KANNADAFLASHNEWSFIGHTAGAINSTCORONAMoreScrollTop Newsಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)

ಸಾಕು ನಾಯಿಗಳ “ವಾಕ್ “ಗೆ ಕೊನೆಗೂ ಸಿಗ್ತು “ಸ್ವಾತಂತ್ರ್ಯ”:7 ನಿಯಾಮವಳಿಗಳ ಸುತ್ತೋಲೆ ಹೊರಡಿಸಿದ ಬಿಬಿಎಂಪಿ

ಬೆಂಗಳೂರು :ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೆಲವರಿಗೆ ತಾವು ವಾಕ್ ಮಾಡುವಾಗ ಜತೆಗೆ ಸಾಕು ನಾಯಿಗಳನ್ನು ಕೊಂಡೊಯ್ಯುವ  ಶೋಕಿ ಇದೆ.ಅದು ಇವತ್ತಿಗೆ ಟ್ರೆಂಡಿಂಗ್ ಕೂಡ. ದಿನವಿಡೀ ಮನೆಗಳಲ್ಲೇ ಇದ್ದು ಬೋರ್ ಆಗುವ ನಾಯಿಗಳಿಗೂ ಒಂದು ಫ್ರೆಷ್ ನೆಸ್ ಸಿಗಲಿ ಎನ್ನುವುದು ಕೆಲವರ ಅಭಿಪ್ರಾಯವಾದ್ರೆ,ತಮ್ಮಲ್ಲಿರುವ ಬೆಲೆ ಬಾಳುವ ನಾಯಿಗಳನ್ನು ಶೋ ಅಪ್ ಮಾಡುವುದು ಇನ್ನು ಹಲವರ “ಪ್ರತಿಷ್ಟೆಯ ಧ್ಯೋತಕ” (ಸಿಂಬಲ್ ಆಫ್ ಡಿಗ್ನಿಟಿ) ಆಗ್ಹೋಗಿದೆ.ಆದ್ರೆ ಹಾಗೆ ವಾಕ್ ಗೆ ಕರೆದೊಯ್ಯುವ ಮಾಲೀಕರು ಅವುಗಳಿಂದಾಗುವ ಒಂದಷ್ಟು ಕಿರಿಕಿರಿಯನ್ನು ಮಾತ್ರ ಸರಿಪಡಿಸೊಕ್ಕೆ ಮನಸ್ಸೇ ಮಾಡ್ತಿಲ್ಲ.ಇದೇ ಅನೇಕ ವರ್ಷಗಳಿಂದಲೂ ಸಾರ್ವಜನಿಕರು ಹಾಗೂ ಸಾಕುನಾಯಿಗಳ ಮಾಲೀಕರ ನಡುವೆ ದ್ವಂದ್ವ-ಗೊಂದಲ-ಆಕ್ಷೇಪ ಉಂಟಾಗೊಕ್ಕೆ ಕಾರಣ ಎನ್ನುವುದು ಕೂಡ ಅಷ್ಟೇ ಸತ್ಯ.

ಮಲಮೂತ್ರ ವಿಸರ್ಜನೆ-ಬೊಗಳುವಿಕೆ-ಕಚ್ಚುವಿಕೆ ಹಾಗೂ ದಾಳಿ ಮಾಡುವಂಥ ಕೆಲವು ಘಟನೆಗಳು ಸಾಕು ನಾಯಿಗಳಿಂದಲೂ ಆಗುತ್ತಿದೆ ಎನ್ನುವ ಆರೋಪ ಮೊದಲಿಂದಲೂ ಇದೆ.ಆದ್ರೆ ತಮ್ಮ ಸಾಕು ನಾಯಿಗಳಿಂದಾಗು ತ್ತಿರು ವ ಇಂಥಾ ಸಮಸ್ಯೆಗಳನ್ನು ತಾವೇ ಸರಿಪಡಿಸಿ ಸಾರ್ವಜನಿಕರಿಗೂ ಅವುಗಳಿಂದ ಕಿರಿಕಿರಿಯಾಗದಂತೆ ಎಷ್ಟು ಮಾಲೀಕರು ಕ್ರಮ ಕೈಗೊಳ್ಳುತ್ತಿದ್ದಾರೆನ್ನು ವುದನ್ನು ನೋಡಿದ್ರೆ ಕೇವಲ ಬೆರಳೆಣಿಕೆ ಅಷ್ಟೇ..ಹಾಗಾಗಿನೇ ಪರಿಹಾರ ಸಿಗದೆ ಇದೊಂದು ಪ್ರಶ್ನೆ ಸಮಸ್ಯೆಯಾಗೇ ಉಳಿದಿದೆ.

ಸಾಕು ನಾಯಿಗಳನ್ನು ಪಾರ್ಕ್ ಗೆ,ಕೆರೆಗಳ ಅಂಗಳಕ್ಕೆ ತಂದ್ರೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಆಕ್ರೋಶ-ಆಕ್ಷೇಪಕ್ಕೆ ನಾಯಿ ಮಾಲೀಕರು ತಮ್ಮದೇ ವಾದ ಮಂಡಿಸುತ್ತಿದ್ದಾರೆ.ಇದು ಸಹಜವಾಗಿಯೇ ಶ್ವಾನ ಪ್ರಿಯರು ಹಾಗೂ ಪ್ರಾಣಿದಯಾ ಸಂಘಗಳಲ್ಲಿ ಬೇಸರ ಮೂಡಿಸಿದೆ.ಸಾಕು ನಾಯಿಗಳ ಮಾಲೀಕರ ಹೊಣೆಗೇಡಿತನ ಹಾಗೂ ಸಾರ್ವಜನಿಕರ ಅಸಹಕಾರದಿಂದ ಬೇಸತ್ತ ಸಾಕಷ್ಟು ಪ್ರಾಣಿಪ್ರಿಯರು ಸರ್ಕಾರದ ಮಟ್ಟದಿಂದ ಹಿಡಿದು ಕೇಂದ್ರ ಸರ್ಕಾರ ಹಾಗೂ ಅನಿಮಲ್ ವೆಲ್ಫೇರ್ ಬೋರ್ಡ್ ಗೂ ತಮ್ಮ ಅಹವಾಲು ಸಲ್ಲಿಸಿದ್ದರು.ಇದಕ್ಕೊಂದು ಪ್ರತ್ಯೇಕ ನಿಯಮ ರೂಪಿಸಿ ಸಾಕುನಾಯಿಗಳಿಗೂ ಬೇಕಿರುವ ಸ್ವಾತಂತ್ರ್ಯ ಹಾಗೂ ಬದುಕುವ ಹಕ್ಕು ಕಲ್ಪಿಸಬೇ ಕೆಂದು ಮನವಿ ಮಾಡಿದ್ದರು.

ಸಾಕು ನಾಯಿಗಳ ಸ್ವಾತಂತ್ರ್ಯ-ಬದುಕುವ ಹಕ್ಕು ಕಾಪಾಡುವ ಜತೆಗೆ ಮಾಲಿಕರ ಹಿತಾಸಕ್ತಿ ಮತ್ತು ಸಾರ್ವಜನಿಕರ ಕಾಳಜಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಹೊಸ ಸುತ್ತೋಲೆ ಹೊರಡಿಸಿದೆ.ಕೆರೆಗಳ ಅಂಗಳ ದಲ್ಲಿ ಸಾಕು ನಾಯಿಗಳನ್ನು ಕರೆ ತರುವ ಮಾಲೀಕರು ಪಾಲಿಸಬೇಕಾದ ನಿಯಮಗಳ ರೂಲ್ಸ್ ಫ್ರೇಮ್ ಮಾಡಿದೆ.ಇದಕ್ಕೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಕೂಡ ಜುಲೈ 27 ರಂದು ಅನುಮೋದನೆಯನ್ನೂ ನೀಡಿದ್ದಾರೆ.ಈ ಬೆಳವಣಿಗೆಗೆ ಪ್ರಾಣಿ ದಯಾ ಸಂಘಟನೆಯ ಪ್ರಮುಖ ಅರುಣ್ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ ಅನಿಮಲ್ ವೆಲ್ಫೇರ್ ಬೋರ್ಡ್ ರೂಪಿಸಿರುವ ನಿಯಾಮವಳಿಗಳ ಅನ್ವಯ ಹೊರಡಿಸಿರುವ ಸುತ್ತೋಲೆಯ ಹೈಲೆಟ್ಸ್ ಕೆಳಕಂಡಂತಿದೆ.

 ಕೆರೆಗಳ ಆವರಣದ ಪಾರ್ಕ್ ಗಳಲ್ಲಿ ಸಾಕುನಾಯಿಗಳನ್ನು ವಾಕ್ ಮಾಡಿಸುವಾಗ ಅವುಗಳಿಗೆ ಕಡ್ಡಾಯವಾಗಿ ಸರಪಳಿ ಹಾಕಿರಬೇಕು. ಹಾಗೆ ಬಾಯಿಗೆ ಕುಕ್ಕೆ ಹಾಕಿರಬೇಕು.ನಾಯಿಗಳನ್ನು ಮಾಲೀಕರೇ ಸರಪಳಿಗಳನ್ನು ಹಾಕಿ  ವಾಕ್ ಮಾಡಿಸಬೇಕು.

 ಸಾಕು ನಾಯಿಗಳಿಗೆ ಕಡ್ಡಾಯವಾಗಿ ರೇಬಿಸ್ ಲಸಿಕೆ ಹಾಕಿಸಲೇಬೇಕು. ಹಾಗೂ ಅದಕ್ಕೆ ಸಂಬಂಧಪಟ್ಟಂಥ ಲಸಿಕೆಯ ದಾಖಲಾತಿಗಳನ್ನು ಅಧಿಕಾರಿಗಳು ಕೇಳಿದಾಗ ತೋರಿಸಬೇಕು. -ಸಾಕುನಾಯಿಗಳು ಮೂತ್ರ- ಮಲ ವಿಸರ್ಜನೆ ಮಾಡದಂತೆ ಕ್ರಮವಹಿಸಬೇಕು.ಒಂದು ವೇಳೆ ಆ ರೀತಿ ವಿಸರ್ಜನೆ ಮಾಡಿದ್ದೇ ಆದಲ್ಲಿ ,ಮಾಲೀಕರೇ  ಸ್ಥಳವನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಐನೂರು ರೂ ಗಳನ್ನು ದಂಡವಾಗಿ ಪಾವತಿಸಬೇಕು.

 ಸಾಕು ನಾಯಿಗಳಿಗೆ ಕೆರೆಗಳ ಅಂಗಳದಲ್ಲಿ ಯಾವುದೇ ರೀತಿಯ ಆಹಾರವನ್ನು ಕೊಡಬಾರದು. ಇದನ್ನು ಮಾಲೀಕರೇ ಸೂಕ್ಷ್ಮವಾಗಿ ಗಮನಿಸಬೇಕು. ಉಗ್ರಸ್ವಭಾವದ ದೊಡ್ಡ ತಳಿ ನಾಯಿಗಳಾದ ರಾಟ್ ವಿಲ್ಲರ್. ಜರ್ಮನ್ ಶಫರ್ಡ್,ಪಿಟ್ಬುಲ್ ,ಡಾಬರ್ ಮ್ಯಾನ್,ಗ್ರೇಟ್ ಡೇನ್ ನಂತಹ ನಾಯಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು.

 ಸಾರ್ವಜನಿಕರು ವಾಕ್ ಗೆ ಬಂದ ಸಂದರ್ಭದಲ್ಲಿ ಸಾಕುನಾಯಿಗಳಿಗೆ ಯಾವುದೇ ರೀತಿಯ ಪ್ರವೇಶವನ್ನು ಮಾಲೀಕರು ನೀಡಬಾರದು

 ಒಂದು ವೇಳೆ ಪ್ರವಾಸಕ್ಕೆ ಅವಕಾಶ ನೀಡಿದ್ದೇ ಆದಲ್ಲಿ ಅಂತಹ ನಾಯಿಗಳಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮಾಲೀಕರೇ ಎಚ್ಚರ ವಹಿಸಬೇಕಾಗುತ್ತದೆ.

 ಒಟ್ಟಿನಲ್ಲಿ ಬಿಬಿಎಂಪಿ ಹೊರಡಿಸಿರುವ ಈ ಆದೇಶ ಸಾಕುನಾಯಿಗಳ ಮಾಲೀಕರು ಹಾಗೂ ಸಾರ್ವಜನಿಕರ ನಡುವಿನ ದಶಕಗಳ ಕಾಲದ ಬಹುದೊಡ್ಡ ವಿವಾದಕ್ಕೆ ದಿ ಎಂಡ್ ಹಾಕಲಿದೆ ಎಂದ್ರೂ ತಪ್ಪಾಗಲಿಕ್ಕಿಲ್ಲವೇನೋ..

Spread the love

Related Articles

Leave a Reply

Your email address will not be published.

Back to top button
Flash News