BreakingKANNADAFLASHNEWSFIGHTAGAINSTCORONAlock downMoreScrollTop Newsಕ್ರೈಮ್ /ಕೋರ್ಟ್ಜಿಲ್ಲೆ

ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನ “ಪಾವಿತ್ರ್ಯತೆ”ಯನ್ನು “ಮಲಿನ”ಗೊಳಿಸಿದ್ರಾ ಕಾಮುಕರು:

 (ಸಾಂದರ್ಭಿಕ ಚಿತ್ರ)
 (ಸಾಂದರ್ಭಿಕ ಚಿತ್ರ)

ಮೈಸೂರು:ಸಾಂಸ್ಕ್ರತಿಕ ನಗರಿ ಮೈಸೂರು ಇವತ್ತು ಕೆಟ್ಟ ಕಾರಣಕ್ಕೆ ಸುದ್ದಿಯಾಗಿದೆ.ಇತ್ತೀಚಿನ ವರ್ಷಗಳಲ್ಲಿ ಹಿಂದೆಂದೂ ನಡೆದಿರ ದಿದ್ದ ಕಹಿಯೊಂದು ಸಂಭವಿಸಿ ಹೋಗಿದೆ.ಕುಡಿದ ನಶೆಯಲ್ಲಿ ವಿವೇಚನೆ ಕಳೆದುಕೊಂಡ ಕಾಮುಕರ ಗುಂಪೊಂದು ಯುವತಿಯೋ ರ್ವಳನ್ನು ಹರಿದು ಮುಕ್ಕಿಬಿಟ್ಟಿದೆ.

ದುರಂತ ಎಂದ್ರೆ ಇದಕ್ಕೆ ಚಾಮುಂಡಿ ಬೆಟ್ಟದ ತಪ್ಪಲು ಸಾಕ್ಷಿಯಾಗಿದೆ.ಕಾಮುಕರ ಹೆಡೆ ಮುರಿ ಕಟ್ಟೊಕ್ಕೆ ಖಾಕಿ ಪಡೆ ಕಾರ್ಯಪ್ರವೃತ್ತವಾಗಿದ್ದು ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾ ಗಿದೆ.ಇನ್ನು ಕುಕೃತ್ಯದಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಪಾದಿಸಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇಂದು ಸಂಜೆ ನಡೆದ ಆ ಘಟನೆಗೆ ಸಾಂಸ್ಕ್ರತಿಕ ನಗರಿ ಮೈಸೂರು ಬೆಚ್ಚಿಬಿದ್ದಿದೆ.ಜನ ಅಕ್ಷರಶಃ ಕಂಗಾಲಾಗಿದ್ದಾರೆ.ಇಂತದ್ದೊಂದು ಘಟನೆ ನಡೆದೋಯ್ತಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಸದಾ ಭಕ್ತಿ ಭಾವದಿಂದ ತುಂಬಿ ತುಳುಕುತ್ತಿದ್ದ ಚಾಮುಂಡೇಶ್ವರಿ ತಪ್ಪಲಿನ ಪಾವಿತ್ರ್ಯವನ್ನು ಕಾಮಾಂಧರು ಮಲಿನಗೊಳಿಸಿದ್ದಾರೆ.ಕುಡಿದ ಅಮಲಿನಲ್ಲಿ ಆರು ಕಾಮುಕರ ಗುಂಪು ತನ್ನ ಸ್ನೇಹಿತನ ಜತೆ ಬಂದಿದ್ದ ವಿದ್ಯಾರ್ಥಿನಿಯನ್ನು ತಮ್ಮ ದೇಹದ ಹಸಿವು ತೀರಿಸಿಕೊಳ್ಳೊಕ್ಕೆ ಬಳಸಿಕೊಂಡಿದ್ದಾರೆ.ಕಾಮಾಂಧರ ಕ್ರೌರ್ಯಕ್ಕೆ ನಲುಗಿದ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಮುಕರ ಪೈಶಾಚಿಕ ಕೃತ್ಯದಿಂದ ಮಲಿನಗೊಂಡ ಚಾಮುಂಡಿ ತಪ್ಪಲು..
                                   ಕಾಮುಕರ ಪೈಶಾಚಿಕ ಕೃತ್ಯದಿಂದ ಮಲಿನಗೊಂಡ ಚಾಮುಂಡಿ ತಪ್ಪಲು..

ಸಂಜೆ 6:30 ರಿಂದ 7:30ರ ಸಮಯದಲ್ಲಿ ಬೈಕ್ ನಲ್ಲಿ ಯುವತಿ ತನ್ನ ಸ್ನೇಹಿತನೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿಗೆ ತೆರಳಿದ್ದಾಳೆ.ನಗರದಿಂದಲೇ ಅವರನ್ನು ಫಾಲೋ ಮಾಡಿರಬಹುದಾದ 6 ಕಾಮುಕರ ತಂಡ ಯುವತಿ ಹಾಗೂ ಹಾಗೂ ಸ್ನೇಹಿತನ ಚಲನವಲನಗಳನ್ನೆಲ್ಲಾ ಗಮನಿಸಿದೆ.ತುಂಬಾ ಸಲಿಗೆಯಲ್ಲಿದ್ದ ಸಮಯದಲ್ಲಿ ಜೋಡಿಯ ಮೇಲೆರಗಿದೆ.ಅವರ ದಾಳಿಯಿಂದ ಬೆಚ್ಚಿದ ಜೋಡಿ ಅಲ್ಲಿಂದ ಪರಾರಿಯಾಗೊಕ್ಕೆ ಯತ್ನಿಸಿದೆ.ಆದ್ರೆ 6 ಜನರು ಕುಡಿದ ಅಮಲಿನಲ್ಲಿ ಆತನ ಮೇಲೆ ಹಲ್ಲೆ ಮಾಡಿದೆ.ಹಲ್ಲೆಯಿಂದ ಬಳಲಿದ ಆತನ ಎದುರಿನಲ್ಲೇ ಯುವತಿ ಮೇಲೆ ಮನಸೋಇಚ್ಛೆ ಅತ್ಯಾಚಾರ ಎಸಗಿದ್ದಾರೆ.ನೆರವಿಗೆ ಅಂಗಲಾಚಿದ್ರೂ ಬಿಡದೆ ಕ್ರೌರ್ಯ ಮೆರೆದಿದ್ದಾರೆ.

ದೇಹದ ಹಸಿವು ತಣಿದ ಮೇಲೆ ಅಕೆಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.ಹಲ್ಲೆಯಿಂದ ಬಳಲಿದ್ದ ಯುವಕ ಹೇಗೋ ಸಾವರಿಸಿ ಕೊಂಡು ಸ್ನೇಹಿತನ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.ಕಾಮುಕರ ಕ್ರೌರ್ಯಕ್ಕೆ ನಲುಗಿರುವ ವಿದ್ಯಾರ್ಥಿನಿ ಅಘಾತಗೊಂಡಿದ್ದು ದೇಹ ಕೂಡ ಜರ್ಝರಿತವಾಗಿದೆ ಎಂದು ಪೊಲೀಸ್ ಕಮಿಷನರ್ ಚಂದ್ರಗುಪ್ತ ತಿಳಿಸಿದ್ದಾರೆ.

ಯುವತಿಯ ಸ್ನೇಹಿತ ಕೊಟ್ಟ ಮಾಹಿತಿ ಮೇರೆಗೆ   ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸುದ್ದಿ ಕೆಲವೇ ಕ್ಷಣಗಳಲ್ಲಿ ಇಡೀ ಮೈಸೂರಿನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.ಜನರಿಂದ ಕಿರಾತಕರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದ್ದು,ಪೊಲೀಸ್ ಭಯವಿದ್ದಿದ್ದರೆ ಹೀಗೆಲ್ಲಾ ನಡೆಯುತ್ತಿತ್ತಾ..? ಕಾನೂನು ಸುವ್ಯವಸ್ಥೆ ಹದಗೆಟ್ಟ ಪರಿಣಾಮವೇ ಹೀಗೆಲ್ಲಾ ಆಗುತ್ತಿದೆ ಎಂದು ಪೊಲೀಸ್  ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತವಾಗಿದೆ.

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಳಗಾಗುವುದರೊಳಗೆ ಕಿರಾತಕರ ಪತ್ತೆ ಭರವಸೆ:  ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತಡಮಾಡದೆ ಕಮಿಷನರ್ ಚಂದ್ರಗುಪ್ತ ಅವರ ಆದೇಶ ಮತ್ತು ಮಾರ್ಗದರ್ಶನದ ಮೇಲೆ ತಂಡವಾಗಿ ಕಿರಾತಕರ ಪತ್ತೆಗೆ ಮುಂದಾಗಿದೆ.ತನಿಖೆಗೆ ಸಹಕಾರಿಯಾಗುವಂಥ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿದ್ದು ಬೆಳಗ್ಗೆಯೊಳಗೆ ಎಲ್ಲಾ ಆ 6 ಕಾಮುಕರನ್ನು ಬಂಧಿಸುವ ಭರವಸೆಯನ್ನು ಚಂದ್ರಗುಪ್ತ ಮೈಸೂರಿನ ಜನತೆಗೆ ನೀಡಿದ್ದಾರೆ.

ಆಕೆ ಹೊರರಾಜ್ಯದ ವಿದ್ಯಾರ್ಥಿನಿ;;ಹೊರರಾಜ್ಯದಿಂದ ಮೈಸೂರಿಗೆ ಬಂದು ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಆಗಾಗ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಳಂತೆ.ಇದನ್ನು ಅನೇಕ ದಿನಗಳಿಂದ ಅಬ್ಸರ್ವ್ ಮಾಡಿದ್ದ ಕಿರಾತಕರು,ಇದಕ್ಕೊಂದು ಮುಹೂರ್ತ ಫಿಕ್ಸ್ ಮಾಡಿದ್ದಾರೆ.ಬೆಳಗ್ಗೆಯಿಂದಲೂ ಆಕೆ ವಾಸವಿರುವ ಪಿಜಿಯ ಹಿಂದೆ ಮುಂದೆಯೇ ಅಡ್ಡಾಡುತ್ತಿದ್ದ ಕಾಮುಕರು ಆಕೆ ಸಂಜೆ ತನ್ನ ಸ್ನೇಹಿತನ ಜತೆ ಬೈಕ್ ನಲ್ಲಿ ಹೊರಡುತ್ತಿದ್ದಂತೆ ಫಾಲೋ ಮಾಡಿ ಚಾಮುಂಡಿ ತಪ್ಪಲಿನಲ್ಲಿ ಲಾಕ್ ಮಾಡಿಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ದಿಗ್ಬ್ರಾಂತಿ :ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ.ಮೈಸೂರಿನಲ್ಲೇ ಉಳಿದು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಡಿಜಿಪಿ ಪ್ರತಾಪ್ ರೆಡ್ಡಿ‌ ನೇತೃದಲ್ಲಿ ತನಿಖಾ ತಂಡ ರಚನೆ ಮಾಡಿ ಶೀಘ್ರವೇ ಕಾಮುಕರನ್ನು ಬಂಧಿಸುವಂತೆ ಆದೇಶ ನೀಡಿದ್ದಾರೆ. ಘಟನೆಯ ಎಲ್ಲಾ‌ ವಿವರಗಳನ್ನು ಮುಖ್ಯಮಂತ್ರಿ ಹಾಗೂ ಗೃಹಸಚಿವರ ಗಮಮಕ್ಕೆ ತಂದಿದ್ದೇನೆ.ಬೆಳಗಾಗುವುದರೊಳಗೆ ಕಾಮುಕರನ್ನು ಪೊಲೀಸರು ಬಂಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಿಂದ ಪ್ರತಿಭಟನೆ-ಗೃಹ ಸಚಿವರ ರಾಜಿನಾಮೆಗೆ ಒತ್ತಾಯ: ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಗಾಂಧಿ ಪ್ರತಿಮೆಯ ಬಳಿ ಜಮಾಯಿಸಿದ ಜಿಲ್ಲಾ ವಿಧ್ಯಾರ್ಥಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಬಿಜೆಪಿ ಸರ್ಕಾರ ಇರುವ ಕಡೆಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ.ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ನೆಲ ಕಚ್ಚಿದೆ. ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲರಾಗಿದ್ದಾರೆ.ಈ ವಿಚಾರದಲ್ಲಿ ಗೃಹ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Spread the love

Related Articles

Leave a Reply

Your email address will not be published.

Back to top button
Flash News