BreakingScrollTop NewsUncategorizedದೇಶ-ವಿದೇಶಫೋಟೋ ಗ್ಯಾಲರಿ

ಅಪ್ಘನ್ ನಲ್ಲಿ ರಕ್ಕಸ ತಾಲಿಬಾನಿಗಳ ನರಕ ಸಾಮ್ರಾಜ್ಯ ಸ್ಥಾಪನೆ…,ಹೇಗಿದೆ ಗೊತ್ತಾ ಅಮಾಯಕರ ಮೇಲೆ ತಾಲಿಬಾನಿಗಳ ಕ್ರೌರ್ಯ..

ತಾಲಿಬಾನಿಗಳ ಅಟ್ಟಹಾಸಕ್ಕೆ ಅಫ್ಘಾನಿಸ್ತಾನ್ ಗೆ ಅಪ್ಘಾನಿಸ್ತಾನವೇ ಅಕ್ಷರಶಃ ನಲುಗಿದೆ.ಇಡೀ ದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಿರುವ ರಕ್ಕಸ ತಾಲಿಬಾನಿಗಳು ನರಮೇಧ ದ ಮೂಲಕ ಜೀವಂತ ನರಕವನ್ನೇ ಸೃಷ್ಟಿಸಿಬಿಟ್ಟಿದ್ದಾರೆ.ಪ್ರಾಣರಕ್ಷಣೆಗೆ ದೇಶ ತೊರೆಯಲು ಸಂತ್ರಸ್ಥರು  ವಾಯುನೆಲೆಗಳತ್ತ ದೌಡಾಯಿಸುತ್ತಿದ್ದಾರೆ. ಉಗ್ರರಿಂದ ಹೆದರಿಗೆ ದೇಶ ತೊರೆದಿರುವ ಅಧ್ಯಕ್ಷ   ಅಶ್ರಫ್ ಘನಿ ತನ್ನ ದೇಶ ರಕ್ಷಿಸುವಂತೆ ಅಮೆರಿಕಾ ಸೇರಿದಂತೆ ಅನೇಕ ದೇಶಗಳ ಮೊರೆ ಹೋಗಿದ್ದಾರೆ.ಇದರ ನಡುವೆ ಮುಲ್ಲಾ ಅಬ್ದುಲ್ ಘನಿ, ಅಸ್ತಿತ್ವಕ್ಕೆ ಬಂದಿರುವ ಉಗ್ರ ಸರ್ಕಾರದ ಸ್ಚಯಂಘೋಷಿತ ನಾಯಕನಾಗಿ ಅಧಿಕಾರದ ಗದ್ದುಗೆ ಅಲಂಕರಿಸಿದ್ದಾನೆ.

ಅಮೇರಿಕಾ ಸೇನೆ  ಕಾಲ್ತೆಗೆಯುವುದನ್ನೇ ಕಾಯುತ್ತಿದ್ದ ತಾಲಿಬಾನಿಗಳು ಮತ್ತೆ ವಿಕೃತಿ ಮೆರೆಯುತ್ತಿದ್ದಾರೆ.  ಸಂಪೂರ್ಣ ಅಪ್ಘಾನಿಸ್ತಾನ  ತಾಲಿಬಾನಿಗಳ ಕೈವಶವಾಗಿದೆ. ಆಶ್ರಫ್ ಘನಿ ಪಕ್ಕದ ತಜಕಿಸ್ತಾನಕ್ಕೆ  ಪರಾರಿಯಾಗುತ್ತಿದ್ದಂತೆ ರಾಜಧಾನಿ ಕಾಬೂಲ್ ನ ಅಧ್ಯಕ್ಷರ ಅರಮನೆ ಬಂಡುಕೋರರ ಕೈ ವಶವಾಗಿದೆ. ಮುಲ್ಲಾ ಅಬ್ದುಲ್ ಘನಿ..ಬಂಡುಕೋರ ಸರ್ಕಾರದ ನೂತನ ಸ್ವಘೋಷಿತ ಅಧ್ಯಕ್ಷನಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾನೆ.

ತಾಲಿಬಾನಿಗಳು ಬಾಲ ಬಿಚ್ಚೊಕ್ಕೆ ಅಮೆರಿಕಾನೇ ಕಾರಣವಾಯ್ತಾ..?:ಹೌದು..ವಸ್ತುಸ್ಥಿತಿನ ಗಮನಿಸಿದಾಗ ಹಾಗೆಯೇ ಅನ್ನಿಸುತ್ತೆ,ಅಮೇರಿಕಾ ತನ್ನ ಸೇನೆಯನ್ನು ಅಪ್ಘಾನಿಸ್ತಾನದ ಲ್ಲಿರಿಸಿಕೊಂಡಿರು ವಷ್ಟು ಸಮಯ ಬಾಲ ಮುದುಡಿಕೊಂಡಿದ್ರು ತಾಲಿಬಾನಿಗಳು. ಸತತ 2 ದಶಕಗಳ ಕಾಲ ಅಮೇರಿಕಾ ಮತ್ತು ನ್ಯಾಟೋ ಪಡೆಗಳನ್ನೇ ಕಂಗೆಡಿಸಿದ್ದ ತಾಲಿಬಾನಿ ಉಗ್ರರು ತುಟಿಕಚ್ಚಿ ಸಹಿಸಿಕೊಂಡಿದ್ದರು.

ಆದ್ರೆ ಅಮೆರಿಕಾ ತನ್ನ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುತ್ತಿದ್ದಂಗೆ, ಭಾನುವಾರ ರಾಜಧಾನಿ ಕಾಬೂಲನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ,. ಆ ಮೂಲಕ ಇಡೀ ಆಪ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ 2 ದಶಕಗಳ ಬಳಿಕ ಆಪ್ಘಾನಿಸ್ಥಾನ ಮತ್ತೆ ಕ್ರೂರಿಗಳ ಕೈವಶವಾಗಿದೆ.

ಅಮೇರಿಕಾ ಸೇನೆ ಆಪ್ಘನ್ ನೆಲದಿಂದ ಕಾಲ್ತೆಗೆಯುತ್ತಿದ್ದಂತೆ ಧುತ್ತೆಂದು ಕಾಣಿಸಿಕೊಂಡ ತಾಲಿಬಾನಿಗಳು, ಕಳೆದ ಒಂದು ತಿಂಗಳನಿಂದ ದೇಶದ ಒಂದೊಂದೇ ಪ್ರದೇಶಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾ ಬಂದಿದ್ದರು. ಭಾನುವಾರ ಕಾಬೂಲ್ ವ್ಯಾಪ್ತಿಯ ಮೂರು ಜಿಲ್ಲೆ ವಶಪಡಿಸಿಕೊಂಡರು. ಅದರ ಬೆನ್ನಲ್ಲೇ ಆಪ್ಘಾನಿಸ್ಥಾನದ ಅಧ್ಯಕ್ಷ ಆಶ್ರಫ್ ಘನಿ, ಕಳುಹಿಸಿದ್ದ ಶಾಂತಿ ಮಾತುಕತೆ ಪ್ರಸ್ತಾಪವನ್ನು ಒಪ್ಪಿ, ಮಾತುಕತೆಯನ್ನೂ  ನಡೆಸಿದ್ರು.

ಶಾಂತಿ ಮಾತುಕತೆ ನೆಪದಲ್ಲಿ ಕೊಲ್ಲುವ ಸ್ಕೆಚ್:ಅಶ್ರಫ್ ಘನಿ ಜತೆಯಲ್ಲಿ ತಾಲಿಬಾನಿ ಮುಖಂಡರು ರಾಜೀನಾಮೆ ವಿಷಯವೊಂದನ್ನು ಬಿಟ್ಟು ಬೇರೆ ಯಾವುದೇ ವಿಷಯವನ್ನೂ ಮಾತನಾಡಲು ಸಿದ್ದವೇ ಇರಲಿಲ್ಲ. ಅರ್ದ ಭಾಗ ಆಪ್ಘಾನಿಸ್ಥಾನವನ್ನು ತಾಲಿಬಾನಿಗಳಿಗೆ ಬಿಟ್ಟುಕೊಟ್ಟು, ಉಳಿದ ಅರ್ಧಭಾಗದಲ್ಲಿ ಪ್ರಜಾಪ್ರಭುತ್ವ ಮಾದರಿಯ ಆಳ್ವಿಕೆ ನಡೆಸಲು ಆಶ್ರಫ್ ಘನಿ ಉದ್ದೇಶಿಸಿದ್ದರು. ಆದರೆ ಅವರಿಗೆ ಇಡೀ ಆಪ್ಘಾನಿಸ್ಥಾನವೇ ಬೇಕಾಗಿತ್ತು. ಬೇಷರತ್ ಆಗಿ ಅದಿಕಾರ ಹಸ್ತಾಂತರ ಮಾಡಿ ಹೊರಡುವಂತೆ ತಾಲಿಬಾನಿಗಳು ಆದೇಶ ನೀಡಿದ್ರು. ಆ ಆದೇಶವನ್ನು ಒಪ್ಪದೆ ಅಶ್ರಫ್ ಘನಿಗೂ ಬೇರೆ ದಾರಿಯೇ ಇರಲಿಲ್ಲ

ಒಂದು ಸ್ವಲ್ಪ ತಡಮಾಡಿದ್ರೂ ಸಹ ಆಶ್ರಫ್ ಘನಿ ಜೀವಕ್ಕೆ ಅಪಾಯವಿತ್ತು. ಸಂಧಾನ ಮಾತುಕತೆ ನೆಪದಲ್ಲಿ ತಾಲಿಬಾನಿ ಪಡೆ ಕಾಬೂಲ್ ನಲ್ಲಿರುವ ಅಧ್ಯಕ್ಷರ ಅರಮನೆಗೆ ನುಗ್ಗಿತ್ತು. ಅಧ್ಯಕ್ಷರ ಅರಮನೆಯ ಮೂಲೆ ಮೂಲೆಗಳ ತುಂಬಾ ಶಸ್ತ್ರಧಾರಿ ರಕ್ಕಸರು. ತಾಲಿಬಾನಿ ಮುಖಂಡರು ಅಶ್ರಫ್ ಘನಿಯನ್ನು ಜೀವಂತ  ಸೆರೆ ಹಿಡಿದು, ಚಿತ್ರ ಹಿಂಸೆ ನೀಡಿ ಕೊಲ್ಲಲು ಸ್ಕೆಚ್ ಹಾಕಿದ್ದರು. ಇದರ ಸುಳಿವು ಸಿಕ್ಕಿದ್ದೇ ತಡ, ಅಶ್ರಫ್ ಘನಿ, ರಾಜೀನಾಮೆ ಪತ್ರ ಒಗಾಯಿಸಿದ್ರು.

ತಜಕಿಸ್ತಾನಕ್ಕೆ ಘನಿ ಎಸ್ಕೇಪ್:ಅಧಿಕಾರ ಹಸ್ತಾಂತರ ಪ್ರಕ್ರಿಯೆಗೂ ಕಾಯದೆ, ಬೆಂಗಾವಲು ಪಡೆಯ ರಕ್ಷಣೆಯಲ್ಲಿ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ರು. ಅಷ್ಟ್ರರಲ್ಲಿ ನೆರೆಯ ತಜಕಿಸ್ತಾನದಿಂದಲೂ ಆಶ್ರಯ ಕೊಡುವ ಭರವಸೆ ಸಿಕ್ಕಿತ್ತು. ಅತ್ತ ಉಗ್ರರು ಅಧ್ಯಕ್ಷರನ್ನು ಅರಮನೆಯ ಹುಡುಕಾಡುತ್ತಿದ್ದರೆ, ಇತ್ತ ಅಶ್ರಫ್ ಘನಿ ರಹಸ್ಯ ಮಾರ್ಗದ ಮೂಲಕ ವಿಮಾನ ನಿಲ್ದಾಣ ತಲುಪಿ ಆಗಿತ್ತು. ಇದೆಲ್ಲಾ ಆಗಿದ್ದು ಕೆಲವೇ ಗಂಟೆಗಳಲ್ಲಿ. ಕೇವಲ 60 ನಿಮಿಷಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಿಂದ ಅಶ್ರಫ್ ಘನಿಯವರನ್ನು ಹೊತ್ತ ವಿಶೇಷ ವಿಮಾನ ತಜಕಿಸ್ತಾನದ ಕಡೆಗೆ ಟೇಕಾಫ್ ಆಗಿತ್ತು.ಅಲ್ಲಿಗೆ ಘನಿ ಸೇಫ್ ಆಗಿದ್ರು.

ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಬಂಡುಕೋರ ನಾಯಕ: ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಮುಂದಿನ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ಎಂದು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಆಗೋದೇನು ಬಂತು ಮುಲ್ಲಾ ಅಬ್ದುಲ್ ಘನಿ, ತಾವೇ ಆಪ್ಘಾನಿಸ್ಥಾನದ ಅಧ್ಯಕ್ಷ ಅಂತಾ ಸ್ವಯಂ ಘೋಷಣೆ ಮಾಡಿಕೊಂಡು, ಅಧ್ಯಕ್ಷೀಯ ಅರಮನೆಯಲ್ಲಿರುವ ಅಧ್ಯಕ್ಷರ ಖುರ್ಚಿಯ ಮೇಲೆ ಕೂತು, ವಿಡಿಯೋ ಮಾಡಿಸಿಕೊಂಡು, ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಬಿಡುಗಡೆಯನ್ನೂ ಮಾಡಿದ್ದಾನೆ.

ಈ ಮಧ್ಯೆ ‘ರಾಜಧಾನಿಯ ಯಾವುದೇ ನಾಗರಿಕರ ಜೀವ, ಆಸ್ತಿ ಮತ್ತು ಘನತೆಗೆ ನಾವು ಧಕ್ಕೆ ತರುವುದಿಲ್ಲ. ಕಾಬೂಲ್‌ ನಾಗರಿಕರ ಜೀವಕ್ಕೂ ಯಾವುದೇ ರೀತಿಯ ಅಪಾಯವಿಲ್ಲ’ ಎಂದು ತಾಲಿಬಾನ್‌ ತಿಳಿಸಿತ್ತು. ಅಫ್ಘನ್‌ ಅಧಿಕಾರಿಗಳು ಕೂಡಾ, ಕಾಬೂಲ್‌ ಬಳಿಯ ಕಲಕನ್‌, ಖರಾಬಾಗ್‌ ಮತ್ತು ಪಘಮಾನ್‌ ಜಿಲ್ಲೆಗಳಲ್ಲಿ ತಾಲಿಬಾನ್‌ ಬಂಡುಕೋರರು ಬೀಡುಬಿಟ್ಟಿದ್ದಾರೆ ಎಂದು ತಿಳಿಸಿದ್ದರು.ಶಸ್ತ್ರಸಜ್ಜಿತ ತಾಲಿಬಾನ್ ಬಂಡುಕೋರರು ಕಾಬೂಲಿನ ಹೊರವಲಯದಲ್ಲೇ ಇರುವಂತೆ ಅವರಿಗೆ ಸೂಚನೆ ನೀಡಿರುವುದಾಗಿ ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.

ಆದರೆ ಕೆಲ ತಾಲಿಬಾನಿ ಬಂಡುಕೋರರು ಕಾಬೂಲ್ ನಗರವನ್ನು ಪ್ರವೇಶಿಸಿದ್ದಾರೆ, ಆದರೆ ಯಾವುದೇ ಆಕ್ರಮಣ ಇದುವರೆಗೆ ನಡೆದಿಲ್ಲ ಎನ್ನಲಾಗಿದೆ.ಅಫ್ಘಾನಿಸ್ತಾನದ ಗೃಹಸಚಿವ ಅಬ್ದುಲ್ ಸತ್ತಾರ್ ಅವರು ತಾಲಿಬಾನ್ ಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದಾರೆ. ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿಗೆ ನುಗ್ಗಿ ದಾಳಿ ನಡೆಸುವರೆಂಬ ಭೀತಿ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಅದನ್ನು ಮನಗಂಡು ಅಬ್ದುಲ್ ಸತ್ತಾರ್ ಅವರು ತಾಲಿಬಾನ್ ಕಾಬೂಲ್ ಪ್ರವೇಶಿಸಿದಲ್ಲಿ ಆಫ್ಘನ್ ಭದ್ರತಾ ಪಡೆಗಳು ಕಾದಾಟ ನಡೆಸುವುದಿಲ್ಲ ಎಂದು ಹೇಳಿ ಸಂಭಾವ್ಯ ಆಕ್ರಮಣವನ್ನು ತಡೆ ಹಿಡಿದಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News