ಜಸ್ಟ್ ಮಿಸ್..ಪರಪ್ಪನ ಅಗ್ರಹಾರದಲ್ಲಿ ನಡೆಯಬಹುದಾಗಿದ್ದ ಅನಾಹುತಕ್ಕೆ ಬ್ರೇಕ್: -18 ನಟೋರಿಯಸ್ ಪಾತಕಿಗಳು ಶಿಫ್ಟ್…

ನಟೋರಿಯಸ್ ರೌಡಿಗಳಾದ ನಾಗರಾಜ್ @ ನಾಗ,ಜಾರ್ಜ್, ಮೈಕಲ್ , ಪ್ರದೀಪ್@ ಚೊಟ್ಟೆ, ಬಾಂಬೆ ಸಲೀಂ ಸ್ಥಳಾಂತರ

0

ಬೆಂಗಳೂರು:ಪರಪ್ಪನ  ಅಗ್ರಹಾರ ಮತ್ತೊಮ್ಮೆ ಸುದ್ದಿಯಲ್ಲಿದೆ.ಇದಕ್ಕೆ ಕಾರಣ ರೌಡಿಗಳ ಸ್ಥಳಾಂತರ.ಜೈಲಿನಲ್ಲಿದ್ದುಕೊಂಡೇ ಕ್ರೈಮ್ ಚಟುವಟಿಕೆಗಳನ್ನು ನಡೆಸೊಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೆನ್ನಲಾದ ಆಪಾದನೆ ಹಿನ್ನಲೆಯಲ್ಲಿ ಜೈಲ್ ಮುಖ್ಯ ಅಧೀಕ್ಷಕರು ಸಂಭವಿಸಬಹುದಾಗಿದ್ದ ಭಾರೀ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲ್ ನಲ್ಲಿ ವಿವಿಧ ಬರಾಕ್ ಗಳಲ್ಲಿದ್ದ ವಿವಿಧ ಗುಂಪಿನ ರೌಡಿಗಳು ಪಾತಕವನ್ನು ನಡೆಸೊಕ್ಕೆ ಸಿದ್ಧತೆ ನಡೆಸಿದ್ದರಂತೆ.ಪಾತಕ ನಡೆಸೊಕ್ಕೆ ಎಲ್ಲಾ ರೀತಿಯ ಸ್ಕೆಚ್ ಕೂಡ ರೂಪಿಸಿದ್ದರಂತೆ.ಇದಕ್ಕಾಗಿ ಬೇಕಾದ ಮಾರಕಾಸ್ತ್ರವನ್ನು ಸಿದ್ಧಮಾಡಿಟ್ಟುಕೊಂಡು ಮುಹೂರ್ತ ರೆಡಿ ಮಾಡಿಕೊಂಡಿದ್ದರಂತೆ.

ಆದರೆ ಮೇಲ್ಕಂಡ ಸಂಗತಿಯನ್ನು ತಮ್ಮದೇ ಮೂಲಗಳಿಂದ ಅರಿತುಕೊಂಡ ಜೈಲ್ ಅಧಿಕಾರಿಗಳು ಜೈಲಿನಲ್ಲಿದ್ದುಕೊಂಡೇ ಅಪರಾಧ ಚಟುವಟಿಕೆಗಳು ಮಾಡಿಸಲು ಸಂಚು ರೂಪಿಸುತ್ತಿದ್ದ ರೌಡಿಯ ಸ್ವಾಮಿಗಳು ..ನಟೋರಿಯಸ್ ಪಾತಕಿಗಳಾದ ವಿಲ್ಸನ್ ಗಾರ್ಡನ್ ನಾಗರಾಜ್ ಅಲಿಯಾಸ್ ನಾಗ.  ಜಾರ್ಜ್, ಮೈಕಲ್ , ಪ್ರದೀಪ್ ಅಲಿಯಾಸ್  ಚೊಟ್ಟೆ,  ಬಾಂಬೆ ಸಲೀಂ ಸೇರಿದಂತೆ ಒಟ್ಟು 18 ರೌಡಿಗಳ ಚಲನವನಗಳನ್ನು ಪತ್ತೆ ಮಾಡಿ ತತ್ ಕ್ಷಣಕ್ಕೆ  ಸ್ಥಳಾಂತರ ಮಾಡಿದ್ದಾರೆ.

ಈ ಪಾತಕಿಗಳು ಜೈಲಿನಲ್ಲಿನಿಂದಲೇ ತಮ್ಮ ಸಹಚರರೊಂದಿಗೆ ಅಪರಾಧ ಚಟುವಟಿಕೆ ಗಳನ್ನು ಮಾಡಿಸುತ್ತಿದ್ದ ರೆನ್ನಲಾಗಿದೆ.

ಅಲ್ಲದೇ ಬೆಂಗಳೂರಿನ ಡಾನ್ ಪಟ್ಟ ಪಡೆದುಕೊಳ್ಳಲು  ಕ್ರಿಮಿನಲ್ ಗಳ ನಡುವೆ ದೊಡ್ಡಮಟ್ಟದ ಪ್ಲ್ಯಾನ್ ಕೂಡ ನಡೆದಿತ್ತೆನ್ನುವ ಸಂಗತಿ ಕಮಿಷನರ್ ಕಮಲಪಂತ್ ವರೆಗೂ ಮುಟ್ಟಿತ್ತು.ಆಗಬಹುದಾದ ಭಾರೀ ದುರಂತವನ್ನು ಮನಗಂಡ ಕಮಿಷನರ್ ಪರಪ್ಪನ ಅಗ್ರಹಾರ ದಲ್ಲೂ ಇದಕ್ಕೆ ಪೂರಕವಾದ ರೂಪುರೇಷೆ ಸಿದ್ಧವಾಗುತ್ತಿರುವುದನ್ನು ಸೂಪರಿಂಟೆಂಡೆಂಟ್ ಅವರ ಗಮನಕ್ಕೆ ತಂದಿದ್ದಾರಲ್ಲದೇ ತತ್ ಕ್ಷಣಕ್ಕೆ ಕಾರ್ಯಪ್ರವೃತ್ತವಾಗುವಂತೆ ಸೂಚಿಸಿದ್ದಾರೆ.

ಕಮಿಷನರ್ ಕಮಲಪಂತ್ ಅವರ ಆದೇಶ ಹಾಗೂ ಸೂಚನೆ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಜೈಲ್ ಅಧಿಕಾರಿಗಳು ವಿಲ್ಸನ್ ಗಾರ್ಡನ್ ನಾಗರಾಜ್ ಅಲಿಯಾಸ್ ನಾಗ.  ಜಾರ್ಜ್, ಮೈಕಲ್ , ಪ್ರದೀಪ್ ಅಲಿಯಾಸ್  ಚೊಟ್ಟೆ,  ಬಾಂಬೆ ಸಲೀಂ ಸೇರಿದಂತೆ ಒಟ್ಟು 18 ರೌಡಿಗಳ ಸ್ಥಳಾಂತರ ಮಾಡಿ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

ಈ ಹಿನ್ನಲೆಯಲ್ಲಿ ಜೈಲುಗಳಲ್ಲಿ ಒಂದೇ ಗುಂಪಿನಲ್ಲಿದ್ದ  ರೌಡಿಗಳನ್ನು  ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.ಸ್ಥಳಾಂತರದ ಹೊರತಾಗ್ಯೂ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೇಲ್ಕಂಡ ರೌಡಿಗಳ ಸಹಚರರ ಬಗ್ಗೆ ಶಂಕೆ ಇದ್ದು,ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Spread the love
Leave A Reply

Your email address will not be published.

Flash News