ಬಿಜೆಪಿ MLAಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ:ಇಬ್ಬರು ವಶಕ್ಕೆ,ಮತ್ತೋರ್ವನ ಪತ್ತೆಗೆ ಕಾರ್ಯಾಚರಣೆ.
ಕಾರಿಗೆ ಬೆಂಕಿ ಹಾಕಿದ್ದಕ್ಕೆ ಕಾರಣ ಹುಡುಕಾಡುತ್ತಿರುವ ಪೊಲೀಸರು-ಕ್ರೈಸ್ತ ಮಿಷನರಿಗಳ ಪಾತ್ರದ ಶಂಕೆ.
ಬೆಂಗಳೂರು: ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಯ ಬಳಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಘಟನೆ ಹಿನ್ನಲೆಯಲ್ಲಿ ತನಿಖೆ ತೀವ್ರಗೊಳಿಸಿದ ಬೊ ಮ್ಮನಹಳ್ಳಿ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡದು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಶೋಧ ಕೈಗೊಳ್ಳಲಾಗಿದೆಯಂತೆ.ವಶಕ್ಕೆ ಪಡೆದ ಇಬ್ಬರಿಂದ ಮೂರನೇ ಆರೋಪಿ ಬಗ್ಗೆ ಮಾಹಿತಿ ಪಡೆದಿದ್ದಾರೆನ್ನಲಾಗಿದೆ.
ಸದ್ಯ ಎರಡು ವಿಶೇಷ ತಂಡಗಳಿಂದ ಮೂರನೇ ಆರೋಪಿಗಾಗಿ ಹುಡುಕಾಟ ನಡೆಸಿದ್ದು,ಯಾವ ಕಾರಣದಿಂದ ಕಾರುಗಳಿಗೆ ಬೆಂಕಿ ಹಚ್ಚಿದ್ರು ಅನ್ನೋದ್ರ ಬಗ್ಗೆ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಅಂದ ಹಾಗೆ ಗುರುವಾರ ಬೆಳಗ್ಗೆ ಬೊಮ್ಮನಹಳ್ಳಿಯಲ್ಲಿರುವ ಎಮ್ಮೆಲ್ಲೆ ಸತೀಶ್ ರೆಡ್ಡಿ ಮನೆಯ ಬಳಿ ನಿಂತಿದ್ದ ಕಾರಿಗೆ ಬೆಂಕಿ ಹಚ್ಚಲಾಗಿತ್ತು.