“ಸಧ್ಯಕ್ಕೆ ಸುರಕ್ಷಿತವಾಗಿದ್ದೇನೆ..ಮುಂದೆ ಗೊತ್ತಿಲ್ಲ..” ತೀರ್ಥಹಳ್ಳಿಯ ಕ್ರೈಸ್ತ ಪಾದ್ರಿ ರಾಬರ್ಟ್ ರಾಡ್ರಿಗಸ್ ಕಣ್ಣೀರು

ತಾಲಿಬಾನಿಗಳ ಅಟ್ಟಹಾಸದಿಂದ ಕ್ಷಣ ಕ್ಷಣಕ್ಕೂ ಪ್ರಕ್ಷುಬ್ಧವಾಗುತ್ತಿರುವ ಅಪ್ಘನ್-ರಕ್ತಸಿಕ್ತ ನೆಲದ ಚಿತ್ರಣ ತೆರೆದಿಟ್ಟ ಫಾದರ್

0

ಶಿವಮೊಗ್ಗ/ತೀರ್ಥಹಳ್ಳಿ:ತಾಲಿಬಾನಿಗಳ ಅತಿಕ್ರಮಣದಿಂದ ಅಕ್ಷರಶಃ ನಲುಗಿ ಹೋಗಿರುವ ಅಪ್ಘಾನಿಸ್ತಾನದಲ್ಲಿ ಸಿಕ್ಕಾಕೊಂಡಿ ರುವ ಭಾರತೀಯರ ಪೈಕಿ ತೀರ್ಥಹಳ್ಳಿಯ ಕ್ರೈಸ್ತ ಪಾದ್ರಿ ಕೂಡ ಒಬ್ಬರು.ರಣರಂಗವಾಗಿರುವ ಸ್ಥಳದಿಂದ ಕೇವಲ 25 ನಿಮಿಷಗ ಳಷ್ಟು ದೂರದ ಪ್ರದೇಶದಲ್ಲಿ ನೆಲೆಸಿರುವ ಕ್ರೈಸ್ತ ಪಾದ್ರಿ ಸಧ್ಯಕ್ಕೆ ನಾನು ಕ್ಷೇಮವಾಗಿದ್ದೇನೆ ಎಂದು ಭಾರತೀಯ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಅಂದ್ಹಾಗೆ ಜೀವಭಯದಲ್ಲಿ ಸಿಕ್ಕಾಕೊಂಡಿರುವ ಫಾದರ್ ರಾಬರ್ಟ್ ರಾಡ್ರಿಗಸ್  ಕಳೆದ ಜನವರಿಯಿಂದ ಕಾಬೂಲ್ ನಲ್ಲಿರುವ ಅಂತರಾಷ್ಟ್ರೀಯ ಎನ್ ಜಿಓ ಆಗಿರುವ ಜೆಸ್ಯೂಟ್ ರೆಫ್ಯೂಜಿ ಸರ್ವಿಸಸ್ ನಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.ಈ ಹಿಂದೆ ಮದ್ಯ ಅಪ್ಘಾನಿಸ್ತಾನದ ಬಾಮಿಯಾನ್ ಪ್ರಾಂತ್ಯದ ರಾಜಧಾನಿ ಬಾಮಿಯಾನ್ ಕೆಲಸ ಮಾಡುತ್ತಿದ್ದರು.ತಾಲಿಬಾನಿಗಳ ಅತಿಕ್ರಮಣದಿಂದ ಅರಾಜಕತೆ ಸೃಷ್ಟಿಯಾದ ಮೇಲೆ ಭಾರತಕ್ಕೆ ವಾಪಸ್ಸಾಗ ಲು ಸಾಕಷ್ಟು ಬಾರಿ ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ..ಈಗ ಪರಿಸ್ತಿತಿ ಕೈ ಮೀರಿದೆ.ಇಲ್ಲಿ ಇರೊಕ್ಕೆ ಸಾಧ್ಯವಾಗದಷ್ಟು ಪ್ರಕ್ಷುಬ್ಧವಾಗಿರೋದ್ರಿಂದ ನಾನು ಮತ್ತು ನನ್ನ ಸಿಬ್ಬಂದಿ ವಾಪಸ್ಸಾಗೊಕ್ಕೆ ಪ್ರಯತ್ನಿಸಿದ್ದೇವೆ. ಸಾಧ್ಯವಾಗುತ್ತಿಲ್ಲ.ಹಾಗಾಗಿ ಅಂತರಾಷ್ಟ್ರೀಯ ಶಾಂತಿ ಸಂಸ್ಥೆಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಹೋದರ ವಿನ್ಸೆಂಟ್ ಸಿಕ್ವೇರಾಗೆ ವಿವರಿಸಿದ್ದಾರೆ.

ಅವರು ಅಲ್ಲಿನ ಸನ್ನಿವೇಶವನ್ನು ಕೆಳಕಂಡಂತೆ ವಿವರಿಸಿದ್ದಾರೆ. ಭಾನುವಾರ ಕಾಬೂಲ್ ವಿಮಾನ ನಿಲ್ದಾಣ ತಲುಪಿದೆವು..ಆದ್ರೆ ಅಷ್ಟರಲ್ಲಾಗಲೇ ತಾಲಿಬಾನಿಗಳು ವಿಮಾನ ನಿಲ್ದಾಣವನ್ನು ಸುತ್ತುವರೆದಿದ್ರು.ಕೆಲವೇ ಕ್ಷಣಗಳಲ್ಲಿ ನೋಡ ನೋಡುತ್ತಿದ್ದಂತೆ ವಿಮಾನ ನಿಲ್ದಾಣವನ್ನೇ  ವಶಪಡಿಸಿಕೊಂಡ್ರು.ಅಪ್ಘಾನಿಸ್ತಾನ ತೊರೆಯುವ ಧಾವಂತದಲ್ಲಿ ವಿಮಾನ ನಿಲ್ದಾಣದತ್ತ ಜನ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ರು.

ಅಷ್ಟೊಂದು ಜನರಿದ್ದ ಕಾರಣಕ್ಕೆ ಸಹಜವಾಗೇ ನೂಕು ನುಗ್ಗಲು ಸೃಷ್ಟಿಯಾಯ್ತು.ಅದರ ನಡುವೆ ತೂರಿಕೊಳ್ಳೊಕ್ಕೆ ನಾವೂ ಯತ್ನಿಸಿದೆವು.ಆದರೆ ಅದಕ್ಕೆ ಅವಕಾಶ ಸಿಗುವ ಲಕ್ಷಣ ಕಾಣಲಿಲ್ಲ.ಇನ್ನು ಬೋರ್ಡಿಂಗ್ ಪಾಸ್, ಭದ್ರತಾ ತಪಾಸಣೆ ಇಲ್ಲದೆ ಫ್ಲೈಟ್ ಹತ್ತುತ್ತಿದ್ದರು.ಈ ಭಯಾನಕ ಸನ್ನಿವೇಶ ಕಂಡು ದಿಗಿಲಾಯ್ತು.ಅದನ್ನು ನೋಡಿ ವಿಧಿಯಿಲ್ಲದೆ  ವಾಪಸ್ಸಾದೆವು.ಈಗ ನಿರಾಶ್ರಿತರ ಕೇಂದ್ರದಲ್ಲಿದ್ದೇವೆ,,ವಿಶ್ವಸಂಸ್ಥೆ ನೆರವಿಗಾಗಿ ಕಾಯುತ್ತಿದ್ದೇವೆ. ಅಮೆರಿಕಾದ ಸೇನಾ ಪಡೆಯ ಸಹಾಯದಿಂದ ಪಾರಾಗಲು ಯತ್ನಿಸುತ್ತಿದ್ದೇನೆ ಎಂದು ಎಂದು ರಾಬರ್ಟ್ ರಾಡ್ರಿಗಸ್ ತಿಳಿಸಿದ್ದಾರೆ.

ಸಧ್ಯಕ್ಕೆ ಇಲ್ಲಿನ ಪರಿಸ್ತಿತಿ ತುಂಬಾ ಗಂಭೀರವಾಗಿದೆ.ನಾವು ಶಾಂತಿ ಪರ ಇದ್ದೇವೆ ಎನ್ನುತ್ತಲೇ ಹಿಂಸಾಚಾರ ಶುರುವಿಟ್ಟುಕೊಂಡಿದ್ದಾರೆ.ಯಾವ್ ಕ್ಷಣದಲ್ಲಿ ಯಾರ ಮೇಲೆ ಅತಿಕ್ರಮಣ ಮಾಡ್ತಾರೆ..ಯಾರನ್ನು ಕೊಂದಾಕುತ್ತಾರೆನ್ನುವುದೇ ಗೊತ್ತಾಗುತ್ತಿಲ್ಲ.ಆದ್ರೆ ಸಧ್ಯದ ಪರಿಸ್ತಿತಿಯಲ್ಲಿ ಏಸುಕ್ರಿಸ್ತನ ದಯೆಯಿಂದ ನಾನು ಸುರಕ್ಷಿತವಾಗಿದ್ದೇನೆ ಎಂದು ವಿವರಿಸಿದ್ದಾರೆ.

ಫಾದರ್ ರಾಬರ್ಟ್ ರಾಡ್ರಿಗಸ್ ಅವರಂತೆ ಮಂಗಳೂರಿನ ಸಿದ್ದಕಟ್ಟೆಯ ಫಾದರ್ ಜೆರೋಮ್ ಸಿಕ್ವೇರಾ ಕೂಡ ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದಾರೆ.ಈ ಹಿನ್ನಲೆಯಲ್ಲಿ ತೀರ್ಥಹಳ್ಳಿ ಶಾಸಕರೇ ಆಗಿರುವ ಗೃಹಸಚಿವ ಆರಗ ಜ್ಞಾನೇಂದ್ರ ಪಾದ್ರಿಗಳನ್ನು ಸುರಕ್ಷಿತವಾಗಿ ಕರೆತರೊಕ್ಕೆ ಅಗತ್ಯವಿರುವವರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.ಪ್ರಾಣಾಪಾಯವಿಲ್ಲದೆ ಭಾರತಕ್ಕೆ ವಾಪಸ್ ಮರಳಿ ತರುವ ಭರವಸೆ ನೀಡಿದ್ದಾರೆನ್ನಲಾಗಿದೆ.

Spread the love
Leave A Reply

Your email address will not be published.

Flash News