ಭೂಮಿ “ಬಿಡಿಎ”ದ್ದು..ಲೇ ಔಟ್ “ಬಿಲ್ಡರ್” ದ್ದು..?! 50 ಕೋಟಿ ಭೂಮಿ ಉಳಿಸಿಕೊಳ್ಳೊಕ್ಕೆ “ಪ್ರಾಧಿಕಾರ”ಕ್ಕೇ ನಿರಾಸಕ್ತಿ..

ಕಣ್ಣೆದುರೇ ಅಕ್ರಮ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುವ ಮಾತಿರಲಿ,ಪ್ರಶ್ನಿಸುವ ಗೋಜಿಗೇಕೆ ಹೋಗಲಿಲ್ಲ ಭ್ರಷ್ಟ ಅಧಿಕಾರಿಗಳು..?

0

ಬೆಂಗಳೂರು:ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಂಗಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತ್ತೊಂದು ಹಗರಣ ಇದು.. ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಹಗರಣಕ್ಕೆ ನೇರವಾಗಿ ಬಿಡಿಎ ನ ಕೆಲ ಭ್ರಷ್ಟ ಅಧಿಕಾರಿಗಳ ಶಾಮೀಲಾತಿ ಇದೆ ಎನ್ನಲಾಗ್ತಿದೆ.50 ಕೋಟಿ ಮೊತ್ತದ ಆಸ್ತಿಯನ್ನು ಉಳಿಸಿಕೊಡೊಕ್ಕೆ ಸಾಮಾಜಿಕ ಕಾರ್ಯಕರ್ತ  ರವಿಕುಮಾರ್ ಎನ್ನುವವರು ಅಹಿರ್ನಿಷಿ ಹೋರಾಡುತ್ತಿದ್ದರೆ ಅದನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಮನಸನ್ನೇ ಬಿಡಿಎ ಮಾಡ್ತಿಲ್ಲ ಎನ್ನೋದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಅಂದ್ಹಾಗೆ ಇದು ಬಿಡಿಎ ವ್ಯಾಪ್ತಿಯ ಎಕ್ರೆಗಟ್ಟಲೇ ಜಮೀನನ್ನು ಬಿಲ್ಡರ್ ಒಬ್ಬ ಅಕ್ರಮವಾಗಿ ಒತ್ತುವರಿ ಮಾಡಿ ಅಲ್ಲಿ ಸುಸಜ್ಜಿತ ಲೇ ಔಟ್ ನಿರ್ಮಿಸಿ,ಸೈಟ್ ಗಳನ್ನು ಮಾಡಿ  ಹಂಚಿರುವ ಬಗ್ಗೆ ಕೇಳಿ ಬಂದಿರುವ ಬೃಹತ್ ಗೋಲ್ಮಾಲ್.ಬಿಡಿಎ ಸ್ವಾಧೀನಪಡಿಸಿಕೊಂಡಿತೆನ್ನಲಾದ ಭೂಮಿಯಲ್ಲಿ ಬಿಲ್ಡರ್ ಲೇ ಔಟ್ ನಿರ್ಮಿಸಿದ್ದೇ ಅಲ್ಲದೇ 30-40 ರಷ್ಟು ಸೈಟ್ ಸೃಷ್ಟಿಸಿ ಹಂಚಿಕೆ ಮಾಡಿದ್ದಾನೆ.ಈ ಎಲ್ಲಾ ಅಕ್ರಮ ಗೊತ್ತಿದ್ರೂ ಬಿಡಿಎ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳುವ ಮಾತು ಹಾಳಾಗಿ ಹೋಗ್ಲಿ,ಸ್ಪಾಟ್ ವಿಸಿಟ್ ಮಾಡಿ ಪರಿಶೀಲನೆ ನಡೆಸುವ ಗೋಜಿಗೇನೇ ಹೋಗಲಿಲ್ಲ ಎನ್ನುವುದು ಮೇಲ್ಕಂಡ ಪ್ರಕರಣದ ಬಗ್ಗೆ ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಆರೋಪ.

ಪ್ರಕರಣ ಏನು..?:ದೂರುದಾರ ರವಿಕುಮಾರ್ ಪ್ರಕಾರ,ಕೊಮ್ಮಘಟ್ಟ ವ್ಯಾಪ್ತಿಯ ಕೃಷ್ಣಸಾಗರ ಗ್ರಾಮದ  ಸರ್ವೆ ನಂಬರ್ 31 ರಲ್ಲಿ 7 ಎಕ್ರೆ 36 ಗುಂಟೆ ಇದೆ.ಅದರಲ್ಲಿ 3 ಎಕರೆ 6 ಗುಂಟೆ ಜಮೀನನ್ನು ಬಿಡಿಎ ಕೆಂಪೇಗೌಡ ಬಡಾವಣೆ ನಿರ್ಮಾಣ ಉದ್ದೇಶದಲ್ಲಿ ಸ್ವಾಧೀನಪಡಿಸಿಕೊಂಡಿತ್ತು.ಸಂಬಂಧಿಸಿದ ಭೂ ಮಾಲೀಕನಿಗೆ ಪರಿಹಾರವನ್ನೂ ಒದಗಿಸಿತ್ತು.

ಸಾಮಾಜಿಕ ಕಾರ್ಯಕರ್ತ ರವಿಕುಮಾರ್
ಸಾಮಾಜಿಕ ಕಾರ್ಯಕರ್ತ ರವಿಕುಮಾರ್
ಬಿಡಿಎ ಜಾಗದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿರುವ ಲೇ ಔಟ್
ಬಿಡಿಎ ಜಾಗದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿರುವ ಲೇ ಔಟ್

ಆದರೆ ಅದೇ ಜಮೀನಿನ ಪೈಕಿ 2 ಎಕ್ರೆ 2 ಗುಂಟೆ ಜಮೀನಿನಲ್ಲಿ ಶ್ರೀನಿಧಿ  ಬಿಲ್ಡರ್ಸ್ ಸಂಸ್ಥೆಯ ಮಾಲೀಕ ಸಂಕ ಶ್ರೀನಿವಾಸ್ ಎನ್ನುವವರು ಲೇ ಔಟ್ ಮಾಡಿ 30 ರಿಂದ 40 ಸೈಟ್ ಗಳನ್ನು ಅನೇಕರಿಗೆ ಹಂಚಿದ್ದಾರೆ. ಬಿಡಿಎ ಎನ್ ಓಸಿಯನ್ನೂ ಕೂಡ ನೀಡಿದೆಯಂತೆ.ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಬಿಎಂಟಿಎಫ್, ಬಿಡಿಎ ನಲ್ಲಿ ದೂರನ್ನು ಒಂದ್ ವರ್ಷದ ಹಿಂದೆಯೇ ದಾಖಲಿಸಿದ್ದರಂತೆ.ಆದ್ರೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಬಿಡಿಎ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದ ಫೈಲ್ ಮೂಮೆಂಟ್ ಮಾಡಿ ಇಷ್ಟೊತ್ತಿಗಾಗ್ಲೇ ಒತ್ತುವರಿ ಆಗಿದೆ ಎನ್ನಲಾದ ಭೂಮಿಯನ್ನು ವಶಕ್ಕೆ ಪಡೆಯಬೇಕಿತ್ತೆನ್ನುತ್ತಾರೆ ರವಿಕುಮಾರ್.

ಬಿಎಂಟಿಎಫ್ ಮೇಲ್ಕಂಡ ಪ್ರಕರಣದ ಬಗ್ಗೆ ಎಫ್ ಐ ಆರ್ ದಾಖಲಿಸಿದ್ದನ್ನು ಬಿಟ್ಟರೆ ಸಾಕ್ಷ್ಯಗಳ ಕೊರತೆ ಹಿನ್ನಲೆಯಲ್ಲಿ ಚಾರ್ಜ್ ಶೀಟ್ ಫೈಲ್ ಮಾಡಿಯೇ ಇಲ್ಲವಂತೆ.ರವಿಕುಮಾರ್ ಆಪಾದನೆ ಪ್ರಕಾರ ಬಿಲ್ಡರ್ ಸಂಕ ಶ್ರೀನಿವಾಸ್, ಬಿಎಂಟಿಎಫ್ ಅಧಿಕಾರಿಗಳ ಮೇಲೆ ಒತ್ತಡ ತರುವ ಕೆಲಸ ಮಾಡಿದ್ದಾರೆ.ಹಾಗಾಗಿನೇ ಬಿಎಂಟಿಎಫ್ ಅಧಿಕಾರಿಗಳು ಕಥೆ ಹೊಡೆಯುತ್ತಿದ್ದಾರೆನ್ನುತ್ತಾರೆ.ಈ ಅಕ್ರಮದಲ್ಲಿ ಬಿಡಿಎ ನ  ಟೌನ್ ಪ್ಲ್ಯಾನಿಂಗ್, ಎಂಜಿನಿಯರ್ಸ್ ಹಾಗೂ ಸರ್ವೆಯರ್ಸ್ ಗಳು ಶಾಮೀಲಾಗಿದ್ದಾರೆ. ಸುಮಾರು 50 ಕೋಟಿ ಮೌಲ್ಯದ ಬಿಡಿಎ ಜಮೀನಿನಲ್ಲಿ ಬಿಲ್ಡರ್ ಕೊಟ್ಟ ಕಿಕ್ ಬ್ಯಾಕ್ ಆಸೆಗೆ ಎನ್ ಓಸಿ ನೀಡುವ ಮೂಲಕ ಲೇ ಔಟ್ ನಿರ್ಮಾಣ ಮಾಡೊಕ್ಕೆ ಅವಕಾಶ ನೀಡಿರುವುದು ಅಕ್ಷಮ್ಯ.ತನ್ನ ಪಾಲಿಗೆ ದಕ್ಕಬೇಕಿದ್ದ ಭೂಮಿಯನ್ನು ಕೆಲ ಭ್ರಷ್ಟರಿಂದಾಗಿ ಕಳೆದುಕೊಳ್ಳಬೇಕಾದ ಸನ್ನಿವೇಶ ಬಂದೊದಗಿದೆ ಎಂದು ರವಿಕುಮಾರ್ ಆಪಾದಿಸಿದ್ದಾರೆ.

ಬಿಡಿಎ ಜಾಗದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿರುವ ಲೇ ಔಟ್
ಬಿಡಿಎ ಜಾಗದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿರುವ ಲೇ ಔಟ್

ಅಕ್ರಮಕ್ಕೆ ಸಾಥ್ ಕೊಟ್ಟಿದರೆ ಜೈಲ್ ಗ್ಯಾರಂಟಿ:ರವಿಕುಮಾರ್ ದೂರಿನ ಮೇಲೆ ದಾಖಲಾದ ಎಫ್ ಐ ಆರ್ ನಲ್ಲಿ ಕೆಲವರನ್ನಷ್ಟೇ ಆಪಾದಿತರನ್ನಾಗಿಸಲಾಗಿದೆಯಂತೆ.ನಿಜವಾಗ್ಲೂ ತಪ್ಪಿತಸ್ಥರಾದವರನ್ನೇ ಕೈ ಬಿಡಲಾಗಿದೆಂತೆ.ಇದರ ಹಿಂದೆಯೂ ಸಂಕ ಶ್ರೀನಿವಾಸ್ ಕೈವಾಡ ಇದೆ ಎನ್ನುವುದು ರವಿಕುಮಾರ್ ಆರೋಪ.ತನ್ನ ಹೋರಾಟಕ್ಕೆ ಸರಿಯಾದ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಬಿಡಿಎ ಭೂಸ್ವಾಧೀನಾಧಿಕಾರಿ ಡಾ.ಸೌಜನ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.ಅವರಿಂದ ನ್ಯಾಯದ ಭರವಸೆ ದೊರೆತಿದೆಯಂತೆ.ಅದರ ಬೆನ್ನಲ್ಲೇ ಬಿಡಿಎ ಅಧ್ಯಕ್ಷರ ಗಮನಕ್ಕೂ ವಿಷಯ ತರಲಾಗಿದೆ. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಯಾರೇ ಕಂಡುಬಂದ್ರೂ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.ಬಿಡಿಎ ಆಸ್ತಿಯನ್ನು ಯಾರೇ ಲಪಟಾಯಿಸೊಕ್ಕೆ ಅವಕಾಶ ಮಾಡಿಕೊಡೊಲ್ಲ,ಅಕ್ರಮಕ್ಕೆ ಸಾಥ್ ಕೊಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ.

ಬಿಡಿಎ ಅಧ್ಯಕ್ಷ ವಿಶ್ವನಾಥ್
ಬಿಡಿಎ ಅಧ್ಯಕ್ಷ ವಿಶ್ವನಾಥ್
ರವಿಕುಮಾರ್ ಬಿಎಂಟಿಎಫ್ ಗೆ ನೀಡಿರುವ ದೂರಿನ ಪ್ರತಿ
ರವಿಕುಮಾರ್ ಬಿಎಂಟಿಎಫ್ ಗೆ ನೀಡಿರುವ ದೂರಿನ ಪ್ರತಿ
ರವಿಕುಮಾರ್ ಬಿಎಂಟಿಎಫ್ ಗೆ ನೀಡಿರುವ ದೂರಿನ ಪ್ರತಿ-1
ರವಿಕುಮಾರ್ ಬಿಎಂಟಿಎಫ್ ಗೆ ನೀಡಿರುವ ದೂರಿನ ಪ್ರತಿ-1

25 ಲಕ್ಷ ಹಣಕ್ಕೆ ಬೇಡಿಕೆ..:ಮಾದ್ಯಮಗಳಲ್ಲಿ ಈ ಬಗ್ಗೆ ಸುದ್ದಿ ವರದಿಯಾಗುತ್ತಿದ್ದಂತೆ ಮುನ್ನಲೆಗೆ ಬಂದಿರುವ ಬಿಲ್ಡರ್ ಸಂಕ ಶ್ರೀನಿವಾಸ್, ದೂರುದಾರ ರವಿಕುಮಾರ್ ವಿರುದ್ದ 25 ಲಕ್ಷ ಬೇಡಿಕೆಯ ಆರೋಪ ಮಾಡಿದ್ದಾರಂತೆ.25 ಲಕ್ಷ ಹಣ ಕೊಟ್ಟರೆ ನಿಮ್ಮ ತಂಟೆಗೇನೆ ಬರೊಲ್ಲ ಎಂದಿದ್ದರಂತೆ.

ಆದ್ರೆ ಅದಕ್ಕೆ ಒಪ್ಪದೆ ಇದ್ದಾಗ ಸುದ್ದಿ ಬ್ಲಾಸ್ಟ್ ಮಾಡಿದ್ರೆನ್ನೋದು ಬಿಲ್ಡರ್ ಆರೋಪ.ಆದ್ರೆ ಅದಕ್ಕೆ ಪ್ರತಿಕ್ರಿಯಿಸಿರುವ ರವಿಕುಮಾರ್ ನಾನಲ್ಲ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡಿ ಪ್ರಕರಣವನ್ನೇ ಮುಚ್ಚಾಕೊಕ್ಕೆ ಮುಂದಾದವ್ರು ಅವರು,ಅದಕ್ಕೆ ನನ್ನ ಬಳಿ ಸಂಕ ಅವರ ಆಪ್ತ ಎಂದು ಪರಿಚಯಿಸಿಕೊಂಡ ರಮೇಶ್ ಎನ್ನೋವ್ರು ಮಾತನಾಡಿದ ಆಡಿಯೋ ರೆಕಾರ್ಡ್ ಇದೆ.

ಇದನ್ನು ಕಾನೂನು ಸಮರಕ್ಕೆ ಬಳಸಿಕೊಳ್ತೇನೆ ಎಂದೇಳಿದ್ದಾರಲ್ಲದೇ,ತನಗೆ ಸಂಕ ಶ್ರೀನಿವಾಸ್ ಅವರೇ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆಪಾದಿಸಿದ್ದಾರೆ.

ಈ ನಡುವೆ ಕೆಲವು ಪ್ರಭಾವಿಗಳು ಕೂಡ ಬಿಲ್ಡರ್ ಬೆನ್ನಿಗೆ ನಿಂತಿದ್ದಾರೆನ್ನುವ ಮಾತು ಕೇಳಿ ಬಂದಿದೆ.ಬಿಡಿಎ ಅಧ್ಯಕ್ಷರ ಮೇಲೆ ಪ್ರಭಾವ ಬೀರುವ ಕೆಲಸಕ್ಕು ಕೈ ಹಾಕಿದ್ದಾರೆನ್ನಲಾಗಿದೆ.ಆದ್ರೆ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಲರ್ಟ್ ಆಗಿದ್ದಾರೆ ನ್ನಲಾಗಿರುವ ವಿಶ್ವನಾಥ್. ಬಿಡಿಎ ಅಧಿಕಾರಿಗಳನ್ನು ಕರೆದು 50 ಕೋಟಿ ಮೌಲ್ಯದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವತ್ತ  ಗಮನ ಹರಿಸುವಂತೆ ಸೂಚಿಸಿದ್ದಾರೆನ್ನಲಾಗಿದೆ.

ಎಲ್ಲವೂ ನಿರೀಕ್ಷೆಯಂತೆಯೇ ನಡುದ್ರೆ ,ರವಿಕುಮಾರ್ ಮಾಡ್ತಿರುವ ಆರೋಪ ಸತ್ಯವೆಂದು ಪ್ರೂವ್ ಆಗಿದ್ದೇ ಅದಲ್ಲಿ,50 ಕೋಟಿ ಮೌಲ್ಯದ ಭೂಮಿ ಬಿಡಿಎ ಬೊಕ್ಕಸ ಸೇರುತ್ತದೆ.ಅಷ್ಟೊಂದು ಪ್ರಮಾಣದ ಭೂಮಿ ಉಳಿಸಿದ ಹೆಗ್ಗಳಿಕೆ ಅಧ್ಯಕ್ಷರಿಗೆ ಸಂದರೆ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಮಾಡಿದ ಪುಣ್ಯದ ಕೆಲಸಕ್ಕಾಗಿ ಅವರನ್ನು ಸನ್ಮಾನಿಸಬೇಕಾಗುತ್ತೆ.

Spread the love
Leave A Reply

Your email address will not be published.

Flash News