ಸಂಬರಗಿ ಹೇಳಿದ ಅನುಶ್ರೀ ಬೆನ್ನಿಗೆ ನಿಂತ  “ಆ ಮಾಜಿ ಸಿಎಂ” ಯಾರು..? ಅವರಿಗೂ ಸೃಷ್ಟಿಯಾಗುತ್ತಾ ಸಂಕಷ್ಟ..?!

ಅನುಶ್ರೀ ಬಗ್ಗೆ ಮಾತನಾಡಬೇಡಿ ಎಂದು ಸಂಬರಗಿ ಮೇಲೆ ಒತ್ತಡ ಹೇರಿದ ಮಾಜಿ ಸಿಎಂ ಆಡಿಯೋ ಶೀಘ್ರವೇ ಸ್ಪೋಟ..

0

ಬೆಂಗಳೂರು:ಅನುಶ್ರೀಗೆ ಪ್ರಭಾವಿ ವ್ಯಕ್ತಿಯ ಕೃಪಕಟಾಕ್ಷವಿದೆ ಎಂದು ಪ್ರಶಾಂತ್ ಸಂಬರಗಿ ನೀಡಿರುವ ಹೇಳಿಕೆ ದೊಡ್ಡ ಮಟ್ಟದ ಸಂಚಲನವನ್ನೇ ಮೂಡಿಸಿದೆ.ಡ್ರಗ್ ಪ್ರಕರಣದಲ್ಲಿ ಕಳೆದ ಬಾರಿಯೇ ಆಕೆಯ ಹೆಸರು ಕೇಳಿಬಂದಾಗ ಆಕೆಯನ್ನು ರಕ್ಷಿಸಿದ್ದು ಆ ವ್ಯಕ್ತಿಯೇ ಎಂದು ಸಂಬರಗಿ ಮಾದ್ಯಮಗಳ ಮುಂದೆ ಹೇಳಿಕೆ ನೀಡಿರುವುದರಿಂದ  ಆ ಪ್ರಭಾವಿ ಯಾರು ಎನ್ನುವ ಪ್ರಶ್ನೆ ಮೂಡಿದೆ.ಅನುಶ್ರೀ ಡ್ರಗ್ ಇನ್ವಾಲ್ವೆಂಟ್ ಬಗ್ಗೆ ಸಂಬರಗಿ ಸಾಕಷ್ಟು ಮಾಹಿತಿಯನ್ನು ಮೊದಲಿಂದಲೂ ಹೊರಹಾಕುತ್ತಾ ಬಂದಿದ್ದರು.ಚಾರ್ಜ್ ಶೀಟ್ ನಲ್ಲಿ  ಆಕೆಯ ಪಾತ್ರ ಪ್ರೂವ್ ಆದ ಮೇಲಂತೂ ಸಂಬರಗಿ ಹೇಳಿಕೆಗೆ ಮತ್ತಷ್ಟು ಮಹತ್ವ ಬಂದಂತಾಗಿದೆ.

ಅನುಶ್ರೀ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ನನಗೆ ಮಾಜಿ ಸಿಎಂ ಒಬ್ಬರಿಂದ ಕರೆ ಬಂದಿತ್ತು.ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯನ್ನೇ ಆ ಮಾಜಿ ಸಿಎಂ ಬೇರೆಡೆ ವರ್ಗಾವಣೆ ಮಾಡಿದ್ರು.ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ಬಳಸಿಕೊಂಡು ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರುವಲ್ಲಿ ಆ ಮಾಜಿ ಸಿಎಂ ಯಶಸ್ವಿಯಾಗಿದ್ದರು ಎಂದಿದ್ದಾರೆ.

ಅಷ್ಟೇ ಅಲ್ಲ, ಪೊಲೀಸರ ಮೇಲೆ ಒತ್ತಡ ಹೇರಿ ತಮ್ಮ ಬೇಳೆ ಬೇಯಿಸಿಕೊಂಡ  ಆ ಮಾಜಿ ಸಿಎಂ ನನ್ನ ಮೇಲೂ ಸಾಕಷ್ಟು ಪ್ರಭಾವ ಬೀರುವ ಕೆಲಸ ಮಾಡಿದ್ರು.ನೀವೇನಿದ್ರೂ ಡ್ರಗ್ ಪ್ರಕರಣಕ್ಕೆ ಇರುವ ಬೆಂಗಳೂರು ಲಿಂಕ್ ಬಗ್ಗೆ ಮಾತ್ರ ಮಾತನಾಡಿ.ನಿಮ್ಮ ಗಮನ ಬೆಂಗಳೂರಿಗೆ ಮಾತ್ರ ಸೀಮಿತವಾಗಿರಲಿ.ಮಂಗಳೂರು ಲಿಂಕ್ ಬಗ್ಗೆ ಏಕೆ ಮಾತನಾಡುತ್ತೀರಿ..ನಿಮಗೂ ಅದಕ್ಕೂ ಸಂಬಂಧವೇನು ಎಂದು ಏರುಧ್ವನಿಯಲ್ಲಿ ಮಾತನಾಡಿದ್ರು ಎನ್ನುವ ಮೂಲಕ ಮಾಜಿ ಸಿಎಂ ಜತೆಗಿನ ಅನುಶ್ರೀ ಒಡನಾಟ ಎಷ್ಟರ ಮಟ್ಟಿಗಿತ್ತೆನ್ನುವುದನ್ನು ಅನಾವರಣಗೊಳಿಸಿದ್ದಾರೆ ಸಂಬರಗಿ.

ಅನುಶ್ರೀ ಡ್ರಗ್ ಸೇವಿಸಿರುವುದಕ್ಕೆ,ಸಾಗಿಸಿರುವುದಕ್ಕೆ ಅನೇಕ ಪುರಾವೆಗಳಿವೆ.ಪೊಲೀಸರ ತನಿಖೆ ವೇಳೆಯೂ ಆದು ಎಳೆ ಎಳೆಯಾಗಿ ಬಿಚ್ಚಿಕೊಂಡಿದೆ.ತನಿಖೆ ವೇಳೆಯೂ ಆ ಮಾಜಿ ಸಿಎಂ ಅನುಶ್ರೀ ಹೆಸರನ್ನು ಚಾರ್ಜ್ ಶೀಟ್ ನಿಂದ ತೆಗೆಸಲು ಸಾಕಷ್ಟು ಪ್ರಯತ್ನ ಮಾಡಿದ್ರು.ಆದ್ರೆ ನಮ್ಮ ಪೊಲೀಸರು ಯಾವುದೇ ಒತ್ತಡ-ಪ್ರಭಾವ-ವಶೀಲಿಬಾಜಿಗೂ ಮಣಿಯದೆ ಪಾರದರ್ಶಕವಾಗಿ ಕೆಲಸ ಮಾಡುವ ಮೂಲಕ ಪೊಲೀಸ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಗೌರವ ಮೂಡುವಂತೆ ಮಾಡಿದ್ದಾರೆ ಎಂದರು.

ಅನುಶ್ರೀ ಆಂಕರ್ ನಿಂದ ಅಬ್ಬಬ್ಬಾ ಎಂದ್ರೆ ಎಷ್ಟು ಹಣ ಗಳಿಸಬಹುದು..ಈವರೆಗೆ ಒಂದು ಕೋಟಿನಾ..ಆದ್ರೆ ಅನುಶ್ರಿ ಇವತ್ತು 4 ಕೋಟಿಗೆ ತೂಗುವ ಸೆಲಬ್ರಿಟಿ ಆಗಿದ್ದಾರೆ ಎಂದ್ರೆ ಅದು ಆಶ್ಚರ್ಯ ಮೂಡಿಸುವುದಿಲ್ಲವೇ..ಇಷ್ಟು ಹಣ ಮಾತ್ರವಲ್ಲ, ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಲ್ಲಿ ಐಷಾರಾಮಿ ಬಂಗಲೆಯ ಒಡತಿಯೂ ಆಗಿದ್ದಾರೆ ಎನ್ನುವ ಮಾಹಿತಿ ಇದೆ..

ಇದೆಲ್ಲಾ ಇಷ್ಟು ಕಡಿಮೆ ಅವಧಿಯಲ್ಲಿ ಹೇಗೆ ಬಂತೆನ್ನುವ ಅನುಮಾನ ಸಾರ್ವಜನಿಕವಾಗಿ ಮೂಡುತ್ತಲ್ಲವೇ..ಆ ಬಗ್ಗೆ ಪೊಲೀಸರು ತನಿಖೆ ನಡೆಸಲಿ,ಆಗ ಹಣದ ಮೂಲ..ಅಷ್ಟೇ ಅಲ್ಲ ಅದನ್ನು ನೀಡಿದವರ ಮೂಲವೂ ಜಗತ್ತಿಗೆ ತಿಳಿಯುತ್ತೆ ಎಂದು ಪ್ರಶಾಂತ್ ಆಗ್ರಹಿಸಿದರು.

ಡ್ರಗ್ ಪ್ರಕರಣದಲ್ಲಿ ಅನುಶ್ರೀಯನ್ನು ಪಾರು ಮಾಡೊಕ್ಕೆ ಯತ್ನಿಸಿದ  ಆ ಮಾಜಿ ಸಿಎಂ ಅವರನ್ನು ಕೂಡ ಪೊಲೀಸರು ವಿಚಾರಣೆ ನಡೆಸುವುದು ಸೂಕ್ತ.ನನ್ನ ಜತೆ  ಆ ಮಾಜಿ ಸಿಎಂ ಮಾತನಾಡಿರುವ ದಾಖಲೆಗಳನ್ನು ಶೀಘ್ರವೇ ಸಲ್ಲಿಕೆ ಮಾಡಲಿದ್ದೇನೆ ಎಂದು ಸಂಬರಗಿ ಹೇಳಿರುವುದರಿಂದ  ಆ ಮಾಜಿ ಸಿಎಂಗೂ ಸಂಕಷ್ಟ ಸೃಷ್ಟಿಯಾಗಬಹುದಾ ಎನ್ನುವ ಚರ್ಚೆ ಶುರುವಾಗಿದೆ.

Spread the love
Leave A Reply

Your email address will not be published.

Flash News