ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಕೆಂಗೇರಿ ಮಾರ್ಗದ ಮೆಟ್ರೋ ಸಂಚಾರ ಶುರು..

ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗ ಸಂಚಾರ ಆರಂಭವಾಗುವುದರಿಂದ ಈ ಭಾಗದಲ್ಲಿ ದಿನಂಪ್ರತಿ ಕಾಣಸಿಗುತ್ತಿದ್ದ ಟ್ರಾಫಿಕ್ ಜಾಮ್ ಗೆ ಬ್ರೇಕ್ ಬೀಳಲಿದೆ.

0

ಬೆಂಗಳೂರಿಗರಿಗೆ  ಮತ್ತೊಂದು‌ ಸಿಹಿ ಸುದ್ದಿ ನೀಡಲು ಮೆಟ್ರೋ ಮುಂದಾಗಿದೆ. ಅಗಸ್ಟ್ ತಿಂಗಳ ಅಂತ್ಯ ಅಥವಾ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೋ ಮಾರ್ಗ ಸಂಚಾರ ಕಾರ್ಯಾರಂಭಗೊಳ್ಳಲಿದೆ.

ರಸ್ತೆ ಸುರಕ್ಷತೆ ಸಚಿವಾಲಯದಿಂದ ಈಗಾಗಲೇ ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರೆತಿರುವುದರಿಂದ ಈ ಭಾಗದ ಪ್ರಯಾಣಿಕರಿಗೆ ಮೆಟ್ರೋ ಪ್ರಯಾಣ ಭಾಗ್ಯ ದೊರೆಯಲಿದೆ.

ರೈಲ್ವೆ ಸುರಕ್ಷಾ ಲಯದಿಂದ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಸಂಚಾರ ಆರಂಭಿಸಲಿರುವ ಮೆಟ್ರೊ ಮಾರ್ಗಕ್ಕೆ ಮುಖ್ಯಮಂತ್ರಿ ಎಸ್ಆರ್ ಬೊಮ್ಮಾಯಿ ಚಾಲನೆ ನೀಡುವ ಸಾಧ್ಯತೆಗಳಿವೆ.

ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗ ಸಂಚಾರ ಆರಂಭವಾಗುವುದರಿಂದ ಈ ಭಾಗದಲ್ಲಿ ದಿನಂಪ್ರತಿ ಕಾಣಸಿಗುತ್ತಿದ್ದ ಟ್ರಾಫಿಕ್ ಜಾಮ್ ಗೆ ಬ್ರೇಕ್ ಬೀಳಲಿದೆ.ಹಾಗೂ ಕ್ಷಿಪ್ರ ಅವಧಿಯಲ್ಲಿ ಬೆಂಗಳೂರಿನ‌ ನಾನಾ  ಸ್ಥಳಗಳನ್ನು‌ ತಲುಪುವ ಇರಾದೆಯಲ್ಲಿರುವ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Spread the love
Leave A Reply

Your email address will not be published.

Flash News