ಇಲ್ಲಿ ಜೀವಂತ “ಹಾವು”ಗಳ‌‌ ಮೆರವಣಿಗೆಯೇ ನಡೆಯುತ್ತೆ…ಆದ್ರೆ ಯಾರಿಗೂ ಕಚ್ಚಿರುವ ಇತಿಹಾಸವೇ ಇಲ್ಲ…

ಜೀವಂತ ಹಾವುಗಳ ಮೆರವಣಿಗೆ ನಡೆಯೋ‌ ಭಾರತದ ಏಕೈಕ ಗ್ರಾಮ ಬತ್ತಿಸ್ಸ ಶಿರೋಳ್..

0

ಮಹಾರಾಷ್ಟ್ರ: ಇದನ್ನು ನಂಬಬೇಕೋ…ಬಿಡಬೇಕೋ ಗೊತ್ತಾಗ್ತಿಲ್ಲ..ಸತ್ಯನೋ..ಸುಳ್ಳೋ‌ ಎನ್ನೋದು ತಿಳೀತಿಲ್ಲ..ಆದ್ರೆ ಇದರ ಇತಿಹಾಸ ಗಮನಿಸಿದಾಗ ಮಾತ್ರ ಉಸಿರು ಒಮ್ಮೆ ಬಿಗಿ ಹಿಡಿಯೋದಂತೂ ಸತ್ಯ..

ಹಾವನ್ನು ದೈವ ಎಂದು ಪೂಜಿಸೋ ನಾವೇ,ಎದುರಿಗೆ ಕಂಡ್ರೆ ಬೆಚ್ಚಿಬೀಳ್ತೆವೆ..ಅಂತದ್ದರಲ್ಲಿ ಹಾವುಗಳ ಮೆರವಣಿಗೆಯೊಂದು ನಡೆಯುತ್ತೆ..ಅಲ್ಲಿ ಹಾವುಗಳನ್ನು ಹಿಡಿದು ಜನ ಸಂಭ್ರಮಿಸ್ತಾರೆಂದ್ರೆ,ಊಹಿಸಿಕೊಳ್ಳಿ ಪರಿಸ್ಥಿತಿ ಹೇಗಿರಬಹುದೆಂದು..

ಅಂದ್ಹಾಗೆ ಈ ಸ್ಥಳ ಇರೋದು ಪಕ್ಕದ ಮಹಾರಾಷ್ಟ್ರ ದ ಲಾತುರ್ ನಲ್ಲಿಯಂತೆ.ಆ ಜಿಲ್ಲೆಯ ಬತ್ತಿಸ್ಸ ಶಿರೋಳ್ ಎಂಬ ಗ್ರಾಮದಲ್ಲಿ ಪ್ರತಿ ನಾಗ ಪಂಚಮಿಯಂದು ಜನ ಜೀವಂತ ನಾಗರ ಹಾವುಗಳನ್ನ ಹಿಡಿದು ತಂದು ಪೂಜಿಸಿ ಮರಳಿ ಬಿಟ್ಟು ಬರುತ್ತಾರಂತೆ.
ಇನ್ನೊಂದು ವಿಚಿತ್ರ ಎಂದ್ರೆ,ಇಲ್ಲಿ ಈ ವರೆಗೂ ಇತಿಹಾಸದಲ್ಲಿ ಪೂಜೆ ದಿನ ಹಾವು ಯಾರಿಗೂ ಕಚ್ಚಿದ ಉದಾಹರಣೆ ಇಲ್ಲ.

Spread the love
Leave A Reply

Your email address will not be published.

Flash News