ಬೆಂಗಳೂರು: ಇದು, ರಾಜ್ಯ ಕ್ರಿಕೆಟ್ ಸಂಸ್ಥೆಯ ಬೃಹತ್ ದೋಖಾದ ಕಥೆ.ಸರ್ಕಾರದಿಂದ ಎಲ್ಲಾ ಸೌಲಭ್ಯ ಪಡೆದ್ರೂ,ಅದಕ್ಕೆ ನೀಯತ್ತಾಗಿರೋದನ್ನು ಬಿಟ್ಟು ಕೋಟಿಗಳಲ್ಲಿ ವಂಚನೆ ಮಾಡಿರುವ ಆಪಾದನೆಗೆ ತುತ್ತಾಗಿದೆ.ಅಂದ್ಹಾಗೆ ಕೆಎಸ್ ಸಿಯ ಅಕ್ರಮವನ್ನು ದಿ ಫೈಲ್ ವೆಬ್ ಸೈಟ್ ಎಳೆ ಎಳೆಯಾಗಿ ಬಿಚ್ಚಿಟ್ಟು ಸರ್ಕಾರದ ಗಮನ ಸೆಳೆದಿದೆ.ಆದ್ರೆ ಟ್ರ್ಯಾಜಿಡಿ ಸಂಗತಿ ಎಂದ್ರೆ ಕೆಎಸ್ ಸಿಎ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವನ್ನೇ ಸರ್ಕಾರ ಮಾಡಿಲ್ಲ.
ಅಂದ್ಹಾಗೆ ಕೆಎಸ್ ಸಿಎ ದೋಖಾ ಮಾಡ್ತಿರೋದು ಇದೇ ಮೊದಲೇನಲ್ಲ..ವಂಚನೆ-ದ್ರೋಹ-ಕಳ್ಳಾಟ-ತೆರಿಗೆ ಅಕ್ರಮದ ಬಹುದೊಡ್ಡ ಇತಿಹಾಸವೇ ಅದರೊಂದಿಗೆ ಥಳಕು ಹಾಕ್ಕೊಂಡಿದೆ.ನಾವ್ ಹೇಳೊಕ್ಕೆ ಹೊರಟಿರೋ ವಂಚನೆ ಇದಕ್ಕೆ ಮತ್ತೊಂದು ಸೇರ್ಪಡೆ ಅಷ್ಟೇ..
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಕೋಟಿ ಕೋಟಿಗಳಲ್ಲಿ ಲಾಭ ಮಾಡಿಕೊಂಡ ಕೆಎಸ್ ಸಿಎ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನೇ ಪಾವತಿಸಿಲ್ಲವಂತೆ.ಎಲ್ಲವನ್ನೂ ಕಮಿಟಿಯಲ್ಲಿರೋರೆ ಇಟ್ಟುಕೊಂಡು ದೊಡ್ಡ ವಂಚನೆ ಎಸಗಿದ್ದಾರೆ ಎನ್ನುವುದು 2021ರ ಜುಲೈ 21 ರಂದು ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅಧ್ಯಕ್ಷತೆಯ ಸದನ ಸಮಿತಿ ಮೀಟಿಂಗ್ ನಲ್ಲಿ ಹೊರ ಹಾಕಿತ್ತು.ಪಿಡಬ್ಲ್ಯೂಡಿ ಬಾಡಿಗೆ ಆಧಾರದಲ್ಲಿ ನೀಡಿದ ಕೆಎಸ್ ಸಿಎ ಜಾಗದಲ್ಲಿ, ಐಪಿಎಲ್ ಟೂರ್ನ್ ಮೆಂಟ್ ನ ಮೂಲದಿಂದ ಬಂದ ಕೋಟ್ಯಾಂತರ ಹಣದಲ್ಲಿ ನ್ಯಾಯಯುತವಾಗಿ ಪಾವತಿಸಬೇಕಿದ್ದ ಶುಲ್ಕವನ್ನೂ ಪಾವತಿಸಲಾಗಿಲ್ಲ ಎನ್ನುವುದು ಸದನ ಸಮಿತಿಯ ಆರೋಪ.
“ಕೋಟ್ಯಾಂತರ ಲಾಭ ಮಾಡಿಕೊಳ್ಳುವ ಕೆಎಸ್ ಸಿಎ ಸರ್ಕಾರಕ್ಕೆ ಪಾವತಿಸುವುದು ಕೇವಲ ನೂರು ರೂ.ಅದು ಕೂಡ ವರ್ಷಕ್ಕೆ.ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆ ನೀಡಿರುವ ಮೇಲ್ಕಂಡ ಪ್ರದೇಶದ ಲ್ಲಿ ಕ್ರಿಕೆಟ್ ಜತೆಗೆ ರೆಸ್ಟೋರೆಂಟ್-ಬಾರ್ ಕೂಡ ನಡೆಯುತ್ತಿದೆ.ಇದು ಷರತ್ತುಗಳ ಸ್ಪಷ್ಟ ಉಲ್ಲಂಘ ನೆ.ಇದು ಕೇವಲ ಬೆಂಗಳೂರು ಮಾತ್ರವಲ್ಲ,ಕೆಎಸ್ ಸಿಎ ನ ಶಾಖೆಗಳಿರುವ ಶಿವಮೊಗ್ಗ,ಚಿತ್ರದುರ್ಗ, ದಾವಣಗೆರೆಯಲ್ಲೂ ಇಂತದ್ದೇ ದಂಧೆ ನಡೆಸಲಾಗುತ್ತಿದೆ.
-ಕೆ.ಗೋವಿಂದರಾಜು,ವಿಧಾನಪರಿಷತ್ ಸಮಿತಿ ಸದಸ್ಯ,ಸದನ ಸಮಿತಿ ಅಧ್ಯಕ್ಷ
ಕೆಎಸ್ ಸಿಎ ಗೆ ಬಾಡಿಗೆ ಆಧಾರದಲ್ಲಿ ಜಾಗ ಕೊಡುವಾಗ ಹಾಕಲಾಗಿದ್ದ ಷರತ್ತುಗಳಲ್ಲಿ, ಸದರಿ ಜಾಗದಲ್ಲಿ ಕ್ರಿಕೆಟ್ ಮಾತ್ರ ಆಡಿಸಬೇಕು..ಕಮರ್ಷಿಯಲ್ ಚಟುವಟಿಕೆಗೆ ಅವಕಾಶವಿಲ್ಲ ಎನ್ನುವುದು ಪ್ರಮುಖವಾಗಿತ್ತು.ಆದ್ರೆ ಪಕ್ಕಾ ಕಮರ್ಷಿಯಲ್ ಆಗಿರುವ ಐಪಿಎಲ್ ಆಡಿಸುವ ಮೂಲಕ ಕೋಟ್ಯಾಂತರ ಲಾಭ ಮಾಡಿಕೊಳ್ಳಲಾಗಿದೆ.ಇದು ಷರತ್ತುಗಳ ಉಲ್ಲಂಘನೆ.ಅಷ್ಟೇ ಅಲ್ಲ,ಅದರಿಂದ ಬಂದ ಲಾಭಾಂಶದಲ್ಲಿ ಬಾಡಿಗೆಯನ್ನೂ ಪಾವತಿಸಿಲ್ಲ ಎನ್ನುವುದು ಸಮಿತಿಯ ವಿವರಣೆ.
ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು,ಕೋಟ್ಯಾಂತರ ಲಾಭ ಮಾಡಿಕೊಳ್ಳುವ ಕೆಎಸ್ ಸಿಎ ಸರ್ಕಾರಕ್ಕೆ ಪಾವತಿಸುವುದು ಕೇವಲ ನೂರು ರೂ.ಅದು ಕೂಡ ವರ್ಷಕ್ಕೆ.ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆ ನೀಡಿರುವ ಮೇಲ್ಕಂಡ ಪ್ರದೇಶದಲ್ಲಿ ಕ್ರಿಕೆಟ್ ಜತೆಗೆ ರೆಸ್ಟೋರೆಂಟ್-ಬಾರ್ ಕೂಡ ನಡೆಯುತ್ತಿದೆ.ಇದು ಷರತ್ತುಗಳ ಸ್ಪಷ್ಟ ಉಲ್ಲಂಘನೆ.ಇದು ಕೇವಲ ಬೆಂಗಳೂರು ಮಾತ್ರವಲ್ಲ,ಕೆಎಸ್ ಸಿಎ ನ ಶಾಖೆಗಳಿರುವ ಶಿವಮೊಗ್ಗ,ಚಿತ್ರದುರ್ಗ,ದಾವಣಗೆರೆಯಲ್ಲೂ ಇಂತದ್ದೇ ದಂಧೆ ನಡೆಸಲಾಗುತ್ತಿದೆ ಎನ್ನುವುದು ಸದನ ಸಮಿತಿಯ ಗಂಭೀರ ಆರೋಪ.
“ಸರ್ಕಾರದೊಂದಿಗೆ ಮಾಡಿಕೊಂಡ ಎಲ್ಲಾ ಷರತ್ತುಗಳನ್ನುಉಲ್ಲಂಘಿಸಿರುವ ಕೆಎಸ್ ಸಿಎ ನಂಥ ಕ್ಲಬ್ ನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳೋದು ಸೂಕ್ತ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ ಎನ್ನಲಾಗಿದೆ.ಕ್ಲಬ್ ನ್ನು ವಶಕ್ಕೆ ಪಡೆಯಬೇಕೆನ್ನುವುದು ನಮ್ಮ ಇಂಟೆನ್ಷನ್ ಏನೂ ಅಲ್ಲ,ಆದ್ರೆ ನಿಯಮಗಳನ್ನು ಉಲ್ಲಂಘಿಸಿದರೆ ಸರ್ಕಾರಗಳು ಏನ್ ಮಾಡಬಹುದು ಎನ್ನುವುದನ್ನು ತಿಳಿಸೇಳುವ ಎಚ್ಚರಿಕೆ ಭಾಗವಾಗಿ ಕೆಎಸ್ ಸಿಎ ನ್ನು ವಶಕ್ಕೆ ಪಡೆಯೋದು ಸೂಕ್ತ”
– ತೇಜಸ್ವಿನಿ ಗೌಡ ,ವಿಧಾನ ಪರಿಷತ್ ಸದಸ್ಯೆ, ಸದನ ಸಮಿತಿ ಸದಸ್ಯೆ
ಯಾವುದೇ ಆದಾಯ ಬಂದರೂ ಅದನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕೆನ್ನುವುದು ಕೂಡಕರಾರು ಪತ್ರದಲ್ಲಿದೆ.ಆದ್ರೆ ಕೆಎಸ್ ಸಿಎ ಯಾವುದನ್ನೂ ಮಾಡುತ್ತಿಲ್ಲ.ಒಂದು ಮೂಲದ ಪ್ರಕಾರ 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2019 ರಲ್ಲಿ 595 ಕೋಟಿ ಹಾಗೂ 2020 ರಲ್ಲಿ 535 ಕೋಟಿ ಲಾಭ ಮಾಡಿತ್ತು.ಆದ್ರೆ ಅದರಲ್ಲಿ ಬಿಡಿಗಾಸನ್ನೂ ಸರ್ಕಾರಕ್ಕೆ ಪಾವತಿಸಿಲ್ಲ.ಇದು ಕರಾರಿನ ಸ್ಪಷ್ಟ ಉಲ್ಲಂಘನೆ ಎನ್ನುವುದು ಸಮಿತಿಯ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ.
ಸರ್ಕಾರದೊಂದಿಗೆ ಮಾಡಿಕೊಂಡ ಎಲ್ಲಾ ಷರತ್ತುಗಳನ್ನುಉಲ್ಲಂಘಿಸಿರುವ ಕೆಎಸ್ ಸಿಎ ನಂಥ ಕ್ಲಬ್ ನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳೋದು ಸೂಕ್ತ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ ಎನ್ನಲಾಗಿದೆ.ಕ್ಲಬ್ ನ್ನು ವಶಕ್ಕೆ ಪಡೆಯಬೇಕೆನ್ನುವುದು ನಮ್ಮ ಇಂಟೆನ್ಷನ್ ಏನೂ ಅಲ್ಲ,ಆದ್ರೆ ನಿಯಮಗಳನ್ನು ಉಲ್ಲಂಘಿಸಿದರೆ ಸರ್ಕಾರಗಳು ಏನ್ ಮಾಡಬಹುದು ಎನ್ನುವುದನ್ನು ತಿಳಿಸೇಳುವ ಎಚ್ಚರಿಕೆ ಭಾಗವಾಗಿ ಕೆಎಸ್ ಸಿಎ ನ್ನು ವಶಕ್ಕೆ ಪಡೆಯೋದು ಸೂಕ್ತವಾಗುತ್ತದೆ ಎನ್ನುವ ಅಭಿಪ್ರಾಯವನ್ನು ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ವ್ಯಕ್ತಪಡಿಸಿದ್ದಾರೆ.
“ಬಿಬಿಎಂಪಿಗೂ ಕೆಎಸ್ ಸಿಎ ನಾನಾ ರೀತಿಯ ತೆರಿಗೆ ಬಾಕಿ ಉಳಿಸಿಕೊಂಡಿದೆ.ಅನೇಕ ಬಾರಿ ನೊಟೀಸ್ ಕೊಟ್ಟರೂ ಪ್ರಯೋಜನವಿಲ್ಲ..ಜಾಹಿರಾತು ಹಾಗೂ ಮನರಂಜನಾ ತೆರಿಗೆ ಕಟ್ಟದೆ ಅನೇಕ ವರ್ಷಗಳಿಂದ ಕಳ್ಳಾಟ ಮುಂದುವರೆಸಿಕೊಂಡು ಬಂದಿದೆ.ನಾವೇನೇ ಪ್ರಯತ್ನ ಮಾಡಿದ್ರೂ,ದೊಡ್ಡವರ ಇನ್ ಫ್ಲುಯೆನ್ಸ್ ತಂದು ನಮ್ಮ ಬಾಯನ್ನೇ ಮುಚ್ಚಾಕಿಸುತ್ತಾರೆ..ನಾವು ಅಸಹಾಯಕರಾಗಿದ್ದೇವೆ”..
-ಬಿಬಿಎಂಪಿ ಕಂದಾಯಾಧಿಕಾರಿ
ಕ್ರಿಕೆಟ್ ಪಂದ್ಯಾವಳಿಯನ್ನು ನೆಪವಾಗಿಟ್ಟುಕೊಂಡು ಗುತ್ತಿಗೆ ಷರತ್ತುಗಳನ್ನೆಲ್ಲಾ ಗಾಳಿಗೆ ತೂರಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಕೆಎಸ್ ಸಿಎ ನಾನಾ ರೀತಿಯ ತೆರಿಗೆಯನ್ನೂ ವಂಚಿಸಿರುವ ಆಪಾದನೆಗೆ ತುತ್ತಾಗಿದೆ.ಬಿಬಿಎಂಪಿಗೂ ತೆರಿಗೆ ಪಾವತಿಸಬೇಕಾದ ಕೋಟ್ಯಾಂತರ ತೆರಿಗೆ ಬಾಕಿ ಉಳಿಸಿಕೊಂಡು ಕಳ್ಳಾಟ ಆಡುತ್ತಿದೆ.ಸರ್ಕಾರ,ಪಿಡಬ್ಲ್ಯೂಡಿ ಮತ್ತು ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾದ್ರೆ ದೊಡ್ಡವರ ಶಿಫಾರಸ್ಸು ತಂದು ಎಲ್ಲವನ್ನೂಮುಚ್ಚಾಕಿಕೊಳ್ಳುವ ಕೆಲಸವನ್ನು ಮಾಡುತ್ತಿದೆ.ಪರಿಸ್ತಿತಿ ಹೀಗಿರುವಾಗ ಸರ್ಕಾರದ ಸದನ ಸಮಿತಿ ವರದಿ ಹಾಗೂ ಅದರ ಶಿಫಾರಸ್ಸುಗಳು ಕಾರ್ಯಗತಗೊಳ್ಳುತ್ತೆನ್ನುವುದು ಕೂಡ ಡೌಟೇ..?!