MLA ಕಾರಿಗೆ ಬೆಂಕಿ ಹಿಂದೆ ಪಿತೂರಿ-ಷಡ್ಯಂತ್ರ,ಚಾಲಾಕಿ “ಕಿಡಿ”ಗೇಡಿಗಳ ಕೃತ್ಯದ ಹಿಂದಿದ್ದ ಕೈವಾಡ ಯಾರದು.?!

*ಕಾರಿಗೆ ಬೆಂಕಿ ಇಟ್ಟ ಪ್ರಕರಣದ ಹಿಂದೆ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದ ಜಿದ್ದು..?*

0

ಬೆಂಗಳೂರು:ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರು ಸುಟ್ಟ ಪ್ರಕರಣದ ಸುತ್ತ ನಾನಾ ಅನುಮಾನಗಳ ಹುತ್ತ ಬೆಳೆಯೊಕ್ಕೆ ಶುರುವಾಗಿದೆ.

ಕಾರಿಗೆ ಬೆಂಕಿ ಇಟ್ಟ ಪ್ರಕರಣದ ಹಿಂದೆ  ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದ ಜಿದ್ದು..? ಕಾರಣವಾಗಿತ್ತಾ ಎನ್ನುವ ಶಂಕೆ ಮೂಡಿದೆ.

ಸಂಸದ ತೇಜಸ್ವಿ‌ ಸೂರ್ಯ ಜತೆ ಸೇರಿ  ಶಾಸಕ‌ ಸತೀಶ್ ರೆಡ್ಡಿ ಬೆಡ್ ಬ್ಲ್ಯಾಕಿಂಗ್ ದಂಧೆ ಬಯಲಿಗೆಳೆದಿದ್ದೇ ವೈರತ್ವಕ್ಕೆ ಕಾರಣವಾಯ್ತಾ ಗೊತ್ತಾಗ್ತಿಲ್ಲ.

ಈ‌ ದಂಧೆಯಲ್ಲಿ ಸತೀಶ್ ರೆಡ್ಡಿ ಆಪ್ತನೇ ಸೇರಿದಂತೆ ಹಲವರ ಬಂಧನ ಆಗಿತ್ತು..ಈ‌ ದಂಧೆಯಲ್ಲಿ ಸತೀಶ್ ರೆಡ್ಡಿ ಕೂಡ ಇದ್ದರು ಅನ್ನೋ ಆರೋಪ‌ ಕೂಡ ಕೇಳಿಬಂದಿತ್ತು..ಆದರೆ ತಮ್ಮ ಆಪ್ತನನ್ನೇ ಜೈಲಿಗೆ ಕಳಿಸಿದ್ರು‌ ಅನ್ನೋ ಜಿದ್ದು ಸಂಬಂಧಿಕರಿಗೆ ಇತ್ತಾ..? ಎನ್ನುವ ಅನುಮಾನ ಕಾಡುತ್ತಿದೆ.ಸದ್ಯ ಈ ಆಯಾಮದಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನು ಈ ಬಗ್ಗೆ ಶಾಸಕ ಸತೀಶ್ ರೆಡ್ಡಿ ರಿಯಾಕ್ಟ್ ಮಾಡಿದ್ದು,ಕಳೆದ 24 ಗಂಟೆಯಲ್ಲಿ ನೂರಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಚೆಕ್ ಮಾಡಲಾಗಿದೆ.

ಬೆಂಕಿ ಇಟ್ಟ ಪ್ರಕರಣದ ಹಿನ್ನಲೆಯಲ್ಲಿ ಸಂತೋಷ್ ಗುರೂಜಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಬೆಂಕಿ ಇಟ್ಟ ಪ್ರಕರಣದ ಹಿನ್ನಲೆಯಲ್ಲಿ ಸಂತೋಷ್ ಗುರೂಜಿ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಚಾಲಾಕಿ ಕಿಡಿಗೇಡಿಗಳು.. ಆರೋಪಿಗಳು ಕೃತ್ಯ ಮಾಡಿದ‌ ಮೇಲೆ  ನೂರು ಮೀಟರ್ ಗೆ ಒಂದರಂತೆ  ಬಟ್ಟೆಯನ್ನು ಚೇಂಜ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಚಾಲಾಕಿ ಕಿಡಿಗೇಡಿಗಳು,ಮೂರೇ ನಿಮಿಷಕ್ಕೆ ಇನ್ನೊಂದು  ಬಟ್ಟೆ ಬದಲಾಯಿಸಿದ್ದಾರೆ..ಅಂದರೆ ಅವರು ಪ್ರೀ ಪ್ಲಾನ್ಡ್ ಆಗಿ ಬಂದಿದ್ದಾರೆ.ಮೊದಲನೇ ಬಾರಿ ಹನ್ನೆರಡು ಗಂಟೆ ಬಂದಿದ್ದಾರೆ..ಎರಡನೆಯ ಬಾರಿ ಬಂದು ಬೆಂಕಿ ಹಾಕಿದ್ದಾರೆ.ಉದ್ದೇಶಪೂರ್ವಕವಾಗಿಯೇ ಕೃತ್ಯ ಮಾಡಿದ್ದಾರೆ. ಅವರ ಹಿಂದೆ ಯಾರೋ ಇದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಹಿನ್ನಲೆಯಲ್ಲಿ ರಚಿಸಲಾಗಿರುವ ನಾಲ್ಕು ಪೊಲೀಸ್ ತಂಡಗಳುತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ ಎನ್ನಲಾಗಿದೆ.

ನನ್ನ ಮಾಹಿತಿಯ ಪ್ರಕಾರ ಸ್ಥಳೀಯರು ಇದನ್ನು ಮಾಡಿಲ್ಲ..ಹೊರಗಿನವರು ಈ ಕೆಲಸ ಮಾಡಿರುವ ಅನುಮಾನ ಇದೆ.ತನಿಖೆಯ ನಂತರ ಪೂರ್ಣ ಚಿತ್ರಣ ತಿಳಿದುಬರಲಿದೆ. ಪೊಲೀಸರು ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ .

ನನಗೆ ಯಾರೂ ಶತೃಗಳಿಲ್ಲ:ಕ್ಷೇತ್ರದಲ್ಲಿ  ನನಗೆ ಯಾರೂ ರಾಜಕೀಯ ಶತ್ರುಗಳಿಲ್ಲ ನಾನು ಒಬ್ಬನೇ ಓಡಾಡುತ್ತೇನೆ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ನಾನು ಹಾಗೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನನ್ನನ್ನು ಭಯಪಡಿಸುವು ದಕ್ಕಾಗಿ ಈ ಕೃತ್ಯ ಮಾಡಿರುವ ಶಂಕೆ ಇದೆ.. ಇದರಿಂದ ಯಾರಿಗೆ  ಮೆಸೇಜ್ ಪಾಸ್ ಮಾಡ್ತಾ ಇದ್ದಾರೆ ಎನ್ನುವ ಅನುಮಾನ ಇದೆ.

ಬೆಡ್ ಬ್ಲಾಕಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಕೂಡ ಚೆಕ್ ಮಾಡಿ ಅಂತ ಹೇಳಿದ್ದೀನಿ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಿ ಎಂದು ಹೇಳಿದ್ದೇನೆ .

ಕೃತ್ಯ ಎಸಗಿದವರು ಇಲ್ಲಿ ಫಸ್ಟ್ ಟೈಮ್ ಬಂದಿಲ್ಲ..‌ಇಲ್ಲಿನ ಎಲ್ಲ ರಸ್ತೆಗಳನ್ನು ಮಾಹಿತಿ ಕಲೆಹಾಕಿದ್ದಾರೆ ಎಂದು ಶಾಸಕ ರೆಡ್ಡಿ ತಿಳಿಸಿದ್ದಾರೆ.ಮಧ್ಯರಾತ್ರಿಯಲ್ಲಿ ರೀತಿ ಪ್ರಕರಣ ಮಾಡಿರುವುದರಿಂದ ಇದು ಹೆದರಿಸುವುದು ತಂತ್ರ ಅನಿಸ್ತಾ ಇದೆ ..ನಾನು ಯಾವುದೇ ಕಾರಣಕ್ಕೂ ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದಿದ್ದಾರೆ.

ಇಬ್ಬರು ಸ್ಥಳೀಯ ಯುವಕರು ವಶಕ್ಕೆ‌:ಘಟನೆ ಸಂಬಂಧ ನಿನ್ನೆಯಿಂದ ಲು ಸುದೀರ್ಘವಾಗಿ‌ ವಿಚಾರಣೆ ನಡೆಸುತ್ತಿರುವ ಪೊಲೀಸರು, ವಶಕ್ಕೆ ಪಡೆದ ಇಬ್ಬರು ಯುವಕರು ಹೊಂಗಸಂದ್ರ ವಾಸಿಗಳು ಎನ್ನಲಾಗಿದೆ.

ವಶಕ್ಕೆ ಪಡೆದ ಯುವಕರಿಂದ ಘಟನೆಯ ಬಗ್ಗೆ ಮಾಹಿತಿ ಪಡೆಯಲಾಗಿದ್ದು,ಘಟನೆ ನಡೆದ ಸಮಯಲ್ಲಿ ವಶಕ್ಕೆ ಪಡೆದ ಯುವಕರು ಓಡಾಟ ಮಾಡಿರುವ ಶಂಕೆಯಿದೆ.

ವಶಕ್ಕೆ ಪಡೆದ ಯುವಕರಿಗೆ ಸಿ ಸಿ ಕ್ಯಾಮರಾ ದೃಶ್ಯಗಳನ್ನ ತೋರಿಸಿ ವಿಚಾರಣೆ ಮಾಡಲಾಗ್ತಿದೆ.

ತಡರಾತ್ರಿ ಯುವಕರು ಓಡಾಟ ಮಾಡಿರುವ ಬಗ್ಗೆ ಕುರಿತು ವಿಚಾರಣೆ ನಡೆಸಲಾಗಿದ್ದು,ಟವರ್ ಡಂಪ್ ಮಾಡಿದಾಗ ಸಿಕ್ಕ ನಂಬರ್ ಆಧರಿಸಿ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.

ನಿನ್ನೆಯಿಂದ ಸ್ವಿಚ್ ಅಫ್ ಅಗಿದ್ದ ಯುವಕರ ನಂಬರ್ ಗಳನ್ನು  ಬಾತ್ಮಿದಾರರ ಮೂಲಕ ಕಲೆ ಹಾಕಿದ ಪೊಲೀಸರು,ಶಂಕಿತರ ವಿಚಾರಣೆ ನಡೆಸುತ್ತಿದ್ದಾರೆ.

Spread the love
Leave A Reply

Your email address will not be published.

Flash News