“ಟಫ್ ರೂಲ್ಸ್” ನಡುವೆ ಸ್ಕೂಲ್ ಓಪನ್….,ಸೋಮವಾರದಿಂದ-ಶುಕ್ರವಾರದವರೆಗೆ ಮಾತ್ರ ಶಾಲೆ…..,ಆನ್ ಲೈನ್ , ಆಫ್ ಲೈನ್ ಎರಡಕ್ಕೂ ಅವಕಾಶ.

ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ, 9-10 ನೇ ತರಗತಿಗಳ ಆರಂಭಕ್ಕೆ ಸರ್ಕಾರ ಒಪ್ಪಿಗೆ

0

ಬೆಂಗಳೂರು: ಶಾಲೆ ಆರಂಭದ ಬಗ್ಗೆ ಇದ್ದ ಗೊಂದಲ ಸಧ್ಯಕ್ಕೆ ದೂರವಾಗಿದೆ. 9, 10ನೇ ತರಗತಿ ಶಾಲೆ ತೆರೆಯಲು ಸರ್ಕಾರ ಅನುಮತಿ ನೀಡಿದೆ.ಇದಕ್ಕಾಗಿ ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿ ಬಿಡುಗಡೆಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಸರ್ಕಾರದ ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ ಮಾಡಲು ಅನುಮತಿ ನೀಡಲಾಗಿದೆ. ಶಾಲೆಗೆ ಆಗಮಿಸಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ.ಮಗುವಿನ ಆರೋಗ್ಯ ಪ್ರಮಾಣ ಪತ್ರ‌ ಕಡ್ಡಾಯ ಮಾಡಲಾಗಿದ್ದು, ಭೌತಿಕ ತರಗತಿ ಹಾಜರಾತಿ ಕಡ್ಡಾಯವಲ್ಲ. ಆನ್‌ಲೈನ್ ಅಥವಾ ಭೌತಿಕ ಎರಡರಲ್ಲಿ ಒಂದರಲ್ಲಿ ಹಾಜರಾತಿ ಅಗತ್ಯ. ಶಾಲೆಯಲ್ಲಿ ಮಕ್ಕಳಿಗೆ  ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ  ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಭೌತಿಕ ತರಗತಿ ಶಾಲೆ ನಡೆಸಲು ನಿರ್ಧರಿಸಲಾಗಿದೆ. ಶನಿವಾರ ಮಾತ್ರ‌ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಭೌತಿಕ ತರಗತಿ ನಡೆಯಲು ಅವಕಾಶ ಕಲ್ಪಿಸಲಾಗಿದೆ.ಶಾಲೆಗೆ ಬರಲು ಮಗುವಿನ ಆರೋಗ್ಯ ಪ್ರಮಾಣ ಪತ್ರ‌ ಕಡ್ಡಾಯ ಮಾಡಲಾಗಿದೆ.ಮನೆಯಿಂದಲೇ ಮಕ್ಕಳು ಕುಡಿಯುವ ನೀರು, ಉಪಹಾರ ತರಬೇಕಾಗಿರುತ್ತದೆ.

ಇನ್ನು ಕೋವಿಡ್ ಇರುವ ಜಿಲ್ಲೆಗಳಲ್ಲಿ ಅರ್ಧ ದಿನ ಬೆಳಗಿನ ಅವಧಿಯಲ್ಲಿ ಶಾಲೆ ತೆರೆಯಲು ಮಾತ್ರ ಸೂಚನೆ ನೀಡಲಾಗಿದೆ. 9 ರಿಂದ‌ 10 ನೇ ತರಗತಿ ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ಹಾಗೂ ಉಪಹಾರ ತರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಅಂದ್ಹಾಗೆ ಎಸ್ ಒ ಪಿ ಬಿಡುಗಡೆಯ ಪ್ರಮುಖ ಅಂಶಗಳನ್ನು ಗಮನಿಸಿದ್ರೆ, ಶಾಲೆ ಆರಂಭ ಮುನ್ನ ತರಗತಿ ಸ್ವಚ್ಚತೆ ಮಾಡಬೇಕಿರುತ್ತದೆ. ಒಂದು ಕೊಠಡಿಯಲ್ಲಿ ಕೇವಲ 20 ಮಕ್ಕಳಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿದೆ. ಶಾಲಾ ಆವರಣದಲ್ಲಿ ಇತರ ವ್ಯಕ್ತಿಗಳಿಗೆ ನಿರ್ಬಂಧ ಹೇರಲಾಗಿದೆ. ಒಂದು ಬೆಂಚ್ ನಲ್ಲಿ ಒಂದೇ ಮಗುವಿಗೆ ಕೂರಲು ಅವಕಾಶ ಇರುತ್ತದೆ. ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಮತ್ತು ಮಾಸ್ಕ್ ಬಳಸಬೇಕು. ವಿದ್ಯಾರ್ಥಿಗಳಿಗೆ ನೆಗಟಿವ್ ರಿಪೋರ್ಟ್ ತರುವಂತೆ ಸೂಚನೆ ನೀಡಲಾಗಿದೆ.

ಶಿಕ್ಷಕರು ಮತ್ತು ಸಿಬ್ಬಂದಿ ಒಂದು ಡೋಸ್ ಲಸಿಕೆ ಪಡೆದಿರಬೇಕು. ಆನ್ ಲೈನ್ , ಆಫ್ ಲೈನ್ ಎರಡಕ್ಕೂ ಅವಕಾಶ ನೀಡಲಾಗಿದೆ. ಬಿಸಿನೀರು , ಸ್ಯಾನಿಟೈಸ್ ಕಡ್ಡಾಯ ಮಾಡಲಾಗಿದೆ. ಶಾಲಾ ಆವರಣದಲ್ಲಿ ಸೋಶಿಯಲ್ ಡಿಸ್ಟೇನ್ಸ್ ಕಡ್ಡಾಯ ಮಾಡಲಾಗಿದೆ. ಮಕ್ಕಳಿಗೆ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಹೊರಗಡೆಯಿಂದ ಬಂದವರು ಮಕ್ಕಳ ಜೊತೆ ಬೆರೆಯಬಾರದು. ಶಾಲೆಯ ಆವರಣದ ಮುಂದೆ ಎಲ್ಲೆಂದರಲ್ಲಿ ಉಗುಳದಂತೆ ಸೂಚನೆ ನೀಡಲಾಗಿದೆ.

ಮಾರ್ಗಸೂಚಿಯಲ್ಲಿರುವ ಪ್ರಮುಖ ಸಂಗತಿಗಳು

*ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ..

*9-10 ನೇ ತರಗತಿಗಳ ಆರಂಭಕ್ಕೆ ಮಾತ್ರ ಸರ್ಕಾರದಿಂದ ಒಪ್ಪಿಗೆ

*ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ.

*ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ ಮಾಡಲು ಅನುಮತಿ.

*ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ.

*ಮಗುವಿನ ಆರೋಗ್ಯ ಪ್ರಮಾಣ ಪತ್ರ‌ವೂ ಕಡ್ಡಾಯ.

*ಭೌತಿಕ ತರಗತಿ ಹಾಜರಾತಿ ಕಡ್ಡಾಯವಲ್ಲ.

*ಆನ್‌ಲೈನ್ ಅಥವಾ ಭೌತಿಕ ಎರಡರಲ್ಲಿ ಹಾಜರಾತಿ ಅಗತ್ಯ.

*ಶಾಲೆಗಳೇ ಮಕ್ಕಳಿಗೆ  ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು

*ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಶಾಲೆ

* ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಭೌತಿಕ ತರಗತಿ.

*ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಭೌತಿಕ ತರಗತಿ.

*ಮನೆಯಿಂದಲೇ ಮಕ್ಕಳು ಕುಡಿಯುವ ನೀರು, ಉಪಹಾರ ತರಬೇಕು.

*ಕೋವಿಡ್ ಇರುವ ಜಿಲ್ಲೆಗಳಲ್ಲಿ ಅರ್ಧ ದಿನ ಬೆಳಗ್ಗೆ ಶಾಲೆ.

*ಶಾಲೆ ಆರಂಭ ಮುನ್ನ ತರಗತಿ ಸ್ವಚ್ಚತೆ ಮಾಡಬೇಕು.

*ಒಂದು ಕೊಠಡಿಯಲ್ಲಿ ಕೇವಲ 20 ಮಕ್ಕಳಿಗೆ ಮಾತ್ರ ಅವಕಾಶ.

*ಶಾಲಾ ಆವರಣದಲ್ಲಿ ಇತರ ವ್ಯಕ್ತಿಗಳಿಗೆ ನಿರ್ಬಂಧ.

*ಒಂದು ಬೆಂಚ್ ನಲ್ಲಿ ಒಂದೇ ಮಗುವಿಗೆ ಕೂರಲು ಅವಕಾಶ.

*ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಮತ್ತು ಮಾಸ್ಕ್ ಬಳಕೆ ಕಡ್ಡಾಯ

*ನೆಗಟಿವ್ ರಿಪೋರ್ಟ್ ನೊಂದಿಗೆ ಹಾಜರಾಗಲು ಸೂಚನೆ

*ಶಿಕ್ಷಕರು ಮತ್ತು ಸಿಬ್ಬಂದಿ ಒಂದು ಡೋಸ್ ಲಸಿಕೆ ಪಡೆದಿರಬೇಕು.

* ಆನ್ ಲೈನ್ , ಆಫ್ ಲೈನ್ ಎರಡಕ್ಕೂ ಅವಕಾಶ.

*ಬಿಸಿನೀರು , ಸ್ಯಾನಿಟೈಸ್ ಕಡ್ಡಾಯ.

*ಶಾಲಾ ಆವರಣದಲ್ಲಿ ಸೋಶಿಯಲ್ ಡಿಸ್ಟೇನ್ಸ್ ಕಡ್ಡಾಯ.

*ಹೊರಗಡೆಯಿಂದ ಬಂದವರು ಮಕ್ಕಳ ಜೊತೆ ಬೆರೆಯುವಂತಿಲ್ಲ.

*ಶಾಲೆಯ ಆವರಣದ ಮುಂದೆ ಎಲ್ಲೆಂದರಲ್ಲಿ ಉಗುಳುವಂತಿಲ್ಲ.

Spread the love
Leave A Reply

Your email address will not be published.

Flash News