ಸ್ವಾತಂತ್ರ್ಯೋತ್ಸವದ ಮೇಲೆ ಉಗ್ರರ ಕರಿನೆರಳು-ಹೈ ಅಲರ್ಟ್-ಎಲ್ಲೆಡೆ ಶೋಧ ಕಾರ್ಯ..
ಶ್ವಾನ ದಳ,ಬಾಂಬ್ ಸ್ಕ್ವಾಂಡ್ ನಿಂದ ಮೆಜೆಸ್ಟಿಕ್ ನಲ್ಲಿ ತಪಾಸಣೆ,ಮೆಟ್ರೋ ನಿಲ್ದಾಣ,ರೈಲು ನಿಲ್ದಾಣ,ಬಸ್ ನಿಲ್ದಾಣದಲ್ಲಿ ಪೊಲೀಸರ ಪರಿಶೀಲನೆ.
ಬೆಂಗಳೂರು:ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಮೇಲೆ ಉಗ್ರರ ಕರಿನೆರಳು ಬಿದ್ದಿರೋ ಹಿನ್ನಲೆಯಲ್ಲಿ ದೇಶದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.ಇದರ ಭಾಗವಾಗಿ ರಾಜ್ಯದಲ್ಲೂ ಹೈಅಲರ್ಟ್ ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಹೈ ಅಲರ್ಟ್ ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ ತಪಾಸಣೆ ಶುರುವಾಗಿದೆ.ಬೆಂಗಳೂರಿನ ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸ್ ತಪಾಸಣೆ ಮುಂದುವರೆದಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆದಿದ್ದು,ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಶ್ವಾನ ದಳ,ಬಾಂಬ್ ಸ್ಕ್ವಾಂಡ್ ನಿಂದ ಮೆಜೆಸ್ಟಿಕ್ ನಲ್ಲಿ ತಪಾಸಣೆ, ಪರಿಶೀಲನೆ ನಡೆದಿದ್ದು, ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ವೇಳೆ ಭಯೋತ್ಪಾದಕರು ವಿದ್ವಂಸಕ ಕೃತ್ಯ ಎಸಗೋ ಸಾಧ್ಯತೆ ಇರೋದ್ರಿಂದ
ಮೆಟ್ರೋ ನಿಲ್ದಾಣ,ರೈಲು ನಿಲ್ದಾಣ,ಬಸ್ ನಿಲ್ದಾಣದಲ್ಲಿ ಪಶ್ಚಿಮ ವಿಭಾಗ ಪೊಲೀಸರು ತಪಾಸಣೆ ನಡೆಸಲಿದ್ದಾರೆ.
ಆಯ ಕಟ್ಟಿನ ಪ್ರದೇಶಗಳಾದ ಮಾಲ್ ,ಪ್ರಮುಖ ಬಸ್ ನಿಲ್ದಾಣ,ಜನ ಸೇರುವ ಕಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.ಹೆಚ್ಚಿನ ಜನಸಂಖ್ಯೆ ಸೇರುವ ಕಡೆ ಬಾಂಬ್ ಸ್ಕ್ವಾಂಡ್ ನಿಂದ ಪರಿಶೀಲನೆ ಹಾಗೂ
ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.