ನಾಳೆಯಿಂದ “ನಾಯಂಡಹಳ್ಳಿ ಟು ಕೆಂಗೇರಿ” ಮಾರ್ಗದ ಮೆಟ್ರೋ ಸಂಚಾರ ಶುರು..ಈ ಮಾರ್ಗ ಸಂಚಾರದಲ್ಲಿ ಏನೆಲ್ಲಾ ವಿಶೇಷಗಳಿವೆ ಗೊತ್ತಾ.

7.53 ಕಿಲೋಮೀಟರ್,6 ನಿಲ್ದಾಣ-ಬೈಯ್ಯಪ್ಪನ ಹಳ್ಳಿ ಟು ಕೆಂಗೇರಿಗೆ 56 ರೂ ಫಿಕ್ಸ್- ಪ್ರತಿನಿತ್ಯ  75,000 ಪ್ರಯಾಣಿಕರಿಗೆ ಅನುಕೂಲ.

0

ಬೆಂಗಳೂರು: ಮೈಸೂರು ರಸ್ತೆ ಮಾರ್ಗದ ಪ್ರಯಾಣಿಕರಿಗೆ ಇದು ನಿಜಕ್ಕೂ ಸಂತೋಷದ ಸುದ್ದಿ..ಬಹಳ ವರ್ಷಗಳಿಂದ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ.

ಕ್ಷಿಪ್ರಗತಿಯಲ್ಲಿ ಬೆಂಗಳೂರನ್ನು ಸೇರಬೇಕೆನ್ನುವವರ ಮನದಾಸೆ ನಾಳೆ ಕೈಗೂಡುತ್ತಿದೆ. . ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-2 ರೀಚ್-2 ವಿಸ್ತರಿಸಿದ  ಮೈಸೂರು ರಸ್ತೆಯ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ  ನೂತನ ಮಾರ್ಗಕ್ಕೆ ನಾಳೆ ಚಾಲನೆ ದೊರೆಯಲಿದೆ.  

ಬೆಳಗ್ಗೆ 10:30ಕ್ಕೆ ಲೋಕಾರ್ಪಣೆ: ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ 7.50 ಕಿ ಮೀ ಉದ್ದದ, 6 ನಿಲ್ದಾಣಗಳನ್ನು ಒಳಗೊಂಡಿರುವ ನೂತನ ಮಾರ್ಗವನ್ನು ಬೆಳಗ್ಗೆ 10 ಗಂಟಗೆ ಉದ್ಘಾಟಿಸಲಿದ್ದಾರೆ.

ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನೂತನ ಮಾರ್ಗಕ್ಕೆ ಹಸಿರು ನಿಶಾನೆ ನೀಡಲಿದ್ದು ಸಿಎಂ ಬೊಮ್ಮಾಯಿ,ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರು ಅದೇ ರೈಲಿನಲ್ಲಿ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಒಂದು ರೌಂಡ್ಸ್ ಹಾಕಲಿದ್ದಾರೆ.

6 ನಿಲ್ದಾಣ-1 ನಿಮಿಷ ನಿಲುಗಡೆ:ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಬೆಂಗಳೂರು ವಿಶ್ವವಿದ್ಯಾಲಯ, ಆರ್. ವಿ ಕಾಲೇಜ್, ಕೆಂಗೇರಿ ಬಸ್ ಟರ್ಮಿನಲ್, ಕೆಂಗೇರಿ ನಿಲ್ದಾಣಗಳನ್ನು ಈ ಮಾರ್ಗ ಒಳಗೊಂಡಿದೆ.ಪ್ರತಿಯೊಂದು ನಿಲ್ದಾಣದಲ್ಲೂ 1 ನಿಮಿಷ ನಿಲುಗಡೆ ನೀಡುವಂತ ವ್ಯವಸ್ಥೆಯನ್ನೇ ಈ ಮಾರ್ಗದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

ನಾಯಂಡಳ್ಳಿ ಟು ಕೆಂಗೇರಿ ಮಾರ್ಗದ  ಹೈಲೆಟ್ಸ್..

1-ಇದು ನಮ್ಮ ಮೆಟ್ರೋ ಯೋಜನೆಯ ಹಂತ-2 ರಡಿ ನಾಯಂಡಹಳ್ಳಿಯಿಂದ ಕೆಂಗೇರಿ ವರೆಗಿನ ರೀಚ್-2 ವಿಸ್ತರಣಾ ಮಾರ್ಗ.

2-7.53 ಕಿ.ಮೀ. ಉದ್ದದ ಮಾರ್ಗ,ಕಾಮಗಾರಿ ವೆಚ್ಚ 1,560 ಕೋಟಿ ರೂ. ಭೂಸ್ವಾಧೀನಕ್ಕೆ 360 ಕೋಟಿ ರೂ. ವೆಚ್ಚ.

ಈ ಮಾರ್ಗದ ಮೂಲಕ ಪೂರ್ವಪಶ್ಚಿಮ ಕಾರಿಡಾರ್ ಮಾರ್ಗದ ಉದ್ದ 18.1 ಕಿ.ಮೀ. ಗೆ ಹೆಚ್ಚಳ.

3-ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ಟರ್ಮಿನಲ್ ಹಾಗೂ ಕೆಂಗೇರಿಹೀಗೆ  6 ನಿಲ್ದಾಣ.

4- ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿಗಳಲ್ಲಿ ಪಾರ್ಕಿಂಗ್ ಸೌಲಭ್ಯ.

ಕೆಂಗೇರಿ ಬಸ್ಟರ್ಮಿನಲ್ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ.

5-ಕೆಂಗೇರಿ ಬಸ್ಟರ್ಮಿನಲ್ ನಿಲ್ದಾಣ ಹೊರತು ಪಡಿಸಿ ಉಳಿದ ಎಲ್ಲ ನಿಲ್ದಾಣಗಳನ್ನು ಪಾದಚಾರಿಗಳು ಬಳಸಬಹುದು,
6.
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ  56 ರೂ. ಮೆಟ್ರೋ ಜಾಲದ ಅತಿ ಉದ್ದದ ಮಾರ್ಗ, ಕೆಂಗೇರಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ 60 ರೂಪಾಯಿ

7-ಪ್ರತಿದಿನ ಸರಾಸರಿ 75,000 ಪ್ರಯಾಣಿಕರಿಗೆ ಅನುಕೂಲ.
8-ಒನ್ನೇಷನ್ಒನ್ಕಾರ್ಡ್ ಯೋಜನೆಯ ಅನುಷ್ಠಾನ, ಆಟೊಮ್ಯಾಟಿಕ್ ಫೇರ್ ಕಲೆಕ್ಷನ್ ವ್ಯವಸ್ಥೆ.

9-ಪ್ರತಿ ನಿಲ್ದಾಣದ ಛಾವಣಿಯಲ್ಲಿ 250 ಕಿಲೋ ವ್ಯಾಟ್ ಸೌರವಿದ್ಯುತ್ ಪ್ಯಾನೆಲ್ ಅಳವಡಿಕೆ.

Spread the love
Leave A Reply

Your email address will not be published.

Flash News