ಬೆಂಗಳೂರು: ಹೀಗೆ ಶುರುವಾಗುತ್ತೆ ಏಷಿಯಾ ನೆಟ್ ಸುವರ್ಣ ನ್ಯೂಸ್ ಚಾನೆಲ್ ವಿರುದ್ಧ ದಿ ಫೈಲ್ ಸುದ್ದಿ ಸಂಸ್ಥೆಯ ಆಕ್ರೋಶದ ಲಹರಿ.. .
ಸುದ್ದಿ ಕಳ್ಳರಿದ್ದಾರೆ ಎಚ್ಚರಿಕೆ…
‘ದಿ ಫೈಲ್’ ತನಿಖಾ ತಂಡ ಕಳೆದ ಒಂದು ವಾರದ ಹಿಂದೆ ಬಹುಕೋಟಿ ವಂಚಕ ಯುವರಾಜಸ್ವಾಮಿ ಎಂಬಾತನ ವಿರುದ್ಧ ಸಿಸಿಬಿ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಆಧರಿಸಿ 10 ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಆದರೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿಯು ಫೈಲ್ ಮೊದಲೇ ಪ್ರಕಟಿಸಿದ್ದ 10 ವರದಿಗಳನ್ನು ಇದೀಗ ಮಹಾ ಎಕ್ಸ್ಕ್ಲೂಸಿವ್ ಎಂದು ಅರಚಿಕೊಳ್ಳುತ್ತ ಪ್ರಸಾರ ಮಾಡಿದೆ.
ಬೇರೊಂದು ಮಾಧ್ಯಮದಲ್ಲಿ ಮೊದಲೇ ಪ್ರಕಟವಾದ ವಿಶೇಷ ವರದಿಗಳನ್ನು ಕದ್ದು ತಮ್ಮದೇ ಮಹಾ ಎಕ್ಸ್ಕ್ಲೂಸಿವ್ ಎಂದು ಹಾಕಿಕೊಳ್ಳುವುದನ್ನು ನೋಡಿದರೆ ಅವರು ವೃತ್ತಿಪರರು ಎಂಬ ಭ್ರಮೆ ಯಾರಿಗೂ ಇರಲಿಲ್ಲ. ಆದರೆ ಇಂತಹ ಜೇಬುಗಳ್ಳತನಕ್ಕಿಳಿಯುತ್ತಾರೆ ಎಂಬುದನ್ನು ಯಾರೂ ಅಪೇಕ್ಷಿಸಿರಲಿಲ್ಲ.
ಏಕ ವ್ಯಕ್ತಿ ನಡೆಸುವ ‘ದಿ ಫೈಲ್’ ಸಂಸ್ಥೆಯಿಂದ ವಿಶೇಷ ವರದಿಗಳನ್ನು, ನೂರಾರು ಜನರು ಕೆಲಸ ಮಾಡುವ ಮತ್ತು ಲಕ್ಷಾಂತರ ರು. ಹೂಡಿಕೆ ಮಾಡಿರುವ ಸಂಸ್ಥೆ ಕದಿಯುವುದನ್ನು ನೋಡಿದರೆ ಇದು ನಮಗೆ ಒಂದು ತರದಲ್ಲಿ ನಮ್ಮ ವೃತ್ತಿ ಪರತೆ ಮತ್ತು ಪತ್ರಿಕೋದ್ಯಮದ ಬಗ್ಗೆ ಸಮಾಧಾನ ಮತ್ತು ವಿಶ್ವಾಸವಿದೆ.

ಯುವರಾಜಸ್ವಾಮಿ ವಿರುದ್ಧ ಸಲ್ಲಿಸಿರುವ ದೋಷಾರೋಪಣೆ ಪಟ್ಟಿ ಆಧರಿಸಿ ‘ದಿ ಫೈಲ್’ ಪ್ರಕಟಿಸಿದ 10 ವರದಿಗಳ ಕೊಂಡಿ ಇಲ್ಲಿವೆ.
2021ರ ಜುಲೈ 28ರಂದು ಮೊದಲ ವರದಿ ಪ್ರಕಟವಾಗಿತ್ತು.
ಆಮಿಷ; ಜಸ್ಟೀಸ್ ಇಂದ್ರಕಲಾ ಸೇರಿ 5 ಮಂದಿಗೆ ಯುವರಾಜಸ್ವಾಮಿ ವಂಚಿಸಿದ್ದು 18.32 ಕೋಟಿ
1. https://the-file.in/2021/07/governance/8147/
ವಂಚಕ ಯುವರಾಜಸ್ವಾಮಿ ಮನೆಯಲ್ಲಿದ್ದವು ನಿರಾಣಿ ಹೆಸರಿನ ಲೆಟರ್ಹೆಡ್ಗಳು; ಕಲ್ಪವೃಕ್ಷದ ಗುಟ್ಟೇನು?
2. https://the-file.in/2021/07/governance/8163/
ರಾಜ್ಯಪಾಲರಾಗಲು ಬಯಸಿದ್ದ ಇಂದ್ರಕಲಾರಿಗೆ ರಾಕ್ಲೈನ್ ವೆಂಕಟೇಶ್ರಿಂದಲೂ 50 ಲಕ್ಷ ನೆರವು
3. https://the-file.in/2021/07/governance/8186/
ಯುವರಾಜಸ್ವಾಮಿ ಬಳಿ ಕತ್ತಿ, ಶ್ರೀರಾಮುಲು, ಪ್ರಮೋದ್ ಮಧ್ವರಾಜ್ ಬಯೋಡೇಟಾ ಪತ್ತೆ
4. https://the-file.in/2021/07/governance/8207/
ಯುವರಾಜಸ್ವಾಮಿಯಿಂದ ಶ್ರೀರಾಮುಲು ಖಾತೆಗೆ 18 ಲಕ್ಷ ರು. ವರ್ಗಾವಣೆ
5. https://the-file.in/2021/07/governance/8225/
ಇಂದ್ರಕಲಾ ಪ್ರಕರಣ; 2ನೇ ಆರೋಪಿ ಪಾಪಯ್ಯರನ್ನು ದೋಷಾರೋಪಣೆಯಲ್ಲಿ ಕೈ ಬಿಟ್ಟ ತನಿಖಾ ತಂಡ
6. https://the-file.in/2021/08/governance/8240/
ಪ್ರಮೋದ್ ಮಧ್ವರಾಜ್ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು. ಸಂದಾಯ
7. https://the-file.in/2021/08/governance/8246/ಮಾಸ್ಟರ್ ಬೆಡ್ ರೂಂ ರಹಸ್ಯ; ವಾರ್ಡ್ರೂಬ್ನಲ್ಲಿದ್ದವು 90 ಕೋಟಿ ರು. ನಮೂದಿಸಿದ್ದ ಚೆಕ್ ಹಾಳೆಗಳು
8. https://the-file.in/2021/08/governance/8260/\
ಆರ್ಎಸ್ಎಸ್ ಒಡನಾಟದ ಬಗ್ಗೆ ಬಾಯ್ಬಿಟ್ಟ ಯುವರಾಜ್; ಹೇಳಿಕೆಯಲ್ಲಿದೆ ಹೆಸರುಗಳ ಪಟ್ಟಿ
9. https://the-file.in/2021/08/governance/8274/
ಯುವರಾಜಸ್ವಾಮಿ ಹೆಸರಿಗೆ ಡಿ ಎಸ್ ವೀರಯ್ಯರಿಂದಲೂ 50 ಲಕ್ಷ ಮೊತ್ತದ ಚೆಕ್
10. https://the-file.in/2021/08/governance/8287/
ನಾವು ಸ್ವತಂತ್ರವಾಗಿ ಉಳಿಯುವುದಕ್ಕೆ ಮತ್ತು ಇಂತಹ ದೊಡ್ಡ ಮಾಧ್ಯಮಗಳ ಭೋಳೆತನಕ್ಕೆ ಎದುರು ನಿಲ್ಲಬೇಕಾದರೆ ನಿಮ್ಮ ದೇಣಿಗೆ ಅತ್ಯಂತ ಸಹಕಾರಿ ಮತ್ತು ಮುಖ್ಯವೂ ಹೌದು.
ಸುವರ್ಣ ವಾಹಿನಿಯಲ್ಲಿ ಹಲವಾರು ವರ್ಷ ಕೆಲಸ ಮಾಡಿ ಅಲ್ಲಿಂದ ಹೊರಬಂದು ನಂತರ ತನ್ನದೇ ಸ್ವತಂತ್ರ ಸುದ್ದಿಸಂಸ್ಥೆ ಮಾಡಿಕೊಂಡು ಕೆಲಸ ಮಾಡುತ್ತಿರುವ ಮಹಾಂತೇಶ್ ಅವರ ಸಾಕಷ್ಟು ಸುದ್ದಿಗಳು,ಸಾಕಷ್ಟು ಸಂಚಲನ ಮೂಡಿಸಿರುವುದು ಕೂಡ ಅಷ್ಟೇ ಸತ್ಯ..
ಆದ್ರೆ ಚಾರ್ಜ್ ಶೀಟ್ ಎನ್ನುವುದು ಪಬ್ಲಿಕ್ ಡಾಕ್ಯು ಮೆಂಟ್ ಆಗಿರೋದ್ರಿಂದ ಅದನ್ನು ಯಾವ ಮಾದ್ಯಮಗಳು ಬೇಕಾದ್ರೂ ಪಬ್ಲಿಷ್ ಮಾಡಬಹುದಾಗಿರುವುದರಿಂದ ದಿ ಫೈಲ್ ಆರೋಪ ಸರಿಯಲ್ಲ ಎನ್ನುವುದು ಸಾಕಷ್ಟು ಹಿರಿಯ ಪತ್ರಕರ್ತರ ಅಭಿಪ್ರಾಯ ಕೂಡ.