Breakinglock downScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜ್ಯ-ರಾಜಧಾನಿ

ಬೆಂಗಳೂರು “ಪಾತಕ”ಲೋಕದ “ಡಾನ್ ಶಿಪ್” ಗೆ ಸೈಲೆಂಟ್-ಸೈಕಲ್ ನಡುವೆ ಪೈಪೋಟಿ..

ಪಾತಕಿ ಸೈಲೆಂಟ್
ಪಾತಕಿ ಸೈಲೆಂಟ್
ಸೈಕಲ್ ರವಿ
ಪಾತಕಿ ಸೈಕಲ್ ರವಿ

ಬೆಂಗಳೂರು:ಪಾತಕ ಲೋಕವೇ ಹಾಗೆ,ಅಲ್ಲಿ ಎಲ್ಲವೂ ಸೈಲೆಂಟಾಗಿದೆ ಎಂದುಕೊಂಡ್ರೆ ಅದು ಮತ್ತೊಂದು ಚಟುವಟಿಕೆಗೆ ಅಖಾಡ ಸಜ್ಜುಗೊಳಿಸ್ತಿದೆ ಎಂದೇ ಅರ್ಥ.ಅಲ್ಲಿ ಸೈಲೆಂಟ್ ಎನ್ನುವ ಪದಕ್ಕೆ ಅರ್ಥವೇ ಅಲ್ಲ..ಬೆಂಗಳೂರಿನ ಪಾತಕ ಲೋಕದ್ದೂ ಅದೇ ಕಥೆ..ಈಗ ಚರ್ಚೆ ಹುಟ್ಟಾಕಿರೋದು ಹಾಗೂ ಆಕ್ಟಿವಿಟಿ ಶುರುವಾಗಿರೋದು ಅಂಡರ್ ವರ್ಲ್ಡ್ ಡಾನ್ ಶಿಪ್ ಕಿರೀಟಕ್ಕೆ..ದಕ್ಕಿಸಿಕೊಳ್ಳಲೇಬೇಕೆನ್ನುವ ಜಿದ್ದಿನಲ್ಲಿ ಅದು ಸಿಕ್ಕಾಪಟ್ಟೆ ವೈಲೆಂಟಾಗೇ ನಡೆಯುತ್ತಿದೆ ಎನ್ನುತ್ವೆ ಪಾತಕ ಲೋಕದ ಬೆಳವಣಿಗೆಗಳು.

ಹೌದು..ಬೆಂಗಳೂರಿನ ಪಾತಕ ಲೋಕಕ್ಕೆ ಸಧ್ಯ ಡಾನ್ ಯಾರು..? ಯಾರ ಹುಕುಮತ್ತಿನಲ್ಲಿ ಎಲ್ಲವೂ ನಡೆಯಬೇಕೆನ್ನುವುದು ಫೈಸಲ್ ಆಗಿದೆ.ಯಾರ ಅಣತಿಯಂತೆ ಇಲ್ಲಿನ ಚಟುವಟಿಕೆಗಳು ಕಂಟ್ರೋಲ್ ಆಗಬೇಕಿದೆ..? ಈ ಎಲ್ಲಾ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರವಿಲ್ಲ..ಏಕೆಂದರೆ ಸಧ್ಯಕ್ಕೆ ಆ ಒಂದು “ಡಾನ್” ಸಿಂಹಾಸನ ಸಧ್ಯಕ್ಕೆ ಖಾಲಿಯಾಗೇ ಇದೆ..ಆ ಸಿಂಹಾಸನದಲ್ಲಿ ಮೆರೆಯಬೇಕೆನ್ನುವ ನಿಟ್ಟಿನಲ್ಲೇ ಒಂದು ಪೈಪೋಟಿ ಇದೀಗ ಶುರುವಾಗಿದೆ.

ಇದೆಲ್ಲವೂ ಒಂದ್ ಹಂತದಲ್ಲಿ ಆಕ್ಟೀವಾಗಿ ನಡೆಯುತ್ತಿದ್ದರೆ ಇತ್ತ,ಕೆಲವು ಸೀನಿಯರ್ ರೌಡಿಗಳು “ಸೈಲೆಂಟಾ”ಗೇ ಆ  ಪಾತಕಿಯನ್ನು ಡಾನ್ ಪಟ್ಟಕ್ಕೇರಿಸೊಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ರಂತೆ.ಅದಕ್ಕೆ ಪಾತಕ ಲೋಕದಲ್ಲಿ ಬೆಳೆದಿರುವ-ಬೆಳೆಯುತ್ತಿರುವ ರೌಡಿಗಳ ಅಭಿಪ್ರಾಯ ಸಂಗ್ರಹಿಸುವ ಕೆಲಸ ಬಹುತೇಕ ಪೂರ್ಣಗೊಂಡಿತ್ತಂತೆ.ಆದ್ರೆ ಆ ಒಂದು ಬೆಳವಣಿಗೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆನ್ನುವುದು ಸಧ್ಯದ ವರ್ತಮಾನ.

ಹೌದು..ರೌಡಿಯಿಸಂನಲ್ಲಿ ಸೀನಿಯರ್ ಎನಿಸಿಕೊಂಡ ಆ ಇಬ್ಬರು,ತಮ್ಮ ಬಲಗೈ ಭಂಟ ಹಾಗೂ ಪಾತಕ ಲೋಕದಲ್ಲಿ ನಟೋರಿಟಿ ಪಡೆದಿರುವ ತಮ್ಮ ಹುಡುಗನನ್ನೇ ಡಾನ್ ಮಾಡೊಕ್ಕೆ ಹೊರಟಿದ್ದರೆನ್ನುವುದು ಸಧ್ಯದ ಸುದ್ದಿ.ಅಂದ್ಹಾಗೆ ಕೆಲವು ಪೊಲೀಸ್ ಮೂಲಗಳ ಪ್ರಕಾರ ಡಾನ್ ಆಗಲಿಕ್ಕೆ ಹೊರಟಿದ್ದಾತ ಪಾತಕಿ ಸೈಲೆಂಟ್ ಸುನೀಲನಾದ್ರೆ ಆತನನ್ನು ಪ್ರತಿಷ್ಟಾಪಿಸ್ಲಿಕ್ಕೆ ಹೊರಟಿದ್ದ ಆ ಇಬ್ಬರೇ ಶ್ರೀಧರ್ ಹಾಗೂ ಬಚ್ಚನ್ ಎನ್ನಲಾಗ್ತಿದೆ.

ಸೈಲೆಂಟ್ ಸುನೀಲನಿಗಿರುವ ನಟೋರಿಟಿಯನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವುದು ಶ್ರೀಧರ್ ಅಂಡ್ ಬಚ್ಚನ್ ಸಿಂಡಿಕೇಟ್ ನ ಪ್ಲ್ಯಾನ್ ಎನ್ನಲಾಗ್ತಿದೆ.ನಾರ್ತ್ ಹಾಗೂ ಸೌತ್ ಎಂದು ಡಿವೈಡ್ ಆಗಿರುವ ಬೆಂಗಳೂರಿನ ರೌಡಿಯಿಸಂನಲ್ಲಿ ಸುನೀಲ ಮೂಡಿಸಿರುವ ಹೆಜ್ಜೆ ಗುರುತುಗಳನ್ನೇ ಇಟ್ಕೊಂಡು ಡಾನ್ ಸ್ಥಾನದಲ್ಲಿ ಕುಳ್ಳರಿಸಿದ್ರೆ ಇಡೀ ಅಂಡರ್ ವರ್ಲ್ಡ್ ತಮ್ಮ ಕೈಲಿರುತ್ತೆನ್ನುವ ಇರಾದೆಯಲ್ಲಿ ಶ್ರೀಧರ್-ಬಚ್ಚನ್ ಸುನೀಲ್ ನನ್ನು ಸೈಲೆಂಟಾಗೇ ಡಾನ್ ಪಟ್ಟದಲ್ಲಿ ಕೂರಿಸೊಕ್ಕೆ ಮುಂದಾಗಿದ್ದರಂತೆ.

ಶ್ರೀಧರ್ @ ಅಗ್ನಿ ಶ್ರೀಧರ್
ಶ್ರೀಧರ್ @ ಅಗ್ನಿ ಶ್ರೀಧರ್
ಬಚ್ಚನ್ @ ಅಮಾನುಲ್ಲ ಶರೀಫ್‌
ಬಚ್ಚನ್ @ ಅಮಾನುಲ್ಲ ಶರೀಫ್‌

ಸೈಲೆಂಟ್ ಸುನೀಲನನ್ನೇ ಡಾನ್ ಪಟ್ಟಕ್ಕೇರಿಸೊಕ್ಕೆ ಕಾರಣವೂ ಇದೆಯಂತೆ.ಡಾನ್ ಮುತ್ತಪ್ಪ ರೈ ನಂತರ ಬೆಂಗಳೂರು ಪಾತಕ ಲೋಕವನ್ನು ರೂಲ್ ಮಾಡಿದವರಿಲ್ಲ..ಹಾಗೆ ಹೀಗೆ ಬಂದವರೆಲ್ಲಾ ಅಲ್ಲಲ್ಲಿ ಅಬ್ಬರಿಸಿದವರೇ ಹೊರತು,ಮುತ್ತಪ್ಪ ರೈ ನಷ್ಟು ಸ್ಟ್ರಾಂಗ್ ಇರಲಿಲ್ಲ.ಈ ನಡುವೆ ಮತ್ತೋರ್ವ ನಟೋರಿಯಸ್ ಸೈಕಲ್ ರವಿ ಸಾಕಷ್ಟು ಸದ್ದು ಮಾಡಿದ್ದೂ ಉಂಟು.ಅವನಿಗೆ ಠಕ್ಕರ್ ಕೊಡ್ಲಿಕ್ಕೆ ಸೈಲೆಂಟ್ ಕೂಡ ತನ್ನ ಲಿಮಿಟ್ಸ್ ಮೀರಿ ಸಾಕಷ್ಟು ತಲ್ಲಣ ಮೂಡಿಸಿದ್ದುಂಟು. ಇವತ್ತೇನಾದ್ರೂ ಬೆಂಗಳೂರಿನ ಪಾತಕ ಲೋಕದಲ್ಲಿ ಸದ್ದುಮಾಡುತ್ತಿರುವ ಎರಡು ಹೆಸರುಗಳೆಂದ್ರೆ ಅದು ಸೈಕಲ್ ರವಿ ಹಾಗೂ ಸೈಲೆಂಟ್ ಸುನೀಲ..ಇದನ್ನು ಇಡೀ ಪಾತಕಲೋಕ ಕೂಡ ನಿರ್ವಿವಾದವಾಗಿ ಒಪ್ಪಿಕೊಳ್ಳುತ್ತೆ.

ದಕ್ಷಿಣ ವಲಯ ಡಿಸಿಪಿ ಹರೀಶ್ ಪಾಂಡೆ
ದಕ್ಷಿಣ ವಲಯ ಡಿಸಿಪಿ ಹರೀಶ್ ಪಾಂಡೆ

ಎಲ್ಲವೂ ಅಂದುಕೊಂಡಂತೆ ಆಗಿದಿದ್ದರೆ ಸೈಲೆಂಟ್ ಸುನೀಲ್ ನನ್ನು ಡಾನ್ ಸ್ಥಾನದಲ್ಲಿ ಕೂರಿಸುವ ಕೆಲಸ ನಡೆದೋಗಿಬಿಡುತ್ತಿತ್ತಂತೆ.ಆದ್ರೆ ಇದಕ್ಕೆ ಸುತಾರಾಂ ಒಪ್ಪದ ಸೈಕಲ್ ರವಿ,ನಾರ್ಥ್ ನಲ್ಲಿ ಆತನೇ ಅಬ್ಬರಿಸಲಿ,ಸೌತ್ ನಲ್ಲಿ ನನ್ನದೇ ಹವಾ ನಡೆಯಬೇಕು.ಬಾರ್ಡರ್ ಕ್ರಾಸ್ ಮಾಡುವ ಧೈರ್ಯವನ್ನು ಅವನೂ ಮಾಡಬಾರದು,ನಾನೂ ಮಾಡೋದಿಲ್ಲ ಎಂದು ಕುಳಿತಲ್ಲೇ ಅಬ್ಬರಿಸಿದ್ನಂತೆ.ಆಮೇಲೇನೆ ಸೈಲೆಂಟ್ ನನ್ನು ಡಾನ್ ಸ್ಥಾನದಲ್ಲಿ ಪ್ರತಿಷ್ಟಾಪಿಸುವ ಆಲೋಚನೆಯನ್ನು ಶ್ರೀಧರ್,ಬಚ್ಚನ್ ಕೈ ಬಿಟ್ಟಿದ್ದಂತೆ ಎನ್ನುವ ಮಾತುಗಳಿವೆ.

ಇಬ್ಬರ ನಡುವೆ ಹೇಳಿಕೊಳ್ಳುವಂತ ದುಶ್ಮನಿ ಇಲ್ಲದಿದ್ದರೂ ಡಾನ್ ಶಿಪ್ ವಿಷಯದಲ್ಲಿ ಪರಸ್ಪರ ಬಡಿದಾಡಿಕೊಳ್ಳುವ ಸನ್ನಿವೇಶ ನಿರ್ಮಾಣವಾದ್ರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.ಹಾಗಾಗಿನೇ ರಕ್ತಪಾತಕ್ಕೆ ಅವಕಾಶ ನೀಡದೆ ಪೊಲೀಸ್ರೇ ಎಂಟ್ರಿ ಹೊಡೆದು ಇಬ್ಬರನ್ನು ಪ್ರತ್ಯೇಕವಾಗಿ ವಾರ್ನ್ ಮಾಡಿದ್ದಾರಂತೆ.

ನಿಮ್ ನಿಮ್ ಪಾಡಿಗೆ ನೀವು ಸುಮ್ಮನಿದ್ರೆ ಸರಿ..ಬಾಲ ಬಿಚ್ಚಿದ್ರೂ ಗ್ರಹಚಾರ ಬಿಡಿಸಿಬಿಡ್ತೀನಿ ಎಂದು ದಕ್ಷಿಣ ವಲಯದ ಡಿಸಿಪಿ ಹರೀಶ್ ಪಾಂಡೆ ಎಚ್ಚೆರಿಸಿದ್ದಾರಂತೆ.ಶ್ರೀಧರ್ @ ಅಗ್ನಿ ಶ್ರೀಧರ್ ಮತ್ತು ಬಚ್ಚನ್ @ ಅಮಾನುಲ್ಲ ಶರೀಫ್‌ ಅವರನ್ನು ಸ್ಟೇಷನ್ ಗೆ ಕರೆಯಿಸಿ ಅವಾಜ್ ಬಿಟ್ಟಿದ್ದಾರೆ.ಡಾನ್ ಗೀನ್ ಅಂಥಾ ನಾಟಕ ಶುರುವಿಟ್ರುಕೊಂಡ್ರೋ ಏರೋಪ್ಲೇನ್ ಹತ್ತಿಸಿಬಿಡ್ತೀನಿ ಹುಷಾರ್..ಜನರನ್ನು ನೆಮ್ಮದಿಯಿಂದ ಬದುಕೊಕ್ಕೆ ಬಿಡಿ..ಇಲ್ಲಾಂದ್ರೆ ನಿಮ್ಮನ್ನು ಹೇಗೆ ಸುಮ್ಮನಿರಿಸ್ಬೇಕೆನ್ನೋದು ಗೊತ್ತಿದೆ ಎಂದು ವಾರ್ನ್ ಮಾಡಿ ಕಳುಹಿಸಿದ್ದಾರೆ.

ಯಾವುದೇ ಕೇಸ್ ನಲ್ಲಿ ಡೈರೆಕ್ಟ್ ಅಥವಾ ಇನ್ ಡೈರೆಕ್ಟ್ ಆಗಿ ಇನ್ವಾಲ್ ಆಗಬಾರದು ಎಂದು ಶ್ರೀಧರ್ @ ಅಗ್ನಿ ಶ್ರೀಧರ್ ಮತ್ತು ಬಚ್ಚನ್ @ ಅಮಾನುಲ್ಲ ಶರೀಫ್‌ಗೆ ಎಚ್ಚರಿಸಿರುವ ಡಿಸಿಪಿ ಹರೀಶ್ ಪಾಂಡೆ, ಜಯನಗರದ ಉದ್ಯಮಿ ಮದನ್ ಕೊಲೆಯಲ್ಲೂ ಶ್ರೀಧರ್ ಮತ್ತು ಬಚ್ಚನ್ ನೆರಳಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಯಾವ ರೌಡಿ  ಪರೇಡ್  ಗೂ ಹಾಜರಾಗದ ಅಗ್ನಿ  ಶ್ರೀಧರ್ ಮತ್ತು ಬಚ್ಚನ್ ನ ಠಾಣೆಗೆ ಕರೆಸಿ ಕೇಸ್ ಹಾಕಿಸಿದ್ದಾರೆ.ಕುಮಾರಸ್ವಾಮಿ ಪೊಲೀಸ್ ಠಾಣೆ ರೌಡಿ‌ಶೀಟರ್ ಆಗಿರುವ ಶ್ರೀಧರ್  ಮತ್ತು ಬಚ್ಚನ್ 110 ಕೇಸ್ ನಲ್ಲಿ ಇನ್ವಾಲ್ವ್ ಆಗಿರುವುದು ಪೊಲೀಸ್ ದಾಖಲೆಗಳಲ್ಲಿದೆ.ನಿಮಗೆ ಗೊತ್ತಿರಲಿ,ಇವರಿಬ್ಬರು ಎಂಥಾ ದುಬಾರಿ ರೌಡಿಗಳೆಂದ್ರೆ, ಯಾವ ರೌಡಿಯಿಂದಲೂ ಪಡೆಯದ. ಅತೀ  ಹೆಚ್ಚು ಬಾಂಡ್ರೇಜ್ ತಲಾ ಹತ್ತು ಲಕ್ಷ ಬಾಂಡ್ ಶ್ಯೂರಿಟಿಯನ್ನು ಕುಮಾರಸ್ವಾಮಿ ಲೇಔಟ್ ಪೊಲೀಸ್ರು ಪಡೆದುಕೊಂಡಿದ್ದಾರಂತೆ.

ಅದೇನೇ ಇರಲಿ,ಬೆಂಗಳೂರು ಡಾನ್ ಪಟ್ಟಕ್ಕೆ ನಡೆಯುತ್ತಿದ್ದ ಪೈಪೋಟಿ ಅತಿರೇಕ ಅಥವಾ ಅಪಾಯಕ್ಕೆ ತಿರುಗುವ ಅವಕಾಶಗಳಿದ್ವು.ಡಾನ್ ಪಟ್ಟ ಸೈಲೆಂಟ್ ಸುನೀಲನಿಗೆ ನೀಡಿದ್ದೇ ಆಗಿದಿದ್ರೆ ಅದಕ್ಕೆ ಪ್ರತೀಕಾರವಾಗಿ ಮತ್ತೊಂದಷ್ಟು ಕೊಲೆ-ಸುಲಿಗೆ ನಡೆದೋಗುತ್ತಿತ್ತೇನೋ..ಆದ್ರೆ ಪೊಲೀಸ್ರ ಸಕಾಲಿಕ ಪ್ರವೇಶದಿಂದ ಸಂಭವಿಸಬಹುದಾಗಿದ್ದ ಬಹುದೊಡ್ಡ ದುರಂತ ತಪ್ಪೋಗಿದೆ..

Spread the love

Related Articles

Leave a Reply

Your email address will not be published.

Back to top button
Flash News