“ಡ್ರಗ್ಸ್” ಸೇವಿಸಿದ್ದಷ್ಟೇ ಅಲ್ಲ,”ಸಪ್ಲೈ” ಮಾಡಿದ್ದೂ “ಪ್ರೂವ್” -ಆಂಕರ್ ಅನುಶ್ರೀ “ಅಮಲು ಪುರಾಣ”ಕ್ಕೆ ಸ್ಪೋಟಕ ತಿರುವು…!!

ಡ್ರಗ್ಸ್ ಪ್ರಕರಣದಲ್ಲಿ ಕಿಶೋರ್ ಶೆಟ್ಟಿ ಖುಲಾಸೆ-ಅನುಶ್ರೀ ಪಾಲಿಗೆ ಶಾಶ್ವತವಾಗಿ ಝೀ ಬಾಗಿಲು ಬಂದ್ ಸಾಧ್ಯತೆ

0

ಮಂಗಳೂರು/ಬೆಂಗಳೂರು  : ಸ್ಯಾಂಡಲ್ ವುಡ್ ನಲ್ಲಿ ತಲ್ಲಣ ಮೂಡಿಸಿದ್ದ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸ್ರು ಮಂಗಳೂರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.ಆಂಕರ್ ಕಂ ನಟಿ ಅನುಶ್ರೀ ಡ್ರಗ್ ಸೇವನೆ ಮಾಡಿರುವುದು ಪ್ರೂವ್ ಆಗಿದೆ. ಡ್ರಗ್ ಸೇವಿಸಿರುವುದು ಮಾತ್ರ ಅಲ್ಲ, ಅನುಶ್ರೀ ಡ್ರಗ್ ಸಾಗಾಟ ಮಾಡಿದರೆನ್ನುವ ಸ್ಪೋಟಕ ಮಾಹಿತಿಯೂ ಹೊರಬಿದ್ದಿದೆ.

ಆದರೆ ಅಚ್ಚರಿ ಮೂಡಿಸಿರುವ ಮತ್ತೊಂದು ವಿಚಾರ ಎಂದ್ರೆ ಡ್ರಗ್ ಪ್ರಕರಣದಲ್ಲಿ ಕೇಳಿಬಂದಿದ್ದ ಮತ್ತೊಂದು ಹೆಸರು ಕಿಶೋರ್ ಅಮನ್ ಶೆಟ್ಟಿಗೆ ಕ್ಲೀನ್ ಚಿಟ್ ನೀಡಲಾಗಿದೆ.ಚಾರ್ಜ್ ಶೀಟ್ ನಲ್ಲಿ ಆರೋಪಿ ನಂ 2 ಆಗಿದ್ದ ಕಿಶೋರ್  ಅಮನ್ ಶೆಟ್ಟಿ ನಮ್ಮ ರೂಂ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು .Ecstasy ಪಿಲ್ಸ್ ತರುತ್ತಿದ್ದಾಗಿ ಹೇಳಿದ್ದಾನೆ.

2020 ಸೆ.26ರಂದು ಮಾಧ್ಯಮಗಳ ಮುಂದೆ ಅನುಶ್ರೀ ಡ್ರಗ್ಸ್ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ಕೊಟ್ಟಿದ್ರು.ಆದ್ರೆ  ಕಿಶೋರ್, ತರುಣ್ ಜೊತೆ ಸಾಕಷ್ಟು ಭಾರೀ ಮಾದಕ ವಸ್ತು ಸೇವಿಸಿದ್ದಾರೆನ್ನುವ ಉಲ್ಲೇಖ‌ದ ಮೇಲೆ ಪಡೆಯಲಾದ ಹೇಳಿಕೆ ಹಾಗೂ ನಡೆಸಲಾದ ವಿಚಾರಣೆಯಲ್ಲಿ  ಆಂಕರ್ ಅನುಶ್ರೀ ಹೇಳಿದ್ದು  ಸುಳ್ಳು ಎನ್ನುವ ರೀತಿಯಲ್ಲಿ ಸ್ಟೇಟ್ಮೆಂಟ್ ಮಾಡಿದ್ದಾನೆ.

ಅನುಶ್ರೀ ಪೊಲೀಸರ ವಿಚಾರಣೆ ವೇಳೆ,ನನಗೂ ಕಿಶೋರ್ ಶೆಟ್ಟಿಗೂ ಕನೆಕ್ಷನ್ ಇಲ್ಲ ಎಂದಿದ್ದರು.ಅನುಶ್ರೀ 12 ವರ್ಷಗಳಿಂದ ಯಾವುದೇ ಸಂಪರ್ಕ ಇಲ್ಲ ಎಂದಿದ್ದರು. ಆದರೆ ಕಿಶೋರ್-ಅನುಶ್ರೀ ನಿರಂತರ ಟಚ್ ಹೊಂದಿರುವ ಶಂಕೆ ಇತ್ತು. ಡ್ಯಾನ್ಸ್ ಲೋಕದ ಇನ್ನೊಂದು ಮುಖ ರಿವೀಲ್ ಆಗಿತ್ತು.ಪ್ರಕರಣದಲ್ಲಿ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆಯಿಂದ ಅನುಶ್ರೀ ಲಾಕ್ ಆಗುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಡ್ರಗ್ ಮಾರಾಟ ಹಾಗೂ ಸೇವನೆ ಬಗ್ಗೆ ಕಿಶೋರ್ ಶೆಟ್ಟಿ ಖಚಿತವಾಗಿದೆ. ಚಾರ್ಜ್ ಶೀಟ್ ಅಂಶಗಳೇ ಅನುಶ್ರೀಗೆ ಮುಳುವಾಗುತ್ತಾ..?  ಮಂಗಳೂರು ಪೊಲೀಸರಿಗೆ ಡ್ರಗ್ ಡೀಲಿಂಗ್ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಿದೆ.

ಚಾರ್ಜ್ ಶೀಟ್ ನಲ್ಲಿ ಹೊರಬಿದ್ದಿರುವ ಸಂಗತಿಗಳಿಂದಾಗಿ ಆಂಕರ್ ಅನುಶ್ರೀ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.ಕಿರುತೆರೆಯಲ್ಲಿ ನಿರೂಪಣೆ ಮೂಲಕ ಪ್ರಸಿದ್ಧಿ ಪಡೆದು,ಸಾಕಷ್ಟು ಅವಕಾಶ ಗಿಟ್ಟಿಸಿದ್ದ ಅನುಶ್ರೀಗೆ ದೊಡ್ಡ ಸಮಸ್ಯೆ ಎದುರಾಗಬಹುದೆನ್ನಲಾಗಿದೆ. ತನ್ನ ನಿರೂಪಣೆ ಮೂಲಕ ಝೀ ವಾಹಿನಿಯನ್ನು ಆವರಿಸಿದ್ದ ಅನುಶ್ರೀ ಪಾಲಿಗೆ  ಚಾನೆಲ್ ಬಾಗಿಲು ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ.

Spread the love
Leave A Reply

Your email address will not be published.

Flash News