“ಡೀಲ್” ಗೆ ಅಣ್ಣನ ಹೆಸ್ರು ಮಿಸ್ಯೂಸ್..!? ಯಾಮಾರಿಸಿ ಗಳಿಸಿದ್ದು ಕೋಟ್ಯಾಂತರ..ಹಣ ಕೊಟ್ಟವರ ಕಾಟದಿಂದ ತಪ್ಪಿಸಿಕೊಳ್ಳೊಕ್ಕೆ ಆತ್ಮಹತ್ಯೆ ಯತ್ನ..!

0
ಅಣ್ಣನ ಹೆಸರನ್ನು ಮಿಸ್ಯೂಸ್ ಮಾಡ್ಕೊಂಡು ಕೋಟ್ಯಾಂತರ ಸಂಗ್ರಹಿಸಿ ಇದೀಗ ಆತ್ಮಹತ್ಯೆ ಯತ್ನಕ್ಕೆ ಮುಂದಾದ ಪರಮೇಶ್
ಅಣ್ಣನ ಹೆಸರನ್ನು ಮಿಸ್ಯೂಸ್ ಮಾಡ್ಕೊಂಡು ಕೋಟ್ಯಾಂತರ ಸಂಗ್ರಹಿಸಿ ಇದೀಗ ಆತ್ಮಹತ್ಯೆ ಯತ್ನಕ್ಕೆ ಮುಂದಾದ ಪರಮೇಶ್

ಬೆಂಗಳೂರು:ಅಣ್ಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ.ಕನ್ನಡ ನಾಡು-ನುಡಿ-ಸಂಸ್ಕ್ರತಿ ವಿಷಯದಲ್ಲಿ ಹೋರಾಟಕ್ಕೆ ಸದಾ ತಮ್ಮನ್ನು ಮುಡಿಪಾಗಿಸಿಟ್ಟುಕೊಂಡವರು. ಆದ್ರೆ ಅಣ್ಣನ ನೆರಳಲ್ಲಿ ಬೆಳೆಯಬೇಕಾದ ತಮ್ಮ ಮಾಡಿದ್ದು ಮಾತ್ರ ಅಣ್ಣನ ಹೆಸರನ್ನು ಬಳಸಿಕೊಂಡು ಅವರಿವರನ್ನು ಯಾಮಾರಿಸುವ ಕೆಲಸ.ಅದರಿಂದ ಕೋಟ್ಯಾಂತರ ಗಳಿಸಿದ್ರೂ ಮಾಡಿದ ಕರ್ಮ ಬಿಡುತ್ತಾ ಎನ್ನುವ ಗಾಧೆಯಂತೆ ಹಣ ಕೊಟ್ಟವರು ಬರಬೇಕಾಗಿದ ಹಣಕ್ಕೆ ಬೆನ್ ಬಿದ್ದಿದ್ದಕ್ಕೆ ಹಿಡಿದಿದ್ದು ಆತ್ಮಹತ್ಯೆ ಯತ್ನದ ಹಾದಿ.

ಯೆಸ್..ಇದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ನಾರಾಯಣಗೌಡ ಅವರ ಸಹೋದರ ಪರಮೇಶ್ ಆತ್ಮಹತ್ಯೆಯತ್ನಕ್ಕೆ ಕೈ ಹಾಕಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದಾನೆ.ತನ್ನ ಅಣ್ಣನ ಹೆಸರನ್ನು ನಾಡು ಕಟ್ಟುವ ಕೆಲಸಕ್ಕೋ ಅಥವಾ ಇನ್ನೊಬ್ಬರ ಜೀವ ಉಳಿಸುವಂಥ ಒಳ್ಳೆ ಉದ್ದೇಶಕ್ಕೆ  ಬಳಸಿಕೊಂಡಿದಿದ್ರೆ ಈ ಪರಮೇಶ್ ಗೆ ಇಂಥಾ ದುರ್ಗತಿ ಬರುತ್ತಿರಲಿಲ್ಲವೇನೋ..ಆದ್ರೆ ಅಣ್ಣನ ಹೆಸ್ರನ್ನು ಹಣ ಮಾಡುವ ತನ್ನ ದಂಧೆಗೆ ಮಿಸ್ಯೂಸ್ ಮಾಡಿಕೊಂಡು ಕೋಟ್ಯಾಂತರ ಹಣವನ್ನು ನುಂಗಿ ನೀರು ಕುಡಿದಿದ್ದನು ಎನ್ನುವ ಆರೋಪವಿದೆ.ಏಕೆಂದ್ರೆ ಪರಮೇಶ್ ಆತ್ಮಹತ್ಯೆ ಯತ್ನಕ್ಕ ಕೈ ಹಾಕಿದ ಯತ್ನವನ್ನು ಮಾದ್ಯಮಗಳಿಗೆ ತಿಳಿಸಿದವರೇ ಅವನಿಂದ ವಂಚನೆಗೊಳಗಾದ ಸಾಕಷ್ಟು ಸಂತ್ರಸ್ಥರು.

ಅಣ್ಣನೊಂದಿಗೆ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದನ್ನೇ ವಂಚನೆಗೆ ಬಂಡವಾಳ ಮಾಡಿಕೊಂಡಿದ್ದ ಪರಮೇಶ್
ಅಣ್ಣನೊಂದಿಗೆ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದನ್ನೇ ವಂಚನೆಗೆ ಬಂಡವಾಳ ಮಾಡಿಕೊಂಡಿದ್ದ ಪರಮೇಶ್
ಅಣ್ಣ-ಅತ್ತಿಗೆಯೊಂದಿಗೆ ಪರಮೇಶ್
             ಅಣ್ಣ-ಅತ್ತಿಗೆಯೊಂದಿಗೆ ಪರಮೇಶ್

ನಾರಾಯಣ ಗೌಡರೊಂದಿಗೆ ಅಡ್ಡಾಡುತ್ತಾ ಅವರಿವರ ವಿಶ್ವಾಸ-ಸ್ನೇಹ ಸಂಪಾದಿಸಿದ್ದ ಪರಮೇಶ್ ಒಳ್ಳೆಯ ಮಾತುಗಾರನಂತೆ.ತನ್ನ ಮಾತನ್ನೇ ಬಂಡವಾಳ ಮಾಡ್ಕೊಂಡು ಅವರಿವರ ಕೆಲಸ ಮಾಡಿಸಿಕೊಡುವುದಾಗಿ ಹೇಳುತ್ತಲೇ ಕೋಟಿ ಕೋಟಿ ಸಂಪಾದಿಸಿದ್ದನೆನ್ನುವ ಮಾತಿದೆ.ನಾರಾಯಣ ಗೌಡ ಅವರ ಸಹೋದರ,ಮೋಸ ಮಾಡಲಿಕ್ಕಿಲ್ಲ ಎಂದುಕೊಂಡು ಆತನ ಕೈಗೆ ಲಕ್ಷಾಂತರ ಹಣ ತಂದು ಸುರಿದವರು ಅದೆಷ್ಟೋ ಮಂದಿ.ಅವರೊಂದಿಗೆ ವಿಶ್ವಾಸ ಉಳಿಸಿಕೊಂಡಿದ್ದರೆ ಯಾರೊಬ್ಬರು ಇವತ್ತು ಜೀವನ್ಮರಣಗಳ ನಡುವೆ ಹೋರಾಡುತ್ತಿರುವ ಈತನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲವೇನೋ.. ಶಪಿಸುತ್ತಿರಲಿಲ್ಲವೇನೋ..

ಆದ್ರೆ ಮಾತೆತ್ತಿದ್ರೆ ಅಣ್ಣನ ಮೇಲಾಣೆ..ನಾನು ಅವರ ತಮ್ಮನಾಗಿ ಮೋಸ ಮಾಡ್ತೀನಾ..ನನ್ನಿಂದ ಏನೇ ವಂಚನೆಯಾದ್ರೂ ಅದಕ್ಕೆ ನನ್ನ ಅಣ್ಣನೇ ಗ್ಯಾರಂಟಿ ಎಂದು ನಂಬಿಸುತ್ತಿದ್ದ ಈತನಿಗೆ  ಹಣ ಕೊಟ್ಟವರಿಗೆ ಆತ ತುಳಿಯುತ್ತಲೇ ಇರಿ ಎಂದು  ಸ್ಟ್ಯಾಂಡ್ ಹಾಕಿರುವ ಸೈಕಲ್ ಕೊಟ್ಟು ಬಿಟ್ಟ.ಪಾಪ,ಹಣ ಕೊಟ್ಟವರು ಅದಕ್ಕಾಗಿ ಅಲೆದಲೆದು ಸುಸ್ತಾದ್ರೆ ಹೊರತು,ನಯಾಪೈಸೆ ಹಣ ಮಾತ್ರ ಕೈ ಸೇರಲಿಲ್ಲ..ತಮ್ಮನ ದೋಖೇಬಾಜಿತನವನ್ನು ಅಣ್ಣನ ಕಿವಿಗೆ ಹಾಕಿದ್ರೂ ಅವ್ರಿಂದ್ಲೂ ಸಮರ್ಪಕ ಉತ್ತರ ಸಿಕ್ಕಿದ್ದು ಕಡ್ಮೆ ಎನ್ನುವುದು ಅನೇಕರ ಆರೋಪ.ವಂಚನೆಗೊಳಗಾದ ಅನೇಕರು,ಅಣ್ಣನಿಗೆ ತಮ್ಮ ಮಾಡುತ್ತಿರುವುದು ತಪ್ಪು..ಆತನ ಕಿವಿ ಹಿಂಡಿ ಬುದ್ದಿ ಹೇಳಬೇಕು ಎಂದೆನಿಸಿದಿದ್ರೆ ಹಾದಿ ತಪ್ಪೊಕ್ಕೆ ಬಿಡ್ತಿರಲಿಲ್ಲ.

ಅದನ್ನು ಮಾಡದೆ  ಹಣ ಕೊಟ್ಟವರು ನೀವು…ತೆಗೆದುಕೊಂಡೋನು ಅವ್ನು..ಮಧ್ಯೆ ನನ್ನನ್ನೇಕೆ ತರುತ್ತೀರಿ ಎಂದ್ಹೇಳಿ ತಿಪ್ಪೆ  ಸಾರಿಸುವ ಕೆಲಸ ಮಾಡುತ್ತಿದ್ದರಂತೆ ನಾರಾಯಣ ಗೌಡ..ತಮ್ಮ ಇಷ್ಟೊಂದು ಸ್ವೇಚ್ಛಾಚಾರಿಯಾಗೊಕ್ಕೆ ಬಹುಷಃ ನಾರಾಯಣ ಗೌಡ ಅವರೂ ಕಾರಣವಾಗ್ಬಿಟ್ರಾ ಎನ್ನುವ ಶಂಕೆ ಕೂಡ ಅನೇಕರಲ್ಲಿ ವ್ಯಕ್ತವಾಗುತ್ತಿದೆ.ತಮ್ಮ ಮಾಡುತ್ತಿದ್ದ ದಂಧೆ ಬಗ್ಗೆ ಗೊತ್ತಿದ್ರೂ ಗೌಡ್ರು ಸುಮ್ಮನಿದ್ದರೆಂದ್ರೆ ಆ ದಂಧೆಯಲ್ಲಿ ಗೌಡ್ರಿಗೂ ಪಾಲು ಸಿಗುತ್ತಿದ್ದ ಸಾಧ್ಯತೆಗಳಿರಬಹುದಲ್ವೇ ಎಂದು ಅನೇಕ ಸಂತ್ರಸ್ಥರು ಅನುಮಾನಿಸುತ್ತಿದ್ದಾರೆ.

ಒಂದು ಮೂಲದ ಪ್ರಕಾರ ಕಡ್ಮೆ ಎಂದ್ರೂ 5 ಕೋಟಿಗೂ ಹೆಚ್ಚು ಹಣವನ್ನು ನುಂಗಿ ನೀರು ಕುಡಿದು ಜನ ತಮ್ಮ ಮನೆ ಮುಂದೆ ಗಲಾಟೆ ಮಾಡುವಂತೆ ಮಾಡಿಕೊಂಡಿದ್ದನಂತೆ ಈ ಪರಮೇಶ್..ಅಣ್ಣನ ಕೃಪಕಟಾಕ್ಷ ಇರುವವರೆಗು ಯಾರು ಏನೂ ಮಾಡಿಕೊಳ್ಳೊಕ್ಕಾಗೊಲ್ಲ ಎಂಬ ಹುಂಭತನದಲ್ಲೇ ತಪ್ಪು ಮುಂದುವರೆಸಿಕೊಂಡು ಹೋಗಿದ್ರಿಂದ್ಲೇ ಇವತ್ತು ಆತ್ಮಹತ್ಯೆಯತ್ನದಂಥ ಕೆಟ್ಟ ಕೆಲಸಕ್ಕೆ ಕೈ ಹಾಕಿಬಿಟ್ಟ.ಅಣ್ಣನ ಹೆಸರೂ ತನ್ನನ್ನು ಉಳಿಸಿಲಿಕ್ಕಾಗೊಲ್ಲ ಎನ್ನುವ ಸತ್ಯ ಗೊತ್ತಾಗ್ತಿದ್ದಂಗೆ ಹಣ ಕೊಟ್ಟು ಕಳಕೊಂಡವರ ಶಾಪ-ಹೀಯಾಳಿಕೆ-ಬೈಗುಳ ಸಹಿಸಿಕೊಳ್ಳೊಕ್ಕಾಗದೆ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಉಳಿದುಕೊಂಡಿದ್ದಾನೆ.

ಫೋರ್ಟಿಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ.ಜೀವನ್ಮರಣಗಳ ನಡುವೆ ಹೋರಾಡುತ್ತಿರುವ ಆತನ ಜೀವಕ್ಕೆ ಆತಂಕವಿದೆ..ವೈದ್ಯರು ಕೂಡ ಚೇತರಿಕೆಯ ಸಂಪೂರ್ಣ ಭರವಸೆ ಕೊಟ್ಟಿಲ್ಲ ಎನ್ನಲಾಗುತ್ತಿದೆ. ನಾಡು ನುಡಿ ರಕ್ಷಣೆ ವಿಷಯದಲ್ಲಿ ಹೋರಾಡುತ್ತಾ ಬಂದಿದ್ದ ಅಣ್ಣನ ಹೆಸರನ್ನು ತಮ್ಮನೇ ಹರಾಜಾಕೊಕ್ಕೆ ಮುಂದಾಗಿದ್ದು ಮಾತ್ರ ವಿಪರ್ಯಾಸ.

Spread the love
Leave A Reply

Your email address will not be published.

Flash News