BreakingTop NewsUncategorizedರಾಜಕೀಯರಾಜ್ಯ-ರಾಜಧಾನಿ

ಮುಖ್ಯಮಂತ್ರಿ ಬೊಮ್ಮಾಯಿ ಮಾದ್ಯಮ ಸಂಯೋಜಕರಾಗಿ ಪತ್ರಕರ್ತ ಗುರುಲಿಂಗಸ್ವಾಮಿ ನೇಮಕ.

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಾದ್ಯಮ  ಸಂಯೋಜಕರಾಗಿ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ನೇಮಕಗೊಂಡಿದ್ದಾರೆ.ರಾಜ್ಯ ಸರ್ಕಾರದ ಸಚಿವಾಲಯದಿಂದ ಗುರುಲಿಂಗಸ್ವಾಮಿ ಅವರ ನೇಮಕವನ್ನು ಅಧೀಕೃತಗೊಳಿಸಿದೆ.

18-08-2021 ರಂದು ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ ಸೇವೆಗಳು ವಿಭಾಗದ ಅಧೀನ ಕಾರ್ಯದರ್ಶಿ ಟಿ.ಮಹಾಂತೇಶ್ ಅವರ ಪ್ರಕಟಣೆಯಲ್ಲಿ “02-08-2021 ರಿಂದ ಜಾರಿಗೆ ಬರುವಂತೆ ಮಾನ್ಯ ಮುಖ್ಯಮಂತ್ರಿ ಅವರ ಪದಾವಧಿವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿವರೆಗೆ ಗುತ್ತಿಗೆ ಆಧಾರದ ಮೇಲೆ ಮಾನ್ಯ ಮುಖ್ಯಮಂತ್ರಿ ಅವರ ಮಾಧ್ಯಮ ಸಂಯೋಜಕರನ್ನಾಗಿ ನೇಮಿಸಿದೆ ಎಂದು ಉಲ್ಲೇಖಿಸಲಾಗಿದೆ.

ಅಂದ್ಹಾಗೆ ಮುಖ್ಯಮಂತ್ರಿ ಅವರ ಮಾದ್ಯಮ ಸಂಯೋಜಕರಾಗಿ ನೇಮಕಗೊಂಡಿರುವ ಗುರುಲಿಂಗಸ್ವಾಮಿ ರಾಜ್ಯದ ಅನೇಕ ಪತ್ರಿಕೆಗಳು ಹಾಗೂ ನ್ಯೂಸ್ ಚಾನೆಲ್ ಗಳಲ್ಲಿ ವರದಿಗಾರ,ಹಿರಿಯ ವರದಿಗಾರ..ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಅಪಾರ ಅನುಭವ ಹೊಂದಿದ್ದಾರೆ.

ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ
ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ

ಬಸವರಾಜ್ ಬೊಮ್ಮಾಯಿ ಅವರಿಗೆ ಅತ್ಯಾಪ್ತರಾಗಿರುವ ಗುರುಲಿಂಗಸ್ವಾಮಿ, ಈ ಹಿಂದೆ ಬೊಮ್ಮಾಯಿ ಗೃಹಸಚಿವರಾಗಿದ್ದಾಗಲೂ ಅವರ ಮಾದ್ಯಮ ಸಂಯೋಜಕರಾಗಿ ಕೆಲಸ ಮಾಡಿದ್ದರು.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಮಾದ್ಯಮ ಸಂಯೋಜಕರ ಹುದ್ದಗೆ ಅನೇಕ ಹಿರಿಯ ಪತ್ರಕರ್ತರು ನಾನಾ ರೀತಿಯ ಲಾಭಿ ನಡೆಸಿದ್ದರು.ಆದ್ರೆ ಅಂತಿಮವಾಗಿ ಗುರುಲಿಂಗಸ್ವಾಮಿ ಅವರ ಅನುಭವ ಹಾಗೂ ನಿಷ್ಠೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅವರ ನೇಮಕವನ್ನು ಅಂತಿಮಗೊಳಿಸಲಾಗಿದೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ;ಎಸ್ ಯಡಿಯೂರಪ್ಪ ಅವರಿಗೆ ಮಾದ್ಯಮ ಸಂಯೋಜಕರಾಗಿ ಕೆಲಸ ಮಾಡಿದ್ದ ಸುನೀಲ್ ಅವರನ್ನು ಕೂಡ ಗುರುಲಿಂಗಸ್ವಾಮಿ ಅವರ ಜತೆಗೆ ಮಾದ್ಯಮ ಸಂಯೋಜಕರಾಗಿ ಮುಂದುವರೆಸಲಾಗಿದೆ.ಮಾದ್ಯಮ ಮುಖ್ಯಸ್ಥರ ಹುದ್ದೆ ಖಾಲಿಯಿದ್ದು ಅದಕ್ಕೆ ಪತ್ರಕರ್ತರ ವಲಯದಲ್ಲಿ ದೊಡ್ಡಮಟ್ಟದ ಲಾಭಿ ನಡೆಯಿತ್ತಿದೆ ಎನ್ನಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News