ಬೆಂಗಳೂರು:ಕನ್ಫರ್ಮ್ ಆಗೋಗಿತ್ತು,,ಆದ್ರೆ ಜಸ್ಟ್ ಮಿಸ್…ಥ್ಯಾಂಕ್ ಗಾಡ್, ಪೊಲೀಸ್ರು ತಡೆ ಹಿಡಿದು ಹೆಡೆಮುರಿ ಕಟ್ಟದಿದ್ರೆ ಎರಡು ಹೆಣ ಬೀಳೋದು ಪಕ್ಕಾ ಆಗೋಗಿತ್ತು..
ಹೌದು..ಪೊಲೀಸ್ ಇಲಾಖೆಯ ನಾಕಾಬಂಧಿ..ಚೆಕ್ ಪೋಸ್ಟ್ ಗಳಲ್ಲಿನ ತಪಾಸಣೆ ಕೆಲವೊಮ್ಮೆ ಎಷ್ಟು ಸಾರ್ವಜನಿಕವಾಗಿ ಪ್ರಯೋಜನಕ್ಕೆ ಬರುತ್ವೆ ಎನ್ನುವುದಕ್ಕೆ ಮೇಲ್ಕಂಡ ಘಟನೆ ಬೆಸ್ಟ್ ಎಕ್ಸಾಂಪಲ್ ಅನ್ಬೋದೇನೋ..
ಬೈಕ್ ನಲ್ಲಿ ಮೂವರು ಹೇರೋಹಳ್ಳಿಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ತೆರಳುವಾಗ ನಾಕಾಬಂಧಿ ತಪಾಸಣೆ ವೇಳೆ ಅವರನ್ನು ತಡೆ ಹಿಡಿಯಲಾಗಿದೆ.ಈ ವೇಳೆ ಅನುಮಾನಸ್ಪದವಾಗಿದ್ದ ಈ ಮೂವರ ನಡೆ ಬಗ್ಗೆ ಹೊಯ್ಸಳ ಪೊಲೀಸ್ರು ಶಂಕೆ ವ್ಯಕ್ತಪಡಿಸಿ ಚೆಕ್ಕಿಂಗ್ ಗೆ ಮುಂದಾಗಿದ್ದಾರೆ.
ಪೊಲೀಸ್ರು ಹತ್ತಿರ ಬರ್ತಿದ್ದಂಗೆ ಒಬ್ಬ ಪರಾರಿಯಾಗಿದ್ದಾನೆ.ಇದರಿಂದ ಅನುಮಾನ ಮತ್ತಷ್ಟು ಬಲವಾಗಿದೆ. ಪಿ ಎಸ್ ಐ ಮುರಳಿ ಹಾಗು ಹೊಯ್ಸಳ ಚಾಲಕ ಕಾಳೇಗೌಡ ಪರಾರಿಯಾಗುವ ಹಂತದಲ್ಲಿದ್ದ ಇಬ್ಬರನ್ನು ಹಿಡಿದು ವಿಚಾರಿಸಿದ್ದಾರೆ.ಅವರು ಚಲಾಯಿಸುತ್ತಿದ್ದ ಡಿಯೋ ಬೈಕ್ ನ್ನು ಪರಿಶೀಲಿಸಿದಾಗ ಸಿಕ್ಕ ಮಾರಕಾಸ್ತ್ರಗಳಿಂದ ಪ್ಲ್ಯಾನ್ ಕಂಪ್ಲೀಟ್ ಬಯಲಾಗಿದೆ.
ಅದು ಕೊಲೆಗೆ ಹೊರಟಿದ್ದ ತಂಡ:ಪೊಲೀಸ್ರ ವಿಚಾರಣೆ ವೇಳೆ ಆ ಮೂವರ ಕೊಲೆ ಪ್ಲ್ಯಾನ್ ಗೊತ್ತಾಗಿದೆ.ಈ ಮೂವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡ್ತಾ ಇದ್ರು. ಹೇರೋ ಹಳ್ಳಿ ವಾರ್ಡ್ ನಲ್ಲಿ ಕಸ ಕಲೆ ಹಾಕುತ್ತಿದ್ದರು. ಕಸ ಕಲೆ ಹಾಕುವಾಗ ಮನೆ ಮಾಲೀಕರು ಪ್ರೀತಿಯಿಂದ ಒಂದಷ್ಟು ಟಿಪ್ಸ್ ಹಣ ಕೊಡುತ್ತಿದ್ದರು.ಆದ್ರೆ ಇತ್ತೀಚೆಗೆ ಇವರಿಗೆ ಸಿಗಬೇಕಿದ್ದ ಟಿಪ್ಸ್ ಕಸ ಕಲೆಕ್ಷನ್ ಗೆ ಬರುತ್ತಿದ್ದ ಬೇರೆ ಇಬ್ಬರು ಪಡೆಯುತ್ತಿದ್ದರಂತೆ.
ತಮಗೆ ಬರುತ್ತಿದ್ದ ಟಿಪ್ಸ್ ನ್ನು ಕಸಿದುಕೊಂಡ್ರಲ್ಲ ಎನ್ನುವ ಸಿಟ್ಟಿಗೆ ಅವರಿಬ್ಬರನ್ನು ಮುಗಿಸೇ ಬಿಡುವ ಪ್ಲ್ಯಾನ್ ಮಾಡಿಕೊಂಡೇ ಡಿಯೋ ಬೈಕ್ ನಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಹೊರಟಿದ್ರೆನ್ನುವುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ತಕ್ಷಣ ಆ ಮೂವರು ಅತ್ರಾಪ್ತರನ್ನು ಕೊಲೆ ಮಾಡೊಕ್ಕೆ ಬಳಸಲು ಒಯ್ಯುತ್ತಿದ್ದ ಮಾರಕಾಸ್ತ್ರಗಳ ಜತೆಗೆ ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.
ಒಟ್ಟಿನಲ್ಲಿ ಪೊಲೀಸರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಜೋಡಿ ಕೊಲೆ ತಪ್ಪಿದೆ.ಹೊಯ್ಸಳ ಪೊಲೀಸರ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.