ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿರುವ 11 ಲಕ್ಷ ಜನರಿಗೆ ಶಾಕಿಂಗ್ ನ್ಯೂಸ್..!? ಮೈಮರುತ್ರೆ ಕೊರೊನಾ ವಕ್ಕರಿಸುವ ಆತಂಕ

ಅಪಾರ್ಟ್ಮೆಂಟ್ ನಿವಾಸಿಗಳೇ ಎಚ್ಚರ..ಎಚ್ಚರ..ಕೊಂಚ ಯಾಮಾರಿದ್ರೂ ಕೊರೊನಾ ವಕ್ಕರಿಸೋದು ಗ್ಯಾರಂಟಿ.

0

ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳ ಪಾಲಿಗೆ ಇದು ಎಚ್ಚರಿಕೆಯ ಕರೆ ಗಂಟೆ.. ಕೊಂಚ ಎಚ್ಚರ ತಪ್ಪಿದ್ರೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡೋ ಆತಂಕ ಶುರುವಾಗಿದೆ.

ಇಂತದ್ದೊಂದು ಆತಂಕ ವ್ಯಕ್ತಪಡಿಸ್ತಿರೋದು ನಾವಲ್ಲ,ಖುದ್ದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ.. ಅಪಾರ್ಟ್ಮೆಂಟ್ಗಳಲ್ಲಿ ಸೋಂಕು ಹೆಚ್ಚಾಗ್ತಿರುವುದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ  ಅಪಾರ್ಟ್ಮೆಂಟ್  ಗಳಲ್ಲಿ 11 ಲಕ್ಷ ಜನ ವಾಸ ಮಾಡ್ತಿದ್ದಾರೆ.ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಪಾರ್ಟ್ ಮೆಂಟ್ ಸಂಘಗಳ ಜೊತೆ ಒಂದು ಸುತ್ತಿನ ಸಭೆ ಆಗಿದೆ.1 ಸಾವಿರಕ್ಕೂ ಅಧಿಕ ಅಪಾರ್ಟ್ಮೆಂಟ್ ಸಂಘಗಳೊಂದಿಗೆ ಸಭೆ ಆಗಬೇಕಿದೆ ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ.

ಕೆಲವು ಕಡೆ ಒಂಟಿ ಮನೆಗಳಲ್ಲಿಯೂ ಸೋಂಕು ಹೆಚ್ಚಾಗಿದೆ. ನಮ್ಮಲ್ಲಿ ಕಂಟೆನ್ಮೆಂಟ್ ಸಂಖ್ಯೆ ಹೆಚ್ಚಾಗಿರುವುದು ಮುಂಜಾಗ್ರತಾ ಕ್ರಮ ಆಗಿದ್ದು, ಅಲ್ಲೆಲ್ಲ ನಿಗಾವಹಿಸಲಾಗಿದೆ. ಶೇ.95ಕ್ಕಿಂತ ಅಧಿಕ ಜನರು ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲದೆ ಗುಣಮುಖ ಆಗುತ್ತಾರೆ. ಕಂಟೆನ್ಮೆಂಟ್ ಮಾಡಿ ಸೋಂಕು ಹರಡುವಿಕೆ ತಡೆಗಟ್ಟಲು ಕ್ರಮವಹಿಸಲಾಗುವುದು ಎಂದು ವಿವರಿಸಿದರು.

ಕೆಲವು ಹಾಸ್ಟೆಲ್ ಗಳಲ್ಲಿ ಸೋಂಕು ದೃಡವಾಗಿದೆ.ಅವುಗಳನ್ನ ಸಹ ಕಂಟೆನ್ಮೆಂಟ್ ಮಾಡಲಾಗಿದೆ.ನಗರದಲ್ಲಿ 180 ಜನರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿಯಾಗಿ ಕ್ರಿಟಿಕಲ್ ಕೇರ್ ನಲ್ಲಿ ಇರುವವರ ಸಂಖ್ಯೆ 50ಕ್ಕಿಂತ ಕಡಿಮೆ ಇದೆ.ಎಲ್ಲ ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿ ಲಸಿಕೆ ಕಡ್ಡಾಯವಾಗಿ ಪಡೆಯಬೇಕು.ಯಾವುದೇ ವಿಶೇಷ ಲಕ್ಷಣ ಇದ್ದರೆ ವಿಶೇಷ ಕ್ರಮವಹಿಸುತ್ತೇವೆ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

 

Spread the love
Leave A Reply

Your email address will not be published.

Flash News