ಶೀಘ್ರವೇ “ಆಪರೇಷನ್ ಅಕ್ರಮ ಪುತ್ಥಳಿ”,ಚಿತ್ರನಟರ ಅಭಿಮಾನಿಗಳಿಗೆ ಕೋರ್ಟ್  ಶಾಕ್.. ಅನಧೀಕೃತ ಪುತ್ಥಳಿಗಳಿಗೆ ಸಂಚಕಾರ

ಪುತ್ಥಳಿಯಷ್ಟೇ ಅಲ್ಲ ಅಕ್ರಮ ಕನ್ನಡ ದ್ವಜಸ್ಥಂಬಗಳಿಗೂ ಇಲ್ಲ ಉಳಿಗಾಲ-ಕೋರ್ಟ್ ವಿರುದ್ದ ಮೆಟ್ಟಿಲೇರಲು ಅಭಿಮಾನಿಗಳು ರೆಡಿ 

0
ಹೈ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ,ಬಿಬಿಎಂಪಿಯ ಸರ್ವೆ ಹಾಗೂ ತೆರವು ಕಾರ್ಯಕ್ಕೆ ಸಹಕಾರ ನೀಡುವಂತೆ ಡಿಸಿಪಿಗಳಿಗೆ ಪೊಲೀಸ್ ಆಯುಕ್ತ ಕಮಲಪಂತ್ ಹೊರಡಿಸಿರುವ ಆದೇಶ ಪ್ರತಿ
ಹೈ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ,ಬಿಬಿಎಂಪಿಯ ಸರ್ವೆ ಹಾಗೂ ತೆರವು ಕಾರ್ಯಕ್ಕೆ ಸಹಕಾರ ನೀಡುವಂತೆ ಡಿಸಿಪಿಗಳಿಗೆ ಪೊಲೀಸ್ ಆಯುಕ್ತ ಕಮಲಪಂತ್ ಹೊರಡಿಸಿರುವ ಆದೇಶ ಪ್ರತಿ

ಬೆಂಗಳೂರು:ಕನ್ನಡ ಪರ ಸಂಘಟನೆಗಳು,ವಿವಿಧ ಚಿತ್ರ ಕಲಾವಿದರ ಅಭಿಮಾನಿಗಳು..ರಾಜಕೀಯ ಗಣ್ಯರ ಹಿಂಬಾಲಕರು ನಖಶಿಖಾಂತ ಬಿಬಿಎಂಪಿ ವಿರುದ್ಧ ಉರಿದು ಹೋಗಿದ್ದಾರೆ.. ಬಿಬಿಎಂಪಿ,ಪೊಲೀಸ್ ಇಲಾಖೆ ವಿರುದ್ಧವೇ ಸಮರ ಸಾರೊಕ್ಕೆ ನಿರ್ಧರಿಸಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣವೇ ಹೈಕೋರ್ಟ್ ಆದೇಶದ ಅನ್ವಯ ಬಿಬಿಎಂಪಿ ತೆಗೆದುಕೊಳ್ಳಲು ಹೊರಟಿರುವ ಆ ನಿರ್ದಾರ..ಅದಕ್ಕೆ ಬೆನ್ನಾಗಿ ನಿಲ್ಲುವಂತೆ ಎಲ್ಲಾ ಡಿಸಿಪಿಗಳಿಗೆ ಪೊಲೀಸ್ ಆಯುಕ್ತ ಕಮಲ ಪಂತ್ ಹೊರಡಿಸಿರುವ ಆದೇಶ.

ಅನಧೀಕೃತವಾಗಿ ನಿರ್ಮಿಸಲಾಗಿರುವ ಪುತ್ಥಳಿಗಳಿಗೆ ಮುಕ್ತಿ ನೀಡೊಕ್ಕೆ ಬಿಬಿಎಂಪಿ ಮುಂದಾಗಿದೆ.ಅನೇಕ ವರ್ಷಗಳವರೆಗೆ ಇಂತದ್ದೊಂದು ನಿರ್ದಾರ ಕೈಗೊಳ್ಳೊಕ್ಕೆ ತಿಣುಕಾಡುತ್ತಿದ್ದ ಬಿಬಿಎಂಪಿ ಕೊನೆಗೂ ಗಟ್ಟಿ ಮನಸು ಮಾಡಿದೆ.ರಾಜ್ಯ ಹೈಕೋರ್ಟ್   ಕೊಟ್ಟಂಥ ಆದೇಶ ಪರಿಪಾಲನೆಗೆ ಮುಂದಾಗಿರುವ ಬಿಬಿಎಂಪಿ ಪುತ್ಥಳಿಗಳು ಹಾಗೂ ಅನಧೀಕೃತವಾಗಿ ನಿರ್ಮಿಸಲಾಗಿರುವ ಕನ್ನಡ ದ್ವಜಸ್ಥಂಬಗಳ ತೆರವು ಕಾರ್ಯಕ್ಕೆ ನಿರ್ಧರಿಸಿದೆ.ಇದಕ್ಕಾಗಿ ಪೊಲೀಸ್ ಇಲಾಖೆ ಜತೆ ಸಮನ್ವಯ ಮೂಡಿಸಿಕೊಂಡು ತೆರವು ಕಾರ್ಯಕ್ಕೆ ತೀರ್ಮಾನ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಕೆ.ಎಸ್ ಸುರೇಶ್ ಅವರು ರಾಜ್ಯ ಹೈ ಕೋರ್ಟ್ ಗೆ ರಿಟ್ ಅರ್ಜಿ ಸಂಖ್ಯೆ:2377/2021(ಪಿಐಎಲ್) ಸಲ್ಲಿಸಿದ್ದರು.30-07-2021 ರಂದು ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಅನಧೀಕೃತ ಪುತ್ಥಳಿಗಳ ತೆರವಿಗೆ ಪೂರಕವಾಗಿ ಸರ್ವೆ ನಡೆಸಿ ಕಾನೂನು ರೀತಿ ಕೈಗೊಳ್ಳಲಾಗುವ ಹಾಗೂ ಕೈಗೊಂಡ ಕ್ರಮಗಳ ಕುರಿತಾದ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿತ್ತು.ಇದರನ್ವಯ ಬಿಬಿಎಂಪಿ ಸರ್ವೆ ಕಾರ್ಯಕ್ಕೆ ಮುಂದಾಗಿದೆ.

ಬಿಬಿಎಂಪಿಯ 198 ವಾರ್ಡ್ ಗಳಲ್ಲಿನ ಅಧಿಕಾರಿಗಳನ್ನು ಕೋರ್ಟ್ ಆದೇಶದನ್ವಯ ಅನಧೀಕೃತ ಪುತ್ಥಳಿಗಳನ್ನು ಜಾತಿ/ಮತ/ಬೇಧವಿಲ್ಲದೆ,ಯಾವುದನ್ನೂ ಲೆಕ್ಕಕ್ಕೆ ಪರಿಗಣಿಸದ ಎಲ್ಲಾ ಅನಧೀಕೃತ ಪುತ್ಥಳಿಗಳನ್ನು ಮಾರ್ಕ್ ಮಾಡಿಕೊಂಡು ಬರುವಂತೆ ಎಲ್ಲಾ ವಲಯಗಳ ಜಂಟಿ ಆಯುಕ್ತರಿಗಳಿಗೆ ಆದೇಶ ನೀಡಿದ್ದಾರೆ ಮುಖ್ಯ ಆಯುಕ್ತ ಗೌರವ್ ಗುಪ್ತಾ. ಮುಖ್ಯ ಆಯುಕ್ತರ ಆದೇಶ ಪರಿಪಾಲನೆಗೆ ಅಧಿಕಾರಿಗಳು ನಾಳೆಯಿಂದ್ಲೇ ತಂಡವಾಗಿ ಸರ್ವೆ ನಡೆಸೊಕ್ಕೆ ಮುಂದಾಗಿರುವುದಾಗಿ ಹೇಳ್ತಾರೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳು.

ಬಿಬಿಎಂಪಿ ಸರ್ವೆ ಕಾರ್ಯಕ್ಕೆ ಮುಂದಾಗಿದ್ದರೆ ಪೊಲೀಸ್ ಆಯುಕ್ತರು ಕೂಡ ಎಲ್ಲಾ 8 ಡಿಸಿಪಿ,16 ಎಸಿಪಿಗಳಿಗೆ ಬಿಬಿಎಂಪಿ ಕೈಗೊಳ್ಳುವ ಸರ್ವೆ ಹಾಗೂ ತೆರವು ಕಾರ್ಯಕ್ಕೆ ಸಹಕಾರ ನೀಡುವಂತೆ ಸೂಚಿಸಿದ್ದಾರೆ.ಈ ಹಿನ್ನಲೆಯಲ್ಲಿ ಡಿಸಿಪಿಗಳಿಗೆ ಬರೆದಿರುವ ಪತ್ರದ ಪ್ರತಿ ಕನ್ನಡ ಫ್ಲಾಶ್ ನ್ಯೂಸ್ ಗೆ ಲಭ್ಯವಾಗಿದೆ.ಎಲ್ಲಾ 8 ವಲಯಗಳ ಡಿಸಿಪಿಗಳು ತಮ್ಮಲ್ಲಿರುವ ಪೊಲೀಸ್ ವ್ಯವಸ್ಥೆಯನ್ನು  ಇದಕ್ಕಾಗಿ ಬಳಸಿಕೊಳ್ಳಲು ನಿರ್ದರಿಸಿದ್ದು ಸರ್ವೆ ಹಾಗೂ ತೆರವು ಕಾರ್ಯದ ವೇಳೆ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಬೇಕಿರುವ ನೆರವು ನೀಡಲು ಸನ್ನದ್ಧವಾಗಿರುವುದಾಗಿ ಡಿಸಿಪಿಯೊಬ್ಬರು ಕನ್ನಡ ಫ್ಲಾಶ್ ನ್ಯೂಸ್ ಗೆ ವಿವರಿಸಿದ್ದಾರೆ.

ಇದೆಲ್ಲಾ ಸರಿ,ಆದ್ರೆ ಕೋರ್ಟ್ ನ  ಈ ಆದೇಶ ಪುತ್ಥಳಿಗಳನ್ನು ಅಭಿಮಾನಪೂರ್ವಕವಾಗಿ ಪ್ರತಿಷ್ಟಾಪಿಸಿರುವ ಅಭಿಮಾನಿ ಸಂಘಗಳ ನ್ನು ಕೆಂಡಾಮಂಡಲಗೊಳಿಸಿದೆ.ಕೋರ್ಟ್ ಆದೇಶದ ಬಗ್ಗೆ ಗೌರವವಿದೆ.

ಆದ್ರೆ ಕಾಲಾವಕಾಶ ನೀಡದೆ ಪುತ್ಥಳಿಗಳ ತಂಟೆಗೆ ಬಂದ್ರೆ ಪರಿಸ್ಥಿತಿ ನೆಟ್ಟಗಿರೊಲ್ಲ ಎಂದು ಬಿಬಿಎಂಪಿ ಹಾಗೂ ಪೊಲೀಸ್ ಇಲಾಕೆಯನ್ನು ಎಚ್ಚರಿಸಿದ್ದಾರೆ.ಕೋರ್ಟ್ ನ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲು ಅನೇಕ ಕನ್ನಡ ಪರ ಸಂಘಟನೆಗಳು.ಚಲನಚಿತ್ರ ಅಭಿಮಾನಿಗಳ ಸಂಘಗಳು ಕನ್ನಡ ಫ್ಲಾಶ್ ನ್ಯೂಸ್ ಗೆ ಮಾಹಿತಿ ನೀಡಿವೆ.

ಇದೆಲ್ಲವನ್ನು ಗಮನಿಸಿದ್ರೆ ಬಿಬಿಎಂಪಿ-ಪೊಲೀಸ್ ಇಲಾಖೆ ಪುತ್ಥಳಿಗಳ ಸರ್ವೆ ಹಾಗೂ ತೆರವಿಗೆ ಮುಂದಾದ್ರೆ ಒಂದಷ್ಟು ಕಡೆ ಅಭಿಮಾನಿ ಸಂಘಗಳು ಪ್ರತಿರೋಧ ಒಡ್ಡುವಂಥ ಸಾಧ್ಯತೆಗಳಂತೂ ಇದ್ದೇ ಇದೆ..ಹಾಗೆಂದಾಕ್ಷಣ ಇದೆಲ್ಲಾ ಅಷ್ಟು ಸಲೀಸಾಗಿ ನಡೆಯುವಂಥ ಕೆಲಸವೂ ಅಲ್ಲ..ಸರ್ವೆಯನ್ನು ಯಾವ ಆಧಾರದಲ್ಲಿ ಮಾಡಲಾಗುತ್ತೆ ಎನ್ನುವುದು ಅಂತಿಮವಾಗಿಲ್ಲ..ಎಲ್ಲಕ್ಕಿಂತ ಹೆಚ್ಚಾಗಿ ಪುತ್ಥಳಿಗಳ ಪ್ರತಿಷ್ಟಾಪನೆಗೆ ಪೂರಕವಾಗಿ ಅನುಮತಿ ನೀಡುವ ನಿಯಮಗಳನ್ನೇ ಬಿಬಿಎಂಪಿ ರೂಪಿಸಿಲ್ಲವಂತೆ..

ಇಂಥಾ ಪರಿಸ್ಥಿತಿಯಲ್ಲಿ ಅನಧೀಕೃತ ಪುತ್ಥಳಿಗಳ ಸರ್ವೆ ಹೇಗೆ ನಡೆಸುತ್ತೆ..ಆಕ್ರೋಶಗೊಂಡ ಅಭಿಮಾನಿಗಳ ಅಸಹನೆ-ಅಸಮಾಧಾನವನ್ನು ಹೇಗೆ ತಣಿಸುತ್ತೆ..ಅಂತಿಮವಾಗಿ ಈ ಎಲ್ಲಾ ವಿರೋದಾಭಾಸಗಳ ನಡುವೆಯೇ  ಕೋರ್ಟ್ ಗೆ ಸರ್ವೆ ಹಾಗೂ ತೆರವು ಕಾರ್ಯದ ಬಗ್ಗೆ ಕೈಗೊಳ್ಳಲಾದ ಕ್ರಮಗಳ ವರದಿಯನ್ನು ಬಿಬಿಎಂಪಿ ಹೇಗೆ ಸಲ್ಲಿಸುತ್ತೆ ಎನ್ನುವುದು ದೊಡ್ಡ ಕುತೂಹಲವನ್ನೇ ಮೂಡಿಸಿದೆ.

Spread the love
Leave A Reply

Your email address will not be published.

Flash News