ಕ್ಲಿಷ್ಟ ಪ್ರಕರಣ ಬೇಧಿಸಿ ಗೆದ್ದ 6 ಪೊಲೀಸ್ ಅಧಿಕಾರಿಗಳಿಗೆ “ಶೌರ್ಯ” ಪ್ರಶಸ್ತಿ.
ಡಿವೈಸ್ಪಿ ,ಇನ್ಸ್ ಪೆಕ್ಟರ್ ಸೇರಿ 6 ಅಧಿಕಾರಿಗಳನ್ನು ಶೌರ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಬೆಂಗಳೂರು:ಉತ್ತಮ ತನಿಖೆ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿ ಕರ್ನಾಟಕಕ್ಕೆ ಹೆಸರು ತಂದ ರಾಜ್ಯದ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯ “ಶೌರ್ಯ ಪದಕ” ಕ್ಕೆ ಆಯ್ಕೆ ಮಾಡಿದೆ.
ಡಿವೈಸ್ಪಿ ,ಇನ್ಸ್ ಪೆಕ್ಟರ್ ಸೇರಿ 6 ಅಧಿಕಾರಿಗಳನ್ನು ಶೌರ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಅಂದ್ಹಾಗೆ ಸವಾಲು ಹಾಗೂ ಅತ್ಯಂತ ಕ್ಲಿಷ್ಟವಾದ ಪ್ರಕರಣಗಳನ್ನು ಭೇದಿಸುವಲ್ಲಿ ಉತ್ತಮ ತನಿಖೆ ನಡೆಸಿದ ಅಧಿಕಾರಿಗಳಿಗೆ
ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ “ಎಕ್ಸ್ ಲೆಂಟ್ ಇನ್ವಿಸ್ಟಿಗೇಷನ್ ಅವಾರ್ಡ್ 2021 ಗೆ ಪಾತ್ರರಾದ ಅಧಿಕಾರಿಗಳ ವಿವರ ಕೆಳಕಂಡಂತಿದೆ.
1-ಪರಮೇಶ್ವರ್ A ಹಗಡೆ, DYSP, ಮಂಗಳೂರು ಉಪವಿಭಾಗ
2-HN ಧರ್ಮೆಂದ್ರ ACP, CCB ಬೆಂಗಳೂರು*
3-ಬಾಲಕೃಷ್ಣ C ,STF BDA ಬೆಂಗಳೂರು
4-ಮನೋಜ್ N , SIT ಕರ್ನಾಟಕ ಲೋಕಾಯುಕ್ತ
5-ದೇವರಾಜ್, ಸರ್ಕಲ್ ಇನ್ಸ್ಪೆಕ್ಟರ್ ಹೊನ್ನಳ್ಳಿ ದಾವಣಗೆರೆ
6-ಶಿವಪ್ಪ, ಇನ್ಸ್ಪೆಕ್ಟರ್, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಹುಬ್ಬಳ್ಳಿ.
ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಸಿಎಂ ಬೊಮ್ಮಾಯಿ,ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.