿಯಿಂದ ಕೆಳಕ್ಕಿಳಿಸುವ ಅತ್ಯಂತ ಕ್ಲಿಷ್ಟಕರ ಹಾಗು ಸವಾಲಿನ  ಕೆಲಸಕ್ಕೆ ಈ ಬಾರಿ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆನ್ನುವುದು ಸ್ಪಷ್ಟ.

ರಾಜಕೀಯ ಮೂಲಗಳು, ಪ್ರಿಂಟ್-ಟಿವಿ ಮಾದ್ಯಮಗಳು ತಮ್ಮದೇ ಆದ ನಿಲುವು-ಧೋರಣೆ-ತರ್ಕ ಗಳಲ್ಲಿ ವಿಶ್ಲೇಷಿಸುತ್ತಿರುವ ಪಟ್ಟಿಯಲ್ಲಿ ಸಾಕಷ್ಟು ಹೆಸರುಗಳಿವೆ.ಆ ಹೆಸರುಗಳನ್ನು ಕೇಳಿದ್ರೆ ಇದು ಸಾಧ್ಯನಾ.. ಅದ್ಹೇಗೆ ಸಾಧ್ಯ….ಸಾಧ್ಯನೇ ಇಲ್ಲ ಬಿಡಿ..ಅವರು ಸಮರ್ಥರಾ..ರಾಜ್ಯವನ್ನು ಮುನ್ನಡೆಸಿಕೊಂಡು ಹೋಗೋ ಮಾತು ಹಾಳಾಗಿ ಹೋಗ್ಲಿ,ಪಕ್ಷದೊಳಗಿನವರನ್ನು ಸಂಭಾಳಿಸಿಕೊಂಡು ಹೋಗೋ ಕೆಪಾಸಿಟಿ ಇವರಿಗಿದೆಯೇನ್ರಿ.. ಎಂಬೆಲ್ಲಾ ರೀತಿಯ ವಿಶ್ಲೇಷಣೆ-ವ್ಯಾಖ್ಯಾನ-ಚರ್ಚೆಗಳು ಸಾರ್ವಜನಿಕವಾಗಿ ಹುಟ್ಟಿಕೊಂಡಿವೆ.

ಆದ್ರೆ ಬಿಜೆಪಿದು ಶಿಸ್ತುಬದ್ಧ ಪಕ್ಷ,ಹೈಕಮಾಂಡ್ ಲಕೋಟೆಯಲ್ಲಿ ಯಾರ ಹೆಸರನ್ನು ಅಂತಿಮಗೊಳಿಸಿರುತ್ತೊ ಅದೇ ಫೈನಲ್..( ಉತ್ತರ ಪ್ರದೇಶದಲ್ಲಿ ಆಶ್ಚರ್ಯಕರ ಎನ್ನುವಂತೆ ಯೋಗಿ ಆದಿತ್ಯನಾಥ್ ಅವ್ರನ್ನು ಮುಖ್ಯಮಂತ್ರಿಯನ್ನಾಗಿಸಿದ ರೀತಿಯಲ್ಲೇ..) ಅವ್ರನ್ನು ಎಷ್ಟೇ ಅಭಿಪ್ರಾಯ ಬೇಧ,ಆಕ್ಷೇಪ-ಅಸಮಾಧಾನಗಳಿದ್ದರೂ ಒಪ್ಪಿಕೊಳ್ಳಲೇಬೇಕೆನ್ನುವ ಸಂಪ್ರದಾಯದಂತೆ ಯಾರೇ ಮುಖ್ಯಮಂತ್ರಿಯಾದ್ರೂ ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಬಸವರಾಜ್ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ
ಬಿ.ಎಲ್ ಸಂತೋಷ್ ಜೀ
ಬಿ.ಎಲ್ ಸಂತೋಷ್ ಜೀ

ಹಾಗಾದ್ರೆ ಹೈಕಮಾಂಡ್ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದನ್ನು ಫೈನಲ್ ಮಾಡಿಟ್ಟುಕೊಂಡಿದ್ಯಾ..? ಲಕೋಟೆಯಲ್ಲಿ ಹೆಸರು ಬರೆದಾಗಿದೆಯಾ..? ಅದನ್ನು ತಿದ್ದುವ ಪ್ರಮೇಯವೇ ಎದುರಾಗೊಲ್ವಾ..? ಈ ರೀತಿಯ ಪ್ರಶ್ನೆಗಳು ಸಹಜವಾಗಿಯೇ ಕಾಡಲಾರಂಭಿಸಿವೆ..ವಿಶ್ಚಸನೀಯ ಮೂಲಗಳ ಪ್ರಕಾರ ಆಯ್ಕೆ ಎನ್ನುವುದು ಬಹುತೇಕ ಫೈನಲ್ ಆಗಿದೆಯಂತೆ.. ಪಕ್ಷದ ರಾಜಕೀಯ ಅಸ್ಥಿತ್ವ, ಜಾತಿ ಸಮುದಾಯದ ಅಸ್ಮಿತೆ-ಹಿತಾಸಕ್ತಿಯನ್ನು ಕಾಪಾಡೊಕ್ಕೆ ಯಾರಾದ್ರೆ ಒಳ್ಳೇದೆನ್ನುವ ಅಭಿಪ್ರಾಯವನ್ನು ಅಧಿಕಾರದಿಂದ ಕೆಳಗಿಳಿಯುತ್ತಿರುವ ಬಿ.ಎಸ್ ಯಡಿಯೂರಪ್ಪ ಅವರಿಂದ ಲೂ ಕೇಳಿ ಪಡೆದಿದೆಯಂತೆ.

ಅವರು ಕೂಡ ತನ್ನ ಮನಸಿನಲ್ಲಿರುವ ಆ ಅಭ್ಯರ್ಥಿಯ ಹೆಸರನ್ನು ಬಹಿರಂಗಪಡಿಸಿ,ಅವರಾದ್ರೆ ನಾನು ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬಲ್ಲೆ ಎಂಬ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆನ್ನುವ ಮಾತುಗಳಿವೆ.ಇಂತದ್ದೊಂದು ಬೆಳವಣಿಗೆಗೆ ಆದರೂ ಆಗಿರಬಹುದು.ಏಕೆಂದ್ರೆ ಯಡಿಯೂರಪ್ಪ ಇಲ್ಲದೆ ಪಕ್ಷದ ಸ್ಥಿತಿ-ಅಸ್ಥಿತ್ವವೇನು ಎನ್ನುವುದನ್ನು ಆಯಾ ಕಾಲಘಟ್ಟದಲ್ಲಿ ಸಂಭವಿಸಿದಂತ ಸನ್ನಿವೇಶಗಳಿಂದ ಚೆನ್ನಾಗಿ ಅರಿತುಕೊಂಡಿರುವ ಹೈಕಮಾಂಡ್ ಯಡಿಯೂರಪ್ಪ ಅವರ ಅಭಿಪ್ರಾಯಕ್ಕೇನೆ ಹೆಚ್ಚಿನ ಮನ್ನಣೆ ನೀಡಿದೆ ಎನ್ನುವ ಮಾತುಗಳೂ ಇವೆ.

ಹಾಗಾದ್ರೆ ಯಡಿಯೂರಪ್ಪ ಸೂಚಿಸಿರುವ ಆ ಹೆಸರು ಯಾವುದು..? ಹೈಕಮಾಂಡ್ ಗೂ ಹೌದಲ್ವಾ..! ಎಂದೆನಿಸಿರುವ ಉತ್ತರಾಧಿಕಾರಿಯ ಹೆಸರೇ ಬಸವರಾಜ ಬೊಮ್ಮಾಯಿ ಎನ್ನಲಾಗುತ್ತಿದೆ.ತನ್ನ ನಂಬಿಗಸ್ಥ, ತನ್ನದೇ ಜಾತಿ ಸಮುದಾಯದ ನಾಯಕ, ಪಕ್ಷದೊಳಗೆ ಅಷ್ಟೇನೂ ವಿರೋಧವಿಲ್ಲದೆ “ಎಲ್ಲರೂ ಪರ್ವಾಗಿಲ್ಲ..” ಎನ್ನುವ ರೀತಿಯ ಇಮೇಜ್ ಗಿಟ್ಟಿಸಿಕೊಂಡಿರುವ ನಾಯಕ ಬಸವರಾಜ  ಬೊಮ್ಮಾಯಿ ಎನ್ನೋದನ್ನು ಹೈಕಮಾಂಡ್ ಗೆ ಯಡಿಯೂರಪ್ಪ ಮನದಟ್ಟು ಮಾಡಿಕೊಟ್ಟಿದ್ದಾರೆನ್ನಲಾಗಿದೆ.

ಅರವಿಂದ ಬೆಲ್ಲದ್
ಅರವಿಂದ ಬೆಲ್ಲದ್
ಪ್ರಹ್ಲಾದ್ ಜೋಷಿ
ಪ್ರಹ್ಲಾದ್ ಜೋಷಿ

ಬೊಮ್ಮಾಯಿ ಸಿಎಂ ಆಗೋದ್ರಿಂದ ಪ್ರಬಲ ವೋಟ್ ಫ್ಯಾಕ್ಟರ್ ಆಗಿರುವ ಲಿಂಗಾಯಿತ ಸಮುದಾಯ ಪಕ್ಷದ ಬೆನ್ನಿಗೆ ನಿಲ್ಲುತ್ತೆ ಅಷ್ಟೇ ಅಲ್ಲ,ನನ್ನ ತಾಳ ಮೇಳ,ಮೈಂಡ್ ಸೆಟ್ ಬೊಮ್ಮಾಯಿ ಜತೆಗೆ ಚೆನ್ನಾಗಿ ಹೊಂದುವುದರಿಂದ ಪಕ್ಷ ಸಂಘಟನೆಯೂ ನಿರಾತಂಕವಾಗಿ ನಡೆಯುತ್ತಿದೆ.ಬಸವರಾಜ್ ಬೆನ್ನಿಗೆ ನಾನಿದ್ದು ಇತರೆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋದು ನನಗೇನು ಕಷ್ಟವಾಗಲಿಕ್ಕಿಲ್ಲ,ಇವರನ್ನು ಬಿಟ್ಟು ಇತರರನ್ನು ಆಯ್ಕೆ ಮಾಡಿದ್ರೆ ಪರಿಸ್ಥಿತಿ ನನಗೂ-ಪಕ್ಷ ಸಂಘಟನೆಗೂ ಅಷ್ಟೇನೂ ಅನುಕೂಲಕರವಾಗಲಿಕ್ಕಿಲ್ಲ ಎನ್ನುವುದನ್ನು ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟು ಬಂದಿದ್ದಾರಂತೆ.

ತಾನು ಹೇಳಿದ ಮಾತನ್ನು ಶಿರಾಸವಹಿಸಿ ಪಾಲಿಸುವಂಥ ಬಸವರಾಜ ಬೊಮ್ಮಾಯಿಯನ್ನು ಅಧಿಕಾರದ ಪೀಠದಲ್ಲಿ ಕುಳ್ಳರಿಸಿ ರಾಜ್ಯಭಾರವನ್ನು ತಾವು ಮಾಡಬಹುದು,ಬಸವರಾಜ ಬೊಮ್ಮಾಯಿ ತೋರಿಕೆಗೆ ಮುಖ್ಯಮಂತ್ರಿ ಅಷ್ಟೇ,ಆದ್ರೆ ಸೂಪರ್ ಸಿಎಂ ಆಗಿ ತಾವು ಮತ್ತೊಮ್ಮೆ ಅಧಿಕಾರ ನಡೆಸಬಹುದೆನ್ನುವ ಆಲೋಚನೆಯಲ್ಲೂ ಯಡಿಯೂರಪ್ಪ ಈ ರೀತಿಯ ಪ್ಲ್ಯಾನ್ ಮಾಡಿಕೊಂಡಿರ ಬಹುದೆನ್ನುವ ವಿಶ್ಲೇಷಣೆ ಕೇಳಿಬರುತ್ತಿರುವುದು ಸುಳ್ಳಲ್ಲ.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ರೆ ಸಾಕು, ಮಗ ವಿಜಯೇಂದ್ರನ ಆಟಾಟೋಪಕ್ಕೆ ಬ್ರೇಕ್ ಹಾಕಿದ್ರೆ ಸಾಕೆನ್ನುವ ಅವಸರಕ್ಕೆ ಬಿದ್ದಿರುವ ಹೈಕಮಾಂಡ್ ಬಿಎಸ್ ವೈ ಪ್ರಸ್ತಾಪಕ್ಕೆ ತಲೆಯಲ್ಲಾಡಿಸಿದೆಯಂತೆ.ಬೊಮ್ಮಾಯಿ ಅವರನ್ನು ಸಿಎಂಗಾದಿಗೆ ಕೂರಿಸಿ ಯಡಿಯೂರಪ್ಪ ಅವರನ್ನು ಕಾಲಾನುಕ್ರಮದಲ್ಲಿ ಡಮ್ಮಿ ಮಾಡಿ ಚುನಾವಣೆ ಹೊಸ್ತಿಲಲ್ಲಿ ಹೊಸ ಅಭ್ಯರ್ಥಿಯನ್ನು ಮುನ್ನಲೆಗೆ ತರುವುದು ಹೈಕಮಾಂಡ್ ಆಲೋಚನೆಯಾಗಿರಬಹುದೇನೊ..

ಬೊಮ್ಮಾಯಿ ಬಿಟ್ರೆ ಸಮರ್ಥರು ಯಾರು ಎನ್ನುವ ಪ್ರಶ್ನೆಗೆ ಯಡಿಯೂರಪ್ಪ ಅವರ ಮನಸಿಂದ ಅಲ್ಲ,ಬಾಯಿಂದ ಬಂದಿರುವ ಮತ್ತೊಂದು ಹೆಸರು  ಸಂತೋಷ್ ಜೀ ದು ಎನ್ನಲಾಗುತ್ತಿದೆ.ಆರ್ ಎಸ್ ಎಸ್ ಗೆ ಸೀಮಿತಗೊಳಿಸಿಕೊಳ್ಳದೆ ದೆಹಲಿಯಲ್ಲೇ ಕುಳಿತು ರಾಜ್ಯ ರಾಜಕಾರಣವನ್ನು ಕಂಟ್ರೋಲ್ ಮಾಡುತ್ತಿದ್ದ ಥಿಂಕ್ ಟ್ಯಾಂಕ್ ಸಂತೋಷ್ ಜೀ..ಇದು ಹೈಕಮಾಂಡ್ ಗಷ್ಟೇ ಅಲ್ಲ, ಯಡಿಯೂರಪ್ಪಂಗೂ ಗೊತ್ತು.

ಸಿ.ಟಿ ರವಿ
ಸಿ.ಟಿ ರವಿ
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಸಂತೋಷ್ ಜೀ ಅವರನ್ನು ಆಯ್ಕೆ ಮಾಡಿದ್ರೆ ಸಮುದಾಯಗಳು ಒಂದಷ್ಟು ಕಿರಿಕ್ ಮಾಡಬಹುದು.ಆದ್ರೆ ಶಾಸಕರ ಮೂಲಕ ಆಯಾ ಸಮುದಾಯಗಳ ಜನರ ಕೋಪ-ಆವೇಶ ತಣ್ಣಗಾಗಿಸುವ ಟ್ರಿಕ್ಸ್ ಸಂತೋಷ್ ಜಿಗಿದೆ..ಅಲ್ಲದೆ ಅವರ ಮುಂದೆ ಕಮಕ್-ಕಿಮಿಕ್ ಎನ್ನುವ ಧೈರ್ಯವನ್ನು ಯಾರೊಬ್ಬರೂ ತೋರೊಲ್ಲ.. ಅವರು ಹೇಳಿದಂತೆಯೇ ನಡೆದುಕೊಳ್ಳುತ್ತಾರೆ ಎಂಬ ಅಭಿಪ್ರಾಯವನ್ನೂ ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗ್ತಿದೆ.ತನಗಿಷ್ಟವಿಲ್ಲದಿದ್ದರೂ ತನ್ನನ್ನು ಬೆಳೆಸಿದ ಪಕ್ಷದ ಹಿತದೃಷ್ಟಿಯಿಂದ ಬಿಎಸ್ ವೈ  ಹೇಳಿರುವ ಹೆಸರನ್ನು ಗಂಭೀರವಾಗಿ ಪರಿಗಣಿಸಿದ್ರೆ ಸಂತೋಷ್ ಜೀ ಅಚ್ಚರಿಯ ಆಯ್ಕೆಯಾಗಿ ಮುಖ್ಯಮಂತ್ರಿಗಾದಿ ಅಲಂಕರಿಸಿದ್ರೂ ಆಶ್ಚರ್ಯವಿಲ್ಲವಂತೆ…ಎನ್ನೋದು ಹೆಚ್ಚೆಚ್ಚು ಅನಿಶ್ಚಿತವಾಗುತ್ತಿರುವ ಪ್ರಸ್ತುತ   ರಾಜಕೀಯ ಸಂದರ್ಭ ಅವಲೋಕಿಸುತ್ತಿರುವವರ ಮಾತು.

ಇವರೆಲ್ಲರನ್ನು ಬಿಟ್ಟು ಹೈಕಮಾಂಡ್ ಮನಸಿನಲ್ಲಿ ಇನ್ನೊಬ್ಬ ಅಭ್ಯರ್ಥಿಯ ಹೆಸರು ಇರಬಹುದಾ..?
ಇವರೆಲ್ಲರನ್ನು ಬಿಟ್ಟು ಹೈಕಮಾಂಡ್ ಮನಸಿನಲ್ಲಿ ಇನ್ನೊಬ್ಬ ಅಭ್ಯರ್ಥಿಯ ಹೆಸರು ಇರಬಹುದಾ..?

ಇನ್ನುಳಿದಂತೆ  ಸಿಎಂ ಲೀಸ್ಟ್ ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೆಸರು ಕೇಳಿಬರು ತ್ತಿದೆ.ಜಾತಿ ಸಂಖ್ಯಾಬಲದ ದೃಷ್ಟಿಯಿಂದ ಅತ್ಯಲ್ಪವಾಗಿರುವ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಷಿ ಆಯ್ಕೆ ಕೊಂಚ ಅಚ್ಚರಿ ಮೂಡಿಸಿದೆ.ಒಕ್ಕಲಿಗ-ವೀರಶೈವ ಲಿಂಗಾಯಿತ ಹಾಗೂ ಇತರೆ ಸಮುದಾಯಗಳ ವೋಟ್ ಬ್ಯಾಂಕ್ ನ ವಿಶ್ವಾಸಾರ್ಹತೆಯನ್ನು ಈ ಆಯ್ಕೆ ಮೂಲಕ ಪಕ್ಷ ಉಳಿಸಿಕೊಳ್ಳುತ್ತದಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನು ಕೇವಲ ಯಡಿಯೂರಪ್ಪ ಅವರನ್ನು ಸಿಎಂ ಗಾಧಿಯಿಂದ ಕೆಳಕ್ಕಿಳಿಸುವ ಸಿಂಗಲ್ ಪಾಯಿಂಟ್ ಅಜೆಂಡಾದಿಂದಲೇ ಸದಾ ಸುದ್ದಿಯಲ್ಲಿದ್ದುದನ್ನು ಬಿಟ್ಟರೆ ರಾಜಕಾರಣದಲ್ಲಿ ಹೇಳಿಕೊಳ್ಳುವಂತದ್ದೇನೂ ಸಾಧಿಸದ ಹಾಗೂ  ಉತ್ತರ ಕರ್ನಾಟಕ ರಾಜಕಾರಣಕ್ಕೆ ಸೀಮಿತವಾಗಿರುವ ಅರವಿಂದ್ ಬೆಲ್ಲದ್, ಯತ್ನಾಳ್ ಅವರ ಹೆಸರುಗಳು ಸಿಎಂ ಪಟ್ಟಿಯಲ್ಲಿವೆಯಂತೆ.ಆದ್ರೆ  ರಾಜ್ಯದ ಜನತೆ ಹಾಗೂ ಜಾತಿ ಸಮುದಾಯದ ಮಾತಿರಲಿ,ಪಕ್ಷದೊಳಗೇನೆ ಈ ಹೆಸರುಗಳಿಗೆ ಮಾನ್ಯತೆ-ಮನ್ನಣೆ-ಸಹಮತ ಸಿಗೋದು ಡೌಟ್.ಇನ್ನು ಒಕ್ಕಲಿಗ ಎನ್ನುವ ಕಾರಣಕ್ಕೆ ರಾಷ್ಟ್ರ ರಾಜಕಾರಣದಲ್ಲಿರುವ ಸಿಟಿ ರವಿ, ಪಕ್ಕಾ ಬ್ಯುಸಿನೆಸ್ ಮನ್ ಎನಿಸಿಕೊಂಡಿರುವ ಮುರುಗೇಶ್ ನಿರಾಣಿ  ಹೆಸರಿಗೂ ಹೇಳಿಕೊಳ್ಳತಕ್ಕಂಥ ಕಿಮ್ಮತ್ತಿಲ್ಲ ಎನ್ನುವುದು ಪಕ್ಷದೊಳಗಿನ ಮಾತು,

ಇವರನ್ನೆಲ್ಲಾ ಬಿಟ್ಟಿಯೂ ಹೈಕಮಾಂಡ್ ಯಾರೂ ಊಹಿಸಿರಿದಂಥ ಅಚ್ಚರಿಯ-ಗಾಬರಿಯ ಅಭ್ಯರ್ಥಿ ಯನ್ನು ಸಿಎಂಗಾಧಿಯಲ್ಲಿ ಪ್ರತಿಷ್ಟಾಪಿಸಿದ್ರೂ ಅಚ್ಚರಿಯಿಲ್ಲ.. ಯಡಿಯೂರಪ್ಪ ಅವರನ್ನು ನಿರಾತಂಕ ವಾಗಿ,ಯಾವುದೇ ಗೊಂದಲವಿಲ್ಲದೆ…ವಿವಾದ-ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಗೌರವಯುತವಾಗಿ ಕೆಳಗಿಳಿಸುವುದೇ ಹೈಕಮಾಂಡ್ ನ ಮೊದಲ ಟಾರ್ಗೆಟ್.ಅದು ಮುಗಿದೋಗಲಿ,ಆಮೇಲೆ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಿದರಾಯ್ತು ಎಂಬುದು ಹೈಕಮಾಂಡ್ ಆಲೋಚನೆಯಾಗಿರಬಹುದು. ಆದ್ರೂ ಈ ಎಲ್ಲಾ ಊಹೆ-ಅಂದಾಜುಗಳ ಹೊರತಾಗ್ಯೂ ಬೇರೆಯದೇ ಲೆಕ್ಕಾಚಾರ ಹೈಕಮಾಂಡ್ ಮನಸು-ತಲೆಯಲ್ಲಿರಬೇಕು..ಹಾಗಾಗಿನೇ ಜುಲೈ 26 ರ ಕಾದು ನೋಡುವ ತಂತ್ರಕ್ಕೆ ಶರಣಾದಂತಿದೆ.

Spread the love
Leave A Reply

Your email address will not be published.

Flash News