“ಮಾಮ..ಮಾಮ..ಪ್ಲೀಸ್..ಸಾಯಬೇಡಿ..”ಮಕ್ಕಳ ಆರ್ತನಾದಕ್ಕೆ ಕಿವಿಗೊಟ್ಟಿದ್ದರೆ ಅದೊಂದು ದುರಂತ ಸಂಭವಿಸುತ್ತಿರಲಿಲ್ಲವೇನೋ..?

ಆತ್ಮಹತ್ಯೆ ಮುನ್ನ ಮಂಜುನಾಥ್ ಮಾಡಿದ ಕರೆಯ ವೈರಲ್ ಆಡಿಯೋಕ್ಕೆ ಕಣ್ಣೀರಾದ ಕರುನಾಡು..

0
ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಯಜಮಾನ ಮಂಜುನಾಥ್ ಶವ
ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಯಜಮಾನ ಮಂಜುನಾಥ್ ಶವ

ಚಿಕ್ಕಮಗಳೂರು: ಆ ಒಂದು ವಿಷ ಗಳಿಗೆಯಲ್ಲಿ ಕಠಿಣ ನಿರ್ದಾರ ಬದಲಿಸಿಕೊಂಡಿದಿದ್ದರೆ… ಆ ಮಕ್ಕಳ ಮನವಿಗೆ ಸ್ಪಂದಿಸಿಬಿಟ್ಟಿದಿದ್ದರೆ ಇಡೀ ಕುಟುಂಬ ಸಾವಿನ ದವಡೆಯಿಂದ ಪಾರಾಗಿಬಿಡ್ತಿತ್ತೇನೋ..ಮರಳಿ ಬಾರದ ಲೋಕಕ್ಕೆ ತೆರಳುತ್ತಿರಲ್ಲವೇನೋ..ಆದ್ರೆ ದೈವದ ವಿಚಿತ್ರವಾದ ನಿರ್ಣಯಕ್ಕೆ  ಖುಷಿ ಪಡಬೇಕೋ..ಅಥವಾ ಅಯ್ಯೋ ವಿಧಿಯೇ ಎಂದು ಹಳಹಳಿದುಕೊಳ್ಳಬೇಕೋ ಗೊತ್ತಾಗ್ತಿಲ್ಲ.ಎರಡು ಜೀವಗಳು ಸಾವಿನ ಮನೆ ಅತಿಥಿಯಾದ್ರೆ,ಇನ್ನೆರೆಡು ಜೀವಗಳು ಸಾವಿನ ಕದ ತಟ್ಟಿ ವಾಪಸ್ಸಾಗಿವೆ..

ಯೆಸ್..ಇಂತಹದೊಂದು ಮನಕಲಕುವ ಘಟನೆಗೆ ಸಾಕ್ಷಿಯಾಗಿದ್ದು ಕಾಫಿ ನಾಡು ಚಿಕ್ಕಮಗಳೂರು..ಇಡೀ ಚಿಕ್ಕಮಗಳೂರಿಗೆ ಚಿಕ್ಕಮಗಳೂರೇ ಇವತ್ತು ಈ ಘಟನೆಗೆ ಕಂಬನಿ ಮಿಡಿದಿದೆ..ಸಾವಿಗೆ ಮುನ್ನ ಮಕ್ಕಳ ಜತೆ ಮನೆಯ ಯಜಮಾನ ಮಾತನಾಡಿರುವ, ಮಾಮ..ಮಾಮ..ಆತ್ಮಹತ್ಯೆ ಮಾಡಿಕೊಳ್ಳಬೇಡಿ ಪ್ಲೀಸ್ ಎಂದು ಅಂಗಲಾಚಿದ ಆಡಿಯೋ ಕೇಳಿದ ಮೇಲಂತು ಕಣ್ಣೀರಾಗಿದೆ.ಅಯ್ಯೋ ದೇವ್ರೇ ಆ ಎರಡು ಜೀವಗಳ ಜತೆಗೆ ಸಾವಿನ ಮನೆ ಅತಿಥಿಯಾದ ಆ ಇನ್ನೆರೆಡು ಜೀವಗಳನ್ನು ಉಳಿಸಬಹುದಿತ್ತಲ್ಲ ಎಂದು ದೇವರನ್ನು ಬೈಯ್ದುಕೊಂಡಿದೆ.

ಮಂಜುನಾಥ್ ಶವದೊಂದಿಗೆ ಪತ್ತೆಯಾದ ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್…
ಮಂಜುನಾಥ್ ಶವದೊಂದಿಗೆ ಪತ್ತೆಯಾದ ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್…

“ಮಾಮ..ಮಾಮ ಪ್ಲೀಸ್ ಮಾಮಾ..ಸೂಸೈಡ್ ಮಾಡ್ಕೋಬೇಡಿ..ನೀವೇ ನಮ್ಮ ಪಾಲಿನ ದೇವರು,..ನಿಮ್ಮನ್ನು ಬಿಟ್ಟರೆ ನಮಗೆ ಯಾರೂ ಇಲ್ಲ..ನಿಮ್ಮ ಸಮಸ್ಯೆ ಏನೇ ಇದ್ದರೂ ನಾವೆಲ್ಲಾ ಸಾಲ್ವ್ ಮಾಡೋಣ..ನಾವಿದ್ದೇವೆ ನಿಮ್ಮ ಜತೆಗೆ ..ಪ್ಲೀಸ್ ಎಲ್ಲಿದ್ದೀರಿ ಹೇಳಿ..”ಎಂದು ಪರಿ ಪರಿಯಾಗಿ ವಿನಂತಿಸಿಕೊಂಡ ಮನೆ ಯಜಮಾನನ ಸಂಬಂಧಿಗಳ ಆಡಿಯೋ ಎಂಥಾ ಕಲ್ಲುಮನಸ್ಸನ್ನು ಕರಗಿಸುವಂತಿತ್ತು.ಈ ಒಂದು ದುರಂತಕ್ಕೆ ರಾಜ್ಯವೇ ಅಯ್ಯೋ ಎಂದು ಮರುಗಿದೆ.

ಮೂಲತಃ ಚಿಕ್ಕಮಗಳೂರಿನ ತರಿಕೆರೆ ತಾಲೂಕಿನವರಾದ ಮಂಜುನಾಥ್ ಹಾಗೂ ಕುಟುಂಬದ ಆತ್ಮಹತ್ಯೆ ಯತ್ನ.ಆ ಪೈಕಿ ಇಬ್ಬರ ಸಾವು,ಇನ್ನಿಬ್ಬರ ಉಳಿವು ಇವತ್ತು ರಾಜ್ಯದ ಮಟ್ಟಿಗೆ ದೊಡ್ಡ ಸುದ್ದಿಯಾಗಿದೆ.ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಲ್ಲಿದ್ದ ಮಂಜುನಾಥ್ ಒಂದು ಹಂತದವರೆಗೆ ಕುಟುಂಬವನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು.ಹೀಗಿದ್ದ ಮಂಜುನಾಥ್ ಗೆ ಅದ್ಯಾವ ವಿಷಮ ಗಳಿಗೆಯಲ್ಲಿ ಬದುಕನ್ನು ಕೊನೆಗಾಣಿಸಿಕೊಳ್ಳಬೇಕೆಂದೆನಿಸಿತೋ ಗೊತ್ತಿಲ್ಲ,ಅದ್ಯಾವ ಕಾರಣಕ್ಕೆ ಅಂತಹದೊಂದು ನಿರ್ದಾರ ಕೈಗೊಂಡ್ರೋ ಗೊತ್ತಿಲ್ಲ,ಮಾಡಿಕೊಳ್ಳಬಾರದ ಯಡವಟ್ಟು ಮಾಡಿಕೊಂಡರು.

ಹಾಗೆ ನೋಡಿದ್ರೆ ರಿಯಲ್ ಎಸ್ಟೇಟ್ ಫಿಲ್ಡ್ ನಲ್ಲಿದ್ದ ಮಂಜುನಾಥ್ ಹೆಂಡತಿ ಮಗುವಿನೊಂದಿಗೆ ಸುಂದರ ಸಂಸಾರ ನಡೆಸುತ್ತಿದ್ದರು.ಎಲ್ಲವೂ ಚೆನ್ನಾಗೇ ಇತ್ತು.ಆದ್ರೆ ಅದ್ಯಾವ ಕೆಟ್ಟ ಕಾರಣವೋ ಗೊತ್ತಿಲ್ಲ,ಆತ್ಮಹತ್ಯೆ ಮಾಡಿಕೊಳ್ಳುವ ನಿರ್ದಾರಕ್ಕೆ ಬಂದ್ ಬಿಟ್ರು.ಆದ್ರೆ ಆ ಘೋರ ಸಾವಿನಲ್ಲಿ ಹೆಂಡತಿ,ಮಗು,ಅತ್ತೆಯನ್ನೂ ಶಾಮಿಲು ಮಾಡಿಕೊಂಡಿದ್ದು ಮಾತ್ರ ವಿಪರ್ಯಾಸ.ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆನ್ನುವ ನಿರ್ದಾರಕ್ಕೆ ಬಂದಿದ್ದ ಮಂಜುನಾಥ್ ಅದಕ್ಕೆ ಮುನ್ನ ತನ್ನ ಸ್ವಂತ ಊರಿಗೆ ತೆರಳಿ ಅಂತಿಮವಾಗಿ ಎಲ್ಲರನ್ನು ಭೇಟಿಯಾಗಿ ಬರಲು ಕುಟುಂಬದೊಂದಿಗೆ ತೆರಳಿದ್ದರು.

ತರಿಕೆರೆ ತಾಲೂಕಿನ ಎಂಸಿ ಹಳ್ಳಿ ಇರುವ ಭದ್ರಾ ಜಲಾಶಯದಲ್ಲಿ ಕಾರನ್ನು ನಿಲ್ಲಿಸಿ ನಾಲ್ವರನ್ನು ತಮ್ಮ ತೋಳುಗಳಿಂದಲೇ ನಾಲೆಗೆ ದೂಡಿದ್ದಾರೆ.ಅಂತಹದೊಂದು ನಿರ್ದಾರ ಮಾಡಿದ ಮಂಜುನಾಥ್ ಸಾಯೊಕ್ಕೆ ಮುನ್ನ ತಮ್ಮ ಮನಸಿನ ದುಗುಡ-ತೊಳಲಾಟ-ತನಗಾದ ಮೋಸ-ಅವಮಾನವನ್ನೆಲ್ಲಾ ತನ್ನ ಹತ್ತಿರದ ಸಂಬಂಧಿ ರಕ್ಷಾಗೆ ಫೋನ್ ಮಾಡಿ ಹಂಚಿಕೊಂಡಿದ್ದಾರೆ.

ಆತ್ಮಹತ್ಯೆ ಘಟನೆಯಿಂದ ದಿಗ್ಬ್ರಾಂತರಾಗಿರುವ ಕುಟುಂಬದ ಸದಸ್ಯರು
ಆತ್ಮಹತ್ಯೆ ಘಟನೆಯಿಂದ ದಿಗ್ಬ್ರಾಂತರಾಗಿರುವ ಕುಟುಂಬದ ಸದಸ್ಯರು

ತಾನು ಕೆಲವೇ ಕ್ಷಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಗದ್ಗದಿತರಾಗಿ ಹೇಳುತ್ತಿದ್ದರೆ ಮಕ್ಕಳಂತೆ ಸಾಕಿ ಸಲಹಿದ್ದ ಮಂಜುನಾಥ್ ಅವರನ್ನು ಆತ್ಮಹತ್ಯೆ ನಿರ್ದಾರದಿಂದ ವಿಚಲಿತರಾಗುವಂತೆ ಮಾಡಲು ಆ ಮಕ್ಕಳು ಪರಿಪರಿಯಾಗಿ ಮನವೊಲಿಸಲು ಯತ್ನಿಸಿದ್ದಾರೆ.ಆದ್ರೆ ಸಾಯಲೇಬೇಕೆಂದು ನಿರ್ಧರಿಸಿಕೊಂಡಿದ್ದ ಮಂಜುನಾಥ್ ಅವರಿಗೆ ಆ ವಿಷಗಳಿಗೆಯಿಂದ ಹೊರಬರಲು ಸಾಧ್ಯವೇ ಆಗಿಲ್ಲ..ತನ್ನ ಸಮೇತ ಇಡೀ ಕುಟುಂಬವನ್ನು ಜಲಾಶಯಕ್ಕೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಾಲೆಗೆ ಹಾರಿದ ನಾಲ್ವರ ಪೈಕಿ ಮಂಜುನಾಥ್ ಹಾಗೂ ಅತ್ತೆ ಸುನಂದಮ್ಮ ಸಾವನ್ನಪ್ಪಿದ್ದಾರೆ.ಪತ್ನಿ ನೀತು ಹಾಗೂ ಪುತ್ರ ಧ್ಯಾನ್ ಬದುಕುಳಿದಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಸುಂದರ ಜೀವನ ನಡೆಸುತ್ತಿದ್ದ ಮಂಜುನಾಥ್ ಅದ್ಯಾಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ರು ಅನ್ನೋದೇ ನಿಗೂಢವಾಗಿದೆ. ಮೊನ್ನೆ ತಾನೇ ಕುಟುಂಬದ ಜೊತೆ ಊರಿಗೆ ತೆರಳಿದ ಮಂಜುನಾಥ್, ಗುರುರಾಯರ ಆರಾಧನೆ ಅಂತಾ ಪತ್ನಿ ಊರಾದ ಅಂಕೋಲಕ್ಕೆ ತೆರಳಿ ಭದ್ರಾವತಿಯ ಜೆ.ಡಿ ಕಟ್ಟೆ ಗ್ರಾಮಕ್ಕೆ ಬಂದಿದ್ರು. ಆ ಬಳಿಕ ಅಲ್ಲಿಂದ ಸಂಬಂಧಿಯೊಬ್ಬರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿಕೊಳ್ಳಲು ಹೋಗಿದ್ದ ಅವರ ಕಾರು ಅಲ್ಲಿಂದ ನೇರವಾಗಿ ಎಂ.ಸಿ ಹಳ್ಳಿಯ ಭದ್ರಾ ಜಲಾಶಯದ ಬಳಿ ಬಂದು ನಿಂತಿದೆ. ಇಲ್ಲಿಂದಲೇ ಕೊನೆಯ ಕರೆ ಮಂಜುನಾಥ್ ರಿಂದ ಸಂಬಂಧಿ ರಕ್ಷಾಗೆ ಹೋಗಿತ್ತು. ಜೊತೆಯಲಿ ಇದ್ದವರಿಂದಲ್ಲೇ ನನಗೆ ಮೋಸ ಆಗಿದೆ, ನಾವು ಆತ್ಮಹತ್ಯೆ ಮಾಡಿಕೊಳ್ತಾ ಇದ್ದೀವಿ ಅಂತಾ ಮಂಜುನಾಥ್ ಕರೆ ಕಟ್ ಮಾಡಿದ್ದಾರೆ.ಅಷ್ಟೇ ಆಮೇಲೆ ಆಗಿದ್ದೆಲ್ಲಾ ದುರಂತ..

ಶವ ಪತ್ತೆ ಕಾರ್ಯಕ್ಕೆ ಸಾಕ್ಷಿಯಾದ ತರಿಕೆರೆ ತಾಲೂಕು ಜನ
ಶವ ಪತ್ತೆ ಕಾರ್ಯಕ್ಕೆ ಸಾಕ್ಷಿಯಾದ ತರಿಕೆರೆ ತಾಲೂಕು ಜನ

ಹೀಗೆ ಕರೆ ಮಾಡಿದ ಮಂಜುನಾಥ್ ಸ್ವಿಫ್ಟ್ ಕಾರಿನ ಸಮೇತ ಹಾರಿದ್ದು, ಇದೇ ಭದ್ರಾ ನಾಲೆಗೆ. ಆತ್ಮಹತ್ಯೆಗೆ ಪ್ರಯತ್ನಿಸಬೇಡಿ ಅಂತಾ ಎಷ್ಟೇ ರಿಕ್ವೆಸ್ಟ್ ಮಾಡಿಕೊಂಡ್ರೂ ಕೇಳದ ಮಂಜುನಾಥ್ ನಿದ್ರೆಯಲ್ಲಿದ್ದ ಪತ್ನಿ ನೀತು, ಪುತ್ರ ಧ್ಯಾನ್ ಹಾಗೂ ಅತ್ತೆ ಸನುಂದಮ್ಮಗೂ ಆತ್ಮಹತ್ಯೆಯ ಯಾವುದೇ ಮುನ್ಸೂಚನೆ ನೀಡದೇ ಭದ್ರಾ ನಾಲೆಗೆ ಕಾರನ್ನ ನುಗ್ಗಿಸಿದ್ದ. ಒಂದೆಡೆ ಕಾರಿನಲ್ಲಿದ್ದ ಮಂಜುನಾಥ್ ಹಾಗೂ ನೀತು ತಾಯಿ ಸುನಂದಮ್ಮ ನೀರುಪಾಲಾದ್ರೆ ಪವಾಡ ಸದೃಶ ರೀತಿಯಲ್ಲಿ ಇತ್ತ ಮಂಜುನಾಥ್ ಪತ್ನಿ ನೀತು ಹಾಗೂ ಪುತ್ರ ಧ್ಯಾನ್ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಮಂಜುನಾಥ್ ಮೃತದೇಹ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಂಚಿ ಸಿದ್ದಾಪುರ ಬಳಿ ಪತ್ತೆಯಾದ್ರೆ, ಸಂಜೆವರೆಗೂ ಹುಡುಕಿದ್ರೂ ನೀತು ತಾಯಿ ಸುನಂದಮ್ಮನವರ ಮೃತದೇಹವಾಗಲಿ, ಕಾರಿನ ಸುಳಿವಾಗಲಿ ಪತ್ತೆಯಾಗಲೇ ಇಲ್ಲ. ತಾಯಿ-ಮಗ ಅದೃಷ್ಟವಶಾತ್ ಬದುಕುಳಿದ್ದಾರೆ. ಈ ಮಧ್ಯೆ ಯಾರಿಂದ ಮಂಜುನಾಥ್ ಗೆ  ಮೋಸ ಆಯ್ತು ಅನ್ನೋದು ಮಾತ್ರ ಇನ್ನೂ ನಿಗೂಢವಾಗಿದೆ.

ಪತ್ನಿ ನೀತು ಬಳಿ ಯಾವತ್ತೂ ತಮ್ಮ ನೋವನ್ನು ಮಂಜುನಾಥ್  ತೋಡಿಕೊಂಡಿರಲಿಲ್ಲವಂತೆ.ಇನ್ನೊಬ್ಬರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ..ಅದು ಹೇಡಿಗಳು ಮಾಡುವ ಹೀನಕೃತ್ಯ ಎಂದು ಹೇಳುತ್ತಿದ್ದ ಮಂಜುನಾಥ್ ಅವ್ರೇ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ದಾರಕ್ಕೆ ಬಂದಿದ್ದು ದೊಡ್ಡ ಮಟ್ಟದ ಪ್ರಶ್ನೆಯಾಗಿ ಕಾಡ್ತಿದೆ..ರಿಯಲ್ ಎಸ್ಟೇಟ್ ನಲ್ಲಿ ಕೈ ಸುಟ್ಟುಕೊಂಡಿದ್ದರಿಂದ,ಸಾಲಗಾರರ ಕಾಟ ಇಂತಹದೊಂದು ನಿರ್ದಾರಕ್ಕೆ ಕಾರಣವಾಯ್ತಾ..? ಬ್ಯುಸಿನೆಸ್ ನಲ್ಲಿದ್ದವರಿಂದ್ಲೇ ಮೋಸವಾಗಿ ಅದನ್ನು ಅರಗಿಸಿಕೊಳ್ಳಲಿಕ್ಕಾಗದೆ ಇಂತಹದೊಂದು ಕೆಟ್ಟ  ನಿರ್ಣಯಕ್ಕೆ ಮುಂದಾದ್ರಾ ಗೊತ್ತಾಗುತ್ತಿಲ್ಲ.

Spread the love
Leave A Reply

Your email address will not be published.

Flash News