ಬೆಂಗಳೂರು: ಇಳಿವಯಸ್ಸಿನ ಜೀವಗಳಿಗೆ ನೆಮ್ಮದಿಯ ತಾಣಗಳಾಗಬೇಕಿರುವ ವೃದ್ಧಾಶ್ರಮಗಳು ಆ ಜೀವಗಳ ಉಸಿರನ್ನೇ ನಿಲ್ಲಿಸುವ ಕೆಲಸ ಮಾಡುತ್ತಿವೆಯಾ..ವೃದ್ದಾಶ್ರಮದಲ್ಲಿ ಅಲ್ಲಿನ ಕಿರಾತಕರು ಕೊಡುವ ಟಾರ್ಚರ್ ಗೆ ಕೌಟುಂಬಿಕವಾಗಿ ನೊಂದ ಜೀವಗಳು ಮತ್ತಷ್ಟು ಹಿಂಸೆ ಅನುಭವಿಸುತ್ತಿವೆಯೇ..?
ಆದ್ರೆ ಇಲ್ಲೊಂದು ವೃದ್ಧಾಶ್ರಮದ ಮೇಲೆ ಕೇಳಿ ಬಂದಿರುವ ಕೊಲೆ ಆರೋಪ ಮಾತ್ರ ವೃದ್ಧಾಶ್ರಮಕ್ಕೆ ಹಿರಿಯರನ್ನು ಸೇರಿಸೊಕ್ಕೆ ತುದಿಗಾಲಲ್ಲಿ ನಿಂತಿರುವ ಅದೆಷ್ಟೋ ಪಾಪಿ ಮಕ್ಕಳಿಗೆ ಎಚ್ಚರಿಕೆಯ ಕರೆ ಗಂಟೆಯಾಗಿರುವುದು ಮಾತ್ರ ಸತ್ಯ.
ಈ ವೃದ್ಧಾಶ್ರಮದ ಹೆಸರು ಉಸುರು,ಹೆಸರಿನ್ನೊಡಕ್ಕೂ ಬಾರದ ಈ ವೃದ್ಧಾಶ್ರಮದ ಮಾಲೀಕನಿಗೆ ಅದ್ಯಾವ ಮಹಾನುಭವಾ ಉಸುರು ಎಂದು ಹೆಸರಿಡುವ ಐಡ್ಯಾ ಕೊಟ್ಟನೋ ಗೊತ್ತಿಲ್ಲ..ಹೋಗ್ಲಿ ಬಿಡಿ,ಆದ್ರೆ ಇಲ್ಲಿ ನಾವ್ ಹೇಳೊಕ್ಕೆ ಹೊರಟಿರುವ ಸ್ಟೋರಿಯಲ್ಲಿ ನಡೆದಿರುವ ಘಟನೆ ಮಾತ್ರ ವೃದ್ಧಜೀವಗಳ ಬದುಕಿಗೆ ಗ್ಯಾರಂಟಿ ಇರದ ಕರಾಳ ಸತ್ಯವನ್ನು ಒತ್ತಿ ಹೇಳುವಂತಿದೆ.
ಯಶವಂತಪುರದ ಗೊರಗುಂಟೆ ಪಾಳ್ಯದಲ್ಲಿ ಉಸುರು ಎನ್ನುವ ವೃದ್ಧಾಶ್ರಮವಿದೆ.ಅನೇಕ ಹಿರಿ ಜೀವಗಳನ್ನು ಅಲ್ಲಿ ಇಟ್ಕೊಂಡು ಸಾಕಲಾಗ್ತಿದೆ.ತಿಂಗಳಿಗೆ ಸಂಬಂಧಿಸಿದವರಿಂದ ಹತ್ತಿಪ್ಪತ್ತು ಸಾವಿರ ಡೊನೇಷನ್ ಪಡೆದು ವೃದ್ಧ ಜೀವಗಳ ಕಾಳಜಿ ಮಾಡಬೇಕಿರುವ ಈ ವೃದ್ಧಾಶ್ರಮ ಮಾಡಿದೆ ಎನ್ನಲಾಗುತ್ತಿರುವ ಕೆಲಸ ಮಾತ್ರ ನಾಚಿಕೆಗೇಡಿನದು,.
ಕಮಲಮ್ಮ ಎನ್ನುವ ವೃದ್ದ ಮಹಿಳೆಯನ್ನು ಅನೇಕ ತಿಂಗಳ ಹಿಂದೆ ಪಾಪಿ ಮಕ್ಕಳು ಈ ಉಸುರು ವೃದ್ಧಾಶ್ರಮಕ್ಕೆ ತಂದುಬಿಟ್ಟಿದ್ದಾರೆ.ಹಾಗೆ ಬಿಟ್ಟವರೇ ತಿಂಗಳಿಗೊಂದಿಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದರು.ಆಕೆ ಬದುಕಿದ್ದಾಳೋ..ಸತ್ತಿದ್ದಾಳೋ..ಆಕೆಯ ಕಾಳಜಿ-ಆರೈಕೆ ಹೇಗೆ ಮಾಡಲಾಗ್ತಿದೆ ಎನ್ನುವುದರ ಬಗ್ಗೆ ಸಣ್ಣ ವಿಚಾರಣೆಯನ್ನು ಮಾಡುತ್ತಿರಲಿಲ್ಲವಂತೆ ಮಕ್ಕಳು.ಇದನ್ನು ಕಮಲಮ್ಮ ಅಲ್ಲಿದ್ದ ತನ್ನ ಸಹವರ್ತಿಗಳ ಬಳಿ ಹೇಳಿಕೊಂಡು ಅತ್ತಿದ್ದುಂಟಂತೆ.
ಕಮಲಮ್ಮಳನ್ನು ವೃದ್ದಾಶ್ರಮದ ಡಾರ್ಕ್ ರೂಂನಲ್ಲಿರಿಸಿ ಅಲ್ಲಿನ ಸಿಬ್ಬಂದಿ ಟಾರ್ಚರ್ ಕೊಡುತ್ತಿದ್ದರೇನೋ ಎನ್ನುವ ಶಂಕೆ ವ್ಯಕ್ತವಾಗಿದೆ.ಟಾರ್ಚರ್ ಕೊಟ್ಟು ಕೊಟ್ಟು ಕೃಶವಾಗಿದ್ದ ಆಕೆಯ ಶರೀರವನ್ನು ಅನ್ನಾಹಾರ ನೀಡದೆ ರೂಂನ ಮೂಲೆಯಲ್ಲಿ ಬಿಸಾಡಿರಬಹುದೇನೋ.. ಅನೇಕ ದಿನಗಳವರೆಗೆ ಅನ್ನಾಹಾರಕ್ಕಾಗಿ ಹಪಾಹಪಿಸಿ ಸೋತ ಕಮಲಮ್ಮಳ ಜೀವ ನಿನ್ನೆ ಇಹವನ್ನು ತ್ಯಜಿಸಿರುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.
ಉಸುರು ವೃದ್ದಾಶ್ರಮದ ಡಾರ್ಕ್ ರೂಂ ನಲ್ಲಿ ಕಮಲಮ್ಮಳಂತೆ ಇನ್ನು ಮೂರ್ನಾಲ್ಕು ಜನರನ್ನು ಇಟ್ಟು ಕಿರುಕುಳ ನೀಡುತ್ತಿರುವ ಸಾಧ್ಯತೆಗಳ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಮಲಮ್ಮಳನ್ನು ಕೊಂದ..! ಬಳಿಕ ಅದನ್ನು ಮುಚ್ಚಿ ಹಾಕೊಕ್ಕೆ ಬೇರೊಂದು ರೂಂನಲ್ಲಿಟ್ಟು ಮಕ್ಕಳನ್ನು ಕರೆಯಿಸಿದ್ದಾರೆ.ಹಾಗೆ ಬಂದ ಪಾಪ ಮಕ್ಕಳು ಅಮ್ಮನ ಎದುರಿಗೆ ಕಣ್ಣೀರು ಹಾಕಿದ್ದಾರೆ.ಆದರೇನು ಪ್ರಯೋಜನ ಇರುವಾಗ ಚೆನ್ನಾಗಿ ನೋಡಿಕೊಳ್ಳೊಕ್ಕೆ ಯೋಗ್ಯತೆ ಇಲ್ಲದ ಪಾಪಿಗಳ ಕಾರಣದಿಂದಲ್ಲವೇ ವೃದ್ದಾಶ್ರಮದಲ್ಲಿ ಆ ವೃದ್ಧ ಜೀವ ಕೊಲೆಯಾಗಿ ಹೋಗಿದ್ದು.
ಕೊಲೆಯನ್ನು ಮುಚ್ಚಿ ಹಾಕೊಕ್ಕೆ ಏನೆಲ್ಲಾ ಪ್ರಯತ್ನ ನಡೆಸಿದ್ರೂ ಎಸಿಪಿ ಅರುಣ್ ವಿ ಗೌಡ ಮತ್ತು ಇನ್ಸ್ಪೆಕ್ಟರ್ ಸುರೇಶ್ ವಹಿಸಿದ ಮುತುವರ್ಜಿಯಿಂದ ರಹಸ್ಯ ಬಯಲಾಗಿದೆ.ಕಮಲಮ್ಮ ಅನ್ಯ ಕಾರಣಗಳಿಗೆ ಸತ್ತಿದ್ದರೆ ಆಕೆ ದೇಹ-ಮುಖದ ಮೇಲೆ ಗಾಯದ ಗುರುತುಗಳು ಹೇಗೆ ಆಗುತ್ತಿದ್ದವು ಎನ್ನುವ ಸಂಗತಿ ಮೇಲೆ ಪೊಲೀಸ್ ತನಿಖೆ ಮುಂದುವರೆದಿದೆ.
ಅನುಮಾನಗಳ ಹಿನ್ನಲೆಯಲ್ಲಿ ವೃದ್ದಾಶ್ರಮ ಮಾಲಿಕ ಯೋಗೇಶ್ ಸೇರಿದಂತೆ ವಾರ್ಡನ್ ಭಾಸ್ಕರ್. ಮಂಜು, ಜಾನ್ ಮತ್ತು ಹಲ್ಲೆ ನಡೆಸಿದ್ದ ವಸಂತನನ್ನು ಬಂಧಿಸಲಾಗಿದೆ. ಆರ್ ಎಂಸಿಯಾರ್ಡ್ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದೆ.