BreakingCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

ಡಿಸಿ ಮಂಜುನಾಥ್ ಖಡಕ್ ಆಪರೇಷನ್ ಗೆ ಮಾಜಿ ಎಂಪಿ ಲಬೋ..;ಲಬೋ..ಶಿವರಾಮೇಗೌಡ ಮಾಲೀಕತ್ವದ ಕಾನ್ ಕಾರ್ಡ್ ಶಾಲೆಯ ಒತ್ತುವರಿ ತೆರವು

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ

ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅಬ್ಬರಿಸುತ್ತಿರುವ ರೀತಿ ಸರ್ಕಾರಿ ಭೂಮಿ ನುಂಗಿ ನೊಣೆಯುತ್ತಿರುವ ಭೂಬಾಕರ ಎದೆಯಲ್ಲಿ ನಡುಕ ಸೃಷ್ಟಿಸಿದೆ.ಈಗಾಗ್ಲೇ ನೂರಾರು ಎಕ್ರೆ ಮೌಲ್ಯದ ಸರ್ಕಾರಿ ಭೂಮಿಯನ್ನು ಭೂಬಾಕರಿಂದ ರಕ್ಷಿಸಿ ಸರ್ಕಾರದ ಖಜಾನೆಗೆ ಸೇರಿಸಿರುವ ಹೆಗ್ಗಳಿಕೆ ಅವರದು.ಅವರ ಡೆಮಾಲಿಷನ್ ಲೀಸ್ಟ್ ಗೆ ಇವತ್ತು 4 ಎಕ್ರೆ ಭೂಮಿ ಆಡ್ ಆಗಿದೆ.ಅಂದ್ಹಾಗೆ ಅವರ  ಮಾರ್ಗದರ್ಶನ ಹಾಗು ಆದೇಶದ ಹಿನ್ನಲೆಯಲ್ಲಿ ನಡೆದ ಇವತ್ತಿನ ಕಾರ್ಯಾಚರಣೆ ನಿಜಕ್ಕೂ ಗಮನಾರ್ಹ.ಏಕೆಂದ್ರೆ ಅವರ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿರೋ ಭೂಮಿ ಎಲ್.ಆರ್ ಶಿವರಾಮೇಗೌಡ ಅತಿಕ್ರಮಿಸಿಕೊಂಡಿದ್ದ ಸರ್ಕಾರದ ಸ್ವತ್ತು.

ಹೌದು..ಯಲಹಂಕ ವ್ಯಾಪ್ತಿಯಲ್ಲಿ ಇವತ್ತು ಬೃಹತ್ ಕಾರ್ಯಾಚರಣೆಯೇ ಸದ್ದಿಲ್ಲದೆ ನಡೆದೋಗಿದೆ.ಅಂದ್ಹಾಗೆ ಇದರ ರೂವಾರಿ ಡಿಸಿ ಮಂಜುನಾಥ್. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ್ಮೇಲೆ ಅವರ ಮುಂದಾಳತ್ವದಲ್ಲಿ ನೂರಾರು ಎಕ್ರೆ ಒತ್ತುವರಿ ಸರ್ಕಾರಿ ಭೂಮಿ ವಶಕ್ಕೆ ಪಡೆಯಲಾಗಿದೆ.ಇದರ ಮೌಲ್ಯವೇ ಅದೆಷ್ಟೋ ಕೋಟಿಗಳಿವೆ.ಅದರ ಜತೆಗೆ ಇವತ್ತು ನಡೆದಿರುವ ಒತ್ತುವರಿ ತೆರವು ಕಾರ್ಯಾಚರಣೆ ನಿಜಕ್ಕೂ ಅವರ ಖಡಕ್ ತನಕ್ಕೆ ಸಾಕ್ಷಿಯಂತಿದೆ.

ಎಲ್.ಆರ್.ಶಿವರಾಮೇಗೌಡ,ಮಂಡ್ಯದ ಮಾಜಿ ಸಂಸದ.ಜೆಡಿಎಸ್ ಮುಖಂಡ.ಎಲ್ಲಕ್ಕಿಂತ ಹೆಚ್ಚಾಗಿ ಕನ್ ಕಾರ್ಡ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಲೀಕ.ಅದೇ ಕಾನ್ ಕಾರ್ಡ್ ಶಾಲೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.ಯಲಹಂಕ ಹೋಬಳಿಯ ಚಿಕ್ಕಬೆಟ್ಟಹಳ್ಳಿಯ  ಸರ್ವೆ ನಂ 14 ವ್ಯಾಪ್ತಿಯಲ್ಲಿ ಶಾರದಾ ವಿದ್ಯಾಸಂಸ್ಥೆಗೆ ಜಿಲ್ಲಾಡಳಿತ ಮೂಲಕ 2 ಎಕ್ರೆ 20 ಗುಂಟೆ ಭೂಮಿಯನ್ನು ಲೀಸ್ ಗೆ ನೀಡಲಾಗಿತ್ತು.ಶಾಲೆ ನಡೆಸಿಕೊಂಡು ಹೋಗ್ಬೇಕಿದ್ದ ವಿದ್ಯಾಸಂಸ್ಥೆ ಮಾಡಿದ್ದು ಮಾತ್ರ ಕಾನೂನು ಬಾಹೀರ ಕಾರ್ಯ.

ತಾನು ಶಾಲೆ ನಡೆಸದೆ ಆ ಜಾಗವನ್ನು ಕಾನ್ ಕಾರ್ಡ್ ಶಾಲೆ ನಡೆಸೊಕ್ಕೆ ಎಲ್.ಆರ್ ಶಿವರಾಮೇಗೌಡ ಅವರ ಮಾಲೀಕತ್ವದ ಆಡಳಿತ ಮಂಡಳಿಗೆ ನೀಡಿದ್ದಾರೆ.ಯಾವುದಾದ್ರೂ ಸಂಸ್ತೆಗೆ ಯಾವುದೇ ಜಾಗವನ್ನು ಲೀಸ್ ಗೆ ಕೊಟ್ಟರೆ ಅದನ್ನು ಪರಭಾರೆ ಮಾಡುವ ಅಥವಾ ಅದನ್ನು ಇನ್ನೊಬ್ಬರಿಗೆ ಗುತ್ತಿಗೆ ನೀಡುವ,ಬಾಡಿಗೆಗೆ ನೀಡುವ ಅವಕಾಶವೇ ಗುತ್ತಿಗೆ ನಿಯಾಮವಳಿಗ ಳಲ್ಲಿಲ್ಲ.ಆದ್ರೆ ಶಾರದಾ ವಿದ್ಯಾಸಂಸ್ಥೆ ಅವರು ಹಣದಾಸೆಗೆ ತನಗೆ ನೀಡಲಾಗಿದ್ದ ಎಕ್ರೆಗಟ್ಟಲೇ ಭೂಮಿಯನ್ನು  ಕಾನ್ ಕಾರ್ಡ್ ಶಾಲೆಗೆ ಕೊಟ್ಟು ಅವರಿಂದ ಹಣ ಪಡೆದಿದ್ದಾರೆ ಎನ್ನುವುದು ಕಂದಾಯಾಧಿಕಾರಿಗಳ ಆರೋಪ.

ಯಲಹಂಕ ತಹಸೀಲ್ದಾರ್ ನರಸಿಂಹಮೂರ್ತಿ
ಯಲಹಂಕ ತಹಸೀಲ್ದಾರ್ ನರಸಿಂಹಮೂರ್ತಿ
ಯಾರ ಒತ್ತಡಕ್ಕೂ ಮಣಿಯದೆ ತೆರವು ಕಾರ್ಯಾಚರಣೆಗೆ ನಿರ್ದೇಶನ ನೀಡಿದ ಖಡಕ್ ಜಿಲ್ಲಾಧಿಕಾರಿ ಮಂಜುನಾಥ್
ಯಾರ ಒತ್ತಡಕ್ಕೂ ಮಣಿಯದೆ ತೆರವು ಕಾರ್ಯಾಚರಣೆಗೆ ನಿರ್ದೇಶನ ನೀಡಿದ ಖಡಕ್ ಜಿಲ್ಲಾಧಿಕಾರಿ ಮಂಜುನಾಥ್
ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವು ಮಾಡುತ್ತಿರುವ ಕಾರ್ಯಾಚರಣೆ
ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವು ಮಾಡುತ್ತಿರುವ ಕಾರ್ಯಾಚರಣೆ

ಪಕ್ಕದ 2 ಎಕ್ರೆಯೂ ಒತ್ತುವರಿ:ಹೀಗೆ ಅಕ್ರಮವಾಗಿ ಶಾಲೆ ನಡೆಸುತ್ತಿದ್ದ ಕಾನ್ ಕಾರ್ಡ್ ಶಾಲೆಯ ಆಡಳಿತ ಮಂಡಳಿಗೆ ತನ್ನ ಪಕ್ಕದಲ್ಲಿರುವ ಇನ್ನೆರೆಡು ಎಕರೆ ಭೂಮಿ ಮೇಲೂ ಕಣ್ಣು ಬಿದ್ದಿದೆ.ಯಾರ ಗಮನಕ್ಕೂ ಬಾರದೇ ಆ 2 ಎಕ್ರೆ ಭೂಮಿಯನ್ನೂ ಅತಿಕ್ರಮಿಸಿಕೊಂಡು ಅದಕ್ಕೆ ಬೇಲಿ ಹಾಕಿ ಅದರ ಮೇಲೆ ಪಾರಮ್ಯ ಸ್ಥಾಪಿಸೊಕ್ಕೆ ಮುಂದಾಗಿದ್ದಾರೆ.ಈ ಸಂಗತಿಯನ್ನು  ಯಲಹಂಕ ತಹಸೀಲ್ದಾರ್ ನರಸಿಂಹಮೂರ್ತಿ  ಅವರ ಗಮನಕ್ಕೆ ಸ್ಥಳೀಯರು ತಂದಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ನರಸಿಂಹಮೂರ್ತಿ ಅದು ಎಲ್ ಆರ್ ಶಿವರಾಮೇಗೌಡರಿಗೆ ಸೇರಿದ್ದೆನ್ನುವುದನ್ನೂ ಲೆಕ್ಕಿಸಿಲ್ಲ. ತೆರವು ಕಾರ್ಯಾಚರಣೆಗೆ ಪೂರಕವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿರುವಾಗ ತೆರವುಗೊಳಿಸದಂತೆ ಸಾಕಷ್ಟು ಒತ್ತಡಗಳು ಬಂದಿದ್ವು ಎನ್ನಲಾಗಿದೆ.ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಜಿಲ್ಲಾಧಿಕಾರಿ ಮಂಜುನಾಥ್ ಅವರ ಗಮನಕ್ಕೆ ತಂದಿದ್ದಾರೆ.

ಸಾಕಷ್ಟು ಸರ್ಕಾರಿ ಭೂಮಿಯನ್ನು ಹಾಗು ಕೆರೆಯನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಸರ್ಕಾರಕ್ಕೆ ನೂರಾರು ಕೋಟಿ ಮೌಲ್ಯದ ಭೂಮಿಯನ್ನು ಉಳಿಸಿಕೊಟ್ಟಿರುವ ಮಂಜುನಾಥ್ ಅವರ ಗಮನಕ್ಕೆ ಈ ವಿಷಯ ಬರುತ್ತಿದ್ದಂತೆ ಯಾವುದಕ್ಕು ತಲೆಕೆಡಿಸಿಕೊಳ್ಳದೆ ಗೋ ಹೆಡ್ ಎಂದಿದ್ದಾರೆ.ತನ್ನ ಬಾಸ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗ್ತಿದ್ದಂಗೆ ಕಾರ್ಯಾಚರಣೆ ಕೈಗೊಂಡ ನರಸಿಂಹಮೂರ್ತಿ ತಮ್ಮ ಸ್ಕ್ವಾಡ್ ಗೆ ಮಾರ್ಗದರ್ಶನ ನೀಡಿ 8 ಕೋಟಿ ಮೌಲ್ಯದ ಭೂಮಿಯನ್ನು ಉಳಿಸಿಕೊಟ್ಟಿದ್ದಾರೆ.

ತಾನು ಮಾಜಿ ಸಂಸದ ತಾನೇನೇ ಮಾಡಿದ್ರೂ ನಡೆದೋಗುತ್ತದೆ ಎನ್ನುವ ದುರಂಹಕಾರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಸರ್ಕಾರಿ ಭೂಮಿಯನ್ನು ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡು ಶಿಕ್ಷಣವನ್ನು ದುಡ್ಡು ಮಾಡುವ ದಂಧೆಯಾಗಿಸಿಕೊಳ್ಳುವುದು ಶಿವರಾಮೇಗೌಡ ಅವರಿಗೆ ಶೋಭೆ ತರುವಂತದ್ದಲ್ಲ.ಯಾವುದೇ ಶಿಫಾರಸ್ಸಿಗೆ ಮಣಿಯದೆ ಸರ್ಕಾರಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯುವಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಖಡಕ್ ಜಿಲ್ಲಾಧಿಕಾರಿ ಮಂಜುನಾಥ್ ಅವರ ಕ್ರಮ ನಿಜಕ್ಕೂ ಅಭಿನಂದನಾರ್ಹ.

Spread the love

Related Articles

Leave a Reply

Your email address will not be published.

Back to top button
Flash News