ನಕಲಿ ಮಾರ್ಕ್ಸ್ ಕಾರ್ಡ್ ಜಾಲಕ್ಕೆ “ಆದರ್ಶ ದಂಪತಿ”ಯೇ ಕಿಂಗ್ ಪಿನ್..
ಮೂರು ಪ್ರಮುಖ ಯುನಿವರ್ಸಿಟಿಗಳ ಹೆಸರಿನ ನಕಲಿ ಮಾರ್ಕ್ಸ್ ಶೀಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ನೀಯತ್ತಾಗಿ ಬದುಕಿ ಬಾಳಬೇಕಾದ ಪತಿ-ಪತ್ನಿಯರೇ ಹಣದಾಸೆಗೆ ನಕಲಿ ಮಾರ್ಕ್ಸ್ ಶೀಟ್ ದಂಧೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ನಕಲಿ ಮಾರ್ಕ್ಸ್ ಶೀಟ್ ದಂಧೆ ಬಯಲಿಗೆಳೆದಿರುವ ಸಿಸಿಬಿ,ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಕೆಲ ಮಹತ್ವದ ದಾಖಲೆಗಳು & ನಕಲಿ ಮಾರ್ಕ್ಸ್ ಶೀಟ್ ಜಪ್ತಿ. ಮಾಡಲಾಗಿದ್ದು,ಇವರ ಬಳಿಯಿದ್ದ ಮೂರು ಪ್ರಮುಖ ಯುನಿವರ್ಸಿಟಿಗಳ ಹೆಸರಿನ ನಕಲಿ ಮಾರ್ಕ್ಸ್ ಶೀಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಮುಖೇಶ್, ರೋಹಿ ಎನ್ನುವವರೇ ಬಂಧಿತ ದಂಪತಿಗ ಳಾಗಿದ್ದು,ಪಂಜಾಬ್ ಮೂಲದ ಈ ಅರೋಪಿಗಳು ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲೆ ನೆಲಸಿದ್ರು.
ಪೀಣ್ಯ ಬಳಿ ಜಗತ್ ಜೋತಿ ಎಜುಕೇಶನ್ ಇನ್ಸ್ಟಿಟ್ಯೂಟ್ ನಡೆಸುತಿದ್ದ ಈ ಖದೀಮ ದಂಪತಿಗೆ ಅದ್ಯಾವ ಲಿಂಕ್ ಸಿಕ್ಕಿತ್ತೋ ಗೊತ್ತಿಲ್ಲ.
ಪದವಿ ಆಕಾಂಕ್ಷಿಗಳಿಗೆ ಈ ಖದೀಮ ದಂಪತಿ,ಎಂ. ಎ, ಎಂ ಬಿ ಎ , ಬಿಸಿಎ , ಬಿ ಟೆಕ್, ಬಿಬಿಎ , ಬಿ ಕಾಂ, ಬಿ ಎಸ್ ಸಿ , ಸೇರಿ ಹಲವು ಡಿಗ್ರಿ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ರು..
ಒಂದು ಡಿಗ್ರಿ ಮಾರ್ಕ್ಸ್ ಕಾರ್ಡ್ ಗೆ ಅರವತ್ತರಿಂದ ಎಪ್ಪತ್ತು ಸಾವಿರದ ವರೆಗೆ ಹಣ ಪಡೆಯುತ್ತಿದ್ದ ಇವರು,ಸಿ ವಿ ರಾಮನ್ ಯುನಿವರ್ಸಿಟಿ, ರವೀಂದ್ರನಾಥ್ ಟ್ಯಾಗೋರ್ ಯುನಿವರ್ಸಿಟಿ, ಅಸೆಟ್ ಯುನಿವರ್ಸಿಟಿ ಗೆ ಸೇರಿದ ಮಾರ್ಕ್ ಕಾರ್ಡ್ ಗಳನ್ನು ನೀಡಿ ಹಣ ಪಡೆಯುತ್ತಿದ್ದರು.
ವಿಚಾರಣೆ ವೇಳೆ 500 ಹೆಚ್ಚು ಜನರಿಗೆ ಮಾರ್ಕ್ಸ್ ಕಾರ್ಡ್ ನೀಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಪೀಣ್ಯ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.
Comments are closed.