ಬೆಂಗಳೂರು:ಡ್ರಗ್ ಕೇಸ್ ಗೆ ಸಂಬಂಧಿಸಿದಂತೆ ನಿನ್ನೆ ಇಡೀ ದಿನ ಚಾರ್ಜ್ ಶೀಟ್ ವಿಷಯ ಸದ್ದು ಮಾಡುತ್ತಿದ್ದರೆ ಯಾರ ಸಂಪರ್ಕಕ್ಕು ಸಿಗದ ಆಪಾದಿತೆ ಆಂಕರ್ ಕಂ ನಟಿ ಅನುಶ್ರೀ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.ನಾನು ಯಾವ್ ತಪ್ಪನ್ನು ಮಾಡಿಲ್ಲ,ನಾನು ಅಮಾಯಕಿ…ನಿರಪರಾಧಿ..ಸಂಬಂಧವಿಲ್ಲದ ಕಥೆಯನ್ನು ರಿಪೀಟ್ ಮಾಡಿ..ಮಾಡಿ ತೋರಿಸುವ ಮೂಲಕ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸಲಾಗುತ್ತಿದೆ ಎಂದು ಅವಲತ್ತುಕೊಳ್ಳುತ್ತಿದ್ದಾರೆ.
ನಾನು ಮುಂಬೈಗೆ ಹೋಗುವ ಕಾರ್ಯಕ್ರಮ ಮೊದಲೇ ನಿರ್ದಾರವಾಗಿತ್ತು.ಎರಡು ದಿನಗಳ ಮುಂಚೆಯೇ ನಾನು ಮುಂಬೈನಲ್ಲಿದ್ದೆ.ನಾನೆಲ್ಲೂ ತಲೆ ಮರೆಸಿಕೊಂಡಿರಲಿಲ್ಲ..ನಾನು ಇಲ್ಲಿಯವಳು..ಇದು ನನ್ನ ನೆಲ..ಅದನ್ನು ಬಿಟ್ಟು ನಾನೇಕೆ ಓಡಿ ಹೋಗಲಿ..ಮಾದ್ಯಮಗಳು ನನ್ನ ತೇಜೋವಧೆಗೆ ವ್ಯವಸ್ಥಿತ ಷಡ್ಯಂತ್ರ ಮಾಡಿದಂತಿವೆ ಎಂದು ಮಾದ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.
ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂದ ಮೇಲೆ,ನಾನೇಕೆ ಹೆದರಲಿ,ಆ ಪ್ರಶ್ನೆಯೇ ಸೃಷ್ಟಿಯಾಗೊಲ್ಲ..ಅಲ್ಲದೇ ಪ್ರಕರಣದಿಂದ ತಪ್ಪಿಸಿಕೊಳ್ಳೊಕ್ಕೆ ಯಾರೋ ದೊಡ್ಡವರ ಶಿಫಾರಸ್ಸನ್ನು ಬಳಸಿಕೊಳ್ಳುತ್ತಿದ್ದೇನೆ ಎನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತು.ನನಗೆ ಯಾರ ಸಹಾಯವೂ ಬೇಕಾಗಿಲ್ಲ,ನಾನು ಬೆಂಗಳೂರಿಗೆ ಬಂದಿದ್ದು ಒಂಟಿಯಾಗೇ,ಇವತ್ತಿಗೂ ಅದೇ ಧೈರ್ಯದಲ್ಲಿ ಬದುಕುತ್ತಿದ್ದೇನೆ.ನನಗು ಇದಕ್ಕು ಯಾವುದೇ ಸಂಬಂಧವಿಲ್ಲ ಎಂದಿದ್ದಾಳೆ.
ನನ್ನ ಬಗ್ಗೆ ಆಪಾದನೆಗಳನ್ನು ಮಾಡಿರುವ ಪ್ರಶಾಂತ್ ಸಂಬರಗಿ ಯಾರೆನ್ನುವುದೇ ನನಗೆ ಗೊತ್ತಿಲ್ಲ.ನನ್ನ ಬಂಡವಾಳ ಬಯಲು ಮಾಡುತ್ತೇನೆ ಎಂದಿರುವುದು ನೋವು ತಂದಿದೆ.ನನ್ನ ಬಳಿ 12 ಕೋಟಿ ಮೌಲ್ಯದ ಆಸ್ತಿಯಿದೆ ಎಂದಿದ್ದಾರೆ.ನಾನಿರುವುದು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ,ಮಂಗಳೂರಿನಲ್ಲಿರುವ ಮನೆಯ ಸಾಲ ಇನ್ನೂ ಇದೆ..ಇವತ್ತಿಗೂ ಜೀವನ ನಡೆಸಲು ಹೆಣಗಾಡುತ್ತಿದ್ದೇನೆ.ಇಂಥಾ ಸನ್ನಿವೇಶದಲ್ಲಿ ನನ್ನ ಬಳಿ ಅಷ್ಟೊಂದು ಹಣ ಇದೆ ಎನ್ನುತ್ತಿರುವುದನ್ನು ಯಾರಾದರು ಬಯಲುಮಾಡಲಿ ಎಂದು ಸವಾಲು ಹಾಕಿದ್ದಾರೆ.
ಕಿಶೋರ್ ಶೆಟ್ಟಿ ಹಾಗು ಟೀಂ ಜತೆ ರಿಯಾಲಿಟಿ ಶೋ ಗೆದ್ದ ಖುಷಿಯಲ್ಲಿ ಪಾರ್ಟಿ ಮಾಡಿದ್ದು ಸತ್ಯ..ಆದ್ರೆ ಅದು ಹತ್ತೆನ್ನರೆಡು ವರ್ಷಗಳ ಮಾತು..ಆದ್ರೆ ಅವತ್ತಿನ ಪಾರ್ಟಿಯಲ್ಲಿ ಡ್ರಗ್ ಸೇವಿಸಿದ್ದೆ..ಸಪ್ಲೈ ಮಾಡಿದ್ದೆ ಎನ್ನುವುದೆಲ್ಲಾ ಸತ್ಯಕ್ಕೆ ದೂರವಾದಂತ ಮಾತು..ಕಳೆದ ಕೆಲವಾರು ವರ್ಷಗಳಿಂದ ನನಗೂ ನನ್ನ ಮೇಲೆ ಅರೋಪ ಮಾಡುತ್ತಿರುವ ಕಿಶೋರ್ ಶೆಟ್ಟಿಗೂ ಯಾವುದೇ ಸಂಪರ್ಕವಿಲ್ಲ..ಈಗ ಅದ್ಹೇಗೆ ನನ್ನ ಹೆಸರು ದಿಢೀರ್ ಈ ವಿಷಯದಲ್ಲಿ ಥಳಕು ಹಾಕ್ಕೊಳ್ತೋ ಗೊತ್ತಾಗ್ತಿಲ್ಲ ಎಂದ್ರು.
ಮಾದ್ಯಮಗಳು ಸತ್ಯಾಂಶ ಗೊತ್ತಿಲ್ಲದೆ ಬಾಯಿಗೆ ಬಂದಂತೆ ಸುದ್ದಿ ಬಿತ್ತರಿಸುತ್ತಿವೆ.ನೀವು ಹೇಳುವಂತೆ ಏನು ನಡೆದಿಲ್ಲ.ನಾನು ಕಾನೂನನ್ನು ತುಂಬಾ ಗೌರವಿಸುತ್ತೇನೆ.ಪೊಲೀಸ್ ರ ಮುಂದೆ ಹೇಳಬೇಕಾದುದ್ದನ್ನೆಲ್ಲಾ ಹೇಳಿದ್ದೇನೆ.
ಅವರು ಯಾವುದೇ ಸಂದರ್ಭದಲ್ಲಿ ತನಿಖೆಗೆ ಕರುದ್ರೂ ಹಾಜರಾಗಲು ಸಿದ್ದ ಎನ್ನುವ ಮೂಲಕ ಅನುಶ್ರೀ ಸಾರ್ವಜನಿಕವಾಗಿ ಸೃಷ್ಟಿಯಾಗಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟರ ಕೊಟ್ಟಿದ್ದಾಳೆ..ಅನುಮಾನಗಳಿಗೆ ತೆರೆ ಎಳೆದಿದ್ದಾಳೆ..ಆದ್ರೆ ಇಷ್ಟಕ್ಕೆ ಎಲ್ಲಾ ನಿಲ್ಲುವಂತೆ ಕಾಣುತ್ತಿಲ್ಲ..ಪ್ರಶಾಂತ್ ಸಂಬರಗಿ ಬಿಡುಗಡೆ ಮಾಡುತ್ತೇನೆ ಎಂದಿರುವ ಆ ಸ್ಪೋಟಕ ಸಾಕ್ಷ್ಯಗಳಿಗೆ ಅನುಶ್ರೀ ಯಾವ್ ರೀತಿ ಕೌಂಟರ್ ಕೊಡ್ತಾರೆನ್ನುವುದು ಕುತೂಹಲ ಮೂಡಿಸಿದೆ.