“ಪಾಲಿಕೆಗಳ ಫಲಿತಾಂಶ 2023ರ ಚುನಾವಣೆಯ ದಿಕ್ಸೂಚಿ –ಪಕ್ಷದ ಸಾಧನೆ ತೃಪ್ತಿ ತಂದಿದೆ-ಸಿಎಂ ಬಸವರಾಜ ಬೊಮ್ಮಾಯಿ

2023ರ ಚುನಾವಣೆಗೆ ಧುಮುಕಲು ಈ ಗೆಲುವು ಮುಖ್ಯಮಂತ್ರಿಗೆ ಹೊಸ  ಹುಮ್ಮಸ್ಸು-ಆತ್ಮವಿಶ್ವಾಸ  ನೀಡಿದೆಯಂತೆ

0

  ಬೆಂಗಳೂರು: ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಾಧನೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತುಷ್ಟಗೊಂಡಿದ್ದಾರೆನಿಸುತ್ತದೆ.ಹಾಗಾಗಿನೇ ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದ್ದಾರೆ.

ಕಾರ್ಪೊರೇಷನ್ ಗಳ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು,ಬೆಳಗಾಂ ಮತ್ತು ಹುಬ್ಬಳಿ ಧಾರವಾಡದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಸಾಧ್ಯತೆ ಇದೆ.  ಕಲ್ಬುರ್ಗಿ ಕೂಡ ನಮ್ಮ ಪಾಲಾಗುತ್ತದೆ.ಮತದಾರ ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆಗೆ ಈ ಫಲಿತಾಂಶ ಸಾಕ್ಷಿಪ್ರಜ್ಞೆಯಾಗಿದೆ ಎಂದರು.

ಮೂರು ಕಾರ್ಪೊರೇಷನ್ ಗಳಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ತಿಳಿಸಿದ ಅವರು,ಚುನಾವಣೆಯಲ್ಲಿ  ಕೆಲಸ ಮಾಡಿದ ಮಂತ್ರಿಗಳ ಶಾಸಕರು , ಎಂಪಿಗಳು, ಕಾರ್ಯಕರರಿಗೆ ಅಭಿನಂದಿಸುವುದಾಗಿ ಹೇಳಿದರು. ಚುನಾವಣೆ ಜವಾಬ್ದಾರಿ ಹೊತ್ತಿದ್ದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಅರುಣ್ ಕುಮಾರ್ ಮತ್ತು ರವಿಕುಮಾರ್ ಗೆ ಅಭಿನಂದನೆಗಳು..ಬಿಜೆಪಿ ಮೇಲೆ ವಿಶ್ವಾಸ ತೋರಿದ ಮತದಾರರಿಗೆ ವಿಶೇಷವಾಗಿ ಅಭಿನಂದನೆ ತಿಳಿಸಿದರು.

ಕಳೆದ ಬಾರಿ ಬೆಳಗಾವಿಯಲ್ಲಿ ನಮ್ಮ ಕಡಿಮೆ ಸೀಟ್ ಇತ್ತು .ಈ ಭಾರಿ ಬೆಳಗಾವಿಯಲ್ಲಿ ನಾವು ಅದ್ಭುತವಾಗಿ ಪ್ರದರ್ಶನ   ತೋರಿದ್ದೇವೆ.ಬಹಳ ವಿಶ್ಲೇಷಣೆ ಮಾಡ್ತಾಯಿದ್ರೂ..ಮತದಾರರಿಗೆ ಸ್ಥಿರವಾದ ಆಡಳಿತ ಬೇಕು ಅಂತ ಬಯಸಿ ನಮ್ಮಗೆ ಅಧಿಕಾರಿ ನೀಡಿದ್ದಾರೆ . ಬೆಳಗಾವಿ ಯಾವತ್ತು ರಾಷ್ಟ್ರೀಯ ಪಕ್ಷದ ಜೊತೆಗೆ ಇರುತ್ತೆ ಅಂತ ಜನರು ತೋರಿಸಿದ್ದಾರೆ…ಹುಬ್ಬಳ್ಳಿ ಧಾರವಾಡ ನಮ್ಮ ಕೋಟೆ ಅದನ್ನ  ಸುಭದ್ರವಾಗಿ ಇಟ್ಕೊಂಡಿದ್ದೀವಿ. ಕಲಬುರಗಿಯಲಲ್ಲಿ ಮೊದಲ ಭಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾವು ಆಯ್ಕೆ ಆಗಿದ್ದೇವೆ.ಇನ್ನು ಫಲಿತಾಂಶ ಭಾಕಿ ಉಳಿದಿದೆ..ಒಟ್ಟಾರೆ ನಮ್ಮ ಸರ್ಕಾರ ಬಂದು ಒಂದು ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ  ಪ್ರಥಮ ಸೂಚನೆ  ಸಿಕ್ಕಿದೆ  ಎಂದರು.

ಮಾಜಿ ಸಿಎಂ ಯಡಿಯೂರಪ್ಪ ರವರ ಆಶೀರ್ವಾದಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರೀಯ ,ನಾಯಕರ ಹೆಸರು ನಮ್ಮಗೆ ಚುನಾವಣೆಯಲ್ಲಿ ಪ್ರೇರಣೆ ಆಗ್ತಾಯಿದೆ. ಆ ಮೂಲಕ ಜನರ ನಮ್ಮಗೆ ಮನ್ನಣೆ ಕೊಡ್ತಾಯಿದ್ದಾರೆ ಜೊತೆಗೆ ಬೆಂಬಲ ಕೊಡ್ತಾಯಿದ್ದಾರೆ  ಇದು ಮುಂದಿನ ದಿನಗಳಲ್ಲಿ ದಿಕ್ಸೂಚಿಯಾಗಲಿದೆ ಅಂತ ಹೇಳ್ತಿನಿ.  ಎಂದು ಸಿಎಂ ಬೊಮ್ಮಾಯಿ ಹೇಳಿದ್ರು. 

Spread the love
Leave A Reply

Your email address will not be published.

Flash News