ಹಲ್ಲು ಸೆಟ್ಟು ಮುರಿದಿದ್ದಕ್ಕೆ ಬಾಲಕಿಯನ್ನೇ ಕೊಂದ,..ಹೊಲದಲ್ಲಿ ಪೈಶಾಚಿಕ ಕೃತ್ಯ ಎಸಗಿದ ಕಿರಾತಕ

ಥೂ ಇವನ್ ಜನ್ಮಕ್ಕೆ.ಆ ಮಗುವನ್ನು ಇಂಥಾ ಕ್ಷುಲ್ಲಕ ಕಾರಣಕ್ಕೆ ಕೊಲ್ಲೋದಾ..?ಕಂದಮ್ಮನ ಕೊಲೆಗೆ ಬೆಚ್ಚಿಬಿದ್ದ ವಿಜಯಪುರ

0

ವಿಜಯಪುರ: ಪಾಪ..ಅದಕ್ಕೆ ಏನೂ ತಿಳಿಯದ ವಯಸ್ಸು..ಅದನ್ನು ಕೊಲ್ಲುವಂಥ ಮನಸ್ಸಾದ್ರೂ ಏಕೆ ಬಂತೋ ಆ ಪಾಪಿಗೆ..ಅದು ತನ್ನ ತಾಯಿ ಹಲ್ಲುಸೆಟ್ಟನ್ನು ಮಗು ಮುರೀತೆನ್ನುವ ಕಾರಣಕ್ಕೆ…ಅದಕ್ಕಾಗಿ ಆ ಬಾಲಕಿಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಕೊಂದುಬಿಟ್ಟಿದ್ದಾನೆ ಪಾಪಾತ್ಮ.

ಅಂದ್ಹಾಗೆ ಈ ಘಟನೆ ನಡೆದಿರುವುದು ವಿಜಯಪುರದಲ್ಲಿ.ಇಲ್ಲಿನ ಇಂಡಿ ತಾಲೂಕಿನಲ್ಲಿ ನಡೆದಿರುವ ಈ ಘಟನೆಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗ್ತಿದೆ.ಬೊಳೆಗಾಂವ್ ಗ್ರಾಮದಲ್ಲಿ ಆಗಸ್ಟ್ 9 ರಂದು ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾ ಗಿದ್ದಳು.ಆಕೆಯ ಹುಡುಕಾಟಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ರೂ ಫಲ ನೀಡಿರಲಿಲ್ಲ.ಈ ಬಗ್ಗೆ ಬಾಲಕಿ ಮನೆಯವ್ರು ಪೊಲೀಸ್ ಗೆ ದೂರು ಕೊಟ್ಟಿದ್ದರು.ತನಿಖೆ ಪ್ರಾರಂಭವಾಗಿ ಬಂದುನಿಂತಿದ್ದು ಕೊಲೆಗಾರ ಬಾಬುಗೌಡ ಬಿರಾದಾರ್ ಬಳಿ.ಆತನನ್ನು ಅನುಮಾನದ ಮೇಲೆ ಕೊಂಡೊಯ್ದು ರಿವೀಟ್ ಎತ್ತಿದಾಗ ಆತ ಬಾಯ್ಬಿಟ್ಟ ವಿಷಯ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಮಾಲವ್ವ( ಹೆಸರು ಬದಲಾಯಿಸಲಾಗಿದೆ)  ಆರು ವರ್ಷದ ಬಾಲಕಿ.ಈ ಬಾಬುಗೌಡನ ಮನೆ ಪಕ್ಕದಲ್ಲೇ ತನ್ನ ತಂದೆ ತಾಯಿ ಜತೆ ವಾಸವಾಗಿದ್ದಳು.ಮನೆ ಬಳಿ ಆಟವಾಡುವಾಗ ಬಾಬುಗೌಡನ ತಾಯಿಯ ಹಲ್ಲುಸೆಟ್ಟನ್ನು ಗೊತ್ತಿಲ್ಲದೆ ಮುರಿದಾಕಿದ್ದಾಳೆ.ಈ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದೆ.ಸ್ವಲ್ಪ ಗಂಟೆಗಳ ನಡುವೆ ತಣ್ಣಗೂ ಆಗಿದೆ. ಆ ಘಟನೆ ನಡೆದ ಮಾರನೇ ಮಾಲವ್ವ ನಾಪತ್ತೆಯಾಗಿದ್ದಾಳೆ.ಎರಡು ದಿನಗಳ ನಂತರ ಹೊಲದಲ್ಲಿ ಆ ಕೂಸು ಶವವಾಗಿ ಪತ್ತೆಯಾಗಿದೆ.ಪ್ರಕರಣದ ಬಗ್ಗೆ ಕೂಸಿನ ಪೋಷಕರು ದೂರು ಕೊಟ್ಟಿದ್ದಾರೆ. ತನಿಖೆ ನಡೆಸಿದ ಹೊರ್ತಿ ಠಾಣೆ ಪೊಲೀಸರು ಕೊಲೆಯ ರಹಸ್ಯ ಬೇಧಿಸಿದ್ದಾರೆ.

ಹಲ್ ಸೆಟ್ಟಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯ ಸುತ್ತ ತನಿಖೆ ಶುರುಮಾಡಿದ ಪೊಲೀಸರು ಬಾಬುಗೌಡನನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.ಗ್ರಾಮದ ಹನುಮಂತ ದೇವರ ದೇವಸ್ಥಾನದ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಹೊಲಕ್ಕೆ ಕರೆದುಕೊಂಡು ಹೋಗಿ, ಕೈ ಕಾಲು ಕಟ್ಟಿ ಕೊಲೆ ಮಾಡಿ ಸಮೀಪದ ಹಳ್ಳದಲ್ಲಿ ಎಸೆದು ಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹಲ್ಲು ಸೆಟ್ಟಿನ ದ್ವೇಷಕ್ಕೆ ನಡೆದ ಕೊಲೆಗು ಮುನ್ನ ಬಾಲಕಿ ಮೇಲೆ ಪಾತಕಿ ಬಿರಾದಾರ್ ಅತ್ಯಾಚಾರ ಏನಾದ್ರೂ ಎಸಗಿದ್ದಾನಾ ಎನ್ನುವುದರ ಪತ್ತೆ ಕಾರ್ಯದಲ್ಲೂ ಪೊಲೀಸರು ತೊಡಗಿದ್ದಾರೆ.

Spread the love
Leave A Reply

Your email address will not be published.

Flash News