ತಾಲಿಬಾನ್ ಅಟ್ಟಹಾಸ-ನರಮೇಧಕ್ಕೆ ಕಾರಣವೇ ಅಮೆರಿಕಾ..?!, “ಸೇನೆ” ಕರೆಯಿಸಿಕೊಳ್ಳುತ್ತಿದ್ದಂತೆ ತಾರಕಕ್ಕೇರಿದ ತಾಲಿಬಾನಿಗಳ ವಿದ್ವಂಸಕತೆ..

ಅಮೇರಿಕಾ ಸರ್ಕಾರ ಆಪ್ಘಾನಿಸ್ಥಾನದಲ್ಲಿದ್ದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ರಿಂದಲೇ ತಾಲಿಬಾನಿಗಳು ತಲೆ ಎತ್ತುವಂತೆ ಆಯ್ತು. ಖರ್ಚು ಕಡಿಮೆ ಮಾಡುವ ನೆಪ ಮುಂದೊಡ್ಡಿ ಅಮೇರಿಕಾ ಅಧ್ಯಕ್ಷರು ಆಪ್ಘಾನಿಸ್ಥಾನದಲ್ಲಿದ್ದ ತಮ್ಮ ಸೇನೆಯನ್ನು ದಿಢೀರ್ ವಾಪಸ್ ಕರೆಸಿಕೊಂಡಿದ್ದರ ಹಿಂದೆ ಬೇರೇನೋ ತಂತ್ರಗಾರಿಕೆ ಇದೆ.

0

ಅಪ್ಘನ್ ನಲ್ಲಿ ತಾಲಿಬಾನಿಗಳು ಅಟ್ಟಹಾಸ ಮೆರೆಯೊಕ್ಕೆ ಕಾರಣವೇ ಅಮೆರಿಕಾವಂತೆ..ಹೌದಾ..?ಇಷ್ಟೆಲ್ಲಾ ಆಗಿದ್ದು, ಅಮೇರಿಕಾ ಸರ್ಕಾರದ ತಪ್ಪು ನಿರ್ಧಾರದಿಂದಲಂತೆ ನಿಜವೇ..? ಪರಿಸ್ತಿತಿ ಅವಲೋಕಿಸಿದಾಗ ಇದು ಬಹುತೇಕ ಸತ್ಯ ಎನಿಸುತ್ತದೆ.ಅಮೇರಿಕಾ ಸರ್ಕಾರ ಆಪ್ಘಾನಿಸ್ಥಾನದಲ್ಲಿದ್ದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ರಿಂದಲೇ ತಾಲಿಬಾನಿಗಳು ತಲೆ ಎತ್ತುವಂತೆ ಆಯ್ತು. ಖರ್ಚು ಕಡಿಮೆ ಮಾಡುವ ನೆಪ ಮುಂದೊಡ್ಡಿ ಅಮೇರಿಕಾ ಅಧ್ಯಕ್ಷರು ಆಪ್ಘಾನಿಸ್ಥಾನದಲ್ಲಿದ್ದ ತಮ್ಮ ಸೇನೆಯನ್ನು ದಿಢೀರ್ ವಾಪಸ್ ಕರೆಸಿಕೊಂಡಿದ್ದರ ಹಿಂದೆ ಬೇರೇನೋ ತಂತ್ರಗಾರಿಕೆ ಇದೆ.

ಜಾರ್ಜ್ ಬುಷ್ ಅಧ್ಯಕ್ಷರಾಗಿದ್ದಾಗ ಆಲ್ ಖೈದಾ ನಿರ್ನಾಮವಾಗಿತ್ತು..ಜಾರ್ಜ್ ಬುಷ್ ಅಮೇರಿಕಾ ಅಧ್ಯಕ್ಷರಾಗಿದ್ದಾಗ, ಅಲ್ ಖೈದಾ ಸಂಘಟನೆಯನ್ನು ಹಾಗೂ ಒಸಮಾಬಿನ್ ಲಾಡೆನ್ ನನ್ನು ನಿರ್ನಾಮ ಮಾಡಲು ಪಣತೊಟ್ಟಿದ್ದರು, ಅಲ್ ಖೈದಾಗೆ ಆಶ್ರಯ ನೀಡಿದ್ದ ತಾಲಿಬಾನಿಗಳನ್ನೂ ಹೊಸಕಿ ಹಾಕಲು ಆಪ್ಘಾನಿಸ್ಥಾನಕ್ಕೆ ಅಮೇರಿಕಾ ಸೇನೆಯನ್ನು ಕಳುಹಿಸಲಾಗಿತ್ತು. ಕಳೆದ ವರ್ಷ, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ, 2021 ರಲ್ಲಿ ಅಮೇರಿಕಾ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಆಪ್ಘಾನಿಸ್ಥಾನದ ಅಧ್ಯಕ್ಷರ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದವನ್ನು ಈಗ ಜೋ ಬೈಡೆನ್ ಜಾರಿಗೊಳಿಸುತ್ತಿದ್ದಾರೆ. ಅಷ್ಟಕ್ಕೂ 20 ವರ್ಷಗಳ ಕಾಲ ಆಪ್ಘಾನಿಸ್ಥಾನದಲ್ಲಿದ್ದ ಅಮೇರಿಕಾ ಸೇನೆ ಅಲ್ಲಿ ಮಾಡಿದ್ದಾದರೂ ಏನು..

ಸೇನೆ ವಾಪಸ್ ಕರೆಯಿಸಿಕೊಂಡಿದ್ದಕ್ಕೆ ಕೈ ಕೈ ಹಿಸುಕಿಕೊಳ್ತಿದೆ ಅಮೆರಿಕಾ..ಊರಿಗೆ ಬೆಂಕಿ ಬಿದ್ದಾಗ ಬಾವಿ ತೋಡಿದ ಕಥೆ ನೀವೆಲ್ಲಾ ಕೇಳಿರುತ್ತೀರಿ. ಇದೀಗ ಅಮೆರಿಕದ ಕಥೆ ಕೂಡ ಅದೇ ಆಗಿದೆ. ಸುಮ್ಮನಿರದೆ ಇರುವೆ ಬಿಟ್ಟುಕೊಂಡರು ಎಂಬಂತೆ, ದಿಢೀರ್ ಅಫ್ಘಾನಿಸ್ತಾನದಿಂದ ತನ್ನ ಸೇನೆ ವಾಪಸ್ ಕರೆಸಿಕೊಂಡ ಅಮೆರಿಕ ಈಗ ಪತರಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಗ್ಯಾಂಗ್ ಕಮ್‌ಬ್ಯಾಕ್ ಮಾಡಿದೆ.ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸದ್ಯಕ್ಕೆ ಬಾಕಿ ಉಳಿದಿರುವುದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಮಾತ್ರ. ಆದರೆ ಮಾಡೋದನ್ನೆಲ್ಲಾ ಮಾಡಿ ಈಗ ನಿದ್ದೆಯಿಂದ ಎದ್ದಿರುವ ಅಮೆರಿಕ, ಕಾಬೂಲ್ ರಕ್ಷಣೆಗೆ 5000 ಸೈನಿಕರನ್ನು ಕಳುಹಿಸಲು ಮುಂದಾಗಿದೆ.

ಟೀಕೆಗೆ ಗುರಿಯಾದ ಅಧ್ಯಕ್ಷ ಬೈಡನ್ ಆದೇಶ..ಬೈಡನ್ ಈ ಆಜ್ಞೆ ಹೊರಡಿಸಿದ್ದು, ಅಮೆರಿಕ ಅಧ್ಯಕ್ಷರ ನಿರ್ಧಾರ ಟೀಕೆಗೂ ಗುರಿಯಾಗಿದೆ. ಮೊದಲಿಗೆ ಅಫ್ಘಾನ್‌ನಿಂದ ದಿಢೀರ್ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದೇ ದೊಡ್ಡ ತಪ್ಪು. ಆದ್ರೆ ಈಗ ತಪ್ಪನ್ನ ಮುಚ್ಚಿಕೊಳ್ಳಲು ಅಮೆರಿಕ 5000 ಸಾವಿರ ಸೈನಿಕರನ್ನ ಹೆಚ್ಚುವರಿಯಾಗಿ ಕಳುಹಿಸಿದೆ ಎಂದು ತಜ್ಞರು ಬೇಸರ ಹೊರಹಾಕಿದ್ದಾರೆ. ಜೈ ಬೈಡೆನ್ ಮತ್ತೆ ತನ್ನ ಸೈನಿಕರನ್ನು ಆಪ್ಘಾನಿಸ್ಥಾನಕ್ಕೆ ಕಳುಹಿಸುತ್ತಿರುವುದು ಆಪ್ಘನ್ ಸರ್ಕಾರದ ಬೆಂಬಲಕ್ಕೂ ಅಲ್ಲ, ಆಪ್ಘನ್ ನಾಗರೀಕರ ರಕ್ಷಣೆಗು ಅಲ್ಲ, ಬದಲಿಗೆ ಆಪ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ದೇಶದ ನಾಗರೀಕರು ಮತ್ತು ದೂತಾವಾಸದ ಸಿಬ್ಬಂದಿಯನ್ನು ಸುರಕ್ಷಿತವಾಗಿ ವಾಪಸ್ ಕರೆ ತರೋದಕ್ಕೆ ಈ ಐಡಿಯಾ ಮಾಡಿದ್ದಾರಷ್ಟೇ.

ಅಮೆರಿಕಾ ಮನಸ್ಸು ಮಾಡಿದ್ರೆ ತಾಲಿಬಾನಿಗಳ ದಮನ ಕಷ್ಟನಾ..ಅಮೇರಿಕಾ ಮನಸ್ಸು ಮಾಡಿದ್ದಿದ್ದರೆ, 8 ಕೋಟಿ ಜನಸಂಖ್ಯೆ ಇರುವ ಆಪ್ಘಾನಿಸ್ಥಾನದಲ್ಲಿ, ತಾಲಿಬಾನ್ ಉಗ್ರ್ರರನ್ನು ಹುಡುಕಿ, ಹೊರಗೆಳೆದು ಫಿನಿಶ್ ಮಾಡೋದಕ್ಕೆ ಆಗುತ್ತಿರಲಿಲ್ಲವೇ. 20 ವರ್ಷಗಳಿಂದ ಆಪ್ಘಾನಿಸ್ಥಾನದಲ್ಲಿದ್ದ ಅಮೇರಿಕನ್ ಸೈನಿಕರು ಮಾಡಿದ್ದಾದರೂ ಏನು ಎಂಬುದು ಇಂದಿಗೂ ಅರ್ಥವಾಗುತ್ತಿಲ್ಲ. ಅಮೇರಿಕಾ ಸೈನ್ಯ ನಿಜವಾಗಲೂ ಆಪ್ಘನ್ ಸರ್ಕಾರಿ ಸೈನಿಕರಿಗೆ ತರಬೇತಿ ಕೊಟ್ಟಿದ್ದಿದ್ದರೆ, ಅವರಿಗೆ ಆಧುನಿಕ ಶಸ್ತ್ರಾಸ್ತ್ರಗಳ ನೆರವು ನೀಡಿದ್ದಿದ್ದರೆ ಅವರು ಇಷ್ಟು ಹೀನಾಯವಾಗಿ ಸೋತು ತಾಲಿಬಾನಿಗಳಿಗೆ ಶರಣಾಗುತ್ತಿರಲಿಲ್ಲ.

ಅಲ್ ಖೈದಾದ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದು ಹಾಕಿದ ಮೇಲೆ ಅಮೇರಿಕಾದ ಸೇಡು ಮುಗಿದಿತ್ತು. ತಾಲಿಬಾನಿಗಳ ಮೇಲೆ ಆಮೇರಿಕಾಗೆ ಯಾವುದೇ ಶತ್ರುತ್ವವೂ ಇರಲಿಲ್ಲ. ದ್ವೇಷ ಮೊದಲೇ ಇರಲಿಲ್ಲ. ಮೂಲಗಳ ಪ್ರಕಾರ, ಇಷ್ಟು ವರ್ಷ, ಅಮೇರಿಕಾದಿಂದಲೇ ತಾಲಿಬಾನಿ ಉಗ್ರರಿಗೆ  ರಹಸ್ಯವಾಗಿ ಶಸ್ತ್ರಾಸ್ತ್ರಗಳ ಪೂರೈಕೆ ಆಗುತ್ತಿತ್ತು.ಅಮೇರಿಕಾಗೆ ಬೇಕಾಗಿರೋದು ದುಡ್ಡು, ದುಡ್ಡು ಮಾತ್ರ. ಅದಕ್ಕೆ ಈಗ ನೋಡಿ, ಅಮೇರಿಕಾ ಸೇನೆ ವಾಪಸ್ ಮರಳುವ ಮೊದಲು ತನ್ನ 6 ಅತ್ಯಾಧುನಿಕ ಹೆಲಿಕ್ಯಾಪ್ಟರ್ ಗಳನ್ನು ಅಲ್ಲೇ ಬಿಟ್ಟು ಬಂದಿದೆ. ಅದರ ಅರ್ಥವೇನು..

ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಅಫ್ಘನ್ನರು:ಅಫ್ಘಾನಿಸ್ತಾನದ ಪರಿಸ್ಥಿತಿ ವಿವರಿಸಲು ಪದಗಳು ಸಾಲದು ಕಣ್ಣೀರಿನಲ್ಲೇ ಅಫ್ಘಾನ್‌ ಜನರ ಕರುಣಾಜನಕ ಸ್ಥಿತಿಗತಿ ಹೇಳಬೇಕಾಗಿದೆ. ಏಕೆಂದರೆ ಕರುಣೆಯೇ ಇಲ್ಲದ ಆ ರಾಕ್ಷಸ ತಾಲಿಬಾನಿಗಳು ಅಫ್ಘಾನ್‌ನ ಇಂಚಿಂಚಾಗಿ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಈಗಾಗಲೇ ಅಫ್ಘಾನಿಸ್ತಾನದ ಗಡಿ, ಬಹುತೇಕ ರಾಜ್ಯಗಳ ರಾಜಧಾನಿಗಳು ತಾಲಿಬಾನ್‌ನ ವಶಕ್ಕೆ ಸಿಕ್ಕಿದ್ದಾಗಿದೆ. ಇನ್ನೇನಿದ್ದರೂ ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ಉಗ್ರರ ಕೆಂಗಣ್ಣು ನೆಟ್ಟಿದೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ ಕುಂತಲ್ಲಿ, ನಿಂತಲ್ಲಿ ಬರೀ ಬಾಂಬ್ ಹಾಗೂ ಗುಂಡಿನ ಸದ್ದು ಕೇಳುತ್ತಿದೆ. ಲಕ್ಷಾಂತರ ಜನರು ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿದ್ದಾರೆ.

ಅಮೆರಿಕ ತನ್ನ ಸ್ವಾರ್ಥಕ್ಕೆ ಯಾರನ್ನು ಬೇಕಾದ್ರೂ ಬಳಸಿಕೊಳ್ಳುತ್ತದೆ, ಯಾರಿಗೆ ಬೇಕಾದರೂ ದೋಖ ಮಾಡುತ್ತೆ ಅನ್ನೋ ಆರೋಪಗಳಿವೆ. ಹಾಗೇ ಈ ಆರೋಪಗಳಿಗೆ ತಕ್ಕಂತೆ ಅಮೆರಿಕ ಕೂಡ ನಡೆದುಕೊಳ್ಳುತ್ತಿದೆ.  ಪಾಕಿಸ್ತಾನ ವಿಚಾರದಲ್ಲೂ ಅಮೆರಿಕ ಇಂತಹದ್ದೇ ನಿಲುವು ತಳೆದಿದೆ. ಸರಿಯಾಗಿ 1 ದಶಕದ ಹಿಂದೆ, ಅಂದ್ರೆ 2011ರ ಬಳಿಕ ಪಾಕಿಸ್ತಾನದ ಜೊತೆ ಅಮೆರಿಕ ಮುನಿಸಿಕೊಂಡಿತ್ತು.

ಪಾಕ್ ಜತೆ ಕೈ ಜೋಡಿಸಲು ಮುಂದಾದ ಅಮೆರಿಕಾ..?ನಟೋರಿಯಸ್ ಉಗ್ರ ಒಸಮಾ ಬಿನ್ ಲಾಡೆನ್ ಹತ್ಯೆಯ ಬಳಿಕ ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧ ಹಳಸಿತ್ತು. ಆದ್ರೆ ಕಳೆದ 10 ವರ್ಷಗಳಿಂದಲೂ ಪಾಕ್‌ ವಿರುದ್ಧ ಕೆಂಡಕಾರುತ್ತಿದ್ದ ಅಮೆರಿಕ ಈಗ ದೋಸ್ತಿಗೆ ಮುಂದಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ತಾಲಿಬಾನ್ ಉಗ್ರರು. ಹೌದು, ಅಮೆರಿಕ ಸೇನೆ ಅಫ್ಘಾನಿಸ್ತಾನ ಬಿಟ್ಟು ಹೊರಬಂದಿದೆ. ಹೀಗೆ ಅಮೆರಿಕ ಹೊರ ಹೋಗುತ್ತಿದ್ದಂತೆ ಉಗ್ರರ ಗ್ಯಾಂಗ್ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದೆ.

ವಿಶ್ವಸಂಸ್ಥೆಯ ಮೌನವೂ ಪ್ರಶ್ಮಾರ್ಹ..?ಇಲ್ಲಿ ಒಂದು ಅರ್ಥವಾಗೋದಿಲ್ಲ. ಆಪ್ಘಾನಿಸ್ಥಾನದಲ್ಲಿ ಇಷ್ಟೆಲ್ಲಾ ಆಗ್ತಾ ಇದ್ರೂ ಸಹ ವಿಶ್ವಸಂಸ್ಥೆ ಯಾಕೆ ಕಣ್ಣುಮುಚ್ಚಿಕೊಂಡು ಕೂತಿದೆ. ಭದ್ರತಾ ಮಂಡಳಿಯಲ್ಲಿರುವ ಸದಸ್ಯ ರಾಷ್ಟ್ರಗಳು ಏನು ಮಾಡ್ತಾ ಇವೆ. ಅಮೇರಿಕಾದ ಕೈಗೊಂಬೆಯಾಗಿದೆಯೇ ವಿಶ್ವಸಂಸ್ಥೆ. ಸಿರಿಯಾ, ಇರಾಕ್  ವಿಷಯದಲ್ಲೂ ವಿಶ್ವಸಂಸ್ಥೆ ಹೀಗೆ ನಡೆದುಕೊಂಡಿತ್ತು. ಅಷ್ಟೊಂದು ಬಲಹೀನವಾಗಿ ಹೋಯ್ತೇ ವಿಶ್ವಸಂಸ್ಥೆ. ಹೀಗೆ ಒಂದೊಂದೇ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಬಂಡುಕೋರರರು ಧರ್ಮಾಂಧರ ಕೈ ವಶವಾಗುತ್ತಾ ಹೋಗುತ್ತಿದ್ದರೆ, ಮುಂದೊಂದು ದಿನ ಇಡೀ ವಿಶ್ವವೇ ಧರ್ಮಾಂಧರ ಕೈ ವಶವಾಗಿ ಹೋಗುತ್ತದೇನೋ ಎಂಬ ಆತಂಕ ಕಾಡುತ್ತಿದೆ.

Spread the love
Leave A Reply

Your email address will not be published.

Flash News