ಅನುಶ್ರೀ “ಅರೆಸ್ಟ್” ಆಗ್ತಾರಾ….?! “ಬಂಧನ”ವಾದ್ರೆ ಮುಂದ್ಹೇನು..? FSL ರಿಪೋರ್ಟ್ ನಿರ್ಣಾಯಕನಾ..?!

ಮೂತ್ರ,ರಕ್ತ ಹಾಗೂ ಕೂದಲ ಮಾದರಿಗಳಿಂದ ಅಪರಾಧ ಪ್ರೂವ್ ಆದಲ್ಲಿ  ಅನುಶ್ರೀಗೆ ಜೈಲ್ ಗ್ಯಾರಂಟಿ..?!

0

ಬೆಂಗಳೂರು/ಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ಪಾತ್ರ ಬಹುತೇಕ ಸಾಬೀತಾಗಿರುವುದರಿಂದ ಬಂಧನದ ಭೀತಿ ಎದುರಾಗಿದೆ.ಅನುಶ್ರೀ ಜತೆಗೆ ಅನೇಕ ವರ್ಷಗಳಿಂದ ಒಡನಾಟದಲ್ಲಿದ್ದು,ಆಕೆಗೆ ಡ್ಯಾನ್ಸ್ ಮಾಸ್ಟರ್ ಕೂಡ ಆಗಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹೇಳಿಕೆ ಅನುಶ್ರೀ ಪಾಲಿಗೆ ದೊಡ್ಡ  ಸಂಕಷ್ಟವನ್ನೇ ಸೃಷ್ಟಿಸಿದೆ.

ಕಿಶೋರ್ ಶೆಟ್ಟಿ ಹೇಳಿಕೆ ಆಧರಿಸಿ ಪೊಲೀಸರು ಅನುಶ್ರೀ ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.ಮುಂದಿನ ದಿನಗಳಲ್ಲಿ ಮಂಗಳೂರು ಪೊಲೀಸರೇ ಹೆಚ್ಚಿನ ವಿಚಾರಣೆ ಹೆಸರಲ್ಲಿ ಅನುಶ್ರೀ ಅವರನ್ನು  ಅರೆಸ್ಟ್ ಮಾಡ್ತಾರಾ.. ? ಮತ್ತೆ ತನಿಖೆಗೆ ಕೋರ್ಟ್ ಸೂಚನೆ ಕೊಡುತ್ತಾ..? ಎನ್ನುವ ಪ್ರಶ್ನೆ ಸಾರ್ವಜನಿಕವಾಗಿ ಮೂಡಿದೆ.ಅನುಶ್ರೀ ಬಂಧನವಾಗೋ ಸಾಧ್ಯತೆ ದಟ್ಟವಾಗಿರುವ ಹಿನ್ನಲೆಯಲ್ಲಿ ಆಕೆಯನ್ನು ಬಂಧಿಸಿದ್ರೆ ಮುಂದೇನು.. ಎನ್ನುವ ಪ್ರಶ್ನೆ ಕೂಡ ಕಾಡ್ತಿದೆ.ಬಂಧನದ ಬಳಿಕ ವಿಚಾರಣೆ ನಡೆಯುತ್ತೆ.ವಿಚಾರಣೆ ವೇಳೆ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಾರೆ.ಆ ವೇಳೆ

ಕಿಶೋರ್ ಕೊಟ್ಟಿರುವ ಹೇಳಿಕೆಯ ಮೇಲೆಯೇ ವಿಚಾರಣೆ ಕೇಂದ್ರೀಕೃತವಾಗುತ್ತೆ.ವಿಚಾರಣೆ ವೇಳೆ ಅನುಶ್ರೀ ಕಿಶೋರ್ ಶೆಟ್ಟಿಯ ಲಿಂಕನ್ನು ಬಿಚ್ಚಿಟ್ಟಿದ್ದೇ ಆದಲ್ಲಿ ಸಧ್ಯ ಖುಲಾಸೆಯಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.ಅನುಶ್ರೀಯನ್ನು ಬಂದಿಸಿದ್ದೇ ಆದಲ್ಲಿ ವಿಚಾರಣೆ ಬಳಿಕ ಮಡಿಕಲ್ ಟೆಸ್ಟ್ ಮಾಡುಸ್ತಾರೆ.ವೈದ್ಯಕೀಯ ಪರೀಕ್ಷೆ ವೇಳೆ ಅನುಶ್ರೀ ರಕ್ತದ ಮಾದರಿ ,ಮೂತ್ರ ಮಾದರಿ ಹಾಗೂ ಕೂದಲಿನ ಸ್ಯಾಂಪಲ್ ತೆಗೆದುಕೊಂಡು ಎಫ್ಎಸ್ ಎಲ್ ಗೆ ರವಾನೆ ಮಾಡಲಾಗುತ್ತೆ. ಎಫ್ಎಸ್ ಎಲ್ ನಲ್ಲಿ ಡ್ರಗ್ ಸೇವನೆ ಬಗ್ಗೆ ಪರೀಕ್ಷೆ ನಡೆಯುತ್ತೆ. ಎಫ್ಎಸ್ ಎಲ್ ರಿಪೋರ್ಟ್ ನಲ್ಲಿ ಸಾಭೀತಾದ್ರೆ,ಅನುಶ್ರೀಗೆ ಮತ್ತೊಂದು ಸಂಕಷ್ಟ ಎದುರಾಗಬಹುದು ಎನ್ನಲಾಗುತ್ತೆ.

ಎಫ್ ಎಸ್ ಎಲ್ ಟೆಸ್ಟ್ ನಲ್ಲಿ ಅನುಶ್ರೀ ಅವರು ಡ್ರಗ್ ಸೇವಿಸಿರುವುದಕ್ಕೆ ಅವರಿಂದ ಸಂಗ್ರಹಿಸಿರುವ ಮೂತ್ರ,ರಕ್ತ ಹಾಗೂ ಕೂದಲ ಮಾದರಿಗಳಿಂದ ಪುರಾವೆ ಸಿಕ್ಕಿದ್ದೇ ಆದಲ್ಲಿ ಅನುಶ್ರೀಗೆ ಜೈಲ್ ಗ್ಯಾರಂಟಿ ಎನ್ನಲಾಗುತ್ತಿದೆ.ಈ ನಡುವೆ ಆಕೆಯನ್ನು ಬಚಾವ್ ಮಾಡಲು ನಡೆಯಬಹುದಾದ ಪ್ರಯತ್ನಗಳ ಬಗ್ಗೆಯೂ ಸಾಕಷ್ಟು ಮಾಹಿತಿ ಕಲೆ ಹಾಕಿರುವ ಪೊಲೀಸರು ಅಲರ್ಟ್ ಆಗಿ ಕೆಲಸ ಮಾಡಲು ಮುಂದಾಗಿದ್ದಾರೆ.ಇದೆಲ್ಲದರ ನಡುವೆ ಅನುಶ್ರೀ ತನ್ನ ಭಾಗಿತ್ವವನ್ನು ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ.ನಾನು ನಿರಪರಾಧಿ,ಎಂಥಾ ತನಿಖೆಗೂ ಸಿದ್ಧ.ಪೊಲೀಸರ ತನಿಖೆಗೆ ಬೇಕಾದ  ಎಲ್ಲಾ ರೀತಿಯ ಸಹಕಾರ ನೀಡೊಕ್ಕೆ ಸಿದ್ಧ ಎಂದಿದ್ದಾರೆ.

ಅದೇನೇ ಇರಲಿ,ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದು,ತನ್ನ ಸ್ವಂತ ಪರಿಶ್ರಮದಿಂದಲೇ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ಅನುಶ್ರೀ ಕೆರಿಯರ್ ನ್ನು ಡ್ರಗ್ಸ್ ಕರಾಳ ಲಿಂಕ್ ಹಾಳು ಮಾಡಿದ್ದು ದುರಾದೃಷ್ಟಕರ..ಅತಿಯಾದ ಆತ್ಮವಿಶ್ವಾಸದಲ್ಲಿ ಮೈ ಮರೆತದ್ದೇ ಅನುಶ್ರೀಯ ದುರಂತಕ್ಕೆ ಕಾರಣ ಎನ್ನುವುದು ಮಾತ್ರ ಸತ್ಯ.

Spread the love
Leave A Reply

Your email address will not be published.

Flash News