“ಸಲಗ’ ರಿಲೀಸ್ ಗೆ ಕೊರೋನಾ-ಲಾಕ್ ಡೌನ್ “ಅಂಕುಶ” ಆಗಸ್ಟ್ 20 ಕ್ಕೆ ರಿಲೀಸ್ ಡೌಟ್..!

ಸಲಗ ಚಿತ್ರತಂಡದಿಂದ ಪೋಸ್ಟ್ ಪೋನ್ ನಿರ್ಧಾರ ಪ್ರಕಟ-ಸಲಗದ ಬೆನ್ನಲ್ಲೇ ಸಾಕಷ್ಟು ಬಿಗ್ ಬಜೆಟ್ ಚಿತ್ರಗಳಿಗೂ‌ ಸಂಕಷ್ಟ...

0

ಬೆಂಗಳೂರು:ಲಾಕ್ ಡೌನ್‌ ಮತ್ತು ಕೊರೊನಾ ಅಬ್ಬರ ಸ್ಯಾಂಡಲ್ ವುಡ್ ಗೆ ಕಷ್ಟದ ಮೇಲೆ ಮತ್ತಷ್ಟು ಸಂಕಷ್ಟ ತಂದೊಡ್ಡುತ್ತಿದೆ.

ಇದರಿಂದಾಗಿ  ರಿಲೀಸ್ ಗೆ ರೆಡಿಯಾಗಿರೋ ಸಿನಿಮಾಗಳ ಪ್ಲಾನ್ ಚೇಂಜ್ ಮಾಡೊಕ್ಕೆ ಚಿತ್ರ ತಂಡಗಳು ನಿರ್ಧರಿಸಿರುವ ಸುದ್ದಿ ಹೊರಬಿದ್ದಿದೆ.ಇವುಗಳ‌ ಸಾಲಿಗೆ ದುನಿಯಾ ವಿಜಿ ನಿರ್ಮಾಣದ “ಸಲಗ” ಕೂಡ ಒಂದು.

ಫಿಲಂ ಚೇಂಬರ್ ನಿಯೋಗ ಸಿಎಂ ಅವರನ್ನು‌ ಭೇಟಿ ಮಾಡಿದ ವೇಳೆ,‌50% ಆಕ್ಯೂಪೆನ್ಸಿಯಲ್ಲಿ ಸ್ಟಾರ್ ಸಿನಿಮಾಗಳು ರಿಲೀಸ್ ಗೆ ಸರ್ಕಾರ ಒಪ್ಪಿಗೆ ನೀಡಿತ್ತು.

ಇದರ ಅನ್ವಯವೇ ಆಗಸ್ಟ್ -20ಕ್ಕೆ ಸಲಗ ತಂಡ, ಚಿತ್ರ ರಿಲೀಸ್ ಪ್ಲಾನ್ ಮಾಡಿತ್ತು.ಆದ್ರೀಗ ಸಲಗ ಸಿನಿಮಾದ ರಿಲೀಸ್ ಪ್ಲಾನ್ ಚೇಂಜ್ ಆಗೋ ಸಾಧ್ಯತೆ ಬಹುತೇಕ ಪಕ್ಕಾ ಆಗಲಿದೆ.

100% ಆಕ್ಯುಪೆನ್ಸಿ ಅವಕಾಶ ಸಿಕ್ಕ ನಂತರವೇ ಸಿನಿಮಾ ರಿಲೀಸ್ ಮಾಡೋ ಸಿದ್ದತೆ ಮಾಡಿಕೊಳ್ಳಲಿದೆ ಚಿತ್ರತಂಡ ಎನ್ನಲಾಗಿದೆ.ಇದನ್ನು ನೋಡಿದ್ರೆ,ಸದ್ಯಕ್ಕೆ ಮತ್ತೆ ಕೆಲವು ದಿನ ಸ್ಯಾಂಡಲ್ ವುಡ್ ಗೆ ಸಂಕಷ್ಟ ತಪ್ಪೋ ಸಾಧ್ಯತೆ ಕಡಿಮೆ ಇದೆ ಎನಿಸುತ್ತದೆ.

ಕೊರೊನಾ ಭೀತಿಗೆ ಪದೇ ಪದೇ ಚಿತ್ರಗಳ ರಿಲೀಸ್ ಪ್ಲಾನ್ ಬದಲಾಗ್ತಿದೆ.ಇದೊಂದೇ ಅಲ್ಲ,ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳ ಸ್ಥಿತಿಯೂ ಹೀಗೆಯೇ ಆಗಿದೆ.

Spread the love
Leave A Reply

Your email address will not be published.

Flash News