“ಒಳಪೆಟ್ಟುಗಳಿಂದ ಪಾಠ ಕಲಿತಿದ್ದೇನೆ..ಇನ್ನೊಬ್ಬರು ಏನೇ ಮಾಡಿಕೊಳ್ಳಲಿ..ರಿಯಾಕ್ಟ್ ಮಾಡದಿರಲು ಡಿಸೈಡ್ ಮಾಡಿದ್ದೇನೆ..”

ಪರಿಸರ ಸಚಿವ ಆನಂದ್ ಸಿಂಗ್ ಮಾರ್ಮಿಕವಾಗಿ ನುಡಿಯೊಕ್ಕೆ ಕಾರಣವೇನು ಗೊತ್ತಾ,..?

0

ಬೆಂಗಳೂರು:ನನ್ನ ಪಕ್ಕದಲ್ಲಿರೋರ ತಟ್ಟೆಯಲ್ಲಿ ಆನೆ ಸತ್ ಬಿದ್ದಿರ್ಲಿ..ನಾನಂತೂ ಇನ್ಮುಂದೆ ಅದರ ಬಗ್ಗೆ ನೋಡೋದು ಇಲ್ಲ.. ಆ ಬಗ್ಗೆ ಕಾಮೆಂಟ್ ಮಾಡೋದು ಇಲ್ಲ…ಇಂತದ್ದೊಂದು ತಾತ್ಪರ್ಯದ ಮಾತನ್ನಾಡುವ ಮೂಲಕ ಸಚಿವ ಆನಂದ್ ಸಿಂಗ್ ಅಚ್ಚರಿ ಮೂಡಿಸಿದ್ದಾರೆ.

ಆನಂದ್ ಸಿಂಗ್ ಹೇಳಿಕೆ ನಿಜಕ್ಕೂ ಅಚ್ಚರಿ ಮೂಡಿಸಿದೆ.ಏಕೆ,ಅವರು ಈ ರೀತಿ ಹೇಳಿದ್ರು ಎನ್ನುವ ಪ್ರಶ್ನೆ ಕಾಡ ಹತ್ತಿದೆ.ಅಷ್ಟೊಂದು ಅನ್ಯಮನಸ್ಕರಾಗಿ,ಸ್ಥಿತಪ್ರಜ್ಞರಾದ್ರು ಎನ್ನುವ ಕುತೂಹಲ ಮೂಡಿದೆ.ಇದಕ್ಕೆ ಕಾರಣವೂ ಇದೆ..ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದ ವೇಳೆ ಅವರ ಬೆಂಬಲಕ್ಕೆ ಯಾರೂ ಬರಲಿಲ್ಲ..ಸಹಾಯಕ್ಕೆ ನಿಲ್ಲಲಿಲ್ಲ..ತಮ್ಮ ಪರ ಯಾರೊಬ್ಬರು ಬ್ಯಾಟಿಂಗ್ ಮಾಡಲಿಲ್ಲ..ಇದೆಲ್ಲವೂ ನನಗೆ ಮಾಸದ ಗಾಯವನ್ನುಂಟು ಮಾಡಿದೆ.ಹಾಗಾಗಿ ಯಾರ ಸಹವಾಸವೂ ನನಗೆ ಬೇಡ..ನಾನಾಯ್ತು..ನನ್ನ ಕೆಲಸವಾಯ್ತು.. ನನ್ನ ಕೆಲಸ ಹೈಕಮಾಂಡ್ ಗೆ ಮೆಚ್ಚುಗೆಯಾದ್ರೆ ಸಾಕು..ಯಾರನ್ನೂ ಮೆಚ್ಚಿಸುವ ಅಗತ್ಯ ನನಗಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಒಳಪೆಟ್ಟುಗಳಿಂದ ಸಾಕಷ್ಟು ಜರ್ಝರಿತವಾಗಿದ್ದೇನೆ.ಎಲ್ಲರೂ ಒಂದೊಂದು ಹೊಡೆತ ಕೊಟ್ಟಿದ್ದಾರೆ.ಅವನ್ನು ತಿಂದು ತಿಂದು ಸಾಕಷ್ಟು ಪಾಠ ಕಲಿತಿದ್ದೇನೆ.ಸರ್ಕಾರದ ಭಾಗ ಹಾಗೂ ಸಹದ್ಯೋಗಿ ಎನ್ನುವ ಕಾರಣಕ್ಕೆ ಇತರೆ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಿ ತಮ್ಮನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ.ನನಗೇಕೆ ಅಂಥಾ ವಿವಾದಗಳು ಬೇಕು ಹೇಳಿ ಎಂದು ಹೇಳಿದ್ದಾರೆ.

ನಾನು ಸಚಿವ ಸ್ಥಾನವನ್ನು ಕೆಲವು ಷರತ್ತುಗಳ ಮೇಲೆ ಒಪ್ಪಿಕೊಂಡಿದ್ದೇನೆ.ನನ್ನ ಮನವಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದೇನೆ. ಅವರಿಂದ ಭರವಸೆ ಸಿಕ್ಕಿದೆ.ಆ ಭರವಸೆ ಮೇಲೆ ಸಚಿವನಾಗಿ ಮುಂದುವರೆಯುತ್ತೇನೆ.ಆದ್ರೆ ಆ ಮನವಿ ಯಾವುದು ಎನ್ನುವುದನ್ನು ರಿವೀಲ್ ಮಾಡೊಕ್ಕೆ ಸಧ್ಯಕ್ಕೆ ಸಾಧ್ಯವಿಲ್ಲ.ಕಾಲ ಪರಿಪಕ್ವವಾದ ಮೇಲೆ ಎಲ್ಲವನ್ನು ಅದನ್ನು ಬಹಿರಂಗಪಡಿಸಲಿದ್ದೇನೆ ಎಂದರು.

Spread the love
Leave A Reply

Your email address will not be published.

Flash News