BreakingScrollTop Newsದೇಶ-ವಿದೇಶಫೋಟೋ ಗ್ಯಾಲರಿರಾಜಕೀಯವಿಚಿತ್ರ-ವಿಶೇಷ

ಭಾರತವನ್ನು ಬೆಚ್ಚಿಬೀಳಿಸಿದೆ ಅಫ್ಘನ್ ಮೇಲಿನ ತಾಲಿಬಾನಿಗಳ ಅತಿಕ್ರಮಣ, ಅಷ್ಟಕ್ಕೂ ಭಾರತಕ್ಕೆ ಇರುವ ಆತಂಕವಾದ್ರೂ ಏನು..?ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ..

ಪ್ರಶ್ನೆ ಸೃಷ್ಟಿಯಾಗಿರುವುದೆ  ಇಲ್ಲಿ. ಸಾಕಷ್ಟು ಕುತೂಹಲ,ಆತಂಕ ಮೂಡಿಸಿರುವುದು ಕೂಡ ಇದೇ. ತಾಲಿಬಾನಿಗಳು ಆಪ್ಘಾನಿಸ್ಥಾನವನ್ನು ಆಕ್ರಮಿಸಿಕೊಂಡರೂ, ಅದರ ದೊಡ್ಡ ಥ್ರೆಟ್ ಇರೋದು ಭಾರತಕ್ಕೆ ಎನ್ನಲಾಗ್ತಿದೆ.ಮೊದಲಿನಿಂದಲೂ ಆಪ್ಘನ್ ಬಂಡುಕೋರರ ಟಾರ್ಗೆಟ್ ಭಾರತವೇ. ಮೊಹಮದ್ ಘಜ್ನಿ, ಇರಬಹುದು, ಘೋರಿ ಇರಬಹುದು ಅಥವಾ ಖಿಲ್ಜಿ ಸಂತತಿಯವರೇ ಇರಬಹುದು, ಗುಲಾಮಿ ಸಂತತಿಯವರೇ ಇರಬಹುದು. ಇವರೆಲ್ಲಾ ಪದೇ ಪದೇ ಆಕ್ರಮಣ ಮಾಡುತ್ತಿದ್ದುದು ಇದೇ ಭಾರತದ ಮೇಲೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ.

ಇತಿಹಾಸದ ಪುಟದಲ್ಲಿ ದಾಖಲಾಗಿರುವ ಇಂಥಾ ಸನ್ನಿವೇಶಗಳ ಬೆನ್ನಲ್ಲೇ ಈಗ ಮತ್ತೆ ಅದೇ ಮತಾಂಧ ಬಂಡುಕೋರರು ಭಾರತದ ಮೇಲೆ ದಾಳಿ ಮಾಡೋದಿಲ್ಲ ಎನ್ನುವುದಕ್ಕೇನು ಗ್ಯಾರಂಟಿ ಎಂಬ ಪ್ರಶ್ನೆ ಕೂಡ ಕಾಡಲಾರಂಭಿಸಿದೆ. ಅದಕ್ಕಿಂತ ಹೆಚ್ಚಾಗಿ ಕಾಬೂಲ್ ಸೇರಿದಂತೆ ಆಪ್ಘಾನಿಸ್ಥಾನದ ಪ್ರಮುಖ ಸ್ಥಳಗಳಲ್ಲಿ ಇರುವ ಭಾರತೀಯರ ರಕ್ಷಣೆ ನಮಗೆ ಅತ್ಯಂತ ಮುಖ್ಯವಾಗಿದೆ.

ಭಾರತ ಕಂಡರೆ ತಾಲಿಬಾನಿಗಳಿಗೇಕೆ ಕೆಂಡದಂತ ಕೋಪ..ತಾಲಿಬಾನಿಗಳಿಗೆ ಮೊದಲಿನಿಂದಲೂ ಭಾರತವನ್ನು ಕಂಡರೆ ಕೆಂಡದಂಥ ಕೋಪ. ಆಪ್ಘಾನಿಸ್ಥಾನದಿಂದ ಆರಂಭಿಸಿ, ಇಡೀ ವಿಶ್ವದ ಮೇಲೆ ತಮ್ಮ ಝಂಡಾ ಹಾರಿಸಲು ತವಕಿಸುತ್ತಿರುವ ಉಗ್ರರಿಗೆ ಮೊದಲು ಅಡ್ಡಿಯಾಗಿರೋದೇ ಭಾರತ. ಆಪ್ಘಾನಿಸ್ಥಾನದ ಪಕ್ಕ ದಲ್ಲೇ ಇರುವ ನರಿ ಬುದ್ದಿಯ ಪಾಕಿಸ್ತಾನ, ತನ್ನ ಅನುಕೂಲಕ್ಕೆ ತಕ್ಕಂತೆ ತಾಲಿಬಾನಿಗಳ ಜತೆ ಕೈ ಜೋಡಿಸಿಬಿಡುತ್ತದೆ. ಹಾಗಾಗಿ ತಾಲಿಬಾನಿಗಳು ಸುಲಭವಾಗಿ ಪಾಕಿಸ್ತಾನವನ್ನು ದಾಟಿಕೊಂಡು ಭಾರತಕ್ಕೆ ಬಂದೇ ಬರುತ್ತಾರೆ. ತಾಲಿಬಾನಿಗಳನ್ನು ಎದುರಿಸಲು ಭಾರತ ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ ಹಾಗೂ ಅಗತ್ಯವಾಗಿದೆ.

ಆಪ್ಘಾನಿಸ್ಥಾನ ,ಮಹಾಭಾರತ ಕಾಲದಲ್ಲಿ ಗಾಂಧಾರ:ಹಾಗೆ ನೋಡಿದ್ರೆ, ಆಪ್ಘಾನಿಸ್ಥಾನವೂ ಒಂದು ಕಾಲದಲ್ಲಿ ಭಾರತದ ಭಾಗವೇ ಆಗಿತ್ತು. ಮಹಾಭಾರತದ ಕಾಲದಲ್ಲಿ ಆಪ್ಘಾನಿಸ್ಥಾನ ವನ್ನು ಗಾಂಧಾರವೆಂದು ಕರೆಯುತ್ತಿದ್ದರು. ಎಲ್ಲರಿಗೂ ತಿಳಿದಿರುವಂತೆ ಗಾಂಧಾರ ನರೇಶ ಶಕುನಿ. ಈತ ಗಾಂಧಾರಿಯ ಸಹೋದರ, ಆದರೆ ಭೀಷ್ಮನ ಮೇಲೆ, ಕೌರವರ ಮೇಲೆ ಸೇಡು ತೀರಿಸಿಕೊಳ್ಳಲು ಗಾಂಧಾರವನ್ನು ಬಿಟ್ಟು ಬಂದ ಶಕುನಿ ಮತ್ತವರ ಪರಿವಾರ ಮತ್ತೆ ವಾಪಸ್ ಗಾಂಧಾರಕ್ಕೆ ಹೋಗಲೇ ಇಲ್ಲ. ಇದಾದ ಬಳಿಕ ಆಪ್ಘಾನಿಸ್ಥಾನದಿಂದ ಭಾರತಕ್ಕೆ ಬಂದವರು ಗುಲಾಮಿ ಸಂತತಿ ಮತ್ತು ಖಿಲ್ಜಿ ಸಂತತಿಯವರು. ಅದರಲ್ಲೂ ಅಲ್ಲಾವುದ್ದೀನ್ ಖಿಲ್ಜಿಯ ಮೂಲ ನೆಲೆ ಆಪ್ಘಾನಿಸ್ಥಾನವೇ ಆಗಿತ್ತು.

ಭಾರತದ ಮೇಲೆ ಅಪ್ಘನ್ನರ ದಾಳಿಗೆ ದೊಡ್ಡ ಇತಿಹಾಸವೇ ಇದೆ.. ಆಪ್ಘಾನಿಸ್ಥಾನದಿಂದ ಕ್ರಮೇಣ ಭಾರತದ ಕಡೆಗೆ ಬಂದು ಕೊನೆಗೆ ದೆಹಲಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದವನು ಅಲ್ಲಾವುದ್ದೀನ್ ಖಿಲ್ಜಿ. ಅಷ್ಟೇ ಏಕೆ ಮೊಹಮದ್ ಘಜ್ನಿ, ಘೋರಿಯ ಇತಿಹಾಸ ನಿಮಗೆಲ್ಲಾ ಗೊತ್ತೇ ಇದೆ. ಮೊಹಮದ್ ಘಜ್ನಿಯಂತೂ ಒಂದಲ್ಲಾ ಎರಡಲ್ಲಾ 21 ಬಾರಿ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದ. ಘಜ್ನಿ, ಘೋರಿ ಭಾರತದಲ್ಲಿ ಮಾಡಿದ್ದ ಅನಾಹುತ ಅಷ್ಟಿಷ್ಟಲ್ಲ.

ಅದು ಇತಿಹಾಸವಾಯ್ತು, ಈಗ ವರ್ತಮಾನಕ್ಕೆ ಬರೋಣ. ಕೇವಲ ಇಪ್ಪತ್ತು ವರ್ಷಗಳ ಹಿಂದೆ ಇದೇ ತಾಲಿಬಾನಿಗಳು ಹಾಗೂ ಅವರ ಜತೆಗಿದ್ದ ಅಲ್ ಖೈದಾ ಉಗ್ರರು ಭಾರತಕ್ಕೂ ಕಾಲಿಟ್ಟಿದ್ದರು, ಜಮ್ಮುಕಾಶ್ಮೀರದಲ್ಲಿ ಈ ಉಗ್ರರು ನೆಲೆಗಳನ್ನು ಸ್ಥಾಪಿಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಭಾರತೀಯ ಸೇನೆ ಅವರನ್ನೆಲ್ಲಾ ತಿಗಣೆಗಳನ್ನು ಹೊಸಕಿ ಹಾಕಿದಂತೆ ಹೊಸಕಿ ಹಾಕಿತ್ತು.

ರಷ್ಯಾ ಮೇಡ್ ಮತ್ತು ಅಮೇರಿಕನ್ ಮೇಡ್ ಆಧುನಿಕ ಶಸ್ತ್ರಾಸ್ತ್ರ ಹೊಂದಿರುವ ತಾಲಿಬಾನಿಗಳು: ಆಪ್ಘಾನಿಸ್ಥಾನವನ್ನು ಮರು ವಶಮಾಡಿಕೊಂಡಿರುವ ತಾಲಿಬಾನಿಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಭಲರಾಗಿದ್ದಾರೆ. ರಷ್ಯಾ ಮೇಡ್ ಮತ್ತು ಅಮೇರಿಕನ್ ಮೇಡ್ ಆಧುನಿಕ ಶಸ್ತ್ರಗಳನ್ನು ಬೇರೆ ಹೊಂದಿದ್ದಾರೆ. ಆಪ್ಘಾನಿಸ್ಥಾನದಲ್ಲಿ ಶಾಂತಿ ಮರು ಸ್ಥಾಪನೆಗೆ ಹಾಗೂ ಪ್ರಜಾಪ್ರಭುತ್ವವಾದಿ ಸರ್ಕಾರ ರಚನೆಗೆ ನೆರವಾಗಲು ಭಾರತವೂ ತನ್ನ ಸೇನೆಯನ್ನು ಕಳುಹಿಸಿತ್ತು.ಹಾಗಾಗ ತಾಲಿಬಾನಿಗಳು ಭಾರತದ ಹೆಸರು ಕೇಳಿದ್ರೆ ಸಾಕು ಉರಿದು ಬೀಳುತ್ತಾರೆ. ಆಪ್ಘಾನಿಸ್ಥಾನ ಮತ್ತು ಭಾರತದ ನಡುವೆ ಇರುವ ರಾಷ್ಟ್ರ ಪಾಕಿಸ್ತಾನ. ಆಪ್ಘಾನಿಸ್ಥಾನದೊಂದಿಗೂ ಭಾರತ ಸುಮಾರು 93 ಕಿಲೋಮೀಟರ್ ಗಳಷ್ಟು ಗಡಿ ಹಂಚಿಕೊಂಡಿದೆ.

ಪಾಕಿಸ್ತಾನದ್ದು ನರಿಬುದ್ಧಿ..ಆದರೆ ಹೆಚ್ಚಿನ ಭಾಗ ಗಡಿ ಹಂಚಿಕೊಂಡಿರೋದು ಪಾಕಿಸ್ತಾನ. ಪಾಕಿಸ್ತಾನದ ಎಂತಹಾ ನರಿ ಬುದ್ದಿ ಅನ್ನೋದು ಜಗತ್ತಿಗೆ ಗೊತ್ತಿರುವ ವಿಷಯ. ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಊಸರವಳ್ಳಿಯಂತೆ ಪಾಕಿಸ್ತಾನದ ಬುದ್ದಿ ಇದೆ. ಹಾಗಾಗಿ ಒಂದು ವೇಳೆ ತಾಲಿಬಾನಿಗಳು ಭಾರತದ ಮೇಲೆ ಆಕ್ರಮಣ ಮಾಡಲು ಮುಂದಾದರೆ, ಪಾಕಿಸ್ತಾನ ದೂಸರಾ ಮಾತನಾಡದೆ ತಾಲಿಬಾನಿಗಳಿಗೆ ಗಡಿ ತೆರವು ಮಾಡಿಕೊಟ್ಟು, ಬೇಕಾದ ಸೇನಾ ನೆರವು, ಶಸ್ತ್ರಾಸ್ತ ನೆರವು ಕೊಟ್ಟರೂ ಆಶ್ಚರ್ಯವೇನಿಲ್ಲ. ಅದರ ಜತೆಗೆ ಚೀನಾ ಸಹ ಇದೇ ಅವಕಾಶಕ್ಕೆ ಕಾಯುತ್ತಿದೆ. ಚೀನಾದಿಂದಲೂ ತಾಲಿಬಾನಿಗಳಿಗೆ ನೆರವಿನ ಮಹಾಪೂರವೇ ಹರಿದು ಬರುತ್ತದೆ.  ಮುಂದೆ ಎದುರಾಗಬಹುದಾದ ಈ ಪರಿಸ್ಥಿತಿಯನ್ನು ಎದುರಿಸಲು ಭಾರತ ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯಂತೂ ಇದ್ದೇ ಇದೆ.

ಭಾರತೀಯರ ರಕ್ಷಣೆಯೇ ಬಹುದೊಡ್ಡ ಸವಾಲು:ಅದು ಭವಿಷ್ಯದಲ್ಲಿ ಭಾರತ ಎದುರಿಸಬೇಕಾದ ಆತಂಕ. ಆದರೆ, ಈಗ ಭಾರತ ಸರ್ಕಾರ ತಕ್ಷಣ ಯೋಚನೆ ಮಾಡಬೇಕಾದುದು ಆಪ್ಘಾನಿಸ್ಥಾನದಲ್ಲಿರುವ ಭಾರತೀಯರ ರಕ್ಷಣೆ ಬಗ್ಗೆ. ಆಪ್ಘಾನಿಸ್ಥಾನದಲ್ಲಿ ಸುಮಾರು 5ರಿಂದ 10 ಸಾವಿರ ಭಾರತೀಯರು ಇದ್ದಾರೆ. ಮೊದಲೇ ಭಾರತದ ವಿರುದ್ದ ಕತ್ತಿಮಸೆಯುತ್ತಿರುವ ತಾಲಿಬಾನಿಗಳು ಭಾರತೀಯರನ್ನು ಸುಮ್ಮನೆ ಬಿಟ್ಟಾರೆಯೇ, ಈಗಾಗಲೇ ಆಪ್ಘಾನಿಸ್ಥಾನದಲ್ಲಿ ವರದಿ ಮಾಡುತ್ತಿದ್ದ ಭಾರತೀಯ ಪತ್ರಕರ್ತ, ಪುಲಿಟ್ಜರ್ ಅವಾರ್ಡಿ ರಿಯಾಜ್ ಸಿದ್ದಕಿಯನ್ನು ಅದೆಷ್ಟು ಬರ್ಬರವಾಗಿ ಹತ್ಯೆ ಮಾಡಿ, ಅವರ ದೇಹವನ್ನು ಭಾರತಕ್ಕೆ ರವಾನಿಸಿದ್ರು. ಈ ತಾಜಾ ಉದಾಹರಣೆ ಕಣ್ಣ ಮುಂದೆ ಇರುವಾಗ, ಆಪ್ಘಾನಿಸ್ಥಾನದಲ್ಲಿರುವ ಭಾರತೀಯರ ಪರಿಸ್ಥಿತಿ ಊಹಿಸಿಕೊಂಡ್ರೂ ಮೈ ನಡುಗುತ್ತದೆ.

ಹಾಗಂತ ಭಾರತ ಸರ್ಕಾರವೇನು ಸುಮ್ಮನೆ ಕುಳಿತಿಲ್ಲ. ಕಾಬೂಲ್ ನಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿನ ಸಿಬ್ಬಂದಿಯನ್ನು ಸ್ಥಳಾಂತರಿಸುವುದು ಮತ್ತು ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರೀಕರ ರಕ್ಷಣಗೆ ಯೋಜನೆಗಳನ್ನು ಸಿದ್ದಪಡಿಸಿಕೊಂಡಿದೆ. ಆಪ್ಘಾನಿಸ್ಥಾನದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗಿದೆ. ಮೊದಲ ಹಂತದಲ್ಲಿ ಏರ್ ಇಂಡಿಯಾ ವಿಮಾನದ ಮೂಲಕ 129 ಜನರ ಮೊದಲ ತಂಡವನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಆದರೆ, ಇಂದು ಬೆಳಗ್ಗೆಯಿಂದ ಆಪ್ಘಾನಿಸ್ಥಾನದೊಂದಿಗಿನ ಎಲ್ಲ ವಾಣಿಜ್ಯ ವಿಮಾನಯಾನ ಸಂಪರ್ಕವನ್ನು ಭಾರತ ಸೇರಿದಂತೆ ಎಲ್ಲ ಪ್ರಮುಖ ರಾಷ್ಟ್ರಗಳು ರದ್ದು ಮಾಡಿವೆ. ಯಾಕೆಂದ್ರೆ, ಪ್ರಯಾಣಿಕರ ವಿಮಾನಗಳನ್ನು ಅಪಹರಣ ಮಾಡಿ, ತಮ್ಮ ದುಷ್ಕೃತ್ಯಗಳಿಗೆ ಬಳಸಿಕೊಳ್ಳೋದು ತಾಲಿಬಾನಿಗಳ ಹಳೇ ತಂತ್ರ.

ಕಂದಾಹಾರ್ ವಿಮಾನ ಹೈಜಾಕ್ ಮರೆಯೊಕ್ಕೆ ಆಗುತ್ತಾ..?1999 ರ ಡಿಸೆಂಬರ್  24 ರಂದು 176 ಪ್ರಯಾಣಿಕರಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನವನ್ನು ಪಾಕ್ ಉಗ್ರಗಾಮಿ ಸಂಘಟನೆ ಹರ್ಕತ್-ಉಲ್ -ಮುಜಾಹಿದ್ದೀನ್ ಉಗ್ರರು ಅಪಹರಿಸಿ, ತೆಗೆದುಕೊಂಡು ಹೋಗಿದ್ದು ಇದೇ ಆಪ್ಘಾನಿಸ್ಥಾನದ  ಕಂದಹಾರ್ ಗೆ. ಆ ಉಗ್ರರಿಗೆ ಸಂಪೂರ್ಣ ನೆರವು ನೀಡಿದ್ದು ಇದೇ ತಾಲಿಬಾನಿಗಳು. ಅಷ್ಟೇ ಏಕೆ, 2011 ರಲ್ಲಿ ಅಮೇರಿಕಾದಲ್ಲಿ ಅವಳಿ ಗೋಪುರಗಳ ಮೇಲೆ ದಾಳಿ ನಡೆಸಲು ಅಲ್ ಖೈದಾ ಉಗ್ರರು ಅನುಸರಿಸಿದ ತಂತ್ರವೂ ನಾಗರೀಕರ ವಿಮಾನ ಅಪಹರಣ.

ಈಗ ವಾಣಿಜ್ಯ ಬಳಕೆಯ ವಿಮಾನಗಳ ಮೂಲಕ ಆಪ್ಘಾನಿಸ್ಥಾನದಲ್ಲಿರುವ ಭಾರತೀಯರ ರಕ್ಷಣೆ ಮಾಡುವುದು ಸ್ವಲ್ಪ ರಿಸ್ಕಿ ಎನಿಸುತ್ತದೆ.ಹಾಗಾಗಿಯೇ ಭಾರತ, ಸೈನಿಕ ಕಾರ್ಯಾಚರಣೆ ಮೂಲಕವೇ ಭಾರತೀಯರನ್ನು ರಕ್ಷಣೆ ಮಾಡಬೇಕು. ಗಡಿ ದಾಟಿ, ಆಪ್ಘಾನಿಸ್ಥಾನಕ್ಕೆ ಯುದ್ದ ವಿಮಾನ ಅಥವಾ ಹೆಲಿಕ್ಯಾಪ್ಟರ್ ಗಳನ್ನು ಕಳುಹಿಸಬೇಕಾದ್ರೆ ಅದು ಸುಖಾ ಸುಮ್ಮನೆ ಆಗೋದಿಲ್ಲ. ಅದಕ್ಕೂ ಸಾಕಷ್ಟು ತಯಾರಿ ಬೇಕಾಗುತ್ತದೆ.

ಆದರೆ, ಅದಕ್ಕೆಲ್ಲಾ ಪ್ಲಾನ್ ಮಾಡಿಕೊಂಡು ಕೂರುವಷ್ಟು ಸಮಯವೂ ಇಲ್ಲ. ಹಾಗಾಗಿಯೇ ಭಾರತ ಸರ್ಕಾರ ಒಂದು ಕಡೆ, ತಾಲಿಬಾನಿ ಬಂಡುಕೋರ ನಾಯಕರ ಜತೆ ಸಂಧಾನ ಮಾತುಕತೆಯ ಪ್ರಯತ್ನಗಳನ್ನೂ ಮಾಡುತ್ತಿದೆ. ಅವರನ್ನು ಒಪ್ಪಿಸಿ,  ಆಪ್ಘಾನಿಸ್ಥಾನದಲ್ಲಿರುವ ತನ್ನೆಲ್ಲಾ ನಾಗರೀಕರನ್ನು ಒನ್ ಟೈಮ್ ಏರ್ ಲಿಫ್ಟ್ ಮಾಡೋದಕ್ಕೆ ಯೋಜನೆ ರೂಪಿಸಲಾಗಿದೆ. ಒಂದು ವೇಳೆ ಬಂಡುಕೋರರು ಒಪ್ಪದೇ ಇದ್ದರೆ, ಸರ್ಜಿಕಲ್ ಸ್ಟ್ರೈಕ್ ಮಾಡುವುದು ಭಾರತಕ್ಕೆ ಅನಿವಾರ್ಯವಾಗುತ್ತದೆ.

Spread the love

Related Articles

Leave a Reply

Your email address will not be published.

Back to top button
Flash News