ಆತ, ಅಕ್ಕನನ್ನು ಬಿಗಿದಪ್ಪಿ ಅಳೊಕ್ಕೆ..ಪೊಲೀಸರು ಕಣ್ತುಂಬಿಕೊಳ್ಳೊಕ್ಕೆ ಕಾರಣವೇ‌ನು ಗೊತ್ತಾ..?!

ನೋ..ಚಾನ್ಸ್...ರಕ್ಷಾಬಂಧನದಂದು ಇದಕ್ಕಿಂತ ಸ್ಮರಣೀಯ ಕೊಡುಗೆ ನೀಡಲು ಸಾಧ್ಯವೇ ಇಲ್ಲ....

0

ಬೆಂಗಳೂರು:ರಕ್ಷಾಬಂಧನ,ಸಹೋದರತ್ವದ ಅರ್ಥ-ಮಹತ್ವವನ್ನು ಸಾರುವಂಥ ದಿನ.ಇವತ್ತು ಸಹೋದರಿಯರು ತಮ್ಮ ಅಣ್ದಂದಿರಿಗೆ ರಾಖಿ ಕಟ್ಟಿ ಸಂಭ್ರಮಿಸ್ತಾರೆ.ಅದಕ್ಕೆ ಪ್ರತಿಯಾಗಿ ಸಹೋದರರು ತಮ‌್ಮ‌ ಸಹೋದರಿಯರನ್ನು ಆಶೀರ್ವದಿಸಿ‌ ಹಣ-ಉಡುಗೊರೆ  ನೀಡಿ ಸಂತ್ರಪ್ತರಾಗ್ತಾರೆ.ಅಂದು ನೀಡುವ ಕೊಡುಗೆ ಸಹೋದರಿಯರ ಪಾಲಿಗೆ ಅತ್ಯಮೂಲ್ಯ ಹಾಗೂ ಅವಿಸ್ಮರಣೀಯವಾಗಿರುತ್ತೆ..

ಅಂದ್ಹಾಗೆಬೆಂಗಳೂರಿನಲ್ಲಿ ನಮ್ಮ ಪೊಲೀಸರು ರಕ್ಷಾಬಂಧನದಂದೇ ಅಣ್ಣ ತಂಗಿಯರು ಪರಸ್ಪರ ಜನ್ಮಪೂರ್ತಿ ನೆನಪಿಟ್ಟುಕೊಳ್ಳುವಂಥ ಪುಣ್ಯದ ಕೆಲಸ ಮಾಡಿದ್ದಾರೆ.ಈ ಕಾರ್ಯಕ್ಕೆ ಮೆಚ್ಚುಗೆಯನ್ನೂ ಪಡೆದಿದ್ದಾರೆ..ಅಂದ್ಹಾಗೆ ಅವರು ಮಾಡಿದ ಆ ಕೆಲಸ ಏನು ಗೊತ್ತಾ,.?

ರಾಖೀ ಹಬ್ಬದ ದಿನವಾದ ಇಂದು ತಮ್ಮನಿಗೆ ಕಳೆದುಹೋಗಿದ್ದ ಅಕ್ಕನನ್ನು ಹುಡುಕಿಕೊಟ್ಟು ಅದನ್ನೇ  ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.

ಜಾರ್ಖಂಡ್ ಮೂಲದ ವಿವೇಕ್ ಅಡ್ಡಿಗೆ ಕಳೆದುಹೋಗಿದ್ದ ಆತನ ಅಕ್ಕ ರಿಮಿಅಡ್ಡಿ ಯನ್ನು ಹುಡುಕಿಸಿ ರಕ್ಷಾಬಂಧನದಂದು ಕೊಡುಗೆಯನ್ನಾಗಿ ನೀಡಿಸಿದ್ದಾರೆ ಪೊಲೀಸರು.

ಅಂದ್ಹಾಗೆ ಕೊಡಿಗೆಹಳ್ಳಿಯ ಆಸ್ಟರ್ ಸಿ.ಎಂ.ಐ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮ್ಮನ ಆರೈಕೆಗೆಂದು ವಿವೇಕ್ ತನ್ನ ಸಹೋದರಿ ರಿಮಿಅಡ್ಡಿಯನ್ನು ಬಿಟ್ಟಿದ್ದನಂತೆ.

ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ರಿಮಿಅಡ್ಡಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು.

22 ದಿನಗಳ ಹಿಂದೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ರಿಮಾ ಅಡ್ಡಿಯನ್ನು ಹುಡುಕಿಕೊಡುತೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ವಿವೇಕ್ ದೂರು ಕೊಟ್ಟಿದ್ದರು.

ದೂರಿನ ಅನ್ವಯ  ಸತತವಾಗಿ ಹುಡುಕಾಡಿ ರಿಮಿಅಡ್ಡಿಯನ್ನು ಪತ್ತೆಹಚ್ಚಿ ಕರೆತಂದ ಅಮೃತಹಳ್ಳಿ ಪೊಲೀಸರು ರಾಖಿ ಗಿಫ್ಟ್ ರೂಪದಲ್ಲಿ ಅಕ್ಕನನ್ನು ತಮ್ಮನಿಗೆ ಒಪ್ಪಿಸಿದ್ದಾರೆ‌.

ಅಕ್ಕ ಸಿಕ್ಕ ಖುಷಿಗೆ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯಲ್ಲಿ ಕೇಕ್  ಹಂಚಿದ ತಮ್ಮ ಇದೊಂದು ನನ್ನ ಜೀವನದಲ್ಲಿ ಅವಿಸ್ಮರಣೀಯ ಅನುಭವ ಎಂದ್ಹೇಳಿ ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ್ದಾನೆ‌.

Spread the love
Leave A Reply

Your email address will not be published.

Flash News