Breakinglock downScrollTop Newsಕ್ರೈಮ್ /ಕೋರ್ಟ್ಜಿಲ್ಲೆರಾಜ್ಯ-ರಾಜಧಾನಿ

“”ನನ್ನ ಪೊಲೀಸ್ ನನ್ನ ಹೆಮ್ಮೆ”ಹಾಡಿಹೊಗಳಿದ ಗೃಹಸಚಿವ ಆರಗಜ್ಞಾನೇಂದ್ರ,..ಹೊಗಳಿಕೆ ನಡುವೆಯೇ ಕಿವಿ ಹಿಂಡಿ ಎಚ್ಚರಿಕೆ

ಬೆಂಗಳೂರು: ದಿನದ 24 ಗಂಟೆ ಕಾರ್ಯೋನ್ಮುಖವಾಗಿ ಸಾರ್ವಜನಿಕರ ರಕ್ಷಣೆ ಹಾಗೂ ಆಸ್ತಿಪಾಸ್ತಿಗಳ ಸುರಕ್ಷತೆಗೆ ಕಂಕಣ ತೊಟ್ಟು ಕೆಲಸ ಮಾಡುವ ಪೊಲೀಸ್ ಇಲಾಖೆ ಕಾರ್ಯವೈಖರಿಯನ್ನು ಗೃಹ ಸಚಿವ ಆರಗಜ್ಞಾನೇಂದ್ರ ಮುಕ್ತ ಕಂಠದಿಂದ ಪ್ರಶಂಶಿಸಿದ್ದಾರೆ.ಪೊಲೀಸ್ ಇಲಾಖೆ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳ ಪರೆಡ್ ಹಾಗೂ ವಿವಿಧ ಪ್ರಕರಣಗಳಲ್ಲಿನ ಕಾರ್ಯಸಾಧನೆ ಬಗ್ಗೆ ನಡೆಸಿದ ಸಭೆಯಲ್ಲಿ ಗೃಹಸಚಿವ ಆರಗ ಭಾವುಕರಾಗಿ ಮಾತನಾಡಿದರು.

ನನ್ನ ಪೊಲೀಸ್ ಇಲಾಖೆ ನನ್ನ ಹೆಮ್ಮೆ, ಪೊಲೀಸರ ಕೆಲಸ ನೋಡಿ ನನ್ನ ಹೃದಯ ತುಂಬಿ ಬಂದಿದೆ.ಯಾಕಂದ್ರೆ ಅಷ್ಟೊಂದು ಕೇಸ್ ಗಳನ್ನು ರಿಕವರಿ ಮಾಡಿದ್ದಾರೆ. ಸೈಬರ್ ಕ್ರೈಂ ಸ್ಟೇಷನ್ ಗೂ ನಾನು ವಿಸಿಟ್ ಮಾಡಿದ್ದೇನೆ. ಸೈಬರ್ ಕ್ರೈಂ ಪ್ರಕರಣನ್ನು ಭೇದಿಸೋದು ನೋಡಿದ್ರೆ ಖುಷಿ ಆನಿಸುತ್ತೆ ಎಂದರು.

ನಮ್ಮ ಪೊಲೀಸ್ ವ್ಯವಸ್ಥೆಗೆ ಸಮಗ್ರವಾದ ಬದಲಾವಣೆ ತರುವ ನಿಟ್ಟಿನಲ್ಲಿ ಸಾಕಷ್ಟು ರಿಫಾರ್ಮ್ಸ್ ತರಲಾಗುತ್ತಿದೆ. ಅಂತರಾಷ್ಟ್ರೀಯ ಪೊಲೀಸರು ಸಹ ಬಂದು ತರಬೇತಿ ಪಡೆಯುತ್ತಿದ್ದಾರೆ. ಪೊಲೀಸರು ಯಾವ್ ರೀತಿ ಕೆಲಸ ಮಾಡುತ್ತಾರೆ.ಪ್ರಕರಣ ಬೇಧಿಸುತ್ತಾರೆ ಎನ್ನುವುದನ್ನು ಕೇವಲ ನಾವು ಸಿನಿಮಾಗಳಲ್ಲಿ ನೋಡ್ತಾ ಇದ್ವಿ ಭೇದಿಸೋದು ಹೇಗೆ ಅಂತ ಆದ್ರೆ ಈಗ ಕಣ್ಣ ಮುಂದೆ ನೋಡಿದೆ ಎಂದರು.

400 ಪೊಲೀಸರಿಗೆ 18 ಲಕ್ಷ ಬಹುಮಾನ:ವಿವಿಧ ಪ್ರಕರಣಗಳಲ್ಲಿ 32 ಕೋಟಿ ಮಾದಕ ವಸ್ತುಗಳನ್ನು ಇವತ್ತು ಪೊಲೀಸರು ಪ್ರದರ್ಶನ ಮಾಡಿದ್ದಾರೆ. ಅಂಬರ್ಗ್ರೀಸ್ ಅನ್ನೋದು ನನಗೆ ಗೊತ್ತೇ ಇಲ್ಲ, ಅದು ಒಂದು ಕೆ.ಜಿಗೆ ಒಂದು ಕೋಟಿ ಅಂತೆ.ಡ್ರಗ್ಸ್ ಅನ್ನೋದು ಯುವ ಜನಾಂಗವನ್ನು ಹಾಳು ಮಾಡ್ತಾ ಇದೆ ಎಂದರು.ಇದೇ ವೇಳೆ ಅಸಾಧ್ಯವಾದ ಪ್ರಕರಣ ಬೇಧಿಸಿದ  400_ ಪೊಲೀಸರಿಗೆ 18 ಲಕ್ಷ ಬಹುಮಾನ ನೀಡಿದರು.

ಪೊಲೀಸರ ಹೆಸರುಗಳು ಕ್ರೈಂ ಜತೆಗೆ ಥಳಕು ಹಾಕ್ಕೊಂಡ್ರೆ ಹುಷಾರ್..! ಹೊಗಳಿಕೆ ನಡುವೆಯೇ ಪೊಲೀಸರ ಕಿವಿ ಹಿಂಡುವ ಮಾತನ್ನಾಡಿದ್ದು ಆರಗ ಜ್ಞಾನೇಂದ್ರರ ಕಿಲಾಡಿತನಕ್ಕೆ ಸಾಕ್ಷಿಯಂತಿತ್ತು.ಕೆಲ ಪೊಲೀಸ್ ರ ಬಗ್ಗೆ ಅಪಸ್ವರ ಕೇಳಿಬರುತ್ತಿದೆ.ಅಶಿಸ್ತು,ಅದಕ್ಷತೆ,ಅಪ್ರಮಾಣಿಕತೆಯನ್ನು ನಾನು ಸಹಿಸೊಲ್ಲ ಅಂಥವರನ್ನು ಕ್ಷಮಿಸುವುದೂ ಇಲ್ಲ.ಪೊಲೀಸರು ಅಪ್ರಮಾಣಿಕರಾದರೆ ಅಮಾಜವೇ ಹಾಳಾಗುತ್ತೆ ಎಂದರು.

ಅಪರಾಧಗಳಲ್ಲಿ ಪೊಲೀಸರು ಗುರುತಿಸಲ್ಪಡುತ್ತಿರುವುದು ಸರಿಯಲ್ಲ.ಎಷ್ಟೋ ಕೊಲೆ ಕೇಸ್ ಗಳಲ್ಲಿ ಪೊಲೀಸರೇ ಭಾಗಿ ಆಗ್ತಾರೆ.ಅವರನ್ನ ನೋಡಿದ್ರೆ ಅವಮಾನ ಆಗತ್ತೆಅಂತಹವರನ್ನ ನಾನನು ಕ್ಷಮಿಸೋದಿಲ್ಲ .ಪ್ರಾಮಾಣಿಕರ ಬೆನ್ನು ತಟ್ತೇನೆ,ಅಪ್ರಮಾಣಿಕರಿಗೆ ಮುಲಾಜೇ ಇಲ್ಲ. ಅಪರಾಧಿಗಳ ಪರ ನಿಲ್ಲೋ ಸಿಬ್ಬಂದಿಗಳ ಪಟ್ಟಿ ಮಾಡಿ ಎಂದು ವಾರ್ನಿಂಗ್ ನೀಡಿದ್ರು.

ರೇಖಾ ಕದಿರೇಶ್ ಕೊಲೆ ಪ್ರಕರಣ ಬೇಧಿಸಿದ ಪೊಲೀಸರಿಗೆ ಬಹುಮಾನ: ಇದೇ ವೇಳೆ ರೇಖಾ ಕದಿರೇಶ್ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಬೇಧಿಸಿದ ತಂಡದ ಕಾರ್ಯವೈಖರಿಗೆ ಗೃಹ ಸಚಿವರು ಶಹಬ್ಬಾಸ್ ಗಿರಿ ನೀಡಿದರು. ಚಿಕ್ಕಪೇಟೆ ಎಸಿಪಿ ರವಿ ಮತ್ತು ತಂಡಕ್ಕೆ  ಪ್ರಶಂಸೆ ವ್ಯಕ್ತಪಡಿಸಿದರಲ್ಲದೇ ತಂಡದ ಕಾರ್ಯವೈಖರಿಗೆ 1.25 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

ಅಫ್ಪನ್ ನಾಗರಿಕರ ರಕ್ಷಣೆಗೆ ನಾವು ಬದ್ಧ: ಅಫಘಾನಿಸ್ತಾನಲ್ಲಿ ತಾಲಿಬಾನಿಗಳ ಅಟ್ಟಹಾಸ ಹೆಚ್ಚಿರುವ ಬಗ್ಗೆ ಮಾತನಾಡಿದ ಗೃಹಸಚಿವರು, ರಾಜ್ಯದಲ್ಲಿ ಆಫ್ಘಾನ್ ಪ್ರಜೆಗಳು 300 ಕ್ಕೂ ಅಧಿಕ ಜನರು ಇದ್ದಾರೆ.. 192 ಸ್ಟೂಡೆಂಟ್ಸ್ ವೀಸಾ ಅವಧಿ ಮುಗೀತಾ ಬರ್ತಾ ಇದೆ..ಅವರನ್ನು ಅಸಹಾಯಕವಾಗಿ ನೋಡ್ತಾ ಇದ್ದಾರೆ ಅಂತ ಹೇಳ್ತಾ ಇದ್ದಾರೆ..ಮೀಸಾ ಅವಧಿ ಸಹ ಮುಗೀತಾ ಇದೆ ಅಂತಿದ್ದಾರೆ.. ಅದರ ಬಗ್ಗೆಯೂ ಸಂಬಂಧ ಪಟ್ಟವರ ಬಳಿ ಮಾತನಾಡಲಾಗುವುದು ಎಂದರು.ಆಫ್ಘಾನ್‌ ಜನರ ಪರ ನಮ್ಮ ಸರ್ಕಾರ ಇದೆ, ರಕ್ಷಣೆ ಮಾಡಲಾಗುತ್ತೆ..ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು..

ಕಳ್ಳತನವಾಗಿದ್ದ ಚಿನ್ನಾಭರಣ ವಾಪಸ್..ಇದೇ ವೇಳೆ, ನಗರದಲ್ಲಿ ಕಳ್ಳತನ ಆಗಿದ್ದ ಸುಮಾರು 40 ಕೆಜಿ ಚಿನ್ನಾಭರಣವನ್ನಿ ಸಂಬಂಧಿಸಿದವರಿಗೆ ಹಿಂತಿರುಗಿಸಿದ ರು. ಸೀಜ್ ಆಗಿದ್ದ ಸಾವಿರಾರು ಕೆ.ಜಿ ಗಾಂಜಾ, ಡ್ರಗ್ಸ್ , ರಾಬರಿ, ಕೊಲೆ, ಕಳ್ಳತನ ಕೇಸ್ ನಲ್ಲಿ ವಶಪಡಿಸಿಕೊಂಡ ಮಾಲು ಗಳನ್ನು ಪ್ರದರ್ಶಿಸಿದ ಪೊಲೀಸರ ಕಾರ್ಯವೈಖರಿಯನ್ನು ಕೊಂಡಾಡಿದರು.

Spread the love

Related Articles

Leave a Reply

Your email address will not be published.

Back to top button
Flash News