ಬೆಂಗಳೂರು: ಇದು ಒಂದ್ರೀತಿ ವಿಚಿತ್ರ ಸಾವು..ಅಂದ್ಹಾಗೆ ಈ ಘಟನೆ ನಡೆದಿರೋದು ಬೆಂಗಳೂರಿನ ವಿಜಯನಗರದಲ್ಲಿ. ಸ್ನೇಹಿತರ ಜೊತೆ ಜಗಳವಾಡಿಕೊಂಡಿದ್ದ ಮೋಹನ್ ಗೌಡ ಮನೆಗೆ ಬಂದು ಸೂಸೈಡ್ ಮಾಡ್ಕೊಂಡಿದ್ದಾನೆ.ಆತನ ಶವ ನೋಡೊಕ್ಕೆ ಧಾವಂತದಲ್ಲಿ ಬರುವಾಗ ಆಕ್ಸಿಡೆಂಟಾಗಿ ತಾಯಿ ಲೀಲಾವತಿ ದುರ್ಮರಣಕ್ಕೀಡಾಗಿದ್ದಾರೆ.
ಕ್ಷುಲ್ಲಕ ಸನ್ನಿವೇಶದಲ್ಲಿ ಮೋಹನ್ ಗೌಡ ತನ್ನ ಸ್ನೇಹಿತರು ಬೈದರೆಂದು ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.. ನಂತರ ಖಾಸಗಿ ಆಸ್ಪತ್ರೆಗೆ ಯುವಕನ ರವಾನೆ ಮಾಡಲಾಗಿತ್ತು.ಆದ್ರೆ ಚಿಕಿತ್ಸೆ ಫಲಿಸದೇ ಯುವಕ ಸಾವನಪ್ಪಿದ್ದ.
ಮಗನ ಸಾವಿನ ಸುದ್ದಿ ಕೇಳಿ ತಾಯಿ ಲೀಲಾವತಿ ರಸ್ತೆಯಲ್ಲಿ ಬರುವಾಗ ಅಪಘಾತವಾಗಿದೆ.ಮಗನ ಸಾವಿನ ಸುದ್ದಿಯನ್ನು ಕೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ. ಈ ಸಂಬಂಧ ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.