ಬೆಂಗಳೂರು:ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಿಂದೆಂದಿಗಿಂತ ಸ್ಪೆಷಲ್..ಇದಕ್ಕೆ ಕಾರಣ 75 ವರ್ಷ.ಬ್ರಿಟಿಷರ ದಾಸ್ಯದ ಸಂಕೋಲೆ ಕಳಚಿಕೊಂಡ ಸ್ವಾತಂತ್ರ್ಯೋತ್ಸವಕ್ಕೆ 75 ವರ್ಷದ ಸಂಭ್ರಮ.
ಈ ವಿಶೇಷತೆಯ ಹಿನ್ನಲೆಯಲ್ಲಿ ಸರ್ಕಾರಿ ಕಟ್ಟಡಗಳನ್ನು ಆಲಂಕೃತಗೊಳಿಸಿ ಅದನ್ನು ನೋಡಿ ಸಂಭ್ರಮಿಸುವ ವಿಶೇಷ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.
ಸ್ವಾತಂತ್ರ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸುವ ಪ್ರಯತ್ನ ಎಲ್ಲಡೆ ನಡೆಯುತ್ತಲೇ ಇದೆ.ಅದಕ್ಕೆ ಸಾಕ್ಷಿಪ್ರಜ್ಞೆಯಂತಿದೆ ನಮ್ಮ ಹೆಮ್ಮೆಯ ವಿಧಾನಸೌಧ.
ಈ ಅಮೃತಮಹೋತ್ಸವದ ಸಂಭ್ರಮದಲ್ಲಿ ತ್ರಿವರ್ಣಗಳ ಬೆಳಕನ್ನು ವಿಧಾನಸೌಧಕ್ಕೆ ಚೆಲ್ಲಿ ಅದನ್ನು ಅತ್ಯಾಕರ್ಷಕಗೊಳಿಸಲಾಗಿದೆ.