ಬೊಮ್ಮಾಯಿ ಸಂಪುಟದಲ್ಲಿ “ಬಡಮಕ್ಕಳ ಮೊಟ್ಟೆಗೆ ಕನ್ನ” ಕಳಂಕಿತರಿಗೂ ಸಚಿವ ಸ್ಥಾನ ಸಿಗ್ತದೆಂದ್ರೆ “ನ್ಯೂಸ್ ಫಸ್ಟ್ “ನ ಸ್ಟಿಂಗ್ ಆಪರೇಷನ್ನೇ ಸುಳ್ಳು..ಎಂದಾಯ್ತು..?!

0
ಮೊಟ್ಟೆ ಡೀಲ್ ಹಗರಣದ ಕಳಂಕ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಖಾತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ
ಮೊಟ್ಟೆ ಡೀಲ್ ಹಗರಣದ ಕಳಂಕ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಖಾತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ
ಮೊಟ್ಟೆ ಟೆಂಡರ್ ಗೋಲ್ಮಾಲ್ ಬಗ್ಗೆ ನ್ಯೂಸ್ ಫಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಚಿವೆ ಜೊಲ್ಲೆ ಜತೆ ಗಂಗಾವತಿ ಎಮ್ಮೆಲ್ಲೆ ಪರಣ್ಣ ಈಶ್ವರಪ್ಪ ಮುನವಳ್ಳಿ
ಮೊಟ್ಟೆ ಟೆಂಡರ್ ಗೋಲ್ಮಾಲ್ ಬಗ್ಗೆ ನ್ಯೂಸ್ ಫಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಚಿವೆ ಜೊಲ್ಲೆ ಜತೆ ಗಂಗಾವತಿ ಎಮ್ಮೆಲ್ಲೆ ಪರಣ್ಣ ಈಶ್ವರಪ್ಪ ಮುನವಳ್ಳಿ

ಬೆಂಗಳೂರು:ಒಬ್ಬ ಜವಾಬ್ದಾರಿಯುತ ಸಚಿವೆ ಮಕ್ಕಳಿಗೆ ಸೇರಬೇಕಾದ ಮೊಟ್ಟೆಯನ್ನು ಕಿಕ್ ಬ್ಯಾಕ್ ಆಸೆಗೆ  ದಂಧೆಕೋರರ ಪಾಲಾಗಿಸೊಕ್ಕೆ ಪ್ರಯತ್ನಿಸುವ ಅಕ್ರಮವನ್ನು ಸುದ್ದಿ ವಾಹಿನಿಯೊಂದು ದಿನವಿಡೀ ತೋರಿಸಿದ್ರೂ, ಅದೇ ಸಚಿವೆಯನ್ನು ಬೊಮ್ಮಾಯಿ ಸರ್ಕಾರ ಅದೇ ಖಾತೆಗೆ ನಿಯೋಜಿಸುತ್ತದೆ ಎಂದ್ರೆ ಇಂಥಾ ಸರ್ಕಾರವನ್ನು ಏನೆಂದು ಕರೆಯಬೇಕೋ ಗೊತ್ತಾಗ್ತಿಲ್ಲ.ಮಾದ್ಯಮಗಳ ವರದಿಗೆ ಕಿಲುಬುಕಾಸಿನ ಬೆಲೆ ಇಲ್ಲ ಎನ್ನೋದನ್ನು ಸರ್ಕಾರ ಪ್ರೂವ್ ಮಾಡ್ಲಿಕ್ಕೆ ಹೊರಟಿದೆಯಾ..?

ಪತ್ರಿಕೋದ್ಯಮವನ್ನು,ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನಲಾಗುತ್ತದೆ.ಮಾದ್ಯಮಗಳು ಮನಸು ಮಾಡಿದ್ರೆ ಯಾರೂ ಊಹಿಸಲಿಕ್ಕೆ ಸಾಧ್ಯವಾಗದಂಥ ಅಚ್ಚರಿ-ಅನಿರೀಕ್ಷಿತಗಳನ್ನು ಸಾಧ್ಯವಾಗಬಹುದು..ಅದು ಆಗಿದೆ ಕೂಡ..ಆಳುವ ಸರ್ಕಾರಗಳನ್ನು ಉರುಳಿಸಿರುವುದಷ್ಟೇ ಅಲ್ಲ, ವರದಿಗಳ ಮೂಲಕ ಅನಿರೀಕ್ಷಿತ ಎನ್ನುವಂಥ ರಾಜಕೀಯ ಬದಲಾವಣೆಗಳಿಗೂ ಮಾದ್ಯಮಗಳು ಕಾರಣವಾಗಿರುವುದುಂಟು.ವಿಪಕ್ಷಗಳು ವಿಫಲವಾದಾಗ ಅವುಗಳ ಸ್ಥಾನ ಹಾಗು ಹೊಣೆಗಾರಿಕೆಯನ್ನು ಮಾದ್ಯಮಗಳು ನಿರ್ವಹಿಸುತ್ತವೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಚ್ ಡಾಗ್ ಗಳಾಗಿ ಕೆಲಸ ಮಾಡಬೇಕೆಂದು ಹೇಳುವ ಸರ್ಕಾರಗಳೇ ಬಹುತೇಕ ಸನ್ನಿವೇಶಗಳಲ್ಲಿ ಆ ಕಾವಲುನಾಯಿಗಳು ಹೇಳುವ ಸತ್ಯವನ್ನು ಒಪ್ಪುವ ಮಾತು ಹಾಳಾಗಿ ಹೋಗ್ಲಿ,ಸೌಜನ್ಯಕ್ಕಾಗಿಯಾದ್ರೂ ಅವಲೋಕಿಸುವ ಕೆಲಸಕ್ಕೂ ಮುಂದಾಗೊಲ್ಲ.ಅದಕ್ಕೆ ಮತ್ತೊಂದು ಉದಾಹರಣೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಮೊಟ್ಟೆ ಹಗರಣ.

ಗಂಗಾವತಿ ಎಮ್ಮೆಲ್ಲೆ ಪರಣ್ಣ ಈಶ್ವರಪ್ಪ ಮುನವಳ್ಳಿ
ಗಂಗಾವತಿ ಎಮ್ಮೆಲ್ಲೆ ಪರಣ್ಣ ಈಶ್ವರಪ್ಪ ಮುನವಳ್ಳಿ

ಮಕ್ಕಳಿಗೆ ಮೊಟ್ಟೆ ಪೂರೈಕೆಯ ವ್ಯವಸ್ಥೆಯನ್ನು ಹೇಗೆ ಪರಿಣಾಮಕಾರಿಗೊಳಿಸಬೇಕೆನ್ನುವ ನಿಟ್ಟಿನಲ್ಲಿ ಚಿಂತಿಸಬೇಕಾದ,ಕಾರ್ಯಪ್ರವೃತ್ತವಾಗಬೇಕಿದ್ದ ಒಬ್ಬ ಜವಾಬ್ದಾರಿಯುತ ಸಚಿವೆಯೇ ಒಬ್ಬ ಎಮ್ಮೆಲ್ಲೆ ಜತೆ ಕೂತ್ಕೊಂಡು ನಿರ್ಲಜ್ಜತೆಯಿಂದ ಅವ್ಯವಹಾರದ ಬಗ್ಗೆ ಮಾತನಾಡುತ್ತಾರೆಂದ್ರೆ ಅದಕ್ಕಿಂತ ದೊಡ್ಡ ಹೊಣೆಗೇಡಿತನ ಮತ್ತೊಂದಿದೆಯಾ..?

ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ನ್ಯೂಸ್ ಫಸ್ಟ್ ಮಾದ್ಯಮ ಮಾಡಿದ ರಹಸ್ಯ ಕಾರ್ಯಾಚರಣೆಯ ವೀಡಿಯೋವನ್ನು ದಿನವಿಡೀ ಪ್ರಸಾರ ಮಾಡಿದ್ರೂ ಸರ್ಕಾರ ಮಾಡಿದ್ದೇನು..ಕ್ರಮ ಕೈಗೊಳ್ಳುವ ಬದಲು,ಅವರನ್ನೇ ಹೊಸ ಸರ್ಕಾರದಲ್ಲಿ ಸಚಿವೆಯಾಗಿ ಮುಂದುವರೆಸುವ ಕೆಲಸ(ಸಚಿವ ಸಂಪುಟದಲ್ಲಿ  ಆ ಸಚಿವರಿಗೆ ಅದೇ ಇಲಾಖೆ ಸಿಗುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗ್ತಿದೆ).ಮಾದ್ಯಮ ತೋರಿಸಿದ್ದು ಸತ್ಯವೋ..ಸುಳ್ಳೋ ಎನ್ನುವ ಪರಿಶೀಲನೆಯನ್ನೂ ಮಾಡದ ಬಿಜೆಪಿ ಸರ್ಕಾರ,ಆ ಸಚಿವರಿಗೆ “ಕ್ಲೀನ್ ಚಿಟ್” ಕೊಟ್ಟು ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಕೊಟ್ಟಿರುವುದು ಯಾವ ನ್ಯಾಯ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಮಕ್ಕಳ ಮೊಟ್ಟೆಗೂ ಕನ್ನ ಹಾಕಲಾಗ್ತಿದೆ ಎನ್ನುವುದು ಕಡಿಮೆ ಆರೋಪನಾ..? ಸರ್ಕಾರಕ್ಕೆ ಕಣ್ಣು-ಕಿವಿ ಎನ್ನೋದೇನಾದ್ರೂ ಇದ್ದಿದ್ರೆ ಸತ್ಯಾಸತ್ಯತೆ ಅರಿಯೊಕ್ಕೆ ತನಿಖೆಗೆ ಆಗ್ರಹಿ ಸುತ್ತಿತ್ತು.ಆ ಸಚಿವರು ಇದು ನನ್ನನ್ನು ಪ್ರಜ್ಞಾಪೂರ್ವಕವಾಗಿ ಸಿಲುಕಿಸುವ ಹುನ್ನಾರ-ವ್ಯವಸ್ಥಿತ ಷಡ್ಯಂತ್ರ ಎಂದು ಹೇಳುತ್ತಿದ್ದರೂ ತನಿಖೆ ನಡೆಸಬೇಕಿದ್ದುದು ಒಂದು ಜವಾಬ್ದಾ ರಿಯುತ ಸರ್ಕಾರದ ಹೊಣೆ.ಆದ್ರೆ ಅದ್ಯಾವುದನ್ನೂ ಮಾಡದೆ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟಿರುವುದು ಸರ್ಕಾರದ ನೈತಿಕ ಅಧಃಪತನ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮೊಟ್ಟೆ ಡೀಲ್ ಹಗರಣದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಬೃಹತ್ ಪ್ರತಿಭಟನೆ
ಮೊಟ್ಟೆ ಡೀಲ್ ಹಗರಣದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಬೃಹತ್ ಪ್ರತಿಭಟನೆ

ಕಳಂಕಿತರಿಗೆ ಸಂಪುಟದಲ್ಲಿ ಸ್ಥಾನವಿಲ್ಲ ಎಂದು ಬಿಜೆಪಿ ವರಿಷ್ಠರು ಹೇಳುತ್ತಿದ್ದರು.ಆದ್ರೆ ಆದದ್ದು ಏನು? ಮೊಟ್ಟೆ ಹಗರಣದಂಥ ಕಳಂಕ ಹೊತ್ತ ಈ ಸಚಿವರ ವಿಷಯದಲ್ಲಿ ಅದು ಅನ್ವಯವೂ ಆಗಲಿಲ್ಲ..ಪರಿಗಣಿಸಲ್ಪಡಲೂ ಇಲ್ಲ.ಶಿಷ್ಟಾಚಾರಕ್ಕೂ ಹಗರಣದ ಬಗ್ಗೆ ಮಾತನಾಡದೆ ಏಕಾಏಕಿ ಕ್ಲೀನ್ ಚಿಟ್ ಕೊಟ್ಟಿದ್ದು ಸರ್ಕಾರದ ಹೊಣೆಗೇಡಿತನದ ಪರಮಾವಧಿ.

ಮಾದ್ಯಮಗಳನ್ನು ಪ್ರಜಾಪ್ರಭುತ್ವದ ಕಾವಲುನಾಯಿಗಳೆಂದು ಪರಿಗಣಿಸಬೇಕಾದ ಸರ್ಕಾರಗಳು ಇವತ್ತು ತಾವು ಸೃಷ್ಟಿಸುವ ಹಗರಣಗಳು-ಮಾಡುವ ಅಕ್ರಮಗಳು-ಸೃಷ್ಟಿಸುವ ವಿವಾದಗಳಿಂದಾದ ಸುದ್ದಿಗಳನ್ನು ಮಾಡೊಕ್ಕೆ ತಮ್ಮ ಮನೆಗಳನ್ನು ಕಾಯುವ ಅದಕ್ಕಾಗಿ ತಮ್ಮ ಹಿಂದೆಯೇ ಸುತ್ತುವ ನಾಯಿಗಳೆಂದು ಪರಿಗಣಿಸಲ್ಪಟ್ಟಿರುವಂತಿದೆ.ಹಾಗಾಗಿ ಮಾದ್ಯಮಗಳ ವರದಿಗಳು ನಯಾಪೈಸೆ ಬೆಲೆ ಇಲ್ಲದ ಸುದ್ದಿಗಳಾಗಿಬಿಟ್ಟಿವೆ.

ನ್ಯೂಸ್ ಫಸ್ಟ್  ಮಾಡಿದ ಕುಟುಕು ಕಾರ್ಯಾಚರಣೆಯ ಸತ್ಯಾಸತ್ಯತೆ ಬಗ್ಗೆ ಅವಲೋಕಿಸುವ ಕೆಲಸ ನಿಜಕ್ಕೂ ಸರ್ಕಾರದಿಂದ ನಡೆಯಬೇಕಿತ್ತು.ಸಚಿವರ ಮೇಲೆ ಬಂದ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು.ಒಂದು ಸಣ್ಣ ತನಿಖೆಯನ್ನು ಸರ್ಕಾರದಿಂದ ಜನ ನಿರೀಕ್ಷಿಸಿದ್ದರು ಕೂಡ.ಆದ್ರೆ ಆದದ್ದು ಮಾತ್ರ ಉಲ್ಟಾಪಲ್ಟಾ..ಮೊಟ್ಟೆ ಹಗರಣದ ಕಳಂಕಿತ ಸಚಿವರನ್ನು ಮುಂದುವರೆಸುವ ಮೂಲಕ ಸಾರ್ವಜನಿಕವಾಗಿ ತನ್ನನ್ನು ಪ್ರಶ್ನಿಸುವಂಥ ಮಟ್ಟಕ್ಕೆ ತಂದುಕೊಂಡಿದೆ ಸರ್ಕಾರ.ಮಾದ್ಯಮಗಳು ಮಾಡಿದ ಸುದ್ದಿಗೆ ಬಂದ ಬೆಲೆ ಏನು..? ಸರ್ಕಾರಕ್ಕೆ ಬಹುಪರಾಖ್ ಹಾಕ್ಕೊಂಡಷ್ಟೇ ಮಾದ್ಯಮಗಳು ಕೆಲಸ ಮಾಡಬೇಕಾ..?

Spread the love
Leave A Reply

Your email address will not be published.

Flash News