ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KSPCB)ಗೆ ಸಚಿವ ಆನಂದ್ ಸಿಂಗ್ ಅತ್ಯಾಪ್ತ “ಶಾಂತ ತಿಮ್ಮಯ್ಯ” ನೂತನ ಅಧ್ಯಕ್ಷ..?!

ಹೊಸ ಅಧ್ಯಕ್ಷರ ಆಮಂತ್ರಣಕ್ಕೆ “ರೆಡ್ ಕಾರ್ಪೆಟ್”ಹಾಸಿ ಕಾಯುತ್ತಿರುವ ಮಂಡಳಿಯ “ಬಕೆಟ್” ಅಧಿಕಾರಿಗಳು..?! ಅದೇ ಹೆಸರು ಅಂತಿಮವಾದ್ರೆ ಕಾನೂನು ಹೋರಾಟಕ್ಕೆ ಸನ್ನದ್ಧವಾಗಲಿದ್ದಾರಾ.. ಪರಿಸರವಾದಿಗಳು..?!

0

ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ಬಹುತೇಕ ಗ್ರೀನ್ ಸಿಗ್ನಲ್ ದೊರೆತಂತಾಗಿದೆ ಅನ್ಸುತ್ತೆ..ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಹೈಕೋರ್ಟ್ ಗೆ  ಸಲ್ಲಿಸಿದ್ದ ಮುಚ್ಚಿದ ಲಕೋಟೆಯೊಳಗೆ ಇರುವ ಹೆಸರು ಯಾರದು…? ಎನ್ನುವ ಕುತೂಹಲದ ಪ್ರಶ್ನೆ ಸಹಜವಾಗೇ ಉದ್ಭವವಾಗಿದೆ.

ಆದರೆ ಅಧ್ಯಕ್ಷಗಾದಿಗೆ ತೀವ್ರ ಲಾಭಿ ನಡೆಸುತ್ತಿರುವವರ ಲೀಸ್ಟ್ ನಲ್ಲಿ ಕೇಳಿಬಂದಿದ್ದವರ ಪೈಕಿ ಶಾಂತ ತಿಮ್ಮಯ್ಯ ಅವರ ಹೆಸರೇ ಅಂತಿಮವಾಗಬಹುದು..? ಎನ್ನುವ ಮಾತುಗಳು ಕೇಳಿಬರುತ್ತಿವೆ. ಶಾಂತ ತಿಮ್ಮಯ್ಯ ಅವರ ಆಮಂತ್ರಣಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲ “ಬಕೆಟ್” ಅಧಿಕಾರಿಗಳು ಜೊಲ್ಲು ಸುರಿಸುತ್ತಾ ರೆಡ್ ಕಾರ್ಪೆಟ್ ಹಾಸಿ ಸಿದ್ಧಗೊಂಡಿದ್ದಾರೆನ್ನುವ ಸಂಗತಿಗಳು ಶಾಂತ ತಿಮ್ಮಯ್ಯ ಅವರ ನೇಮಕವನ್ನು ಮತ್ತಷ್ಟು ಪುಷ್ಟಿ ನೀಡುವಂತಿದೆ.

ಒಂದ್ವೇಳೆ..ಒಂದ್ವೇಳೆ..ಶಾಂತ ತಿಮ್ಮಯ್ಯ ಅವರ ಹೆಸರೇ ಅಂತಿಮವಾಗಿದ್ದೇ ಆದಲ್ಲಿ( ಹೈಕೋರ್ಟ್ ಗೆ ಸಲ್ಲಿಸಿರುವ ಮುಚ್ಚಿದ ಲಕೋಟೆಯಲ್ಲಿ ಇವರ ಹೆಸರು ಇದ್ದ ಪಕ್ಷದಲ್ಲಿ ಮಾತ್ರ….) ಸಚಿವ ಆನಂದ್ ಸಿಂಗ್ ಅವರ ಐಡ್ಯಾ ಪಕ್ಕಾ ವರ್ಕೌಟ್ ಆಗಿದೆ ಎನ್ನೋದು ಅನೇಕರ ವಾದ.ಇಷ್ಟವಿಲ್ಲದ ಖಾತೆಯನ್ನು ಒಪ್ಪಿಕೊಳ್ಳುವ ವಿಚಾರದಲ್ಲಿ ಆನಂದ್ ಸಿಂಗ್ ವರಿಷ್ಠರ ಮುಂದೆ ಇರಿಸಿದ್ದ ಷರತ್ತುಗಳಲ್ಲಿ ಅನೇಕ ಕಾರಣಗಳಿಂದ ತಮಗೆ ಅತ್ಯಾಪ್ತ ಎನ್ನಲಾಗುತ್ತಿರುವ ಶಾಂತ ತಿಮ್ಮಯ್ಯ ಎನ್ನುವವರ ನೇಮಕ ಕೂಡ ಒಂದಾಗಿತ್ತಾ ಎನ್ನುವುದು ಸಧ್ಯದ ಮಟ್ಟಿಗೆ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಂಗತಿ.

ಶಾಂತ ತಿಮ್ಮಯ್ಯ ನೇಮಕವೇ ಅಂದುಕೊಂಡಂತೆ “ಫೈನಲ್”..? ಆಗಿದ್ದಲ್ಲಿ ಸರ್ಕಾರವನ್ನು ಮನವೊಲಿಸುವ ಪ್ರಯತ್ನದಲ್ಲಿ ಸಚಿವ ಆನಂದ್ ಸಿಂಗ್ ಯಶಸ್ವಿಯಾಗಿದ್ದಾರೆನ್ನುವುದು  ಪ್ರೂವ್ ಆದಂತಾಗುತ್ತದೆ. ಅದು ಸಾಧ್ಯವಾಗದೇ ಹೋದಲ್ಲಿ ಆನಂದ್ ಸಿಂಗ್ ತಂತ್ರಗಾರಿಕೆಗೆ ಹೈಕಮಾಂಡ್ ಸೊಪ್ಪಾಕಿಲ್ಲ ಎನ್ನುವ ಸಂದೇಶ ರವಾನೆಯಾದಂತಾಗುತ್ತೆ ಎನ್ನುವುದು ಅನೇಕರ ವಿಶ್ಲೇಷಣೆ..

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷ ಶಾಂತ ತಿಮ್ಮಯ್ಯ..?!?!
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷ ಶಾಂತ ತಿಮ್ಮಯ್ಯ..?!?!

ಸಚಿವರ ಅತ್ಯಾಪ್ತ ಎನ್ನಲಾಗಿರುವ ಶಾಂತ ತಿಮ್ಮಯ್ಯ ನೇಮಕದ ಬಗ್ಗೆ ಇಡೀ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಕಾನ್ಫಿಡೆಂಟಾಗಿ ಮಾತನಾಡುತ್ತಿದೆಯಂತೆ..ಹೀಗೊಂದು ಆತ್ಮವಿಶ್ವಾಸದಲ್ಲಿ ಮಾತನಾಡೊಕ್ಕೆ ಕಾರಣಗಳೂ ಇವೆಯಂತೆ…ಕೆಲವರು ಅಭಿಪ್ರಾಯಿಸುವ ಪ್ರಕಾರ ಶಾಂತ ತಿಮ್ಮಯ್ಯ ಆನಂದ್ ಸಿಂಗ್ ಅವರಿಗೆ ಅತ್ಯಾಪ್ತರಂತೆ. ವೃತ್ತಿಯಲ್ಲಿ ಮೈನಿಂಗ್ ಕನ್ಸಲ್ಟೆಂಟ್ ಆಗಿದ್ದಾರೆನ್ನಲಾಗುವ ಶಾಂತ ತಿಮ್ಮಯ್ಯ,ಅವರೇ  ಆನಂದ್ ಸಿಂಗ್ ಅವರ ಮೈನಿಂಗ್ ವಿಚಾರಗಳಲ್ಲೂ ಕನ್ಸಲ್ಟೆಂಟಾಗಿ ಕೆಲಸ ಮಾಡಿದ್ದಾರೆ…ಈಗಲೂ ಮಾಡುತ್ತಿದ್ದಾರೆನ್ನುವ ಮಾತುಗಳಿವೆ.

ಆನಂದ್ ಸಿಂಗ್ ನಡೆಸುತ್ತಿದ್ದಾರೆನ್ನಲಾಗಿರುವ ಗಣಿ ಉದ್ಯಮಕ್ಕೆ  ಸಂಬಂಧಿಸಿದಂತೆ ಸಾಕಷ್ಟು ಪ್ರಮುಖ ಹಾಗೂ ಗೌಪ್ಯ ವಿಚಾರಗಳನ್ನು ಶಾಂತ ತಿಮ್ಮಯ್ಯ ಬಲ್ಲವರಾಗಿದ್ದಾರಂತೆ.ಅವರನ್ನೇ ಅಧ್ಯಕ್ಷರನ್ನಾಗಿಸಿದ್ರೆ ತನ್ನ ಹಾಗೂ ಶಾಂತ ತಿಮ್ಮಯ್ಯ ಅವರ ನಡುವೆ ಅಂಡರ್ ಸ್ಟ್ಯಾಂಡಿಂಗ್..?! ಸರಿಯಾಗಬಹುದೆನ್ನುವ ಲೆಕ್ಕಾಚಾರವಿರಬಹುದಾ ಎನ್ನುವ ಶಂಕೆಯನ್ನು ಸಾಕಷ್ಟು ಜನ ವ್ಯಕ್ತಪಡಿಸುತ್ತಿದ್ದಾರೆ.

ಹಾಗೆ ನೋಡಿದ್ರೆ ಶಾಂತಿ ತಿಮ್ಮಯ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆನ್ನುವುದು ಇದೇ ಮೊದಲೇನಲ್ಲವಂತೆ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ಬೆಳವಣಿಗೆಗಳನ್ನು ಮೊದಲಿಂದಲು ಗಮನಿಸುತ್ತಿರುವ ಕೆಲವರ ಪ್ರಕಾರ,ಆನಂದ್ ಸಿಂಗ್ ಪರಿಸರ ಸಚಿವರಾದ ಹಿಂದಿನ ಸನ್ನಿವೇಶದಲ್ಲೂ ಅಂತದ್ದೊಂದು ಪ್ರಯತ್ನ ಮಾಡಿದ್ದರಂತೆ. ಅವರ ಪರವಾಗಿ ಸಚಿವರು ಕೂಡ ಸರ್ಕಾರದ ಮಟ್ಟದಲ್ಲಿ ಲಾಭಿ ನಡೆಸಿದ್ದರೆನ್ನುವುದನ್ನು ಅನೇಕರೇ ಹೇಳುತ್ತಾರೆ.ಆದ್ರೆ ಅಧ್ಯಕ್ಷರ ನೇಮಕಾತಿಯಲ್ಲಿನ ಮಾನದಂಡಗಳ ಬಗ್ಗೆ ಸುಪ್ರಿಂ ಕೋರ್ಟ್ ನ ಆದೇಶ-ಉಲ್ಲೇಖಗಳ ಕಾರಣಕ್ಕೆ ಸರ್ಕಾರ ಆನಂದ್ ಸಿಂಗ್ ಅವರ ಆಸೆಗೆ ನೀರೆರೆದಿರಲಿಲ್ಲ ಎನ್ನುವ ಮಾತುಗಳಿವೆ.

ಈ ಕಾರಣಕ್ಕೆ ಆನಂದ್ ಸಿಂಗ್ ವರಿಷ್ಠರ ವಿರುದ್ದ ಮುನಿಸಿಕೊಂಡಿದ್ದೂ ಉಂಟಂತೆ.ಆದ್ರೆ ಸಚಿವ ಆನಂದ್ ಸಿಂಗ್ ಅವರ ಮನದಿಂಗಿತ ಹಾಗೂ ಆಸೆಯನ್ನು ಈಡೇರಿಸುವ ಒಂದೇ ಒಂದು ಕಾರಣಕ್ಕೆ ಸುಪ್ರಿಂ ಕೋರ್ಟ್ ನ ಆದೇಶ ದಿಕ್ಕರಿಸಿ,ಮುಜುಗರಕ್ಕೆ ಸಿಲುಕಿಕೊಳ್ಳೊಕ್ಕೆ ಸರಕಾರ ಸಿದ್ದವಿರಲಿಲ್ಲವಂತೆ.ಹಾಗಾಗಿನೇ ಆನಂದ್ ಸಿಂಗ್ ಅವರ ಬೇಡಿಕೆಯನ್ನು ಸಾರಾಸಗಟಾಗೋ..ನಯವಾಗೋ ತಳ್ಳಿ ಹಾಕುವಂತ ಕೆಲಸವನ್ನು ಮಾಡಲಾಗಿತ್ತೆನ್ನುವುದು ಸರ್ಕಾರದ ಕ್ಯಾಂಪಸ್ ನಲ್ಲಿ ಹರಿದಾಡುತ್ತಿರುವ ಸಂಗತಿ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಾಕಾಂಕ್ಷಿಗಳಾದವರಲ್ಲಿ ಕೆಲವರು ಆಪಾದಿಸುವ ಪ್ರಕಾರ, ಸಚಿವ ಆನಂದ್ ಸಿಂಗ್ ನಡೆಸುತ್ತಿರುವ ಗಣಿಗಾರಿಕೆ ವಿಚಾರದಲ್ಲಿ ಸಲಹೆಗಾರರಾಗಿ,ಸಂಪನ್ಮೂಲ ವ್ಯಕ್ತಿಯಾಗಿ,ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿ ದ್ದಾರಂತೆ.ಅದೇ ಕಾರಣಕ್ಕೆ ಶಾಂತ ತಿಮ್ಮಯ್ಯ ಅವರನ್ನು ಪಿಸಿಬಿಗೆ ಅಧ್ಯಕ್ಷರನ್ನಾಗಿಸಲು ಮುಂದಾಗಿದ್ದರಂತೆ.ಮೊದಲ ಪ್ರಯತ್ನದಲ್ಲಿ ವಿಫಲವಾದ ಮೇಲೆ ದೃತಿಗೆಡದೆ ಎರಡನೇ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾದರೆನ್ನುವುದಿದೆಯೆಲ್ಲಾ ಅದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವ ಮಾತಿದೆ..ಋಣ ಸಂದಾಯಕ್ಕೆ ಪಿಸಿಬಿ ಅಧ್ಯಕ್ಷ ಸ್ಥಾನ ಎನ್ನುವುದೇನು ಮಾರ್ಕೆಟ್ ನಲ್ಲಿ ಚೌಕಾಸಿಗೆ ಸಿಗುವ ವಸ್ತುನಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಲಾಭಿ ನಡೆಸುವಂತವರಿಗೆ ಸ್ಥಾನ ಕಲ್ಪಿಸೊಕ್ಕೆ-ಸಂತ್ರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸೊಕ್ಕೆ ಇರುವ  ಗಂಜಿಕೇಂದ್ರನಾ ಎಂದು ಪ್ರಶ್ನಿಸಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವ ಭರವಸೆಯಲ್ಲಿ ಮಠಮಾನ್ಯಗಳ ಟೆಂಪಲ್ ರನ್ ಆರಂಭಿಸಿರುವ ಶಾಂತ ತಿಮ್ಮಯ್ಯ..!?
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವ ಭರವಸೆಯಲ್ಲಿ ಮಠಮಾನ್ಯಗಳ ಟೆಂಪಲ್ ರನ್ ಆರಂಭಿಸಿರುವ ಶಾಂತ ತಿಮ್ಮಯ್ಯ..!?

ಸುಪ್ರಿಂ ಕೋರ್ಟ್ ಹೇಳುವ ಗೈಡ್ ಲೈನ್ಸ್ ಗಳ ಪ್ರಕಾರವೂ ಶಾಂತ ತಿಮ್ಮಯ್ಯ ನೇಮಕ ಸಾಕಷ್ಟು ವಿವಾದಕ್ಕೆ ಗ್ರಾಸವಾಗಲಿದೆ ಎನ್ನಲಾಗುತ್ತಿದೆ.ಪರಿಣಿತರನ್ನೇ ಪರಿಗಣಿಸಬೇಕು..ಕನ್ಸಲ್ಟೆಂಟ್ ಗಳಿಗೆ ಅವಕಾಶ ನೀಡಬಾರದು ಎನ್ನುವ ಸಂಗತಿಗಳು ಸೇರಿದಂತೆ ಗೈಡ್ ಲೈನ್ಸ್ ನಲ್ಲಿರುವ ಸಾಕಷ್ಟು ಮಾನದಂಡಗಳು ಶಾಂತ ತಿಮ್ಮಯ್ಯ ಅವರ ನೇಮಕಕ್ಕೆ ಸರಿ ಹೊಂದುವುದಿಲ್ಲ ಎನ್ನುವ ಮಾತುಗಳಿವೆ.

ಕೊನೇ ಕ್ಷಣದ ಬೆಳವಣಿಗೆಗಳನ್ನು ಹೊರತುಪಡಿಸಿ, ಒಂದ್ವೇಳೆ ಶಾಂತ ತಿಮ್ಮಯ್ಯ ಅವರ ನೇಮಕಾತಿ ಫೈನಲ್ ಆಗಿದ್ದೇ ಆದಲ್ಲಿ ಇದನ್ನು ಪ್ರಶ್ನಿಸೊಕ್ಕೆ..ಕಾನೂನಾತ್ಮಕ ಹೋರಾಟ ನಡೆಸಲಿಕ್ಕೂ ಒಂದಷ್ಟು ಪರಿಸರವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ವೇದಿಕೆ ಸಿದ್ದಪಡಿಸಿಕೊಂಡಿದ್ದಾರೆನ್ನುವ ಮಾತುಗಳಿವೆ.. ಶಾಂತ ತಿಮ್ಮಯ್ಯ ಅವರ ನೇಮಕ ಪ್ರಶ್ನಿಸಿ ಕಾನೂನಾತ್ಮಕ ಹೋರಾಟ ಆರಂಭವಾದ್ರೂ ಅದು ಆನಂದ್ ಸಿಂಗ್ ಅವರಿಗೆ ಮುಜುಗರ ತರುವಂಥ ಸಂಗತಿಯೇ ಆಗಲಿದೆ ಎನ್ನುತ್ತಾರೆ ಪರಿಸರವಾದಿಗಳು. ಶಾಂತ ತಿಮ್ಮಯ್ಯ ಅವರ ನೇಮಕದ ಆದೇಶ ಹೊರಬಿದ್ದಿದ್ದೇ ಆದಲ್ಲಿ ಅದನ್ನು ಕಾನೂನಾತ್ಮಕವಾಗಿ ಪ್ರಶ್ನಿಸ್ಲಿಕ್ಕೆ ಅನೇಕರು ಸನ್ನದ್ಧವಾಗಿದ್ದಾರೆನ್ನುತ್ತವೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಗಳು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರ ನೇಮಕಕ್ಕೆ ಹೈಕೋರ್ಟ್  ಹಸಿರು ನಿಶಾನೆ ತೋರಿಸಿದೆ ಎಂಬ ಸುದ್ದಿಯೇನೋ ಮಾದ್ಯಮಗಳಲ್ಲಿ ಬಂದಿದೆ.ಇದರ ಬೆನ್ನಲ್ಲೇ ಅಧ್ಯಕ್ಷರ ನೇಮಕಾತಿಯ ಚರ್ಚೆ ಹೆಚ್ಚಿನ ಕಾವು ಪಡೆದುಕೊಂಡಿದೆ.ಅದರಲ್ಲಿ ಬಹುತೇಕ ಶಾಂತ ತಿಮ್ಮಯ್ಯ ಅವರ ಹೆಸರೇ ಫೈನಲ್ ಆಗಬಹುದೆನ್ನುವ ವರ್ತಮಾನಗಳಿವೆ.ಮಂಡಳಿಯಲ್ಲಿರುವ  ಬಹುತೇಕ “ಬಕೆಟ್” ಅಧಿಕಾರಿಗಳಂತೂ ಶಾಂತ ತಿಮ್ಮಯ್ಯ ಅವರಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ಕೊರೊಕ್ಕೆ ಸನ್ನದ್ಧವಾಗಿ ನಿಂತಿದ್ದಾರಂತೆ..

ಕೋರ್ಟ್ ಪರಿಶೀಲಿಸಿರುವ ಲಕೋಟೆಯೊಳಗಿನ ಹೆಸರು ಶಾಂತ ತಿಮ್ಮಯ್ಯ ಅವರದೇ ಆಗಿದೆಯೋ..? ಅಥವಾ ಬೇರೆ ಇನ್ನೊಬ್ಬರ ಹೆಸರಿದೆಯೋ ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ.ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿ ಅಂತಿಮಗೊಳಿಸಿ ಹೈಕೋರ್ಟ್ ಗೆ ಸಲ್ಲಿಸಿರುವ ಹೆಸರೂ ಶಾಂತ ತಿಮ್ಮಯ್ಯ ಅವರದ್ದೇ ಹೌದೋ.ಅಲ್ಲವೋ ಎನ್ನುವ ಜಿಜ್ಞಾಸೆ ಇದೆ..ಅದೆಲ್ಲವೂ ಕೋರ್ಟ್ ಅಂತಿಮವಾಗಿ ನೀಡುವ ಆದೇಶ/ಸೂಚನೆ ಮೇಲೆ ಅವಲಂಭನೆಯಾಗಿದೆ.ಆದ್ರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸರ್ಕಾರದ ಮೂಲಗಳ ಪ್ರಕಾರ ಲಕೋಟೆಯಲ್ಲಿರುವ ಹೆಸರು ಶಾಂತ ತಿಮ್ಮಯ್ಯ ಅವರದು ಎನ್ನಲಾಗುತ್ತಿದೆ.

ಪರಿಸ್ತಿತಿಗಳು ಹೀಗಿರುವಾಗ ಕೋರ್ಟ್ ಆದೇಶದ ಅನ್ವಯ  ಯಾರು ಅಂತಿಮವಾಗಿ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗ್ತಾರೆ ಎನ್ನುವ ಕುತೂಹಲ ಇದ್ದೇ ಇದೆ..ಲಕೋಟೆಯಲ್ಲಿ ಶಾಂತ ತಿಮ್ಮಯ್ಯ  ಅವರ ಹೆಸರೇ ಅಂತಿಮವಾಗಿದ್ದೇ ಆದಲ್ಲಿ,ಅವ್ರ ನೇಮಕ ನಿರ್ವಿಘ್ನವಾಗಿ ನೆರವೇರುತ್ತೋ..ಅಥವಾ ವಿವಾದಕ್ಕೆ ಗ್ರಾಸವಾಗುತ್ತೋ ಕಾದು ನೋಡಬೇಕಿದೆ.ಹಾಗಾಗಿ ಪ್ರತಿಯೋರ್ವರ ದೃಷ್ಟಿ ಹೈಕೋರ್ಟ್ ನತ್ತ ನೆಟ್ಟಿದೆ.

 

 

Spread the love
Leave A Reply

Your email address will not be published.

Flash News