ಬೆಂಗಳೂರು/ಹಾಸನ:ಯುವತಿ ಜತೆ ಆತ್ಮೀಯವಾಗಿದ್ದ ವೇಳೆ ವೀಡಿಯೋ ಮಾಡಿಟ್ಟುಕೊಂಡು, ಹಣಕ್ಕಾಗಿ ಹೆದರಿಸುತ್ತಿದ್ದ ಕೆಲ ಎಳಸುಗಳ ಬ್ಲ್ಯಾಕ್ ಮೇಲ್ ಗೆ ಯುವಕನ ಪ್ರಾಣ ಹೋಗಿದೆ.
ಹಾಸನ ಜಿಲ್ಲೆ ಅರಸೀಕೆರೆ ಮೂಲದ ಸುಪ್ರಿತ್ ಬೆಂಗಳೂರಿಗೆ ಬಂದು ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್ ನಲ್ಲಿ ಉಸಿರು ಚೆಲ್ಲಿದ್ದಾನೆ.
ಅರಸೀಕೆರೆ ಯಲ್ಲಿ ಯುವತಿಯನ್ನು ಪ್ರೀತಿಸುತ್ತಿದ್ದ ಸುಪ್ರಿತ್,ಆ ಯುವತಿ ಜೊತೆಗೆ ಅರಸೀಕೆರೆ ಸುತ್ತಾಡಿದ್ದ ಹಾಗೂ ಆತ್ಮೀಯವಾಗಿದ್ದ ಫೋಟೋ,ವೀಡಿಯೋವನ್ನು ಕೆಲವು ಅಪ್ರಾಪ್ತರು ಕದ್ದುಮುಚ್ಚಿ ಸೆರೆ ಹಿಡಿದಿದ್ದರಂತೆ.
ಈ ಫೋಟೋ ವಿಡಿಯೋವನ್ನೇ ಸುಪ್ರೀತ್ ಗೆ ತೋರಿಸಿ ಬೆದರಿಸಿ ಹಣ ವಸೂಲಿಗೆ ಶುರುವಿಟ್ಟುಕೊಂಡಿದ್ದರಂತೆ.
ಹಣ ಬೇಕೆಂದಾಗಲೆಲ್ಲಾ ಫೋಟೋ,ವೀಡಿಯೋ ತೋರಿಸಿ ಎರಡು ಸಾವಿರ , ಮೂರು ಸಾವಿರಂತೆ ಹಣ ವಸೂಲು ಮಾಡಿದ್ದರು.
ಸತತ ಮೂರು ತಿಂಗಳು ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಎಳಸುಗಳು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರಂತೆ.
ಬ್ಲಾಕ್ ಮೇಲ್ ಗೆ ಭಯ ಪಟ್ಟು ಬೆಂಗಳೂರಿನ ಲಾಡ್ಜ್ ಗೆ ಬಂದು ಡೆತ್ ಬರೆದಿಟ್ಟು ಪ್ರೀತಮ್ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಸಂಬಂಧ ಬ್ಲಾಕ್ ಮೇಲ್ ಮಾಡ್ತಿದ್ದ ನಾಲ್ವರು ಅಪ್ರಾಪ್ತರನ್ನು ಬಂಧಿಸಲಾಗಿದೆ.