ನಿನ್ನೆ ಸಾಂಸ್ಕ್ರತಿಕ ನಗರಿ ಮೈಸೂರು..ಇಂದು ಕಲ್ಪತರ ನಾಡು ತುಮಕೂರಿನಲ್ಲಿ ಗ್ಯಾಂಗ್ ರೇಪ್-ಕಿರಾತಕರಿಂದ ಕೊಲೆ

ದನಗಾಹಿ ಮಹಿಳೆ ಮೇಲೆ ಐವರು ಕಾಮುಕರಿಂದ ಅತ್ಯಾಚಾರ-ಸಾಕ್ಷ್ಯ ಉಳಿಯಬಾರದಂತೆ ಕೊಲೆ

0
ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ನಿಷ್ಪಾಪಿ ದನಗಾಹಿ ಮಹಿಳೆ
ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ನಿಷ್ಪಾಪಿ ದನಗಾಹಿ ಮಹಿಳೆ

ತುಮಕೂರು:ಮೈಸೂರಿನ ಮಾನವನ್ನು ಬೀದಿಯಲ್ಲಿ ಹರಾಜಾಕಿದ  ಗ್ಯಾಂಗ್ ರೇಪ್ ಘಟನೆಯ ಕಹಿ ಮಾಸುವ ಮುನ್ನವೇ ಕಲ್ಪತರು ನಾಡಿನಲ್ಲಿ ಗ್ಯಾಂಗ್ ರೇಪ್ ಆಗಿದೆ.ವ್ಯತ್ಯಾಸ ಒಂದೇ ಮೈಸೂರಿನಲ್ಲಿ ರೇಪ್ ಗೊಳಗಾದೆಯನ್ನು ಕಿರಾಕತರು ಉಳಿಸಿದ್ದರು..ಆದ್ರೆ ಕಲ್ಪತರು ನಾಡಿನಲ್ಲಿ ಹರಿದು ಮುಕ್ಕಿದ ಮೇಲೆ ಸಾಕ್ಷ್ಯ ಉಳಿಯದಂತೆ ಆಕೆಯ ಉಸಿರನ್ನೇ ನಿಲ್ಲಿಸಿದ್ದಾರೆ.

ತುಮಕೂರು ಜಿಲ್ಲೆಯ ಹಿರೇಹಳ್ಳಿ ಸಮೀಪದ ಛೋಟಾಸಬಾರ ಪಾಳ್ಯ ಇಂತಹದೊಂದು ಘಟನೆಗೆ ಸಾಕ್ಷಿಯಾಗಿದೆ. ಎಂದಿನಂತೆ ದನ ಮೇಯಿಸಲು ಹೋಗಿದ್ದ ಮಹಿಳೆಯನ್ನು ಕಾಮಾಂಧರು ಸುತ್ತುವರೆದು ಕ್ರೌರ್ಯ ಎಸಗಿದ್ದಾರೆ.ಮನಸೋ ಇಚ್ಚೆ ಅನುಭವಿಸಿದ ಮೇಲೆ ಕೊಲೆ ಮಾಡಿ ಆಕೆಯ ಮಾಂಗಲ್ಯ ಸರವನ್ನು ಅಪಹರಿಸಿ ಪರಾರಿಯಾಗಿದ್ದಾರೆ.

ಕೊಲೆಯಾದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ.ದನ ಮೇಯಿಸಲು ಹೋದ ಹೆಂಡತಿ ಸಂಜೆ 6.45 ಗಂಟೆಯಾದರೂ ಮನೆಗೆ ಬಾರದಿದ್ದಾಗ ಗಾಬರಿಯಿಂದ  ಆಕೆಯನ್ನು ಹುಡುಕಿಕೊಂಡು ಬೆಟ್ಟದ ಬಳಿ ಬಂದು ನೋಡಿದಾಗ ಪತ್ನಿಯ ಮೃತದೇಹ ನೋಡಿ ಕುಸಿದುಬಿದ್ದಿದ್ದಾರೆ. ಎಫ್.ಎಸ್.ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂಬಂದ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮುಕರ ದುಷ್ಕ್ರತ್ಯಕ್ಕೆ ಬೆಚ್ಚಿ ಬಿದ್ದ ತುಮಕೂರು ಜನತೆ ಘಟನೆಗೆ ಆತಂಕ ವ್ಯಕ್ತಪಡಿಸಿದೆ.ನಗರದ  ಹೊರವಲಯದಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದಾಗಿ ನಾಗರೀಕರು ಬೆಚ್ಚಿ ಬಿದ್ದಿದ್ದಾರೆ. ಮಧ್ಯಾಹ್ನ ಅಥವಾ ಸಂಜೆ ವೇಳೆಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆಯಿದೆ.

ಘಟನೆಯಿಂದಾಗಿ ಭಯಗೊಂಡಿರುವ ಮಹಿಳೆಯರು ಮನೆಯಿಂದ ಹೊರಬರಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತುಮಕೂರಿನ ಛೋಟ ಸಾಬರ ಪಾಳ್ಯದ ಬಳಿ ನಡೆದಿರುವ ಮಹಿಳೆ ಹತ್ಯೆ ಪ್ರಕರಣ ಮೈಸೂರು ಪ್ರಕರಣಕ್ಕಿಂತಲೂ ಗಂಭೀರವಾಗಿ ದೆ.ಕೆಲಸದ ನಿಮಿತ್ತ ಮಹಿಳೆಯರು ಆಚೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.

Spread the love
Leave A Reply

Your email address will not be published.

Flash News