ಸಚಿವ ಆನಂದ್ ಸಿಂಗ್ ಅವ್ರೇ,.. ಮೊದಲು “ಮಂಡಳಿ”ಯ ಆಡಳಿತ “ಮಾಲಿನ್ಯ”ಕ್ಕೆ ಬ್ರೇಕ್ ಹಾಕಿ..ಆಮೇಲೆ ಪರಿಸರ ಮಾಲಿನ್ಯಕ್ಕೆ ಪರಿಹಾರ ಹುಡುಕಿ ..

ಭ್ರಷ್ಟಾಚಾರದ ಕೂಪವಾಗಿರುವ ಮಂಡಳಿಯ ಅವ್ಯವಸ್ಥೆಗೆ, ಸಾಣೆ ಹಿಡಿಯದೇ ಹೋದಲ್ಲಿ ಸಚಿವರನ್ನೇ ಬೀದಿಯಲ್ಲಿ ನಿಲ್ಲಿಸಿ  ಮಾನ ಕಳೆಯೋದ್ರಲ್ಲಿ ಡೌಟೇ ಇಲ್ಲ..

0

ಬೆಂಗಳೂರು:ಇಷ್ಟವಿಲ್ಲದ ಖಾತೆ ಸ್ವೀಕರಿಸಿದ್ರೆ ಹೀಗೆ ಆಗೋದು ಅನ್ಸುತ್ತೆ..ಬೇಕಿದ್ದ ಖಾತೆಗೆ ಪಟ್ಟುಹಿಡಿದು ಅದಕ್ಕಾಗಿ ಲಾಭಿ ಮಾಡಿ ಸೋತು, ಹೈಕಮಾಂಡ್ ವಾರ್ನಿಂಗ್ ಗೆ ಹೆದರಿ, ಇಷ್ಟವಿಲ್ಲದಿದ್ದರೂ ಪರಿಸರ-ಪ್ರವಾಸೋದ್ಯ ಮ ಖಾತೆ ಅಲಂಕರಿಸಿದವ್ರು ಸಚಿವ ಆನಂದ್ ಸಿಂಗ್,.ಪಕ್ಷದ ವರಿಷ್ಠರು ಇಷ್ಟವಿರೋ ಖಾತೆ ಕೊಡದೆ ಮುಲಾಜಿಗೆ ಸಿಕ್ಕಾಕೊಂಡಂತೆ ಪರಿಸರ ಖಾತೆ ಕೊಟ್ಟಿದ್ದಕ್ಕೆ ಅವರಲ್ಲಿನ ಮುನಿಸು ಇನ್ನು ದೂರವಾದಂತಿಲ್ಲ.ಇದು ಅವರ ನಿಷ್ಕ್ರೀಯತೆಯಲ್ಲೇ ಎದ್ದು ಕಾಣುತ್ತಿದೆ ಎನ್ನುವ ಆರೋಪ ಕೇಳಿಬರಲಾರಂಭಿಸಿದೆ.

ಆನಂದ್ ಸಿಂಗ್,ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಅಲಂಕರಿಸುವಾಗ ಎಷ್ಟೆಲ್ಲಾ ಸರ್ಕಸ್ ಮಾಡಿದ್ರು..ಏನೆಲ್ಲಾ ನಾಟಕೀಯ ಬೆಳವಣಿಗೆಗೆ ಕಾರಣವಾದ್ರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.ಹೈಕಮಾಂಡ್ ಗೆ ಷರತ್ತುಬದ್ಧ ಒಪ್ಪಿಗೆ ನೀಡಿ ಅಧಿಕಾರ ಸ್ವೀಕರಿಸಿದ್ದೂ ಆಗೋಗಿದೆ..ಈಗಲಾದ್ರೂ ಅದನ್ನೆಲ್ಲಾ ಮರೆತು ಖಾತೆಯನ್ನು ಸಮರ್ಥವಾಗಿ ನಿಭಾಯಿಸಬೇಕಲ್ಲ..ಆದ್ರೆ ಅಂತದ್ದೊಂದು ಕೆಲಸ ಅವರಿಂದಾಗುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎನ್ನುತ್ತಾರೆ ಇಲಾಖೆಯನ್ನು ಹತ್ತಿರದಿಂದ ಬಲ್ಲಂಥ ಅದೆಷ್ಟೋ ಮಂದಿ.

ಹಾಗೆ ನೋಡಿದ್ರೆ ಆನಂದ್ ಸಿಂಗ್ ಅವರಿಗೆ ಪರಿಸರ ಖಾತೆಯೇನು ಹೊಸದೇನಲ್ಲ..ಕಳೆದ ಬಾರಿಯೇ ಅದನ್ನು ಅವರು ನಿಭಾಯಿಸಿದ್ದಾರೆ.ಅದರ ಒಳಹೊರಗನ್ನು ಅರ್ಥೈಸಿಕೊಂಡಿದ್ದಾರೆ..ಹೀಗಿರುವಾಗ ಇಲಾಖೆಯಲ್ಲಿ ತುಂಬಿ ತುಳುಕುತ್ತಿರುವ ಅಕ್ರಮ-ಭ್ರಷ್ಟಾಚಾರ-ಅಧಿಕಾರಿಗಳ ಅಂದಾದರ್ಬಾರ್-ಸರ್ವಾಧಿಕಾರಿ ಧೋರಣೆಗಳಂತ ಅವ್ಯವಸ್ಥೆಯನ್ನು ಸರಿ ಮಾಡುವ ಮಾತು ಹಾಳಾಗಿ ಹೋಗ್ಲಿ,ಅಟ್ಲೀಸ್ಟ್ ಕಂಟ್ರೋಲ್ ಮಾಡುವ ಕೆಲಸವನ್ನಾದ್ರೂ ಮಾಡಬೇಕಿತ್ತು..ಆದ್ರೆ ಈ ವಿಷಯದಲ್ಲಿ ಅವರು ಸಂಪೂರ್ಣ ಸೋತಿದ್ದಾರೆನ್ನುವುದು ಇಲಾಖೆಯ ಕೆಲ ಹಿರಿಯ ಅಧಿಕಾರಿಗಳ ನೇರ ಆರೋಪ.

ಸಾಕಷ್ಟು ಜನ ಅಭಿಪ್ರಾಯಿಸುವ ಪ್ರಕಾರ,ಆನಂದ್ ಸಿಂಗ್ ಮೊದಲು ಮಾಡಬೇಕಿರುವುದು ಪರಿಸರದ ಮೇಲೆ ಆಗುತ್ತಿರುವ ಮಾಲಿನ್ಯವನ್ನು ತಡೆಯುವ ಕೆಲಸವಲ್ಲ, ಆ ಹೊಣೆಗಾರಿಕೆ ನಿಭಾಯಿಸಬೇಕಾದ ಪರಿಸರ ಮಂಡಳಿಯಲ್ಲಿರುವ ಕೆಲವು ಭ್ರಷ್ಟರು-ಅದಕ್ಷರು-ಅಪ್ರಮಾಣಿಕರು-ನಮಕ್ ಹರಾಮಿ ಅಧಿಕಾರಿಗಳ ಹೆಡೆಮುರಿ ಕಟ್ಟುವ ಹಾಗೂ ಮೂಲಕ ಆಡಳಿತ ಮಂಡಳಿಯಲ್ಲಿನ ಮಾಲಿನ್ಯ ತಡೆಯುವ ಕೆಲಸ.ಮೊದಲು ತನ್ನ ಮೂಲ ಮನೆಯಲ್ಲಿನ ಕೊಳಕನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಲೀಕ ಮಾಡದೆ ಇದ್ದರೆ ಏನಾಗುತ್ತೆ ಎನ್ನುವುದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ತುಂಬಿ ತುಳುಕುತ್ತಿರುವ ಅಕ್ರಮ-ಅವ್ಯವಹಾರ-ಭ್ರಷ್ಟಾಚಾರವೇ ಸಾಕ್ಷಿಯಾಗಬಹುದು.

ಈಗಲಾದರೂ ಮೈ ಕೊಡವಿ ಎದ್ದೇಳುವರೇ ಸಚಿವ ಆನಂದ್ ಸಿಂಗ್
ಈಗಲಾದರೂ ಮೈ ಕೊಡವಿ ಎದ್ದೇಳುವರೇ ಸಚಿವ ಆನಂದ್ ಸಿಂಗ್
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದರೂ ಅಸಹಾಯಕರಾಗಿರುವ ಬ್ರಿಜೇಶ್ ಕುಮಾರ್
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾ ಗಿದ್ದರೂ ಅಸಹಾಯಕರಾಗಿರುವ ಬ್ರಿಜೇಶ್ ಕುಮಾರ್

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವ್ಯವಸ್ಥೆ ಎಷ್ಟು ಹಾಳಾಗಿ ಹೋಗಿದೆ ಎಂದ್ರೆ, ಆಡಳಿತ ವಲಯದಲ್ಲಿ ಕೆಲಸ ಮಾಡುವ ಬಹುತೇಕ ಅಧಿಕಾರಿಗಳು ಲಂಗುಲಗಾಮಿಲ್ಲದೆ ತಾವಾಡಿದ್ದೇ ಆಟ..ಹೂಡಿದ್ದೇ ಲಗ್ಗೆ ಎನ್ನುವಷ್ಟು ಹಡಾಲೆದ್ದು ಹೋಗಿದ್ದಾರೆ. ಕೆಳಹಂತದ ಸಿಬ್ಬಂದಿಯಿಂದ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುವ ಪರಿಸರಾಧಿಕಾರಿಗಳಲ್ಲಿ ಬಹುತೇಕರು ಪರಮಭ್ರಷ್ಟತೆ ಯಿಂದ ಕೈ ಕೊಳಕು ಮಾಡಿಕೊಂಡಿದ್ದಾರೆ ಎನ್ನುವುದು ಮಂಡಳಿಯ ಅವ್ಯವಸ್ಥೆಯಿಂದಲೇ ತಿಳಿದುಬರುತ್ತದೆ.

ವಲಯ ಮಟ್ಟದಲ್ಲಿ ಪರಿಸರಾಧಿಕಾರಿಗಳಾಗಿ ಕೆಲಸ ಮಾಡುವಂತವರು, ಹಿರಿಯ ಪರಿಸರಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಬಹುತೇಕರು ಡೀಲಿಂಗ್ ಗಿರಾಕಿಗಳಾಗಿಬಿಟ್ಟಿದ್ದಾರಂತೆ.ಅನ್ನ ಕೊಡುತ್ತಿರುವ ಸಂಸ್ಥೆಗೆ ನೀಯತ್ತಾಗಿದ್ದುಕೊಂಡು ಕೆಲಸ ಮಾಡೋದನ್ನು ಬಿಟ್ಟು, ಕೈಗಾರಿಕೆಗಳು,ಅಪಾರ್ಟ್ಮೆಂಟ್ ಗಳು,ಡೈಯಿಂಗ್ ಸೆಂಟರ್ ಗಳು..ಹೀಗೆ ಮಂಡಳಿಯೊಂದಿಗೆ ಹೊಂದಿಕೊಂಡಿರುವ ಉದ್ದಿಮೆಗಳೊಂದಿಗೆ ಪರ್ಸಂಟೇಜ್ ವ್ಯವಹಾರ ಕುದುರಿಸಿಕೊಂಡು ಅವರ ಚೇಲಾಗಳಾಗಿಬಿಟ್ಟಿದ್ದಾರಂತೆ.ತಿಂಗಳಿಗೆ ಇಂತಿಷ್ಟು ಮಾಮೂಲು ಕೊಟ್ಟರೆ ಮುಗೀತು,ಆ ಉದ್ದಿಮೆಗಳು ಪರಿಸರಕ್ಕೆ ಧಕ್ಕೆ ತರುವಂಥ ಎಂತದ್ದೇ  ಮಾಲಿನ್ಯಕ್ಕೆ ಪರವಾನಗಿ ಕೊಟ್ಟು ಕೂತ್ ಬಿಡ್ತಾರಂತೆ.

ಪರಿಸರಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪ್ರತಿಯೊಂದು ಉದ್ದಿಮೆಗಳ ಕಾರ್ಯಾಚರಣೆ ಬಗ್ಗೆ ನಿಯತವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕಿರುತ್ತದೆ.ಆದ್ರೆ ಅದೆಷ್ಟು ಅಧಿಕಾರಿಗಳು ಅದನ್ನು ಮಾಡುತ್ತಿದ್ದಾರೆ.ಖಂಡಿತಾ ಇಲ್ಲ, ಕೈ ಬೆಚ್ಚಗೆ ಮಾಡಿದ್ರೆ ಕುಂತಲ್ಲೇ ಕನ್ಸೆಂಟ್ ರೆಡಿ ಮಾಡಿ ಸಹಿ ಜಡಿದು ಕೊಡ್ತಾರೆ.ಅದರಲ್ಲೇ ವರ್ಷಕ್ಕೆ ಕೋಟ್ಯಾಂತರ ಹಣ ಮಾಡುವ ದಂಧೆಕೋರತನಕ್ಕೆ ಅಧಿಕಾರಿಗಳು ಇಳಿದುಬಿಟ್ಟಿರುವ ವಿಷಯ ಸಚಿವ ಆನಂದ್ ಸಿಂಗ್ ಅವರಿಗೆ ಗೊತ್ತಿಲ್ಲ ಎಂದೇನಲ್ಲ..ಆದ್ರೆ ಗೊತ್ತಿದ್ರೂ ಕ್ರಮ ಕೈಗೊಳ್ಳೊಕ್ಕೆ ಆಗದಷ್ಟು ಅಸಹಾಯಕರಾಗಿದ್ದಾರೆ ಅಷ್ಟೇ ಅನ್ನುತ್ತವೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲ ಅಧಿಕಾರಿಗಳು.

ಆಡಳಿತ ವ್ಯವಸ್ಥೆಯ ಮಾಲಿನ್ಯ ತಡೆಯಲು ವಿಫಲರಾಗಿರುವ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು
ಆಡಳಿತ ವ್ಯವಸ್ಥೆಯ ಮಾಲಿನ್ಯ ತಡೆಯಲು ವಿಫಲರಾಗಿರುವ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು

ಬೆಂಗಳೂರಿನಲ್ಲಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪರಿಸರಾಧಿಕಾರಿಗಳು ಸರಿಯಾಗಿ ಕೆಲಸ ಮಾಡಿದಿದ್ರೆ ಬೆಂಗಳೂರಿನ ಪರಿಸರ ಇಷ್ಟು ಅಸಹನೀಯವಾಗುತ್ತಿತ್ತಾ..? ಬದುಕು ಹಾಗೂ ಪರಿಸರದ ಆರೋಗ್ಯವನ್ನೇ ತಲ್ಲಣಿಸುವಷ್ಟು ಮಾಲಿನ್ಯ ಭಯಾನಕವಾಗುತ್ತಿತ್ತಾ,..? ಖಂಡಿತಾ ಇಲ್ಲ,

ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದ ಅಧಿಕಾರಿಗಳಲ್ಲೇ ಕೆಲವರು ಉದ್ದಿಮೆದಾರರು ಬಿಸಾಡುವ ಎಂಜಿಲ ಕಾಸಿಗೆ ನಾಲಿಗೆ ಒಡ್ಡುವ ಹೀನಾತಿಹೀನ ಕೃತ್ಯಕ್ಕೆ ಇಳಿದಿದ್ದಾರೆ.ಮಂಡಳಿಯಲ್ಲಿ ಭ್ರಷ್ಟತೆಯ ಕೂಪವನ್ನೇ ಸೃಷ್ಟಿಸಿರುವ ಇಂಥಾ ನಾಲಾಯಕ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಸಚಿವ ಆನಂದ್ ಸಿಂಗ್ ಮಾಡಬೇಕಿದೆ.ಒಂದಷ್ಟು ನಮಕ್ ಹರಾಮಿ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಂಡ್ರೆ ಇನ್ನುಳಿದ ಭ್ರಷ್ಟರು ಅಲರ್ಟ್ ಆಗ್ತಾರೆ..

ಸಚಿವ ಆನಂದ್ ಸಿಂಗ್ ಇಷ್ಟೊತ್ತಿಗಾಗ್ಲೇ ಈ ಕೆಲಸಕ್ಕೆ ಕೈ  ಹಾಕಬೇಕಿತ್ತು ಅನ್ಸುತ್ತೆ..ಆದ್ರೆ ಸಾಹೇಬರಿಗೆ ಆ ಆಸಕ್ತಿಯಾಗಲಿ, ಕಾಳಜಿಯಾಗಲಿ ಇದ್ದಂಗಿಲ್ಲ.ಅಧಿಕಾರಿಗಳು ಕೊಡುವ ಅಂಕಿಅಂಶಗಳನ್ನೇ ಕಣ್ಣಿಗೊತ್ತಿಕೊಂಡು ನಂಬುವಷ್ಟು ಅಸಹಾಯಕರಾಗುಳಿದಿದ್ದಾರೆ.ಅವರ  ಈ ಅಸಹಾಯಕತೆಯನ್ನೇ ಅಧಿಕಾರಿಗಳು ದೌರ್ಬಲ್ಯ ಎಂದುಕೊಂಡು ಅವರನ್ನು ಸಖತ್ತಾಗೇ ಯಾಮಾರಿಸುವ ಕೆಲಸಕ್ಕೆ ಕೆಲ ಪರಮಭ್ರಷ್ಟ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಮಂಡಳಿಯಲ್ಲಿ ಆಡಳಿತವನ್ನು ಮಾಲಿನ್ಯಗೊಳಿಸಿರುವ ಕೆಲ ನಾಲಾಯಕ್ ಅಧಿಕಾರಿಗಳಿಂದಾಗಿ ಉಳಿದವರಿಗೂ ಕೆಟ್ಟ ಹೆಸರು ಬರುತ್ತಿದೆ.ಮಾದ್ಯಮಗಳಂತೂ ಮಂಡಳಿ ಬಗ್ಗೆ ಒಂದೇ ಒಂದು ಪಾಸಿಟಿವ್ ಸುದ್ದಿಯನ್ನು ಬರೆಯದಷ್ಟು ರೋಸಿ ಹೋಗಿದ್ದಾರೆ.ಭ್ರಷ್ಟಾಚಾರದ ಕೂಪವೇ ಆಗೋಗಿರುವ ಮಂಡಳಿಯ ವ್ಯವಸ್ಥೆಗೆ ಸಾಣೆ ಹಿಡಿಯದೇ ಹೋದಲ್ಲಿ ತಮ್ಮ ಕರ್ಮಕಾಂಡಗಳಿಂದ, ಬೀದಿ ಮದ್ಯೆ ಸಚಿವರನ್ನು ನಿಲ್ಲಿಸಿ ಅವರನ್ನು ಬೆತ್ತಲುಗಳಿಸುವುದರಲ್ಲಿ ಅನುಮಾನವೇ ಇಲ್ಲ..ತಾವು ಅಕ್ರಮ ಎಸಗಿ ಅದರ ಕಳಂಕವನ್ನು ಸಚಿವರ ಮೂತಿಗೆ ಒರೆಸಿದ್ರೂ ಆಶ್ಚರ್ಯವಿಲ್ಲ..ಸೋ ಈ ನಿಟ್ಟಿನಲ್ಲಿ ಆನಂದ್ ಸಿಂಗ್,ಮೈ ಕೊಡವಿ ಎದ್ದೇಳಬೇಕಿದೆ.ಎದ್ದರಷ್ಟೇ ಸಾಕಾಗೊದಿಲ್ಲ,ಭ್ರಷ್ಟ ಆಡಳಿತ ವ್ಯವಸ್ಥೆ ವಿರುದ್ದವೂ ಕ್ರಮ ಕೈಗೊಳ್ಳಬೇಕಿದೆ..

 

“ಅಧ್ಯಕ್ಷರಾಗಿ ಬ್ರಜೇಶ್ ಕುಮಾರ್ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಶ್ರೀನಿವಾಸಲು ಅವರು ಇದ್ದರೂ ಅವರನ್ನೇ ಯಾಮಾರಿಸುವ ಕೆಲಸ ಭ್ರಷ್ಟ ಅಧಿಕಾರಿಗಳಿಂದ ನಡೆಯುತ್ತಲೇ ಇದೆ.ಇಬ್ಬರು ಐಎಫ್ ಎಸ್ ಅಧಿಕಾರಿಗಳಾಗಿದ್ದರೂ ಅವರನ್ನೇ ಆಟವಾಡಿಸುತ್ತಿದ್ದಾರೆ.ಯಾವುದೇ ಮಾಹಿತಿ ಕೇಳಿದ್ರೂ ನೆವಗಳನ್ನೊಡ್ಡಿ ತೇಪೆ ಹಚ್ಚಲಾಗುತ್ತಿದೆ.ಪಾಪ ಹೆಸರಿಗಷ್ಟೇ ಹುದ್ದೆ ಕೊಟ್ಟು ಅವರ ಪವರನ್ನೆಲ್ಲಾ ಕಟ್ ಮಾಡಲಾಗಿದೆ..ಭ್ರಷ್ಟರನ್ನು ಸದೆಬಡಿಯಲು ಖಡಕ್ ಅಧ್ಯಕ್ಷ ಹಾಗು ಸದಸ್ಯ ಕಾರ್ಯದರ್ಶಿಗಳ ಅಗತ್ಯವಿದೆ..ಅಂಥವರು ಯಾವಾಗ ಬರುತ್ತಾರೋ..ಯಾವಾಗ ಮಂಡಳಿಯ ವ್ಯವಸ್ಥೆ ಬದಲಾಗುತ್ತೋ ಆ ದೇವರಿಗೆ ಗೊತ್ತು,,”

-ಕಿರಣ್ ಕುಮಾರ್-ಪರಿಸರವಾದಿ, ಗ್ರೀನ್ ಆರ್ಮಿ ಫೋರ್ಸ್

Spread the love
Leave A Reply

Your email address will not be published.

Flash News