ಜಾತಿಗಣತಿ ಸಿದ್ದರಾಮಯ್ಯರ “ಸ್ವಾರ್ಥದ ಕೂಸು”, ವರದಿಯನ್ನು ಕೂತು ಸಿದ್ಧಪಡಿಸಿದ ಮಹಾನುಭಾವ ಅವ್ರೇ..-ಸಿದ್ಧು ವಿರುದ್ಧ ಎಚ್ಡಿಕೆ ಗರಂ..

ಮಾಜಿ ಸಿಎಂಗಳ ನಡುವೆ ಆರೋಪ-ಪ್ರತ್ಯಾರೋಪಗಳ ಕೆಸರೆರೆಚಾಟಕ್ಕೆ ಅಖಾಡ ಸಿದ್ಧಮಾಡಿದ ಜಾತಿಗಣತಿ ವರದಿ ವಿವಾದ

0

ಬೆಂಗಳೂರು:ಜಾತಿಗಣತಿ ವರದಿಯನ್ನ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ ಡಿ ಕೆ ಸ್ವೀಕರಿಸಲಿಲ್ಲ ಎಂಬ ಸಿದ್ದು ಹೇಳಿಕೆ ಮಾಜಿ ಸಿಎಂ ಕುಮಾರಸ್ವಾಮಿಯನ್ನು ಕೆಂಡಾಮಂಡಲಗೊಳಿಸಿದೆ.ನನ್ನ ಬಗ್ಗೆ ಆರೋಪ ಮಾಡುವುದನ್ನು ಬಿಟ್ಟರೆ ಸಿದ್ದರಾಮಯ್ಯ ನವರಿಗೆ ಬೇರೆ ಕೆಲಸ ಇಲ್ಲ ಎನಿಸುತ್ತೆ ಎಂದು ಟೀಕಿಸಿದ್ದಾರೆ.

ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅಂತಿಮವಾಗಿ ಕೊಟ್ಟಿರುವ ಜನಗಣತಿಯನ್ನು ಸಿದ್ದರಾಮಯ್ಯ ಏಕೆ ಸಿಎಂ ಆಗಿದ್ದಾಗ ಅಂಗಿಕರಿಸಲಿಲ್ಲ ಎನ್ನುವುದಕ್ಕೆ ಮೊದಲು ಉತ್ತರ ನೀಡಲಿ.ಆ ಜನಗಣತಿ ಸಿದ್ದರಾಮಯ್ಯ ತಮ್ಮ ಸ್ವಾರ್ಥಕ್ಕೆ ಮಾಡಿಸಿರುವ ಗಣತಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜಕೀಯ ಬೆರೆಸಬೇಕು ಎಂದರೇ ನಾನು‌ ದೊಡ್ಡಮಟ್ಟದಲ್ಲಿ ಬೆರೆಸಬಲ್ಲೆ.ಇದನ್ನು ಸಿದ್ಧರಾಮಯ್ಯ ಅರ್ಥ ಮಾಡಿಕೊಂಡರೆ ಒಳ್ಳೇದು ಎಂದು ಎಚ್ಚರಿಸಿದ್ದಾರೆ.

160 ಕೋಟಿ ಖರ್ಚು ಮಾಡಿ ಕಾಂತರಾಜು ಎಂಬುವವರನ್ನ ಅಧ್ಯಕ್ಷರು ಮಾಡಿದ್ದು ಸಿದ್ದರಾಮಯ್ಯ. ಕಾಂತರಾಜು ಬರಿ ಟಸ್ಸೆ ಹೊಡೆದಿರುವುದು ಅಷ್ಟೇ,ಉಳಿದುದ್ದನ್ನು ಮಾಡಿರೋದೇ ಸಿದ್ದರಾಮಯ್ಯ.ಇದೀಗ ಆ ಕ್ರೆಡಿಟ್ ನ್ನು ಸಿದ್ದರಾಮಯ್ಯಪಡೆಯಲು ಹೊರಟಿದ್ದಾರೆ. ಮುಂದಿನ‌ ದಿನದಲ್ಲಿ ದೇಶದಲ್ಲಿ ರಾಜ್ಯದಲ್ಲಿ ಯಾವಾವ ರೀತಿ ದೊಡ್ಡ ಮಟ್ಟದ ಸಮಸ್ಯೆ ‌ಉದ್ಭವ ಮಾಡುತ್ತಾರೆ ಎಂದು ಹೇಳಿದ್ದಾರೆ.

ನಾನು ಸಿಎಂ ಆದಾಗ ಸಿದ್ದರಾಮಯ್ಯ ನವರೇ ಕೋ ಆರ್ಡಿನೇಷನ್ ಸಮಿತಿ ಚೇರ್ಮನ್ ಆಗಿದ್ದರು.ಅವರು ಸುಳ್ಳು ಹೇಳಿದರೆ  ನಾನು ಏನು‌ ಮಾಡಲು ಸಾಧ್ಯ.ಸಮಿತಿಯಲ್ಲಿ ‌ಜನಗಣತಿ‌ ವರದಿ ಸ್ವೀಕಾರ ಮಾಡಿ ಎಂದು ಹೇಳಿಯೇ ಇರಲಿಲ್ಲ.ಕಾಂತರಾಜು ವರದಿ ಸಿದ್ದವಾಗಿದೆ ಎನ್ನುವುದನ್ನು ನನ್ನ ಗಮನಕ್ಕೆ ತಂದೇ ಇರಲಿಲ್ಲ.ಹೀಗಿರುವಾಗ ನಾನು ಏನು ಮಾಡಲು ಸಾಧ್ಯ. ಸಿದ್ದರಾಮಯ್ಯ ನವರಿಗೆ ಇದೀಗ ರಾಜಕೀಯ ಬೇಕು.ದಲಿತ, ಹಿಂದುಳಿದವರ ಬಗ್ಗೆ ಚರ್ಚೆ ಮಾಡುತ್ತಾರೆ ಆದ್ರೆ ಎಷ್ಟು ಜನರಿಗೆ ರಕ್ಷಣೆ ಕೊಟ್ಟಿದ್ದಾರೆ ಎನ್ನುವುದನ್ನು ಪ್ರೂವ್ ಮಾಡಲಿ ಎಂದು ಸವಾಲೆಸಿದ್ರು.

ಸಿದ್ದರಾಮಯ್ಯ ಕಾಲದಲ್ಲಿ ದಲಿತರಿಗೆ ಕೊಡಬೇಕಾದ ಮನೆಗಳನ್ನ ರದ್ದು ಮಾಡಿ ಬೇರೆ ಸಮಾಜಕ್ಕೆ ಕೊಟ್ಟಿದ್ದಾರೆ  ಎನ್ನುವುದರ ಮಾಹಿತಿ ನನ್ನ ಬಳಿ ಇದೆ.ಇವರು ಒಬ್ಬರೇ ಅಲ್ಲ ದಲಿತರು, ಹಿಂದುಳಿದವರನ್ನು ರಕ್ಷಣೆ ಮಾಡುವ ಬದಲು,ಅವರ ಹೆಸರಿನಲ್ಲಿ ‌ಏನೇನೋ ಆಕ್ರಮ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ನನ್ನ ಬಳಿ ಇದೆ.ಇವರು ಒಬ್ಬರೇ ಅಲ್ಲ ಅಹಿಂದ ಉಳಿಸುವವರುಅಹಿಂದ ಉಳಿಸಲು ಬಹಳ ಜನ ಕೆಲಸ ಮಾಡಿದ್ದಾರೆ.ಸರ್ಟಿಫಿಕೇಟ್ ತೆಗೆದುಕೊಳ್ಳಲು ಹೊರಟಿದ್ದಾರೆ.ಇವರ ನಿಜವಾದ ಬಣ್ಣ ಹೊರಬರಲಿದೆ ಎಂದು ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್. ಕಾಂತರಾಜು
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್. ಕಾಂತರಾಜು

ಮೇಕೆದಾಟು ಯೋಜನೆ ಆಗಲೇಬೇಕು:ಮೇಕೆ ದಾಟು ಯೋಜನೆ ಈಗಾಗಲೇ ಆರಂಭ ಮಾಡಬೇಕಿತ್ತು. ರಾಜಕೀಯವಾಗಿ ಹಲವು‌ ಸಮಸ್ಯೆಗಳನ್ನ ಈ ಸರ್ಕಾರ ಅನುಭವಿಸುತ್ತಿದೆ. ಈಗಾಗಲೇ ರಾಜ್ಯಪಾಲರನ್ನ ಕೂಡ ಭೇಟಿ ಮಾಡಿದ್ದೇವೆರಾಷ್ಟ್ರಪತಿಗಳು, ಕೇಂದ್ರ ಸರ್ಕಾರ ಮನವೊಲಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿದ್ದೇವೆ.  ಸದ್ಯದರಲ್ಲೇ ಸಿಎಂ ಅವರನ್ನ ಭೇಟಿ ಮಾಡುತ್ತೇವೆ .ಕೇವಲ ಮೇಕೆದಾಟು ಯೋಜನೆ ಒಂದೇ ಅಲ್ಲ, ಎತ್ತಿನ ಹೊಳೆ ಯೋಜನೆಯಲ್ಲೂ ಹಲವಾರು ಸಮಸ್ಯೆಗಳು ಇವೆ.8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಕಾರ್ಯಕ್ರಮ ಇದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ಕೊಡುತ್ತೇವೆ ಎಂದು ಆರಂಭವಾದ ಎತ್ತಿನಹೊಳೆಯ ಮೊತ್ತ,ಇದೀಗ ಅದು 23 ಸಾವಿರ ಕೋಟಿಗೆ ಏರಿಕೆ ಆಗಿದೆ. ಈಗಿನ ವೇಗದಲ್ಲಿ ಹೋದರು ಎತ್ತಿನಹೊಳೆ ಯೋಜನೆಗೆ 50 ಸಾವಿರ ಕೋಟಿ ಬೇಕು. ಈ ಬಗ್ಗೆ ಸಿಎಂ ಅವರ ಸಮಯ ಕೇಳಿದ್ದೇನೆ .ನೀರಾವರಿ ಸಮಸ್ಯೆಯನ್ನ ಬಗೆಹರಿಸುವಂತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ದೊಡ್ಡವರ ಬಗ್ಗೆ ಲಘುವಾಗಿ ಮಾತನಾಡಬಾರದು,ಸಿಟಿ ರವಿಗೆ ಕುಟುಕು:ಬಿಜೆಪಿ ಮುಖಂಡಸಿಟಿ ರವಿ ಹೇಳಿದನ್ನು ಗಮನಿಸಿದ್ದೇನೆ, ಕಾಂಗ್ರೆಸ್ ನವರು ಹೇಳಿದನ್ನು ಗಮನಿಸಿದ್ದೇನೆ ದೇಶಕ್ಕೆ ಕೊಡುಗೆ ಕೊಟ್ಟಿರುವವರ ಬಗ್ಗೆ ಲಘುವಾಗಿ ಮಾತನಾಡಬಾರದು.ವೈಯಕ್ತಿಕ ಜೀವನ ಬೇರೆ, ಆದ್ರೆ ದೇಶಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ನಾವು ಹೆಚ್ಚಿನ ಗಮನಕೊಡಬೇಕು.ಅದು ನಮಗೆ ಮಾರ್ಗದರ್ಶನ ನೀಡುತ್ತದೆ. ನೆಹರೂ ಅವರು ದೇಶಕ್ಕಾಗಿ ಅವರದ್ದೇ ಆದ ಕೊಡುಗೆ ಕೊಟ್ಟಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚು ಜೈಲು ವಾಸ ಅನುಭವಿಸಿದವರು ನೆಹರು, ದೇಶದ ಯಾವುದೇ ನಾಯಕರ ಬಗ್ಗೆ ಲಘುವಾಗಿ ಮಾತನಾಡುವುದುರ ಮುಖಾಂತರ ದೇಶಕ್ಕೆ ಅಪಮಾನ ಮಾಡಬೇಡಿ ಎಂದು ಸಿ.ಟಿ ರವಿಗೆ ಪರೋಕ್ಷವಾಗಿ ಕುಟುಕಿದ್ದಾರೆ.

 

Spread the love
Leave A Reply

Your email address will not be published.

Flash News